SIR ಪ್ರಮಾದ | ಹೆಸರು ಕಳೆದುಕೊಂಡವರಿಗಾಗಿ ‘ಫಾರ್ಮ್ 6’ ನಿಯಮ ಬದಲಾಯಿಸುವಂತೆ ಆಯೋಗಕ್ಕೆ ಮಹಾರಾಷ್ಟ್ರ ಒತ್ತಾಯ

Date:

ದೇಶಾದ್ಯಂತ ತೀವ್ರ ವಿವಾದ ಮತ್ತು ಗೊಂದಲಗಳಿಗೆ ಕಾರಣವಾಗಿರುವ SIR ಪ್ರಕ್ರಿಯೆಯಲ್ಲಿನ ದೊಡ್ಡ ಪ್ರಮಾದವೊಂದು ಮುನ್ನೆಲೆಗೆ ಬಂದಿದೆ. ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕಳೆದುಕೊಂಡಿರುವ ಅರ್ಹ ಹಳೆಯ ಮತದಾರರು ಮರುನೋಂದಣಿ ಮಾಡಿಕೊಳ್ಳಲು ಪ್ರಸ್ತುತವಿರುವ ‘ಫಾರ್ಮ್-6’ ನಮೂನೆಯಲ್ಲಿ ಸೂಕ್ತ ಬದಲಾವಣೆಗಳನ್ನು ತರುವಂತೆ ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿಯು ಭಾರತೀಯ ಚುನಾವಣಾ ಆಯೋಗಕ್ಕೆ (ECI) ಪ್ರಸ್ತಾವನೆ ಸಲ್ಲಿಸಿದ್ದಾರೆ.

- Advertisement -

ಸಾಮಾನ್ಯವಾಗಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಬಯಸುವವರು ‘ಫಾರ್ಮ್-6’ ಅನ್ನು ಬಳಸುತ್ತಾರೆ. ಆದರೆ, ಎಸ್‌ಐಆರ್ ಪ್ರಕ್ರಿಯೆಯ ವೇಳೆ ಈಗಾಗಲೇ ಅಧಿಕೃತ ಮತದಾರರಾಗಿದ್ದು, ಯಾವುದೇ ತಪ್ಪಿಲ್ಲದೆ ಪಟ್ಟಿಯಿಂದ ಕೈಬಿಟ್ಟುಹೋದವರೂ ಸಹ ಮರು ಸೇರ್ಪಡೆಗಾಗಿ ಇದೇ ಫಾರ್ಮ್ ಬಳಸುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು. ಇದು ಪ್ರಾಯೋಗಿಕವಾಗಿ ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು. ಫಾರ್ಮ್-6ರ ಘೋಷಣಾ ಭಾಗದಲ್ಲಿ ‘ತಾವು ಮೊದಲ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳುತ್ತಿರುವುದಾಗಿ’ ಅರ್ಜಿದಾರರು ದೃಢೀಕರಿಸಬೇಕಾಗುತ್ತದೆ. ಈಗಾಗಲೇ ಹಲವು ವರ್ಷಗಳಿಂದ ಮತ ಚಲಾಯಿಸುತ್ತಿರುವ ಹಳೆಯ ಮತದಾರರು, ತಾವು ಮೊದಲ ಬಾರಿ ಮತದಾರರಾಗುತ್ತಿದ್ದೇವೆ ಎಂದು ಸುಳ್ಳು ಘೋಷಣೆ ನೀಡುವುದು ಕಾನೂನುಬಾಹಿರವಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರು ಈ ಹಿಂದೆಯಿಂದಲೂ ಕಳವಳ ವ್ಯಕ್ತಪಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

‘ಪ್ರಜಾಪ್ರತಿನಿಧಿ ಕಾನೂನು ಕಾಯ್ದೆ-1950’ರ ಸೆಕ್ಷನ್ 31ರ ಪ್ರಕಾರ, ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಸುಳ್ಳು ಘೋಷಣೆ ನೀಡುವುದು ಅಪರಾಧವಾಗಿದ್ದು, ಇದಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡೂ ವಿಧಿಸಬಹುದಾಗಿದೆ. ಈ ಗಂಭೀರ ಕಾನೂನು ತೊಡಕಿನ ಕಾರಣದಿಂದಾಗಿ, ಪಟ್ಟಿಯಿಂದ ಹೆಸರು ಕಳೆದುಕೊಂಡ ಹಳೆಯ ಮತದಾರರು ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ಗಮನ ಸೆಳೆದಿದ್ದಾರೆ.

ಮಹಾರಾಷ್ಟ್ರ ಸಿಇಒ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಪ್ರಮುಖವಾಗಿ ಮೂರು ಪ್ರಮುಖ ತಿದ್ದುಪಡಿಗಳನ್ನು ಶಿಫಾರಸು ಮಾಡಲಾಗಿದೆ: ಫಾರ್ಮ್ 6ರ ಶೀರ್ಷಿಕೆಯಿಂದ ‘ಹೊಸ ಮತದಾರರು’ ಎಂಬ ಪದಗಳನ್ನು ಕೈಬಿಡುವುದು, ಹಿಂದೆ ಯಾವುದಾದರೂ ವಿಧಾನಸಭಾ ಕ್ಷೇತ್ರದಲ್ಲಿ ನೋಂದಾಯಿಸಲ್ಪಟ್ಟು ಪ್ರಸ್ತುತ ಯಾವುದೇ ಕಡೆ ಪಟ್ಟಿಯಲ್ಲಿಲ್ಲದ ಮತ್ತು ಮರು ಸೇರ್ಪಡೆ ಬಯಸುವ ಅರ್ಜಿದಾರರಿಗಾಗಿ ಪರ್ಯಾಯ ಘೋಷಣಾ ವ್ಯವಸ್ಥೆಯನ್ನು ಪರಿಚಯಿಸುವುದು ಹಾಗೂ ಅಧಿಕಾರಿಗಳು ಹಳೆಯ ನೋಂದಣಿಯನ್ನು ಸುಲಭವಾಗಿ ಪತ್ತೆಹಚಲು ಅನುಕೂಲವಾಗುವಂತೆ ಅರ್ಜಿದಾರರು ತಮ್ಮ ಹಿಂದಿನ ಮತದಾರರ ಗುರುತಿನ ಚೀಟಿ (EPIC) ಸಂಖ್ಯೆಯನ್ನು ಒದಗಿಸಲು ಅವಕಾಶ ಕಲ್ಪಿಸುವುದು.

ಹೊಸದಾಗಿ ನೋಂದಾಯಿಸಿಕೊಳ್ಳುವವರಿಗೂ ಮತ್ತು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೆಸರು ಕಳೆದುಕೊಂಡು ಮರು ಸೇರ್ಪಡೆ ಬಯಸುವ ಅರ್ಹ ಮತದಾರರಿಗೂ ಸ್ಪಷ್ಟ ವ್ಯತ್ಯಾಸ ಗುರುತಿಸುವ ಉದ್ದೇಶದಿಂದ ಈ ತಿದ್ದುಪಡಿಗಳನ್ನು ಕೋರಲಾಗಿದೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಅಡಿಯಲ್ಲಿ ಆಕ್ಷೇಪಣೆಗಳು ಮತ್ತು ಹಕ್ಕುಗಳ ಸಲ್ಲಿಕೆಗಾಗಿ ಅಕ್ಟೋಬರ್ 26 ಕೊನೆಯ ದಿನವಾಗಿದೆ. ನವೆಂಬರ್ 16ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ಈ ಪ್ರಸ್ತಾವನೆಗೆ ಕಾನೂನು ಮತ್ತು ಆಡಳಿತಾತ್ಮಕ ಅನುಮೋದನೆ ಸಿಕ್ಕರೆ, ಹೆಸರು ಕಳೆದುಕೊಂಡ ಲಕ್ಷಾಂತರ ಮತದಾರರಿಗೆ ಮರು ಸೇರ್ಪಡೆ ಪ್ರಕ್ರಿಯೆಯು ಬಹಳ ಸುಲಭವಾಗಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್ ಸಾಹೇಬ್’

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ...

ಕಲಬುರಗಿ ಜಿಲ್ಲೆಗೆ 6 ಟಿಎಂಸಿ ನೀರು ಕಾಯ್ದಿರಿಸಲು ಪ್ರಸ್ತಾವನೆ : ಡಿಸಿ ಇಕ್ರಮ್ ಶರೀಫ್

ಮುಂಬರುವ ಬೇಸಿಗೆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ...

ರಾಜ್ಯದ 12 ಜಿಲ್ಲೆಗಳಲ್ಲಿ ಅಕ್ಟೋಬರ್ 22ರವರೆಗೆ ಭಾರೀ ಮಳೆ: ಹವಾಮಾನ ಇಲಾಖೆ

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ ಎದುರಾಗಿದ್ದರೂ, ಹಿಂಗಾರು ಮಳೆಯ ಅಬ್ಬರ...