ಯುವಜನರ ಹೋರಾಟ ಹತ್ತಿಕ್ಕಲು ಸುಳ್ಳುಗಳ ಸರಮಾಲೆ ಹೆಣೆದ ಬಿಜೆಪಿ!

Date:

ಬಿಜೆಪಿ ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೂ, ಸಂಘಪರಿವಾರದ ಮಂದಿ ಹರಿಯಬಿಡುವ ನರೇಟಿವ್ ಒಂದೇ- ‘ಇದು ದೇಶದ್ರೋಹಿ ಕೃತ್ಯ’. ರೈತರ ಹೋರಾಟವಿರಲಿ, ಅಲ್ಪಸಂಖ್ಯಾತರ ಚಳವಳಿ ಇರಲಿ, ಯುವಜನರ ಆಗ್ರಹವಿರಲಿ- ಎಲ್ಲಕ್ಕೂ ‘ದೇಶದ್ರೋಹಿ ಕೃತ್ಯ’ ಎಂಬ ಹಣೆಪಟ್ಟಿ ಹಚ್ಚಿ ಬಚಾವಾಗುವ ಕುತಂತ್ರವನ್ನು ಕಳೆದೊಂದು ದಶಕದಿಂದಲೂ ಬಿಜೆಪಿ ಮಾಡುತ್ತಾ ಬಂದಿದೆ. ಈಗ ಜೆನ್ ಝೀಗಳ ಬೀದಿ ಹೋರಾಟಕ್ಕೂ ಅಂತಹದ್ದೇ ಕೊಳೆಯನ್ನು ಮೆತ್ತುವ ಪ್ರಯತ್ನವನ್ನು ಸಂಘಪರಿವಾರ ಮಾಡುತ್ತಿದೆ.

- Advertisement -

ಈ ದೇಶದ ಯುವಜನರು ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಅಭಿಯಾನದ ಅಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ತನ್ನ ಹಳೆಯ ಶಸ್ತ್ರಗಳನ್ನು ಸಂಘಪರಿವಾರ ಝಳುಪಿಸಲಾರಂಭಿಸಿದೆ. ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಸಿಜೆಪಿ ಮತ್ತು ಅದರ ನಾಯಕರು ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ನಕಲಿ ಕಥನವನ್ನು ಕಟ್ಟಿ ಜನರ ದಿಕ್ಕುತಪ್ಪಿಸುವ ವ್ಯರ್ಥ ಪ್ರಯತ್ನ ಬಿರುಸಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ನೀಟ್ ಹಗರಣದ ಬಳಿಕ 22 ಲಕ್ಷ ವಿದ್ಯಾರ್ಥಿಗಳ ಬದುಕು ಆತಂಕಕ್ಕೆ ದೂಡಲ್ಪಟ್ಟಿತು. 11 ನೀಟ್ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡರು. ಈ ಬೃಹತ್ ಪರೀಕ್ಷಾ ಹಗರಣದ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕೆಂದು ಯುವಜನರು ಆಗ್ರಹಿಸುತ್ತಿದ್ದಾರೆ. ಆದರೆ ಪ್ರಜಾಸತ್ತಾತ್ಮಕ ದನಿಯನ್ನು ಹತ್ತಿಕ್ಕಲು ಸಂಘಪರಿವಾರ ವಾಮಮಾರ್ಗ ತುಳಿದಿದೆ.

ಆರ್‌ಎಸ್ಎಸ್‌ನ ಮುಖವಾಣಿ ‘ಆರ್ಗನೈಸರ್’ ವೆಬ್‌ಸೈಟ್‌ನಲ್ಲಿ ಗಂಭೀರ ಆರೋಪಗಳನ್ನು ಹೊರಿಸಿ, ಜುಲೈ 20ರಂದು ಲೇಖನ ಪ್ರಕಟಿಸಲಾಗಿದೆ. “ಈ ಹೋರಾಟದ ಹಿಂದೆ ದೇಶ ವಿರೋಧಿಗಳಿದ್ದಾರೆ, ವಿದೇಶಿ ಮೂಲಗಳಿಂದ ಹಣ ಹೂಡಿಕೆಯಾಗಿದೆ” ಎಂಬ ಕಥನವನ್ನು ಲೇಖನದಲ್ಲಿ ಕಟ್ಟಲಾಗಿದೆ. ಸಿಜೆಪಿ ಅಭಿಯಾನ ಶುರುವಾದನಿಂದಲೂ ಇದೇ ಆರೋಪವನ್ನು ಮಾಡುತ್ತಾ ಬಂದಿರುವುದನ್ನು ಗಮನಿಸಬಹುದು. ಆದರೆ ವಾಸ್ತವ ಸತ್ಯಗಳು ಬೇರೆ ಇರುವುದನ್ನು ಹಲವು ವರದಿಗಳು ದೃಢಕರಿಸುತ್ತಿವೆ.

ಈ ದೇಶದ ಪ್ರಖ್ಯಾತ ಪರಿಸರವಾದಿ, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸೋನಮ್ ವಾಂಗ್ಚುಕ್ ಅವರು ಉಪವಾಸ ಕುಳಿತ ಬಳಿಕ ದೆಹಲಿಯ ಜಂತರ್ ಮಂತರ್‌ ಹೋರಾಟವು ದೇಶದ ಗಮನ ಸೆಳೆಯಿತು. ಉಪವಾಸ ಶುರುವಾಗಿ ಹದಿನೈದು ದಿನಗಳಾದರೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಯುವಜನ ರೊಚ್ಚಿಗೆದ್ದರು. ಜುಲೈ 20ರಂದು ಹಮ್ಮಿಕೊಳ್ಳಲಾದ `ಸಂಸತ್ ಚಲೋ’ದಲ್ಲಿ ಭಾಗಿಯಾಗಲು ದೇಶದ ಮೂಲೆಮೂಲೆಯಿಂದ ದೊಡ್ಡ ಮಟ್ಟದಲ್ಲಿ ಜೆನ್‌ಝೀಗಳು ಹೊರಟು ಬಂದರು. ಭವಿಷ್ಯವನ್ನು ಸರಿಪಡಿಸಬೇಕೆಂಬ ಕನಸು ಹೊತ್ತು ಬಂದ ಹಲವರು ತಮ್ಮ ಸ್ವಂತ ಖರ್ಚಿನಲ್ಲಿ, ಬುತ್ತಿಕಟ್ಟಿಕೊಂಡು ಆಗಮಿಸಿರುವುದನ್ನು ವಿಡಿಯೊಗಳು ತೋರಿಸುತ್ತಿವೆ.

23 ವರ್ಷದ ವಿದ್ಯಾರ್ಥಿಯೋರ್ವ, ಬೇಯಿಸಿದ ಶೇಂಗಾ, ಉಪ್ಪಿನಕಾಯಿ, ಈರುಳ್ಳಿಯನ್ನು ಟಿಫನ್ ಬಾಕ್ಸ್‌ನಲ್ಲಿ ಕಟ್ಟಿಕೊಂಡು ಬಂದು ಪ್ರತಿಭಟನಾ ಸ್ಥಳದಲ್ಲಿ ತಿನ್ನುತ್ತಿರುವ ವಿಡಿಯೊವೊಂದು ಹರಿದಾಡಿದೆ. “ಇಷ್ಟು ಬದ್ಧತೆಯಿಂದ ಚಳವಳಿಗೆ ಬಂದವರಿಗೆ ಫಾರೀನ್ ಫಂಡ್‌ ಎಲ್ಲಿಂದ ಬರುತ್ತದೆ?” ಎಂದು ಜನರು ಪ್ರಶ್ನಿಸಲಾರಂಭಿಸಿದ್ದಾರೆ.

ವ್ಯಕ್ತಿಯೊಬ್ಬರು ಹತ್ತಾರು ಯುವಕರಿಗೆ ರೈಲು ಟಿಕೆಟ್ ಬುಕ್ ಮಾಡಿಸಿ, ಪ್ರತಿಭಟನೆಗೆ ಕಳುಹಿಸಿರುವ ಸಂಬಂಧ ‘Brut’ ಮಾಧ್ಯಮ ಸಂಸ್ಥೆಯು ವರದಿ ಮಾಡಿದೆ. ಇಂತಹ ನೂರಾರು ಕಥನಗಳು ಸಿಜೆಪಿ ಪ್ರತಿಭಟನೆಯ ಸುತ್ತ ಇವೆ. ಯುವಜನರು ಸ್ವಯಂಪ್ರೇರಿತವಾಗಿ ಚಳವಳಿಗೆ ಧಾವಿಸಿರುವುದು ಸ್ಪಷ್ಟವಾಗುತ್ತಿದೆ.

ಹೋರಾಟದ ಸುತ್ತ ಸುಳ್ಳುಗಳನ್ನು ಹರಿಬಿಡುವ ಬಿಜೆಪಿಯ ಫ್ಯಾಕ್‌ನ್ಯೂಸ್ ಫ್ಯಾಕ್ಟರಿಯೂ ನಿರಂತರ ಕೆಲಸ ಮಾಡಿದೆ. ಹೇಗೆಲ್ಲ ಸುಳ್ಳುಗಳನ್ನು ಹರಿಬಿಟ್ಟಿದ್ದಾರೆಂದು ನೋಡಿದರೆ ಆತಂಕವಾಗುತ್ತದೆ. “ಸೋನಮ್ ವಾಂಗ್ಚುಕ್ ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದರೂ ಅದನ್ನು ನಿರ್ಲಕ್ಷಿಸಿ ಅಭಿಜಿತ್ ದೀಪ್ಕೆ ಮತ್ತು ಸೌರವ್ ಅವರು ಆರಾಮವಾಗಿ ಫೈವ್ ಸ್ಟಾರ್ ಪ್ಲಾಟ್‌ನಲ್ಲಿ ಮಲಗಿದ್ದಾರೆ. ಪ್ರತಿಭಟನೆಯ ಹೆಸರಲ್ಲಿ ಮಜಾ ಮಾಡುತ್ತಿದ್ದಾರೆ. ಅವರ ಫ್ಲಾಟ್‌ನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿರುವುದರಿಂದ ತಕ್ಷಣ ಜಾಗ ಖಾಲಿ ಮಾಡುವಂತೆ ಅಪಾರ್ಟ್‌ಮೆಂಟ್ ಮಾಲೀಕ ಸೂಚಿಸಿದ್ದಾನೆ” ಎನ್ನುವ ಹಸಿಹಸಿ ಸುಳ್ಳನ್ನು ಎಐ ಜನರೇಟೆಡ್ ವಿಡಿಯೊ ಮತ್ತು ಫೋಟೋಗಳನ್ನು ಬಳಸಿ ಬಿಜೆಪಿ ಬೆಂಬಲಿಗರು ಹರಿಬಿಟ್ಟರು. ಇದನ್ನು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಧಾ ಮೋಹನ್ ದಾಸ್ ಅಗರ್ವಾಲ್ ಸೇರಿದಂತೆ ಅನೇಕರು ಹಂಚಿಕೊಂಡರು.

ಇದರ ನಡುವೆ `ಸಿಜೆಪಿ ಬೆಂಬಲಿಗರು ಹೈಡ್ರೋಜನ್‌ ಟ್ರೈನ್ ಮೇಲೆ ದೆಹಲಿಯಲ್ಲಿ ಕಲ್ಲುತೂರಾಟ ನಡೆಸಿದ್ದಾರೆ’ ಎಂದು ಬಿಜೆಪಿಯ ಸಂಸದೆ ರೇಖಾ ಶರ್ಮಾ ಸೇರಿದಂತೆ ಅನೇಕರು ಹಳೆಯ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಹೋರಾಟಗಾರರ ವಿರುದ್ಧ ದ್ವೇಷ ಬಿತ್ತನೆ ಮಾಡಲು ನಿರಂತರ ಯತ್ನಿಸುತ್ತಿದ್ದಾರೆ. ಆದರೆ ಈ ವಿಡಿಯೊ ಬಿಹಾರದಲ್ಲಿ ಹಿಂದೊಮ್ಮೆ ನಡೆದ ಪ್ರತಿಭಟನೆಯೊಂದರ ತುಣುಕೆಂದು ಫ್ಯಾಕ್ಟ್‌ಚೆಕ್‌ಗಳು ಸ್ಪಷ್ಟಪಡಿಸಿವೆ.

ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಲಾಠಿ ಪ್ರಹಾರ, ಟಿಯರ್ ಗ್ಯಾಸ್ ಬಳಕೆ ಮಾಡಿರುವ ಸರ್ಕಾರದ ಕ್ರೌರ್ಯ ಕಣ್ಣಮುಂದೆ ಇದ್ದರೂ, ಪ್ರತಿಭಟನಾಕಾರರ ಮೇಲೆಯೇ ಆರೋಪ ಹೊರಿಸುವ ನಕಲಿ ನರೇಟಿವ್‌ಗಳು ಹುಟ್ಟಿಕೊಂಡಿವೆ. ಪೊಲೀಸರಲ್ಲದ ವ್ಯಕ್ತಿಗಳು ಅಥವಾ ಪೊಲೀಸ್ ವೇಷಧಾರಿಗಳು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪಗಳು ಬಂದಿವೆ. “ಇದೊಂದು ಸರ್ಕಾರಿ ಪ್ರಯೋಜಿತ ಭಯೋತ್ಪಾದನೆ. ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕಲೆಂದೇ ಪೊಲೀಸರು ಸಿದ್ಧವಾಗಿದ್ದರು. ಬ್ಯಾಡ್ಜ್‌ ಇಲ್ಲದೆ ಪೊಲೀಸರು ಬಂದಿದ್ದರು. ಲಾಠಿಗಳನ್ನು ಹಿಡಿದಿದ್ದ ಗೂಂಡಾಗಳನ್ನು ಸರ್ಕಾರ ತಡೆಯಲಿಲ್ಲ. ಇದೆಲ್ಲವೂ ಪೂರ್ವನಿಯೋಜಿತ ಎಂಬುದು ಸ್ಪಷ್ಟ. ಭಯೋತ್ಪಾದನೆಯನ್ನು ತಡೆಯುತ್ತೇವೆ ಎನ್ನುವ ಸರ್ಕಾರವೇ ಜನರ ವಿರುದ್ಧ ಟೆರರಿಸಂ ಮಾಡುತ್ತಿದೆ” ಎನ್ನುತ್ತಾರೆ ನಟ ಕಿಶೋರ್.

“ವಿದ್ಯಾರ್ಥಿಗಳು ನಿಜಕ್ಕೂ ಮಾರ್ಗದರ್ಶಕರಾಗಿ ನಡೆದುಕೊಂಡಿದ್ದಾರೆ. ಲಕ್ಷಾಂತರ ಯುವಜನರಿದ್ದರು. ಪೊಲೀಸರ ವಿರುದ್ಧ ತಿರುಗಿಬೀಳಬಹುದಿತ್ತು. ಸಾವುನೋವುಗಳಿಗೆ ಕಾರಣವಾಗಬಹುದಿತ್ತು. ನಮ್ಮಂಥವರ ಮನವಿಗಳನ್ನು ವಿದ್ಯಾರ್ಥಿಗಳು ಪಾಲಿಸಿದ್ದಾರೆ. ಗಾಂಧಿ, ಅಂಬೇಡ್ಕರ್ ಹಾದಿಯಲ್ಲಿ ನಡೆದಿದ್ದಾರೆ. ಶಾಂತಿಯ ಹಾದಿಯನ್ನು ತುಳಿದಿದ್ದಾರೆ”  ಎನ್ನುವ ಅವರು, “ವಿದ್ಯಾರ್ಥಿಗಳು ಕೇವಲ ಪ್ರಧಾನ್ ರಾಜೀನಾಮೆ ಕೇಳುತ್ತಿದ್ದಾರೆ. ನನ್ನ ಪ್ರಕಾರ ಇಡೀ ವ್ಯವಸ್ಥೆಯೇ ರಾಜೀನಾಮೆ ಕೊಡಬೇಕಿದೆ. ಯಾಕೆಂದರೆ ಇದು ಮೊದಲೆನೇ ಸೋಲಲ್ಲ. ರೈತರು, ಕಾರ್ಮಿಕರು, ಮಹಿಳೆಯರು, ಅಗ್ನಿವೀರರು- ಎಲ್ಲರ ಮೇಲೂ ಸರ್ಕಾರ ಅತ್ಯಾಚಾರ ಮಾಡಿದೆ. ಇಡೀ ಸರ್ಕಾರವೇ ರಾಜೀನಾಮೆ ಕೊಡಬೇಕಿದೆ” ಎಂದು ಆಗ್ರಹಿಸುತ್ತಾರೆ.

ಹೋರಾಟಕ್ಕೆ ಶಕ್ತಿ ತುಂಬಿದ ಸೋನಮ್ ಅವರ ಚಾರಿತ್ರ್ಯ ಹರಣ ಮಾಡುವುದು ಬಿಜೆಪಿ ಟೂಲ್‌ಕಿಟ್‌ನ ಭಾಗವಾಗಿದೆ ಎಂಬುದನ್ನು ಹೋರಾಟನಿರತ ಯುವಕರು ಗುರುತಿಸಿದ್ದಾರೆ. “ಸೋನಮ್ ಅವರು ಉಪವಾಸವನ್ನೇ ಮಾಡುತ್ತಿಲ್ಲ, ತ್ರಿ ಈಡಿಯಟ್ಸ್ ಸಿನಿಮಾ ಸೋನಮ್ ಅವರ ಜೀವನಾಧಾರಿತವಲ್ಲ, ಸೋನಮ್ ಅವರಿಗಿಂತ ಮೊದಲೇ ಲಡಾಖ್‌ನಲ್ಲಿ ಐಸ್‌ ಸ್ತೂಪ ಮಾಡಿದವರು ಚೆವಾಂಗ್ ನಾರ್ಫೆಲ್” ಎನ್ನುವಂತಹ ಬಾಲಿಷ ವಾದಗಳನ್ನು ಬಿಜೆಪಿ ಪರ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಮಾಡುತ್ತಿದ್ದಾರೆ. ಈ ವಾದಗಳನ್ನು ನೆಟ್ಟಿಗರೇ ಕಟುವಾಗಿ ಕೌಂಟರ್ ಮಾಡಿರುವುದನ್ನು ಕಾಣುತ್ತೇವೆ. “ಸೋನಮ್ ಅವರು ಮೋದಿಯವರಂತೆ ನಕಲಿ ಡಿಗ್ರಿ ಸರ್ಟಿಫಿಕೇಟ್ ಹೊಂದಿರುವವರೆಂದೇ ಭಾವಿಸೋಣ, ಹಾಗೆಂದು ಅವರು ಪ್ರತಿಭಟನೆ ಮಾಡಬಾರದಾ? ನಾರ್ಫೆಲ್‌ ಮಾಡಿದ್ದ ಕೆಲಸಗಳಲ್ಲಿದ್ದ ದೋಷಗಳನ್ನು ಸರಿಪಡಿಸಿ, ಸೋನಮ್ ಅಭಿವೃದ್ಧಿಪಡಿಸಿದ್ದನ್ನು ಮುಚ್ಚಿಹಾಕಲು ಸಾಧ್ಯವೇ?” ಎಂಬ ಪ್ರಶ್ನೆಗಳನ್ನು ಪ್ರತಿಭಟನಾಕಾರರು ಎಸೆದಿದ್ದಾರೆ. ವೈಯಕ್ತಿಕ ಮಟ್ಟದಲ್ಲಿ ಹೋರಾಟಗಾರರನ್ನು ಅವಮಾನಿಸುವ ಮೂಲಕ ಹೋರಾಟಕ್ಕೆ ಮಸಿಬಳಿಯುವ ಪ್ರಯತ್ನಗಳನ್ನು ಬಿಜೆಪಿ ಬೆಂಬಲಿಗರು ಮಾಡಿದ್ದಾರೆ.

ಈ ಲೇಖನ ಓದಿದ್ದೀರಾ?: ಜೆನ್‌ ಝೀʼ | ಇದು ಹಣೆಪಟ್ಟಿಗಳ ಸೀಳಿ ಟಿಸಿಲೊಡೆದ ಹೊಸ ಪೀಳಿಗೆ!

ಸೋನಮ್ ವಾಂಗ್ಚುಕ್ ಚೀನಾ ಪರ ಇದ್ದಾರೆಂಬ ಹಸಿ ಸುಳ್ಳನ್ನೂ ಹರಿಬಿಡಲಾಗಿದೆ. ಆದರೆ ಸೋನಮ್ ಅವರು ಎಂದಿಗೂ ಚೀನಾ ಪರ ಸಹಾನುಭೂತಿ ಹೊಂದಿದವರಲ್ಲ ಎಂಬುದೇ ವಾಸ್ತವ. “ಚೀನಾದ ಆರ್ಥಿಕ ಮತ್ತು ರಾಜಕೀಯ ಪ್ರಭಾವದ ವಿರುದ್ಧ ಧ್ವನಿ ಎತ್ತಿದ ಭಾರತದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಅವರೂ ಒಬ್ಬರು. 2024 ಮತ್ತು 2025 ರ ಕೊನೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಹರಿದಾಡಿತ್ತು. ಅದರಲ್ಲಿ `ಒಂದು ವೇಳೆ ಚೀನಾ ದಾಳಿ ಮಾಡಿದರೆ, ಲಡಾಖ್‌ನ ಜನರು ಅವರನ್ನು ತಡೆಯುವುದಿಲ್ಲ, ಬದಲಿಗೆ ಅವರಿಗೆ ದಾರಿ ತೋರಿಸುತ್ತಾರೆ’ ಎಂದು ವಾಂಗ್ಚುಕ್ ಹೇಳಿದ್ದಾರೆಂಬಂತೆ ಬಿಂಬಿಸಲಾಗಿತ್ತು. ವಾಸ್ತವ ಬೇರೆ ಇತ್ತು” ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

“ವಾಂಗ್ಚುಕ್ ಅವರ ವಿಡಿಯೊವನ್ನು ಎಡಿಟ್ ಮಾಡಿ ಹರಿಬಿಡಲಾಗಿತ್ತು. ಅವರು ತಮ್ಮ ಮೂಲ ಭಾಷಣದಲ್ಲಿ, ವಾಂಗ್ಚುಕ್ ಅವರು ಸ್ಥಳೀಯ ಹಾಸ್ಯನಟರೊಬ್ಬರ ಮಾತನ್ನು ಉಲ್ಲೇಖಿಸುತ್ತಿದ್ದರು. `ಚೀನಾ ದಾಳಿ ಮಾಡಿದರೆ ನಾವು ಜೀವ ಕೊಟ್ಟು ನಮ್ಮ ನೆಲವನ್ನು ರಕ್ಷಿಸಲು ಸಿದ್ಧರಿದ್ದೇವೆ, ಆದರೆ ನಮ್ಮ ಸರಕಾರ ನಮಗೆ ಕನಿಷ್ಠ ಸೌಲಭ್ಯವನ್ನು ನೀಡದೆ, ಸಂಪೂರ್ಣ ನಿರ್ಲಕ್ಷಿಸಿದರೆ ನಾವಾದರೂ ಏನು ಮಾಡಲಾಗುತ್ತದೆ. ಅವರೊಂದಿಗೆ ಹೋರಾಡುವ ಬದಲು ಅವರಿಗೆ ದಾರಿ ತೋರಿಸಬೇಕಾಗುತ್ತದೆ’ ಎಂದು ಆ ಹಾಸ್ಯ ನಟ ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು. ಲಡಾಖ್‌ಗೆ ಸಂವಿಧಾನದ ಆರನೇ ಅನುಸೂಚಿ ಅಡಿಯಲ್ಲಿ ರಕ್ಷಣೆ ನೀಡಲು ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಅಲ್ಲಿನ ಯುವಕರಲ್ಲಿ ಎಷ್ಟರ ಮಟ್ಟಿಗೆ ಬೇಸರ ಮೂಡಿದೆ ಎಂಬುದನ್ನು ವಿವರಿಸಲು ಅವರು ಆ ಮಾತನ್ನು ಬಳಸಿದ್ದರು” ಎಂದು ವರದಿಗಳು ದೃಢಪಡಿಸುತ್ತವೆ.

2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಾಗ, ವಾಂಗ್ಚುಕ್ ಅವರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. `ಬುಲೆಟ್ ಶಕ್ತಿಯಷ್ಟೇ ಅಲ್ಲ, ವ್ಯಾಲೆಟ್ ಶಕ್ತಿಯನ್ನೂ ಬಳಸಿ’ ಎಂದು ಹೇಳಿದರು. ಚೀನಾದ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳನ್ನು ಬಹಿಷ್ಕರಿಸುವ ಮೂಲಕ ಭಾರತೀಯ ನಾಗರಿಕರು ಚೀನಾಕ್ಕೆ ಆರ್ಥಿಕವಾಗಿ ಪೆಟ್ಟು ನೀಡಬಹುದು ಎಂದು ಪ್ರತಿಪಾದಿಸಿದರು. ಅವರ ಈ ವಿಡಿಯೋಗಳು ದೇಶಾದ್ಯಂತ ವೈರಲ್ ಆಗಿ, ಭಾರತ ಸರ್ಕಾರವು ನೂರಾರು ಚೀನೀ ಆಪ್‌ಗಳನ್ನು ನಿಷೇಧಿಸಿತು. ಇಂತಹ ವ್ಯಕ್ತಿಯನ್ನು `ದೇಶದ್ರೋಹಿ’, ‘ಚೀನಿ ಏಜೆಂಟ್’ ಎಂದು ಬಿಂಬಿಸುವ ಕುತಂತ್ರವನ್ನು ಬಿಜೆಪಿ ಬೆಂಬಲಿಗರು ಮಾಡಿದ್ದಾರೆ. ಆದರೆ ಎಷ್ಟೇ ಸುಳ್ಳುಗಳನ್ನು ಹರಿಯಬಿಟ್ಟರೂ ಹೋರಾಟ ತೀವ್ರ ಸ್ವರೂಪ ಪಡೆಯುತ್ತಲೇ ಇದೆ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

5 ವರ್ಷಗಳ ಬಳಿಕ ಮಗನೊಂದಿಗೆ ಮ್ಯಾನ್ಮಾರ್‌ ನಾಯಕಿ ಆಂಗ್ ಸಾನ್ ಸೂ ಕಿ ಮಾತು; ಯಾರೀ ʼಶಾಂತಿʼ ದೂತೆ?

ಮ್ಯಾನ್ಮಾರ್‌ನ ಪ್ರಜಾಪ್ರಭುತ್ವದ ಧೀಮಂತ ನಾಯಕಿ ಹಾಗೂ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತೆ...

WhatsApp ‘ಎಐ’ ಗುಟ್ಟು ರಟ್ಟು: ಬಳಕೆದಾರರಿಂದ ಬಚ್ಚಿಡಲಾಗಿದ್ದ ರಹಸ್ಯ ಸೂಚನೆಗಳು ಬಯಲು

WhatsApp ತನ್ನ ಎಐ (AI) ಚಾಟ್‌ಬಾಟ್‌ಗೆ ನೀಡಿದ್ದ ರಹಸ್ಯ ಸೂಚನೆಗಳು ಆಕಸ್ಮಿಕವಾಗಿ...

ಮಧುಮೇಹಿಗಳಿಗೆ ಸಿಹಿಸುದ್ದಿ: ಇನ್ಸುಲಿನ್, ಮಾತ್ರೆಗಳ ಹಂಗಿಲ್ಲದೆ ‘ಶುಗರ್’ ನಿಯಂತ್ರಿಸುವ ಹೊಸ ಸಾಧನ!

ಇನ್ಸುಲಿನ್ ಮತ್ತು ನಿರಂತರ ಮಾತ್ರೆಗಳ ಹಂಗಿಲ್ಲದೆ ಮಧುಮೇಹವನ್ನು (ಸಕ್ಕರೆ ಕಾಯಿಲೆ) ಪರಿಣಾಮಕಾರಿಯಾಗಿ...

ಶಾಂತಿ ಮಾತುಕತೆ ಬೆನ್ನಲ್ಲೇ ಕೀವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ; 2 ಸಾವು, 34 ಮಂದಿಗೆ ಗಾಯ

ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ಕುರಿತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದ ಕೆಲವೇ...