ಬ್ರಿಟಿಷರ ಕ್ರೌರ್ಯ, ಸ್ವಾತಂತ್ರ್ಯ ಚಳವಳಿಯ ದಿಟ್ಟತನ ಎರಡನ್ನೂ ನೆನಪಿಸಿದ ‘ಸಂಸತ್ ಚಲೋ’

Date:

95 ವರ್ಷಗಳ ಹಿಂದೆ ದರಾಸನದಲ್ಲಿ ಬ್ರಿಟಿಷರು ಇದೇ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಹಲ್ಲೆ ನಡೆಸಿದ್ದರು. ಆದರೆ ಗಾಂಧಿವಾದಿ ಸತ್ಯಾಗ್ರಹಿಗಳು ಕಿಂಚಿತ್ತೂ ಕದಲದೆ ಲಾಠಿಗಳಿಗೆ ತಮ್ಮ ತಲೆಗಳನ್ನೊಡ್ಡಿದ್ದರು!

ಜಂತರ್ ಮಂತರ್‌ನತ್ತ ಪೊಲೀಸರೇ ಎಲ್ಲ ಶಸ್ತ್ರಗಳೊಂದಿಗೆ ಧಾವಿಸಿದ್ದರು. ನಿರಾಸ್ತ್ರಧಾರಿ ಯುವಜನರ ಮೇಲೆ ಲಾಠಿ ಜಳುಪಿಸಿದರು. ಟಿಯರ್ ಗ್ಯಾಸ್ ಸಿಡಿಸಿದರು. ಸಿಕ್ಕಸಿಕ್ಕವರಿಗೆ ಥಳಿಸಿದರು. ರಕ್ತದ ಕೋಡಿ ಹರಿಸಿದರು. ಪೊಲೀಸರ ವೇಷದಲ್ಲಿದ್ದ ಖಾಸಗಿ ಗೂಂಡಾಗಳು ಪ್ರಭುತ್ವದ ಕ್ರೌರ್ಯವನ್ನು ದ್ವಿಗುಣಗೊಳಿಸುತ್ತಿದ್ದರು. ಇಷ್ಟೆಲ್ಲ ಆದರೂ ಯುವಜನರು ತಿರುಗಿಸಿ ಹೊಡೆಯಲಿಲ್ಲ. ಧಿಕ್ಕಾರ ಕೂಗುತ್ತಲೇ ಆ ಹಲ್ಲೆಗಳನ್ನು ಸಹಿಸಿಕೊಂಡರು. ಭೀಕರವಾಗಿ ಥಳಿಸುತ್ತಿದ್ದ ಪೊಲೀಸರಿಗೆ ಒಂದು ಕ್ಷಣ ಆಶ್ಚರ್ಯವೂ ಆಗಿರಬಹುದು. ಈ ರೀತಿಯ ಗಟ್ಟಿತನ, ಸಂವೇದನೆ ಯುವ ಪ್ರತಿಭಟನಾಕಾರರಿಗೆ ಬಂದಿದ್ದಾದರೂ ಎಲ್ಲಿಂದ?- ಉತ್ತರ ಈ ದೇಶದ ಇತಿಹಾಸದಲ್ಲಿ ಅಡಗಿದೆ. ಬಹುಶಃ ಸ್ವಾತಂತ್ರ್ಯ ಹೋರಾಟದ ಆ ದಿನಗಳನ್ನು ಜುಲೈ 20ರ ‘ಸಂಸತ್‌ ಚಲೋ’ ಪುನರ್ ನಿರ್ಮಿಸಿದೆ.

- Advertisement -

ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಮೂರು ಪ್ರಮುಖ ಆಂದೋಲನಗಳ ಪೈಕಿ ಹೆಚ್ಚು ಪರಿಣಾಮ ಬೀರಿದ್ದು ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಅಕ್ಷರಶಃ ಅಲುಗಾಡಿಸಿದ್ದು ‘ಉಪ್ಪಿನ ಸತ್ಯಾಗ್ರಹ’.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಒಂದು ಹಿಡಿ ಉಪ್ಪಿನ ಮೂಲಕ ದೇಶವನ್ನು ಒಗ್ಗೂಡಿಸುವುದಷ್ಟೇ ಅಲ್ಲ, ಸೂರ್ಯ ಮುಳುಗದ ಸಾಮ್ರಾಜ್ಯವಾದ ಬ್ರಿಟನ್‌ಗೆ ಸತ್ಯಾಗ್ರಹದ ಮೂಲಕ ಭಾರೀ ಮುಜುಗರವನ್ನೂ ಉಂಟುಮಾಡಿದ್ದರು. ತಮ್ಮ ಕ್ರೌರ್ಯದ ಕಾರಣಕ್ಕಾಗಿ ಬ್ರಿಟಿಷರು ಜಗತ್ತಿನೆದುರು ಮುಖಭಂಗವನ್ನೂ ಅನುಭವಿಸಬೇಕಾಯಿತು.

ಉಪ್ಪಿನ ಚಳವಳಿ ಭರದಿಂದ ಸಾಗಿತ್ತು. ಗಾಂಧೀಜಿಯವರ ಬಂಧನವಾಯಿತು. ಆದರೆ ಸತ್ಯಾಗ್ರಹಿಗಳು ಹೋರಾಟವನ್ನು ಕೈಬಿಡಲಿಲ್ಲ. ಗಾಂಧೀಜಿಯವರು ತೋರಿಸಿದ್ದ ಅಹಿಂಸಾ ಮಾರ್ಗದಲ್ಲಿ ನಡೆದು ಪ್ರಭುತ್ವವನ್ನು ನಡುಗಿಸಲು ನಿಶ್ಚಯಿಸಿದ್ದರು. ಇಂತಹ ಸಂದರ್ಭದಲ್ಲಿ ಹೃದಯ ಕಲಕುವ ಮತ್ತು ಸತ್ಯಾಗ್ರಹಿಗಳ ಹೋರಾಟದ ಅಂತಃಸತ್ವವನ್ನು ಇಡೀ ಜಗತ್ತಿನೆದುರಿಗೆ ತೆರೆದಿಡುವ ಘಟನೆ 1930ರ ಮೇ ತಿಂಗಳಿನಲ್ಲಿ ನಡೆಯಿತು.

ಮುಂಬೈ ಸಮೀಪದ ದರಾಸನ ಉಪ್ಪಿನ ಕಾರ್ಖಾನೆಗೆ ಮುತ್ತಿಗೆ ಹಾಕಲು ಹೋರಾಟಗಾರರು ನಿರ್ಧರಿಸಿದ್ದರು.  ಮೇ 21ರಂದು ಸುಮಾರು 2,500ಕ್ಕೂ ಹೆಚ್ಚು ಸತ್ಯಾಗ್ರಹಿಗಳು ದರಾಸನ ಉಪ್ಪಿನ ಕಾರ್ಖಾನೆಯತ್ತ ಶಾಂತಿಯುತವಾಗಿ ಮೆರವಣಿಗೆ ಹೊರಟರು. ಸರೋಜಿನ ನಾಯ್ಡು ಅವರು ಅದರ ನೇತೃತ್ವ ವಹಿಸಿದ್ದರು. ಯಾವುದೇ ಹಿಂಸಾಚಾರ ನಡೆಸದೆ ಕಾರ್ಖಾನೆಯನ್ನು ನಿಲ್ಲಿಸುವುದಷ್ಟೇ ಹೋರಾಟಗಾರರ ಗುರಿಯಾಗಿತ್ತು. ಆದರೆ ದುಷ್ಟ ಬ್ರಿಟಿಷ್ ಸರ್ಕಾರ, ಶಸ್ತ್ರಾಸ್ತ್ರ ಪ್ರಯೋಗದ ಮೂಲಕ ಹೋರಾಟಗಾರರ ಮೇಲೆ ಭೀಕರವಾಗಿ ಥಳಿಸಲು ಸಿದ್ಧವಾಗಿತ್ತು. ಸುಮಾರು 400 ಮಂದಿ ಪೊಲೀಸರು ಲಾಠಿಗಳೊಂದಿಗೆ ಸಜ್ಜಾಗಿದ್ದರು.

“ಸತ್ಯಾಗ್ರಹಿಗಳು ನಾಲ್ಕು ಅಥವಾ ಐದು ಮಂದಿ ಗುಂಪಾಗಿ ಪೊಲೀಸ್ ತಡೆಯನ್ನು ದಾಟಿ ಫ್ಯಾಕ್ಟರಿಯತ್ತ ಧಾವಿಸುತ್ತಿದ್ದರು. ಪೊಲೀಸರು ಲಾಠಿಯಿಂದ ಬಲವಾಗಿ ಸತ್ಯಾಗ್ರಹಿಗಳ ತಲೆಯ ಮೇಲೆ ಹೊಡೆಯುತ್ತಿದ್ದರು. ಪ್ರಜ್ಞೆ ತಪ್ಪಿ ಬಿದ್ದ ಸತ್ಯಾಗ್ರಹಿಗಳನ್ನು ಸತ್ಯಾಗ್ರಹಿಗಳ ಮಹಿಳಾ ಘಟಕದವರು ಎತ್ತಿಕೊಂಡು ಹೋಗಿ ಉಪಚರಿಸುತ್ತಿದ್ದರು. ಒಂದು ಗುಂಪನ್ನು ಹೊಡೆದುರುಳಿಸಿದ ಮೇಲೆ ಇನ್ನೊಂದು ಗುಂಪಿನಂತೆ ಸತ್ಯಾಗ್ರಹಿಗಳು ಪೊಲೀಸ್ ತಡೆಯತ್ತ ಬರುತ್ತಿದ್ದರು. ಪೊಲೀಸರು ಲಾಠಿ ಪ್ರಹಾರ ಮಾಡಿ ಅವರನ್ನು ನೆಲಕ್ಕೊರಗಿಸುವುದು ನಡೆಯುತ್ತಿತ್ತು. ಇದು ಅಂತ್ಯವೇ ಇಲ್ಲ ಎಂಬಂತೆ ದಿನವಿಡೀ ನಡೆಯಿತು. ರಕ್ತದ ಕೊಡಿ ಹರಿಯಿತು. ಆದರೆ ಒಬ್ಬನೇ ಒಬ್ಬ ಸತ್ಯಾಗ್ರಹಿ ತನ್ನ ತಲೆಯ ಮೇಲೆ ಎರಗುವ ಲಾಠಿಯನ್ನು ಕೈಯೆತ್ತಿ ತಡೆಯುವ ಪ್ರಯತ್ನ ಮಾಡಲಿಲ್ಲ.” (ವಿವರಗಳಿಗೆ ‘ಈದಿನ’ ಹೊರತಂದಿರುವ’ ‘ಜೈ ಹಿಂದ್ ಜಯಕರ್ನಾಟಕ’ ಸಂಚಿಕೆ ನೋಡಿ).

ಆ ಸತ್ಯಾಗ್ರಹಿಗಳು ನಿರಾಯುಧರಾಗಿದ್ದರು. ಅಹಿಂಸಾ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದ್ಯಾವುದನ್ನೂ ಲೆಕ್ಕಿಸದೆ, ಮನಬಂದಂತೆ ಥಳಿಸಲಾಯಿತು. ಪ್ರತಿಭಟನಾಕಾರರು ಮನಸ್ಸು ಮಾಡಿದ್ದರೆ, ದೊಡ್ಡ ದಂಗೆಯನ್ನೇ ಎಬ್ಬಿಸಬಹುದಿತ್ತು. ಆದರೆ, ಅವರು ತಮ್ಮ ಶಿರಗಳನ್ನು ಲಾಠಿ ಏಟಿಗೆ ಒಡ್ಡಿಕೊಂಡರು. ಅವರ ತಲೆಗಳಿಗೆ ಹೊಡೆದ ರಭಸದಿಂದಾಗಿ ರಕ್ತದೋಕುಳಿಯಾದರೂ, ನೆತ್ತರ ಕೋಡಿ ಹರಿದರೂ ಇನಿತೂ ಕದಲಿಲ್ಲ. “ನಿಮ್ಮ ಲಾಠಿ ಏಟಿನಿಂದ ನಮ್ಮನ್ನು ವಿಚಲಿತರನ್ನಾಗಿಸಲು ಸಾಧ್ಯವಿಲ್ಲ, ಎಷ್ಟು ಹೊಡೆಯುತ್ತೀರೋ ಹೊಡೆಯಿರಿ, ನಾವು ನಿಮ್ಮ ವಿರುದ್ಧ ಕೈ ಎತ್ತುವುದಿಲ್ಲ” ಎಂದು ಸವಾಲು ಎಸೆದರು. ಈ ಹೃದಯ ವಿದ್ರಾವಕ ಘಟನೆಯನ್ನು ಕಣ್ಣಾರೆ ನೋಡಿದ ಅಮೆರಿಕದ ಪ್ರಸಿದ್ಧ ಪತ್ರಕರ್ತ, ವೆಬ್ ಮಿಲ್ಲರ್ ಅವರು ‘ಮ್ಯಾಂಚೆಸ್ಟರ್ ಗಾರ್ಡಿಯನ್’ನಲ್ಲಿ ಬರೆದ ವರದಿಯಿಂದಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕ್ರೂರತೆ ಜಗತ್ತಿನೆದುರು ತೆರೆದುಕೊಂಡಿತ್ತು.

ಈ ಲೇಖನ ಓದಿದ್ದೀರಾ?: ಜೆನ್‌ ಝೀʼ | ಇದು ಹಣೆಪಟ್ಟಿಗಳ ಸೀಳಿ ಟಿಸಿಲೊಡೆದ ಹೊಸ ಪೀಳಿಗೆ!

“…ನಾನು ಯುದ್ಧಗಳ ವರದಿ ಮಾಡಿದ್ದೇನೆ, ಕ್ರಾಂತಿ ನಡೆದ ಸ್ಥಳಗಳಿಗೆ ತೆರಳಿ ವರದಿ ಬರೆದಿದ್ದೇನೆ…. ಆದರೆ ಎಲ್ಲೂ ಈ ವಿಧದ ಧೀರೋದ್ಧಾತ ಪ್ರತಿರೋಧವನ್ನಾಗಲೀ, ನಿರಾಯುಧರ ಮೇಲೆ ಪೊಲೀಸರು ಈ ರೀತಿಯ ಕ್ರೌರ್ಯ ಎಸಗಿದ್ದನ್ನಾಗಲೀ ಕಂಡಿದ್ದಿಲ್ಲ. …ಪಾಶ್ಚಾತ್ಯರು ತಮಗಿದೆ ಎಂದುಕೊಂಡಿದ್ದ ನೈತಿಕ ಮೇಲುಗಾರಿಕೆ ಎಲ್ಲವೂ ಇಂದಿಲ್ಲಿ ಕಳೆದುಹೋಯಿತು. ಯಾತನೆಗೆ ತನ್ನನ್ನು ಸಮರ್ಪಿಸಿಕೊಂಡು ಭಾರತ ಅದರ ಆತ್ಮಶಕ್ತಿ ಪ್ರದರ್ಶಿಸಿತು” ಎಂದು ವರದಿಯಲ್ಲಿ ವೆಬ್‌ ಮಿಲ್ಲರ್ ಉಲ್ಲೇಖಿಸಿದ್ದರು.

ಹಲವು ವರ್ಷಗಳ ನಂತರ ‘ಶಾಂತಿ ಎಲ್ಲೂ ಕಾಣಿಸಲಿಲ್ಲ’ (I Found No Peace) ಎಂಬ ಆತ್ಮಚರಿತ್ರೆಯನ್ನು ಬರೆದಿದ್ದ ವೆಬ್ ಮಿಲ್ಲರ್‌, ಸತ್ಯಾಗ್ರಹಿಗಳ ತಾಳ್ಮೆಯ ಬಗ್ಗೆ ಬೇಸರವನ್ನೂ ಹೊರಹಾಕಿದ್ದರು. “ನನಗೆಯೇ ಆ ಘಟನೆಯನ್ನು ನೋಡಿ ರಕ್ತ ಕುದಿಯುತ್ತಿತ್ತು. ಹೋರಾಟಗಾರರು ತಿರುಗಿಬಿದ್ದು ಥಳಿಸಬೇಕು ಎನಿಸುತ್ತಿತ್ತು. ಆದರೆ ಸತ್ಯಾಗ್ರಹಿಗಳ ಬದ್ಧತೆ ನೋಡಿ ಅಚ್ಚರಿಯೂ ಬೇಸರವೂ ಆಗುತ್ತಿತ್ತು” ಎಂದು ಅಭಿಪ್ರಾಯ ತಾಳಿದ್ದರು.

ದರಾಸನ ಸತ್ಯಾಗ್ರಹ ನಡೆದು ಇಲ್ಲಿಗೆ 96 ವರ್ಷಗಳಾಗಿವೆ. ಆದರೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕ್ರೌರ್ಯ ಮತ್ತೆ ಮರುಕಳುಹಿಸಿದೆ. ಇಂದು ದೇಶದ ಯುವಜನ ಮತ್ತು ಆ ಯುವಜನರ ಬೆನ್ನಿಗೆ ನಿಂತಿರುವ ಎಲ್ಲ ಹೋರಾಟಗಾರರು ಸಂಸತ್ ಚಲೋ ನಡೆಸಿದ್ದಾರೆ. ನಿರಾಯುಧ ಸತ್ಯಾಗ್ರಹಿಗಳ ಮೇಲೆ ಪ್ರಭುತ್ವ ದಾಳಿ ನಡೆಸಿ ರಕ್ತದೋಕುಳಿಯಾಡಿದೆ. ಪೊಲೀಸರು ಥಳಿಸುತ್ತಿದ್ದರೂ, ತಿರುಗಿಬೀಳದೆ ಮೈಯೊಡ್ಡುತ್ತಿದ್ದ ಹೋರಾಟಗಾರರ ದೃಶ್ಯಗಳು ವೈರಲ್ ಆಗುತ್ತಿವೆ. ಅಂದು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಎದುರು ನಮ್ಮ ಹಿರಿಯರು ತೋರಿದ ಕಿಚ್ಚು ಇಂದು ದೆಹಲಿಯಲ್ಲಿ ದರ್ಶನವಾದಂತೆ ಭಾಸವಾಗಿದೆ. ಬ್ರಿಟಿಷರ ಸ್ಥಾನದಲ್ಲಿ ಮೋದಿ ಸರ್ಕಾರ ನಿಂತಿದೆ. ಈ ದೇಶದ ನಿಜಚರಿತ್ರೆಯ ಅಂತಃಸತ್ವವನ್ನು, ಸ್ವಾತಂತ್ರ್ಯ ಹೋರಾಟದ ಬೇರುಗಳನ್ನು ಅರಿತಿರುವ ಯುವಜನ ಭವಿಷ್ಯದ ಆಶಾಕಿರಣವಾಗಿ ಕಾಣಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...