ದಿನಕ್ಕೆ 20 ಸುಳ್ಳುಗಳು: 30,573 ಹುಸಿ ಸುಳ್ಳುಗಳ ದಾಖಲೆ ಮುರಿಯುತ್ತಾರಾ ಅಮೆರಿಕ ಅಧ್ಯಕ್ಷ ಟ್ರಂಪ್?

Date:

Advertisements
ಕಾಲಕ್ಕೆ ತಕ್ಕಂತೆ ವೇಷ ಭೂಷಣ ಬಣ್ಣ ಬದಲಾಯಿಸಿಕೊಳ್ಳುವ ಮೋದಿಯಿಂದ ಟ್ರಂಪ್ ಅಥವಾ ಟ್ರಂಪ್‌ನಿಂದ ಮೋದಿ ಸುಳ್ಳು ಹೇಳುವುದನ್ನು ಕಲಿತರೋ ತಿಳಿಯದು. ಒಟ್ಟಿನಲ್ಲಿ ಇವರಿಬ್ಬರ ಜೋಡಿಗೆ ಸರಿಸಾಟಿ ಬೇರೆಲ್ಲೂ ಇಲ್ಲ. ಟ್ರಂಪ್- ಮೋದಿ ಅಧಿಕಾರಾವಧಿ ಮುಗಿಯುವ ಮುನ್ನ ಸುಳ್ಳು ಹೇಳುವ ಸ್ಪರ್ಧೆಯಲ್ಲಿ ಯಾರು ಯಾರನ್ನು ಮೀರಿಸುತ್ತಾರೆ, ದಾಖಲೆ ಬರೆಯುತ್ತಾರೆ ಎಂಬ ಕುತೂಹಲವೂ ಉಳಿದಿಲ್ಲ.

ಸುಳ್ಳು ಹೇಳುವುದರಲ್ಲಿ ಮತ್ತು ತಪ್ಪು ಮಾಹಿತಿ ಹರಡುವುದರಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಎಷ್ಟು ನಿಸ್ಸೀಮರೋ, ಅವರ ಮಾಜಿ/ಹಾಲಿ ಗೆಳೆಯ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಅಷ್ಟೇ ಅಪ್ರಮೇಯರು. ಟ್ರಂಪ್ಮೋದಿ ಹಸಿ ಸುಳ್ಳುಗಳನ್ನು ಅಂಧ ಭಕ್ತರೇಗೋ ನಂಬುತ್ತಾರೆ, ಉಳಿದವರಿಗೆ ಗೊತ್ತಾಗದು ಅಂದುಕೊಂಡಿರಬಹುದು. ಆದರೆ ಆ ಸುಳ್ಳುಗಳೇ ಈಗ ಇಬ್ಬರನ್ನು ಲೇವಡಿಗೆ ಗುರಿಯಾಗಿಸಿವೆ.

ತನ್ನ ಹುಟ್ಟಿನಿಂದ ಹಿಡಿದು ಈವರೆಗಿನ ವಿಚಾರದ ಹಸಿ ಸುಳ್ಳುಗಳನ್ನು ಅಂಜಿಕೆ ಅಳುಕಿಲ್ಲದೆ ಹೇಳುತ್ತ ಬಂದಿರುವ ಮೋದಿ, ಗಾಳಿ ಬಂದ ಕಡೆ ತೂರಿಕೊಳ್ಳುವವರು. ಟ್ರಂಪ್ ಚಾಳಿ ಕೂಡ ಅದೇ. ಈ ಹಿಂದೆ 2017-2021ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಟ್ರಂಪ್ ಹೇಳಿದ ಸುಳ್ಳುಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಎರಡನೇ ಅವಧಿಗಾದರೂ ಟ್ರಂಪ್ ಕೊಂಚ ಬದಲಾಗಬಹುದು ಎಂದುಕೊಂಡರೆ, ಅವರು ಮಾತ್ರ ತನ್ನ ಲಗಾಮಿಲ್ಲದ ನಾಲಿಗೆಯನ್ನು ಸಲೀಸಾಗಿ ಹರಿಬಿಟ್ಟು ಟೀಕೆಗೆ ಗುರಿಯಾಗಿದ್ದಾರೆ.

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಸ್ವೀಕರಿಸಿದ ಬಳಿಕ ಸೋಮವಾರ ಎರಡು ಭಾಷಣಗಳನ್ನು ಮಾಡಿದ್ದಾರೆ. ವಾಷಿಂಗ್ಟನ್ ವರದಿಯ ಪ್ರಕಾರ ಈ ಎರಡು ಭಾಷಣಗಳಲ್ಲಿ ಟ್ರಂಪ್ ಸುಮಾರು 20 ಸುಳ್ಳುಗಳನ್ನು ಹೇಳಿದ್ದಾರೆ. ಟ್ರಂಪ್ ತನ್ನ ಮೊದಲ ಅಧಿಕಾರಾವಧಿಯಲ್ಲಿ ಒಟ್ಟು ಸುಮಾರು 30,573 ಸುಳ್ಳುಗಳನ್ನು, ತಪ್ಪು ಮಾಹಿತಿಗಳನ್ನು ಹರಡಿದ್ದರು. ಈಗ ತನ್ನ ಎರಡನೇ ಅವಧಿಯಲ್ಲಿ ಆ ದಾಖಲೆಯನ್ನು ಮುರಿಯುತ್ತಾರಾ ಕಾದು ನೋಡಬೇಕಿದೆ.

Advertisements

ಇದನ್ನು ಓದಿದ್ದೀರಾ? ಭಾರತಕ್ಕೆ ಮುಳುವಾದ ಟ್ರಂಪ್ ನೀತಿಗಳು; ದೇಶದ ಆರ್ಥಿಕತೆಯ ಗತಿ ಏನು?

ಟ್ರಂಪ್ ಸೋಮವಾರ ರೊಟುಂಡಾದಲ್ಲಿ ಭಾಷಣ ಮಾಡಿದ್ದು, ಒಟ್ಟು 20 ಸುಳ್ಳುಗಳನ್ನು ಹೇಳಿದ್ದಾರೆ ಎಂದು ಹಲವು ಮಾಧ್ಯಮಗಳು ಪಟ್ಟಿ ಮಾಡಿವೆ. ಆರ್ಥಿಕತೆ, ವಲಸೆ, ವಿದೇಶಾಂಗ ನೀತಿ, ಇವಿ, 2020ರ ಚುನಾವಣೆ – ಹೀಗೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಹಸಿ ಸುಳ್ಳುಗಳನ್ನು ಟ್ರಂಪ್ ರಾಜಾರೋಷವಾಗಿ ಹೇಳಿದ್ದಾರೆ.

ಅಮೆರಿಕದ ಮಾಧ್ಯಮಗಳ ಪ್ರಕಾರ ಡೊನಾಲ್ಡ್ ಟ್ರಂಪ್ ತನ್ನ ರಾಜಕೀಯ ಜೀವನದ ಆರಂಭದಿಂದಲೇ ಸುಳ್ಳುಗಳ ಸರಮಾಲೆಯನ್ನು ಹೆಣೆಯುತ್ತಾ ಬಂದವರು. 2016ರಿಂದ 2020ರವರೆಗೆ ಟ್ರಂಪ್ ಅವರ ಮೊದಲ ಅವಧಿಯ ಸುಳ್ಳುಗಳನ್ನು ಹಲವು ಮಾಧ್ಯಮಗಳು ಪಟ್ಟಿ ಮಾಡಿವೆ. 2021ರ ಜನವರಿಯಲ್ಲಿ ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ ಟ್ರಂಪ್ ತನ್ನ ಮೊದಲ ಅಧಿಕಾರಾವಧಿಯ ಮೊದಲ ನೂರು ದಿನದಲ್ಲೇ ಬರೋಬ್ಬರಿ 492 ಸುಳ್ಳುಗಳನ್ನು ಹೇಳಿದ್ದಾರೆ.

ಟ್ರಂಪ್ ಇತ್ತೀಚಿನ ಕೆಲವು ಸುಳ್ಳುಗಳ ಪಟ್ಟಿ

ಚುನಾವಣಾ ಫಲಿತಾಂಶ: ಗುರುವಾರ ವಿಶ್ವ ಆರ್ಥಿಕ ವೇದಿಕೆಯಲ್ಲಿಯೇ ಟ್ರಂಪ್ ಸುಳ್ಳಾಡಿದ್ದಾರೆ. 2024ರಲ್ಲಿ ತಾನು ಮಿಲಿಯನ್‌ಗಟ್ಟಲೆ ಮತಗಳನ್ನು ಪಡೆದಿದ್ದೇನೆ, ಅಮೆರಿಕ ಜನರ ಪ್ರಬಲ ಬಹುಮತವನ್ನು ಪಡೆದಿದ್ದೇನೆ ಎಂದು ಹೇಳಿದ್ದರು. ಆದರೆ ನಿಜಾಂಶವೇ ಬೇರೆ ಇದೆ. ಅಮೆರಿಕದ ಇತ್ತೀಚಿನ ಚುನಾವಣೆಯಲ್ಲಿ ಟ್ರಂಪ್‌ಗೆ 312 ಎಲೆಕ್ಟೊರಲ್ ಮತಗಳು ಲಭಿಸಿದ್ದು, ಕಮಲಾ ಹ್ಯಾರಿಸ್‌ಗೆ 226 ಎಲೆಕ್ಟೊರಲ್ ಮತಗಳು ದೊರಕಿವೆ. ಶೇಕಡಾವಾರು ಲೆಕ್ಕಾಚಾರ ನೋಡುವುದಾದರೆ ಟ್ರಂಪ್‌ಗೆ ಶೇ. 49.9, ಕಮಲಾಗೆ ಶೇ. 48.4ರಷ್ಟು ಮತಗಳು ಲಭಿಸಿದೆ. ಟ್ರಂಪ್ ಪ್ರಬಲ ಬಹುಮತವೇನು ಪಡೆದಿಲ್ಲ. ಇನ್ನು ಯುವಕರ ಶೇ. 36ರಷ್ಟು ಮತಗಳನ್ನು ಪಡೆದಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ ಈ ವಾದವೂ ಕೂಡಾ ಸುಳ್ಳಾಗಿದ್ದು, ಟ್ರಂಪ್‌ಗೆ 45 ವರ್ಷಕ್ಕಿಂತ ಮೇಲ್ಪಟ್ಟವರ ಮತವೇ ಲಭಿಸಿರುವುದು. ಹ್ಯಾರಿಸ್‌ಗೆ ಅಧಿಕ ಯುವಕರ ಮತ ದೊರಕಿದೆ.

ಇದನ್ನು ಓದಿದ್ದೀರಾ? ಟ್ರಂಪ್‌ ಪದಗ್ರಹಣಕ್ಕೆ ಗೆಳೆಯ ಮೋದಿಗಿಲ್ಲ ಆಹ್ವಾನ; ಚೀನಾದತ್ತ ವಾಲುತ್ತಿದೆಯೇ ಅಮೆರಿಕ?

ಬೈಡನ್ ಅವಧಿಯಲ್ಲಿ ಅಧಿಕ ಹಣದುಬ್ಬರ: ಈ ಹಿಂದಿನ ಅಧ್ಯಕ್ಷ ಜೋ ಬೈಡನ್ ಅವಧಿಯಲ್ಲಿ ಅಮೆರಿಕದಲ್ಲಿ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಟ್ರಂಪ್ ಹೇಳಿದ್ದರು. ಆದರೆ ವಾಸ್ತವವಾಗಿ ಎಪಿ ವರದಿ ಪ್ರಕಾರ, 2022ರಲ್ಲಿ ಯುಎಸ್ ಹಣದುಬ್ಬರವು ನಾಲ್ಕು ದಶಕಗಳ ಗರಿಷ್ಠ ಮಟ್ಟ ಶೇ. 9.1ರಷ್ಟಿತ್ತು. ಆದರೆ 2024ರ ಡಿಸೆಂಬರ್ ವೇಳೆ ಶೇ. 2.9ಕ್ಕೆ ಇಳಿಕೆಯಾಯಿತು. ಯುಎಸ್‌ನ ಗರಿಷ್ಠ ಹಣದುಬ್ಬರ ಶೇ. 23.7 ಆಗಿದ್ದು 1920ರಲ್ಲಿ ದಾಖಲಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಇಯು ಜೊತೆ ಯಾವುದೇ ವಹಿವಾಟಿಲ್ಲ: ಟ್ರಂಪ್ ಪ್ರಕಾರ ಯುರೋಪಿಯನ್ ಒಕ್ಕೂಟ ಅಮೆರಿಕದಿಂದ ಕಾರುಗಳು, ಕೃಷಿ ಉತ್ಪನ್ನಗಳು ಅಥವಾ ಬಹುತೇಕ ಯಾವುದೇ ವಸ್ತುಗಳ ಆಮದು ಮಾಡಿಕೊಳ್ಳುವುದಿಲ್ಲ. ಇಯು ವ್ಯಾಪಾರ ಅಡೆತಡೆಗಳನ್ನು ಹೊಂದಿದ್ದು, ಅದು ಯುಎಸ್‌ ಕಂಪನಿಗಳಿಗೆ ಉತ್ಪನ್ನಗಳನ್ನು ರಫ್ತು ಮಾಡಲು ತಡೆಯುಂಟಾಗುತ್ತದೆ ಎಂಬುದು ಟ್ರಂಪ್ ವಾದ. ಆದರೆ ಈ ಹೇಳಿಕೆ ಸುಳ್ಳು. 2023ರಲ್ಲಿ ಯುಎಸ್‌ ಯುರೋಪಿಯನ್ ಒಕ್ಕೂಟಕ್ಕೆ (ಇಯು) ಸುಮಾರು 639 ಶತಕೋಟಿ ಡಾಲರ್‌ಗೂ ಅಧಿಕ ಮೌಲ್ಯದ ಸರಕು ಮತ್ತು ಸೇವೆಗಳನ್ನು ರಫ್ತು ಮಾಡಿದೆ. ಹಾಗೆಯೇ ಇಯು 12.3 ಶತಕೋಟಿ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳನ್ನು ಅಮೆರಿಕದಿಂದ ರಫ್ತು ಮಾಡಿಕೊಂಡಿದೆ. ಚೀನಾ, ಮೆಕ್ಸಿಕೊ ಮತ್ತು ಕೆನಡಾ ನಂತರ ಯುಎಸ್ ಕೃಷಿ ಸಂಬಂಧಿತ ಉತ್ಪನ್ನಗಳ ನಾಲ್ಕನೇ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ.

ಅಪಾಯಕಾರಿ ಅಪರಾಧಿಗಳಿಗೆ ಆಶ್ರಯ: ಯುಎಸ್‌ ಅತೀ ಅಪಾಯಕಾರಿ ಅಪರಾಧಿಗಳಿಗೆ ಆಶ್ರಯ/ ರಕ್ಷಣೆ ನೀಡಿದೆ, ಈ ಪೈಕಿ ಹಲವು ಮಂದಿ ಜೈಲಿನಲ್ಲಿ ಮತ್ತು ಮಾನಸಿಕ ಅಸ್ವಸ್ಥರ ಕೇಂದ್ರದಲ್ಲಿ ಇದ್ದವರು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಟ್ರಂಪ್ ಯಾವುದೇ ಸಾಕ್ಷಿಗಳಿಲ್ಲದೆ ಹಲವು ಬಾರಿ ಈ ಆರೋಪವನ್ನು ಮಾಡಿದ್ದಾರೆ. ಯುಎಸ್‌ನ ಬಹುತೇಕ ಪ್ರದೇಶಗಳಲ್ಲಿ ವಲಸಿಗರೇ ತುಂಬಿದ್ದಾರೆ. ಆದರೆ ಈ ಪೈಕಿ ಬಹುತೇಕರು ಕಾನೂನು ಪ್ರಕಾರವಾಗಿಯೇ ಅಮೆರಿಕಕ್ಕೆ ಪ್ರವೇಶಿಸಿದ್ದಾರೆ, ನೆಲೆಸಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ.

ಇತರೆ ದೇಶ, ಚೀನಾದ ಮೇಲೆ ಅಧಿಕ ಸುಂಕ: ತನ್ನ ಉದ್ಘಾಟನಾ ಭಾಷಣದಲ್ಲಿ ಟ್ರಂಪ್, ನಾವು ನಮ್ಮ ನಾಗರಿಕರ ಮೇಲೆ ತೆರಿಗೆ ವಿಧಿಸುವ ಬದಲಾಗಿ ನಮ್ಮ ನಾಗರಿಕರನ್ನು ತಲುಪುವ ವಿದೇಶಿ ಸಂಸ್ಥೆಗಳ ಮೇಲೆ ತೆರಿಗೆ ಅಥವಾ ಸುಂಕ ವಿಧಿಸುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಇದು ಸುಳ್ಳಾಗಿದೆ. ಯುಎಸ್‌ ಸರ್ಕಾರ ವಿಧಿಸುವ ಸುಂಕವನ್ನು ಯುಎಸ್‌ನ ಆಮದುಗಾರರು ಪಾವತಿಸಬೇಕೇ ಹೊರತು ವಿದೇಶಿಗರಲ್ಲ.

ಇದನ್ನು ಓದಿದ್ದೀರಾ? ಟ್ರಂಪ್‌ 2ನೇ ವರಸೆ | ಇಸ್ರೇಲ್, ಭಾರತದ ವಿಚಾರದಲ್ಲಿ ಅಮೆರಿಕದ ನಡೆಯೇನು?

ಇವಿಷ್ಟೇ ಅಲ್ಲ ಟ್ರಂಪ್ ಹೇಳಿರುವ ಸುಳ್ಳುಗಳನ್ನು ನಾವು ಪಟ್ಟಿ ಮಾಡಬೇಕಾದರೆ ಕನಿಷ್ಠ ಒಂದು ತಿಂಗಳುಗಳೇ ಬೇಕಾಗಬಹುದು. ಯಾಕೆಂದರೆ ಟ್ರಂಪ್ ಹಿಂದಿನ ಅವಧಿಯ ಸುಳ್ಳು 10-20 ಅಲ್ಲ 30,573 ಸುಳ್ಳುಗಳು. ಇದಕ್ಕೆ ಸರಿಸಾಟಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಮಾತ್ರವೇ. ಟ್ರಂಪ್ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾದರೆ ಟ್ರಂಪ್ ಗೆಳೆಯರಾಗಿದ್ದ ಮೋದಿ ದ್ವೇಷ, ಉದ್ರೇಕಕಾರಿ ಭಾಷಣಗಳಲ್ಲಿ ಎತ್ತಿದ ಕೈ. ಜೊತೆಗೆ ಸ್ಥಳಕ್ಕೆ ತಕ್ಕುದಾಗಿ ಬಣ್ಣ ಬದಲಾಯಿಸಿಕೊಳ್ಳುವ ಊಸರವಳ್ಳಿ. ಅದಕ್ಕೆ ಈ ಹಿಂದಿನ ಲೋಕಸಭೆ ಚುನಾವಣೆಯೇ ಸಾಕ್ಷಿ. ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಪ್ರವಾದಿ ಜಪ, ಹಿಂದೂ ಪ್ರಾಬಲ್ಯ ಪ್ರದೇಶದಲ್ಲಿ ಮುಸ್ಲಿಂ ವಿರೋಧಿ ಭಾಷಣ.

ಹೀಗೆ ಕಾಲಕ್ಕೆ ತಕ್ಕಂತೆ ವೇಷ ಭೂಷಣ ಬಣ್ಣ ಬದಲಾಯಿಸಿಕೊಳ್ಳುವ ಮೋದಿಯಿಂದ ಟ್ರಂಪ್ ಅಥವಾ ಟ್ರಂಪ್‌ನಿಂದ ಮೋದಿ ಸುಳ್ಳು ಹೇಳುವುದನ್ನು ಕಲಿತರೋ ತಿಳಿಯದು. ಒಟ್ಟಿನಲ್ಲಿ ಇವರಿಬ್ಬರ ಜೋಡಿಗೆ ಸರಿಸಾಟಿ ಬೇರೆಲ್ಲೂ ಇಲ್ಲ. ಟ್ರಂಪ್- ಮೋದಿ ಅಧಿಕಾರಾವಧಿ ಮುಗಿಯುವ ಮುನ್ನ ಸುಳ್ಳು ಹೇಳುವ ಸ್ಪರ್ಧೆಯಲ್ಲಿ ಯಾರು ಯಾರನ್ನು ಮೀರಿಸುತ್ತಾರೆ, ದಾಖಲೆ ಬರೆಯುತ್ತಾರೆ ಎಂಬ ಕುತೂಹಲವೂ ಉಳಿದಿಲ್ಲ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X