ಬೆಂಗಳೂರು | ಲಾಲ್‌ಬಾಗ್ ಕೆಳಗೆ ಸುರಂಗ, ಮೇಲೆ ಆತಂಕ; ಟನಲ್ ತಂದ ಸಂಚಕಾರ ಬಿಚ್ಚಿಟ್ಟ GSI ವರದಿ

Date:

ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗಿರುವ ಹೆಬ್ಬಾಳ–ಸೆಂಟ್ರಲ್ ಸಿಲ್ಕ್ ಬೋರ್ಡ್ ಟನಲ್ ರಸ್ತೆ ಯೋಜನೆ ಭಾರೀ ವಿರೋಧ ಎದುರಿಸುತ್ತಿದೆ. ನಗರದ ಭೂಗರ್ಭ ರಚನೆ, ಐತಿಹಾಸಿಕ ಪರಂಪರೆ, ಜಲಮೂಲಗಳು ಹಾಗೂ ಪರಿಸರದ ಮೇಲೆ ಟನಲ್ ರಸ್ತೆ ಯೋಜನೆಯ ಪರಿಣಾಮಗಳ ಬಗ್ಗೆ ಆತಂಕ-ಕಳವಳಗಳ ಎದುರಾಗಿವೆ. ಲಾಲ್‌ಬಾಗ್‌ನ ಪುರಾತನ ಶಿಲಾ ರಚನೆಗೆ ಯೋಜನೆಯಿಂದ ಅಪಾಯ ಉಂಟಾಗಲಿದೆ ಎಂದು ಪರಿಸರ ಪ್ರೇಮಿಗಳು, ನಗರವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿಗರ ಆತಂಕವನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ ಎನ್ನುತ್ತಿದೆ ಇತ್ತೀಚೆಗೆ ಬಿಡುಗಡೆಯಾದ Geological Survey of India (GSI) ತಜ್ಞರ ಸಮಿತಿ ನೀಡಿರುವ ವರದಿ.

- Advertisement -

ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ನಗರದ ಪ್ರಮುಖ ಸಂಚಾರ ಮಾರ್ಗವನ್ನು ಸಂಪರ್ಕಿಸುವ ಸುಮಾರು 16.75 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು 22,267 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಯೋಜನೆಯ ಗುತ್ತಿಗೆಯನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ನೀಡುವ ಪ್ರಕ್ರಿಯೆಯೂ ಅಂತಿಮ ಹಂತಕ್ಕೆ ತಲುಪಿದೆ. ಇದೇ ಹೊತ್ತಿನಲ್ಲಿ, ಜಿಎಸ್‌ಐ ಸಮಿತಿಯ 27 ಪುಟಗಳ ವರದಿ ಬಹಿರಂಗಗೊಂಡಿದೆ. ಈ ವರದಿ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಹೇಳಿಲ್ಲ. ಆದರೆ, ಈಗಿರುವ ವಿನ್ಯಾಸ, ಭೂಗರ್ಭ ಅಧ್ಯಯನ ಹಾಗೂ ನಿರ್ಮಾಣ ವಿಧಾನಗಳ ಬಗ್ಗೆ ಗಂಭೀರ ಮರುಪರಿಶೀಲನೆ ಅಗತ್ಯ ಎಂದು ಎಚ್ಚರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಲಾಲ್‌ಬಾಗ್‌ನಲ್ಲಿರುವ ಶಿಲಾ ರಚನೆ ಸಾಮಾನ್ಯ ಬಂಡೆಯಲ್ಲ. ಇದು ಕೋಟ್ಯಾಂತರ ವರ್ಷಗಳ ಭೂಗರ್ಭ ಪರಿವರ್ತನೆಗಳಿಗೆ ಸಾಕ್ಷಿಯಾಗಿರುವ ಅಪರೂಪದ ಗ್ರಾನೈಟ್ ರಚನೆಯಾಗಿದೆ. ಈ ಕಾರಣದಿಂದಲೇ ಲಾಲ್‌ಬಾಗ್‌ನಲ್ಲಿರುವ ಶಿಲೆಯನ್ನು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ (National Geological Monument) ಎಂದೂ ಗುರುತಿಸಲಾಗಿದೆ.

ಈ ಶಿಲೆಯನ್ನೇ ಒಡೆಯಲು ಯೋಜಿಸಿರುವ ಸರ್ಕಾರದ ಕ್ರಮದ ಕುರಿತು GSI ಸಮಿತಿ ಆತಂಕ ವ್ಯಕ್ತಪಡಿಸಿದೆ. “ಟನಲ್ ನಿರ್ಮಾಣಕ್ಕಾಗಿ ನಡೆಯುವ ಉತ್ಖನನ ಮತ್ತು ಸ್ಫೋಟಕ ಬಳಕೆಯು ಈ ಪುರಾತನ ಶಿಲಾ ರಚನೆಯ ಮೇಲೆ ಪರಿಣಾಮ ಬೀರಬಹುದು. ಈಗಾಗಲೇ ಬಂಡೆಗಳಲ್ಲಿ ಇರುವ ಬಿರುಕುಗಳು ಇನ್ನೂ ಹೆಚ್ಚು ವಿಸ್ತರಿಸಬಹುದು. ಇದರಿಂದ ಲಾಲ್‌ಬಾಗ್‌ನ ಶಿಲೆಯ ಸ್ಥಿರತೆ ಮಾತ್ರವಲ್ಲ, ಅದರ ಸಮೀಪದಲ್ಲಿರುವ ಕೆಂಪೇಗೌಡ ಗೋಪುರದಂತಹ ಐತಿಹಾಸಿಕ ರಚನೆಗಳ ಮೇಲೂ ಪರಿಣಾಮ ಬೀರುವ ಅಪಾಯವಿದೆ” ಎಂದು ಸಮಿತಿ ಸೂಚಿಸಿದೆ.

Tanel road

ಭೂಮಿಯೊಳಗಿನ ಬಂಡೆ ರಚನೆಗಳಲ್ಲಿ ಸಣ್ಣ ಬಿರುಕುಗಳಿದ್ದರೂ ಅವುಗಳ ಮೂಲಕ ನೀರಿನ ಹರಿವು, ಒತ್ತಡ ಹಾಗೂ ಕಂಪನಗಳ ಪರಿಣಾಮ ಹೆಚ್ಚಾಗಬಹುದು. ಟನಲ್ ಕಾಮಗಾರಿಯ ಸಮಯದಲ್ಲಿ ಉಂಟಾಗುವ ಕಂಪನಗಳು ಈ ಬಿರುಕುಗಳನ್ನು ವಿಸ್ತರಿಸಿದರೆ, ಶಿಲೆಯ ಕೆಲವು ಭಾಗಗಳು ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು GSI ಹೇಳಿದೆ.

ಅಂತೆಯೇ, ಟನಲ್ ನಿರ್ಮಾಣದಲ್ಲಿ Tunnel Boring Machine (TBM) ಅನ್ನು ಭೂಮಿಯೊಳಗೆ ಇಳಿಸಲು ಮತ್ತು ಕಾರ್ಯಾಚರಣೆ ನಡೆಸಲು ಹಲವು ಶಾಫ್ಟ್‌ಗಳನ್ನು ನಿರ್ಮಿಸಲಾಗುತ್ತದೆ. ಈ ಪೈಕಿ, ಲಾಲ್‌ಬಾಗ್ ಭೂವೈಜ್ಞಾನಿಕ ಸ್ಮಾರಕದ ಸಮೀಪದಲ್ಲಿರುವ Shaft-4 ಅನ್ನು ‘ಗಂಭೀರ ಕಳವಳಕಾರಿ’ ಎಂದು GSI ಗುರುತಿಸಿದೆ.

ಈ ಶಾಫ್ಟ್ ನಿರ್ಮಾಣಕ್ಕಾಗಿ ‘drill and blast’ ವಿಧಾನವನ್ನು ಬಳಸುವ ಸಾಧ್ಯತೆ ಇದೆ. ಅಂದರೆ ಸ್ಫೋಟಕ ಬಳಸಿ ಬಂಡೆಯನ್ನು ಒಡೆಯುವ ಮೂಲಕ ಆಳವಾದ ಗುಂಡಿ ನಿರ್ಮಿಸುವುದು. ಆದರೆ, ಈ ವಿಧಾನವೇ ಲಾಲ್‌ಬಾಗ್‌ನ ಪುರಾತನ ಶಿಲಾ ರಚನೆಗೆ ಅಪಾಯ ಉಂಟುಮಾಡಬಹುದು ಎಂದು GSI ಎಚ್ಚರಿಸಿದೆ.

ವರದಿಯ ಪ್ರಕಾರ, Shaft-4 ನಿರ್ಮಾಣದ ವೇಳೆ ಉಂಟಾಗುವ ಕಂಪನಗಳು ಬಂಡೆಯೊಳಗಿನ ಬಿರುಕುಗಳನ್ನು ಹೆಚ್ಚಿಸಬಹುದು ಅಥವಾ ಶಿಲೆಯ ಕೆಲವು ಭಾಗಗಳ ಸ್ಥಿರತೆಯನ್ನು ದುರ್ಬಲಗೊಳಿಸಬಹುದು. ಹೀಗಾಗಿ ಈ ಶಾಫ್ಟ್‌ನ ಸ್ಥಳವನ್ನು ಸ್ವತಂತ್ರ ತಾಂತ್ರಿಕ ಸಮಿತಿಯಿಂದ ಮತ್ತೊಮ್ಮೆ ಪರಿಶೀಲಿಸಬೇಕು ಮತ್ತು ಸಾಧ್ಯವಾದಷ್ಟು ಭೂವೈಜ್ಞಾನಿಕ ಸ್ಮಾರಕದಿಂದ ದೂರಕ್ಕೆ ಸ್ಥಳಾಂತರಿಸುವ ಬಗ್ಗೆ ಯೋಜಿಸಬೇಕು ಎಂದು ಜಿಎಸ್‌ಐ ಶಿಫಾರಸು ಮಾಡಿದೆ.

ಜಿಎಸ್‌ಐನ ಮತ್ತೊಂದು ಕಳವಳವೆಂದರೆ; ಟನಲ್ ನಿರ್ಮಾಣದ ದೊಡ್ಡ ಸವಾಲಾಗಿರುವ ಬೆಂಗಳೂರಿನ ಭೂಗರ್ಭ ರಚನೆಯ ವೈವಿಧ್ಯತೆ. GSI ವರದಿ ಪ್ರಕಾರ, ಲಾಲ್‌ಬಾಗ್ ಭಾಗವು ‘ಭೂವೈಜ್ಞಾನಿಕ ಪರಿವರ್ತನಾ ವಲಯ’ (structural transition zone) ಆಗಿದೆ. ಅಂದರೆ, ಇಲ್ಲಿ ಒಂದೇ ರೀತಿಯ ಬಂಡೆ ಇರುವುದಿಲ್ಲ. ವಿವಿಧ ರೀತಿಯ ಗ್ರಾನೈಟ್ ಮತ್ತು ಗ್ನೈಸ್ ಶಿಲೆಗಳು ಪರಸ್ಪರ ಸಂಪರ್ಕ ಹೊಂದಿವೆ. ಜೊತೆಗೆ, ಲಾಲ್‌ಬಾಗ್ ಪ್ರದೇಶದಲ್ಲಿ ಐದು ಪ್ರಮುಖ ಜಂಟು ರಚನೆಗಳು (joint sets) ಇವೆ. ಭೂಗರ್ಭ ವಿಜ್ಞಾನದಲ್ಲಿ ‘joints’ ಎಂದರೆ ಬಂಡೆಗಳೊಳಗಿನ ನೈಸರ್ಗಿಕ ಬಿರುಕುಗಳು ಅಥವಾ ವಿಭಜನಾ ರೇಖೆಗಳು. ಸುರಂಗ ತೋಡುವಾಗ ಈ ಜಂಟುಗಳು ಒಂದಕ್ಕೊಂದು ಸೇರಿಕೊಂಡರೆ ಬಂಡೆಗಳು ದೊಡ್ಡ ತುಂಡುಗಳಾಗಿ ಬೇರ್ಪಡುವ ಸಾಧ್ಯತೆ ಇದೆ. ಇದರಿಂದ ಲಾಲ್‌ಬಾಗ್‌ನ ಬಂಡೆ ರಚನೆಗೆ ಭಾರೀ ಅಪಾಯ ಎದುರಾಗಲಿಎ ಎಂದು ಜಿಎಸ್‌ಐ ವರದಿ ಹೇಳಿದೆ.

GSI ವರದಿಯಲ್ಲಿರುವ ಮತ್ತೊಂದು ಪ್ರಮುಖ ಅಂಶವೆಂದರೆ, ಯೋಜನೆಯ ‘ಸಮಗ್ರ ಯೋಜನಾ ವರದಿ’ಯಲ್ಲಿ (DPR) ನೀಡಿರುವ ಭೂಗರ್ಭ ಅಧ್ಯಯನಗಳು ಈ ಪ್ರದೇಶದ ಸಂಕೀರ್ಣ ಭೂವೈಜ್ಞಾನಿಕ ಪರಿಸ್ಥಿತಿಗೆ ಸಾಕಾಗುವುದಿಲ್ಲ ಎಂಬುದು.

ದೊಡ್ಡ ಪ್ರಮಾಣದ ಸುರಂಗ ಯೋಜನೆಗಳಲ್ಲಿ ನಿರ್ಮಾಣಕ್ಕೂ ಮೊದಲು ಭೂಮಿಯೊಳಗಿನ ರಚನೆ, ಬಂಡೆಗಳ ಗುಣಮಟ್ಟ, ನೀರಿನ ಹರಿವು, ಬಿರುಕುಗಳ ಸ್ವರೂಪ ಹಾಗೂ ಭೂಕಂಪನದಂತಹ ಅಂಶಗಳ ಬಗ್ಗೆ ಅತ್ಯಂತ ವಿವರವಾದ ಅಧ್ಯಯನ ನಡೆಸಬೇಕು. ಅದರಂತೆ, ಈ ಯೋಜನೆಗೆ ಇನ್ನಷ್ಟು ಸಮಗ್ರ ಭೂತಾಂತ್ರಿಕ ತನಿಖೆ ಅಗತ್ಯವಿದೆ ಎಂದು ವರದಿ ಹೇಳಿದೆ.

ಅಗತ್ಯವಿದ್ದರೆ ಮೂರು ಆಯಾಮದ (3D) ಭೂವೈಜ್ಞಾನಿಕ ಮಾದರಿ ನಿರ್ಮಿಸಿ, ಸುರಂಗದ ಮಾರ್ಗ ಮತ್ತು ನಿರ್ಮಾಣ ವಿಧಾನವನ್ನು ಮರುಪರಿಶೀಲಿಸಬೇಕು ಎಂದು ಸಮಿತಿ ಹೇಳಿದೆ.

ಗಮನಾರ್ಹವಾಗಿ, ಇದೇ ರೀತಿಯ ಆತಂಕಗಳನ್ನು ರಾಜ್ಯ ಸರ್ಕಾರ ರಚಿಸಿದ್ದ ಮತ್ತೊಂದು ತಜ್ಞ ಸಮಿತಿಯೂ ವ್ಯಕ್ತಪಡಿಸಿತ್ತು ಎಂಬುದು ಗಮನಾರ್ಹ. ಆದರೆ, ಆ ಸಲಹೆಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಲೇಖನ ಓದಿದ್ದೀರಾ?: ಬ್ರಾಹ್ಮಣ್ಯದ ಪರಮಾಧಿಕಾರ ಸ್ಥಾಪಿಸಿದ್ದ ಮನುಸ್ಮೃತಿ

ಸುರಂಗ ಯೋಜನೆಯ ಮತ್ತೊಂದು ಪ್ರಮುಖ ಪರಿಣಾಮ ಭೂಗರ್ಭ ಜಲದ ಮೇಲೆ ಇರಬಹುದು ಎಂದು GSI ಎಚ್ಚರಿಸಿದೆ. “ಭೂಮಿಯೊಳಗಿನ ಬಂಡೆಗಳಲ್ಲಿ ಇರುವ ಬಿರುಕುಗಳು ಸಹಜವಾಗಿ ನೀರಿನ ಹರಿವಿನ ಮಾರ್ಗಗಳಾಗಿರುತ್ತವೆ. ಸುರಂಗ ನಿರ್ಮಾಣದಿಂದ ಈ ಮಾರ್ಗಗಳು ಬದಲಾಗಬಹುದು. ಇದರಿಂದ ಒಂದು ಕಡೆ ನೀರಿನ ಮಟ್ಟ ಕಡಿಮೆಯಾಗಬಹುದು, ಇನ್ನೊಂದು ಕಡೆ ನೀರು ಸಂಗ್ರಹವಾಗಬಹುದು. ಇದರಿಂದಾಗಿ, ಲಾಲ್‌ಬಾಗ್ ಕೆರೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಪರಿಣಾಮ ಬೀರಬಹುದು” ಎಂದು ಜಿಎಸ್‌ಐ ಹೇಳಿದೆ.

ಇದಕ್ಕಾಗಿ ಲಾಲ್‌ಬಾಗ್ ಕೆರೆ, ಪ್ರಸ್ತಾಪಿತ ಶಾಫ್ಟ್ ಮತ್ತು ರ್ಯಾಂಪ್ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಜಲಧಾರಕ ಪದರಗಳ ಮೇಲೆ ನಿರಂತರ ನಿಗಾ ಇಡುವ ವಿಶೇಷ ‘ಅಂತರ್ಜಲ ಮೇಲ್ವಿಚಾರಣಾ ಜಾಲ’ ಸ್ಥಾಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಬೆಂಗಳೂರು ನಗರದ ಸಂಚಾರ ಸಮಸ್ಯೆ ಗಂಭೀರವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಹೊಸ ಸಾರಿಗೆ ಮೂಲಸೌಕರ್ಯ ಅಗತ್ಯ. ಆದರೆ ಇಂತಹ ದೊಡ್ಡ ಯೋಜನೆಗಳು ಕೇವಲ ಆರ್ಥಿಕ ಲೆಕ್ಕಾಚಾರದಲ್ಲಿ ಮಾತ್ರ ನಿರ್ಧಾರವಾಗಬಾರದು. ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆ ದೀರ್ಘಾವಧಿಯಲ್ಲಿ ಸುರಕ್ಷಿತವಾಗಿದೆಯೇ ಎಂಬುದನ್ನೂ ಗಮನಿಸಬೇಕು ಎಂದು ಜಿಎಸ್‌ಐ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...