ದೆಹಲಿಯಲ್ಲಿ ಆಪ್‌ಗೆ ಸೋಲು | ಕೇಜ್ರಿವಾಲ್, ಪಂಜಾಬ್‌ ಸರ್ಕಾರದ ಮುಂದಿನ ಭವಿಷ್ಯವೇನು?  

Date:

Advertisements

ಭ್ರಷ್ಟಾಚಾರ ವಿರೋಧಿ ನೀತಿಯನ್ನು ಮುಂದಿಟ್ಟುಕೊಂಡು ಆಪ್‌ ಪಕ್ಷವನ್ನು ಕಟ್ಟಲಾಗಿತ್ತು. ಶುದ್ಧ ಆಡಳಿತವನ್ನುನೀಡುವುದಾಗಿ ಕೇಜ್ರಿವಾಲ್‌ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಜನರು ಕೂಡ ಇಷ್ಟಪಟ್ಟಿದ್ದರು. ಅದನ್ನು ಬೆಂಬಲಿಸಿ ಮೂರು ಬಾರಿ ಅಧಿಕಾರ ನೀಡುವುದರ ಜೊತೆ ಪಕ್ಕದ ಪಂಜಾಬ್‌ ರಾಜ್ಯವನ್ನು ಗೆಲ್ಲಿಸಿದ್ದರು. ಆದರೆ ಎಲ್ಲ ರಾಜಕಾರಣಿಗಳ ಹಾಗೆ ಅಧಿಕಾರದ ಮದ ಕೇಜ್ರಿವಾಲ್‌ ಅವರನ್ನು ಬಿಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಭ್ರಷ್ಟಾಚಾರದ ಆರೋಪಗಳು ಎಎಪಿ ಬಗ್ಗೆ ಇದ್ದ ನಂಬಿಕೆಯನ್ನು ಕುಸಿಯುವಂತೆ ಮಾಡಿತು

ನವದೆಹಲಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಅಮ್‌ ಆದ್ಮಿ ಪಕ್ಷದ ಸೋಲು ದೇಶದ ರಾಜಕೀಯ ರಂಗದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸ್ಥಾಪಕ ಅರವಿಂದ್‌ ಕೇಜ್ರಿವಾಲ್‌ ಕೂಡ ಇಂತಹ ಪರಾಭವವನ್ನು ನಿರೀಕ್ಷಿಸಿರಲಿಲ್ಲ. ಭ್ರಷ್ಟಾಚಾರ ಆರೋಪಗಳು, ಆಂತರಿಕ ಕಿತ್ತಾಟ, ಸರ್ವಾಧಿಕಾರಿ ಧೋರಣೆ, ಕೇಂದ್ರ ಸರ್ಕಾರದೊಂದಿಗೆ ಸದಾ ವೈಮಸ್ಸು ಮುಂತಾದ ಸಮಸ್ಯೆಗಳು ಚುನಾವಣೆಯಲ್ಲಿ ಆಪ್‌ಗೆ ಹಿನ್ನಡೆಯುಂಟು ಮಾಡಬಹುದು ಎಂದು ಭಾವಿಸಲಾಗಿತ್ತು. ಆದರೆ ಪಕ್ಷ 22 ಕ್ಚೇತ್ರ ಮಾತ್ರ ಗೆಲ್ಲುತ್ತದೆ ಎಂದು ಸ್ವತಃ ಕೇಜ್ರಿವಾಲ್‌ ಅವರು ಕೂಡ ಅಂದುಕೊಂಡಿರಲಿಲ್ಲ. ಸತ್ಯೇಂದ್ರ ಜೈನ್‌, ಮನೀಶ್ ಸಿಸೊಡಿಯಾ ಸೇರಿದಂತೆ ಅತಿರಥ, ಮಹಾರಥರೆಲ್ಲ ಚುನಾವಣೆಯಲ್ಲಿ ಸೋತು ಹೋದರು. ದೆಹಲಿಯ ಸೋಲು ಕೇಜ್ರಿವಾಲ್‌ ಅವರಿಗೆ ನಿಜವಾಗಿಯೂ ಪಾಠದ ಜೊತೆ ಪಕ್ಷದ ಮುಂದಿನ ಭವಿಷ್ಯ ಏನು ಎಂಬುದರ ಬಗ್ಗೆ ಪ್ರಶ್ನೆಯನ್ನು ಶುರು ಮಾಡದೆ.

ಭ್ರಷ್ಟಾಚಾರ ನಿರ್ಮೂಲನೆ, ಪಾರದರ್ಶಕ ಆಡಳಿತ ನೀಡುತ್ತೇನೆಂದು ಅಮ್‌ ಆದ್ಮಿ ಪಕ್ಷ ಸ್ಥಾಪಿಸಿದ ಅರವಿಂದ್‌ ಕೇಜ್ರಿವಾಲ್‌ ದೆಹಲಿಯಲ್ಲಿ ಮೂರು ಬಾರಿ ಹಾಗೂ ಪಕ್ಕದ ಪಂಜಾಬ್‌ನಲ್ಲೂ ಪಕ್ಷವನ್ನು ಭಾರಿ ಅಂತರದಿಂದ ಅಧಿಕಾರಕ್ಕೆ ತಂದಿದ್ದರು. ದೇಶದ ಇತರ ರಾಜ್ಯಗಳಲ್ಲೂ ಎಎಪಿಯ ಅಲೆ ಬೀಸುತ್ತದೆ ಎನ್ನುವಾಗಲೇ ಕೇಂದ್ರದ ರಾಜ್ಯದಲ್ಲಿಯೇ ಮುಗ್ಗರಿಸಿರುವುದು ಮುಂದಿನ ಹಲವು ಪ್ರಶ್ನೆಗಳಿಗೆ ಆಸ್ಪದ ನೀಡಿದೆ. ಆಪ್‌ ಸೋಲಿನೊಂದಿಗೆ ರಾಜಕೀಯ ವಲಯದಲ್ಲಿ ಹಲವು ಗಾಳಿ ಸುದ್ದಿಗಳು ಹರಡುತ್ತಿವೆ. ಎಎಪಿ ಪಂಜಾಬ್‌ ಘಟಕದಲ್ಲಿ ಆಂತರಿಕ ಸಂಘರ್ಷ ಆರಂಭವಾಗಿದೆ ಎಂಬ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ಪಂಜಾಬ್​ ಸಿಎಂ ಭಗವಂತ್​ ಮಾನ್ ಸಂಪುಟವನ್ನು ದೆಹಲಿಗೆ ಕರೆಸಿದ್ದಾರೆ. ತಮ್ಮ ಇಡೀ ಸಚಿವ ಸಂಪುಟದೊಂದಿಗೆ ಚಂಡೀಗಢದಿಂದ ದೆಹಲಿಗೆ ತೆರಳಿದ್ದಾರೆ. ಆದರೆ ಎಎಪಿ ಮಾತ್ರ 2027 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದಕ್ಕೆ ಸಭೆ ಕರೆದಿದೆ ಎಂದು ತನ್ನ ಆಂತರಿಕ ವಿಚಾರವನ್ನು ಬಹಿರಂಗಗೊಳಿಸಿಲ್ಲ.      

Advertisements

ದೆಹಲಿ ಸೋತ ನಂತರ ಎಎಪಿಗೆ ಭವಿಷ್ಯವಿಲ್ಲ, ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ, ಪಂಜಾಬ್‌ನಲ್ಲಿ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ವಿಪಕ್ಷಗಳು ರಾಜಕೀಯ ಹೇಳಿಕೆಗಳನ್ನು ಹೆಚ್ಚು ಮಾಡಿ ಊಹಾಪೋಹಗಳಿಗೆ ಮತ್ತಷ್ಟು ಬಣ್ಣ ಬಳಿಯುತ್ತಿವೆ. ಚುನಾವಣೆಯಲ್ಲಿ ಅಧಿಕಾರರೂಢ ರಾಜಕೀಯ ಪಕ್ಷವೊಂದು ಕೆಳಗೆ ಬಿದ್ದಾಗ ಇಂತಹ ಹೇಳಿಕೆಗಳು ಸಾಮಾನ್ಯ. ಪಕ್ಷವನ್ನು ಅಸ್ಥಿರಗೊಳಿಸಿ ತಾವು ಮುನ್ನಡೆ ಸಾಧಿಸುವುದು ರಾಜಕೀಯದಲ್ಲಿ ಮಾಮೂಲು.   

ಆಮ್ ಆದ್ಮಿ ಪಕ್ಷವು 2022 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತ್ತು. 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಜಯಿಸುವ ಮೂಲಕ ಸರ್ಕಾರ ರಚಿಸಿತು. ಆದರೆ ದೆಹಲಿಯಲ್ಲಿ ಎಎಪಿ ಸೋತ ತಕ್ಷಣ ಪಂಜಾಬ್‌ ರಾಜಕೀಯದಲ್ಲಿ ಸಮಸ್ಯೆಗಳು, ಗಾಳಿ ಸುದ್ದಿಗಳು ಒಟ್ಟಿಗೆ ಕಾಣಿಸಿಕೊಂಡಿದೆ. ಪಂಜಾಬ್‌ನ ಎಎಪಿ ಘಟಕದೊಳಗೆ ಅವ್ಯವಸ್ಥೆ ಇದೆ ಎಂದು ಈ ಮೊದಲು ಹೇಳಲಾಗುತ್ತಿತ್ತು. ಮುಖ್ಯಮಂತ್ರಿ ಭಗವಂತ್ ಮಾನ್ ನೆಪಮಾತ್ರಕ್ಕೆ ಪಂಜಾಬ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರವೆಲ್ಲವನ್ನು ಹಿಂಬಾಗಿಲಿನಿಂದ ಕೇಜ್ರಿವಾಲ್‌ ನಡೆಸುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಇದೆ.

ಈ ಸುದ್ದಿ ಓದಿದ್ದೀರಾ? ವಿರಾಟ್ ಕೊಹ್ಲಿ ದಾಖಲೆ ಮುರಿದ ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ 

ಭಗವಂತ್ ಮಾನ್​ ನವದೆಹಲಿ ವಿಧಾನಸಭೆಯಲ್ಲಿ ಸಿಖ್‌ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ 12 ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದರು. ಆದರೆ ಈ 12 ಕ್ಷೇತ್ರಗಳಲ್ಲಿಯೂ ಎಎಪಿ ಸೋಲು ಕಂಡಿತು. ಅದರಲ್ಲಿ ಅರವಿಂದ್ ಕೇಜ್ರಿವಾಲ್ ಪ್ರತಿನಿಧಿಸುವ ಕ್ಷೇತ್ರವೂ ಇತ್ತು. ಭಗವಂತ್ ಮಾನ್‌ ಜೊತೆ ಅವರ ಸಂಪುಟ ಸಚಿವರು, ಸಂಸದರು, ಶಾಸಕರು ಮತ್ತು ಎಎಪಿ ರಾಜ್ಯ ಘಟಕದ ಪದಾಧಿಕಾರಿಗಳು ಸೇರಿದಂತೆ 200 ಕ್ಕೂ ಹೆಚ್ಚು ನಾಯಕರು ಚುನಾವಣಾ ಪ್ರಚಾರಕ್ಕಾಗಿ ವಾರಗಟ್ಟಲೆ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಆದರೆ ಇದ್ಯಾವುದು ಫಲ ನೀಡಲಿಲ್ಲ. ಈ ವಿಷಯಗಳು ಕೂಡ ಈಗ ಚರ್ಚೆಯಾಗುತ್ತಿದೆ.  

ಪಶ್ಚಿಮ ಲೂಧಿಯಾನ ಕ್ಷೇತ್ರದಲ್ಲಿ ಎಎಪಿ ಶಾಸಕ ಗುರುಪ್ರೀತ್‌ ಗೋಗಿ ಮೃತಪಟ್ಟಿರುವ ಹಿನ್ನಲೆಯಲ್ಲಿ ಆ ಕ್ಷೇತ್ರದ ಉಪಚುನಾವಣೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಸ್ಪರ್ಧಿಸಿ ತಾವು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿವೆ. ಕೇವಲ ಅಧಿಕಾರಕ್ಕಾಗಿ ಕೇಜ್ರಿವಾಲ್‌ ಇಂತಹ ದುಸ್ಸಾಹಸಕ್ಕೆ ಕೈಹಾಕಲಾರರು ಎಂಬುದು ದೀರ್ಘಕಾಲ ರಾಜಕೀಯ ಮಾಡಿದವರಿಗೆ ತಿಳಿಯುತ್ತದೆ. ಒಂದು ವೇಳೆ ಈ ಪ್ರಯತ್ನಕ್ಕೆ ಮುಂದಾದರೆ ಪಕ್ಷ ಇನ್ನಷ್ಟು ಅವನತಿಯ ಹಾದಿ ಹಿಡಿಯುತ್ತದೆ ಎಂಬುದು ಅವರಿಗೂ ತಿಳಿದಿದೆ.

ಇದರೆಲ್ಲರ ಜೊತೆ ಭಗವಂತ್ ಮಾನ್ ಅವರು ಪಕ್ಷವನ್ನು ಇಬ್ಬಾಗ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆಮ್ ಆದ್ಮಿ ಪಕ್ಷ ಮಹಾರಾಷ್ಟ್ರದಲ್ಲಿ ಶಿವಸೇನೆ ಒಡೆದು ಎರಡು ಹೋಳಾದಂತೆ ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷ ಒಡೆದು ಎರಡು ಹೋಳಾಗುವ ದಿನ ಬಹಳ ದೂರವಿಲ್ಲ. ಆಗಲಿದೆ. ಸಿಎಂ ಭಗವಂತ್ ಮಾನ್ ಪಂಜಾಬ್​ನ ಏಕನಾಥ್ ಶಿಂಧೆ ಆಗಲಿದ್ದಾರೆ. ಆಪ್​ ಪಕ್ಷದ 30 ಶಾಸಕರು ಕಾಂಗ್ರೆಸ್​​ನೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಯಾವಾಗ ಬೇಕಾದರೂ ಬೇರೆ ಕಡೆ ವಾಲುವ ಸಾಧ್ಯತೆ ಇದೆ. ಹಾಗೆಯೇ ಮಾನ್‌ ಅವರು ಕೇಂದ್ರ ಗೃಹ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ.

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯುಬಿಟಿ ಪಕ್ಷಗಳು ಕುಸಿದುಬಿದ್ದಂತೆ ಸಂಪೂರ್ಣವಾಗಿ ಮುಗಿದು ಹೋಗಿಲ್ಲ. ಆಪ್‌ ದೆಹಲಿಯಲ್ಲಿ ಪ್ರತಿಶತ 10 ರಷ್ಟು ಮತ ಕಳೆದುಕೊಂಡರೂ ಶೇ 43.6ರಷ್ಟು ಜನರು ಕೇಜ್ರಿವಾಲ್‌ ಅವರನ್ನು ಬೆಂಬಲಿಸಿದ್ದಾರೆ. 48 ಕ್ಷೇತ್ರಗಳನ್ನು ಗೆದ್ದು ಅಧಿಕಾರ ಹಿಡಿಯುತ್ತಿರುವ ಬಿಜೆಪಿಗೆ ಸಿಕ್ಕ ಶೇಕಡಾವಾರು ಮತಗಳಿಗೆ ಹೋಲಿಸಿದರೆ ಶೇ 2 ರಷ್ಟು ಮಾತ್ರ ಕಡಿಮೆ ಮತಗಳು ಲಭಿಸಿವೆ. ದೆಹಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಈಗಲೂ ಕೇಜ್ರಿವಾಲ್‌ ಪಕ್ಷದ ಜೊತೆ ಇದ್ದಾರೆ. ಆಪ್‌ ಸೋಲಲು ಭ್ರಷ್ಟಾಚಾರ, ಸರ್ವಾಧಿಕಾರ ಆಡಳಿತ ಆರೋಪಗಳ ಜೊತೆ ಇಂಡಿಯಾ ಮೈತ್ರಿಕೂಟದ ಪಕ್ಷವಾದ ಕಾಂಗ್ರೆಸ್‌ ಕೂಡ ಕಾರಣವಾಗಿರಬಹುದು. ಕಾಂಗ್ರೆಸ್‌ ಒಂದೂ ಸ್ಥಾನ ಗೆಲ್ಲದಿದ್ದರೂ ಶೇ 6.3ರಷ್ಟು ಮತಗಳನ್ನು ಪಡೆದು 14 ಸ್ಥಾನಗಳಲ್ಲಿ ಎಎಪಿಯನ್ನು ಸೋಲಿಸಿದೆ.

ಭ್ರಷ್ಟಾಚಾರ ವಿರೋಧಿ ನೀತಿಯನ್ನು ಮುಂದಿಟ್ಟುಕೊಂಡು ಆಪ್‌ ಪಕ್ಷವನ್ನು ಕಟ್ಟಲಾಗಿತ್ತು. ಶುದ್ಧ ಆಡಳಿತವನ್ನುನೀಡುವುದಾಗಿ ಕೇಜ್ರಿವಾಲ್‌ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಜನರು ಕೂಡ ಇಷ್ಟಪಟ್ಟಿದ್ದರು. ಅದನ್ನು ಬೆಂಬಲಿಸಿ ಮೂರು ಬಾರಿ ಅಧಿಕಾರ ನೀಡುವುದರ ಜೊತೆ ಪಕ್ಕದ ಪಂಜಾಬ್‌ ರಾಜ್ಯವನ್ನು ಗೆಲ್ಲಿಸಿದ್ದರು. ಆದರೆ ಎಲ್ಲ ರಾಜಕಾರಣಿಗಳ ಹಾಗೆ ಅಧಿಕಾರದ ಮದ ಕೇಜ್ರಿವಾಲ್‌ ಅವರನ್ನು ಬಿಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಭ್ರಷ್ಟಾಚಾರದ ಆರೋಪಗಳು ಎಎಪಿ ಬಗ್ಗೆ ಇದ್ದ ನಂಬಿಕೆಯನ್ನು ಕುಸಿಯುವಂತೆ ಮಾಡಿತು. ಆರೋಪಗಳು ಹೆಚ್ಚಾದ ಕಾರಣ ಒಂದಷ್ಟು ಮತದಾರರು ಆಪ್‌ನಿಂದ ದೂರ ಸರಿಯಲಾರಂಭಿಸಿದರು. ಪಕ್ಷ ಕಟ್ಟಲು ನೆರವಾದವರನ್ನು ಕೈಬಿಟ್ಟರು. ಕೆಲವರನ್ನು ಉಚ್ಚಾಟಿಸಿದರು. ಹಗರಣಗಳು ಮೈಗೆ ಮೆತ್ತಿಕೊಂಡಿ ಅವರ ಜೊತೆ ಅವರ ಪ್ರಮುಖ ನಾಯಕರು ಜೈಲಿಗೂ ಹೋಗಿ ಬಂದರು.

ದೇಶದ ಎಲ್ಲ ರಾಜ್ಯಗಳ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿ ಪಕ್ಷವನ್ನು ಸಂಘಟಿಸುವ ಮಹತ್ವಾಕಾಂಕ್ಷೆಯನ್ನು ಕೇಜ್ರಿವಾಲ್‌ ಹೊಂದಿದ್ದರು.  ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷ ಎಂದು ಗುರುತಿಸಿಕೊಂಡಿದ್ದ ಆಪ್ ಪಕ್ಷದ ವರ್ಚಸ್ಸು ಈಗ ಒಂದಿಷ್ಟು ಕುಸಿದಿದೆ ಈಗ ಮಾತೃ ರಾಜ್ಯವನ್ನೆ ಕಳೆದುಕೊಂಡಿದ್ದಾರೆ. ಮುಂದಾದರೂ ಸೋಲನ್ನು ಸವಾಲಾಗಿ ಸ್ವೀಕರಿಸಿ ಜನರ ಸಮಸ್ಯೆಯನ್ನು ಮುಂಚೂಣಿಯಲ್ಲಿ ಇರಿಸಿ ಭ್ರಷ್ಟಾಚಾರದಿಂದ ದೂರ ಸರಿದು ಚುನಾವಣೆ ಎದುರಿಸಲಿ.    

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X