ಶಕ್ಸ್‌ಗಾಮ್ ಕಣಿವೆಯಲ್ಲಿ ಚೀನಾ ಹೆಜ್ಜೆ: ಮೌನ ಮುರಿಯುವರೇ ಮೋದಿ?

Date:

ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುವ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವ ಚೀನಾ, ಈಗ ಭಾರತದ ಶಿರಭಾಗವಾದ ಕಾಶ್ಮೀರದ ಉತ್ತರ ತುದಿಯ ‘ಶಕ್ಸ್‌ಗಾಮ್ ಕಣಿವೆ’ಯಲ್ಲಿ (Shaksgam Valley) ಮೂಲಸೌಕರ್ಯ ಅಭಿವೃದ್ಧಿಯನ್ನು ಚುರುಕುಗೊಳಿಸಿದೆ. ಇದಕ್ಕೆ ಭಾರತದ ವಿದೇಶಾಂಗ ಸಚಿವಾಲಯವು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರೂ, ಬೀಜಿಂಗ್‌ನ ಪ್ರತಿಕ್ರಿಯೆ ಎಂದಿನಂತೆ ಉದ್ದಟತನದಿಂದ ಕೂಡಿದೆ. “ಶಕ್ಸ್‌ಗಾಮ್ ಚೀನಾದ ಭೂಭಾಗ, ಭಾರತದ ಆಕ್ಷೇಪ ಅನಗತ್ಯ,” ಎಂದು ಚೀನಾದ ವಿದೇಶಾಂಗ ವಕ್ತಾರೆ ಮಾವೋ ನಿಂಗ್‌ ಹೇಳಿರುವುದು ನವದೆಹಲಿಯನ್ನು ಕೆರಳಿಸಿದೆ. ಆದರೆ, ಈ ರಾಜತಾಂತ್ರಿಕ ವಾಕ್ಸಮರದಾಚೆಗೆ ಇರುವ ಕಟು ಸತ್ಯವೇನು? ಪ್ರಧಾನಿ ನರೇಂದ್ರ ಮೋದಿಯವರ ‘ಬಲಿಷ್ಠ ನಾಯಕತ್ವ’ದ ಅವಧಿಯಲ್ಲಿ ಚೀನಾ ಭಾರತದ ಎಷ್ಟು ಭೂಭಾಗವನ್ನು ಕಬಳಿಸಿದೆ? ಎಂಬ ಪ್ರಶ್ನೆಗಳು ಈಗ ಮುನ್ನಲೆಗೆ ಬಂದಿದೆ.

- Advertisement -

ಶಕ್ಸ್‌ಗಮ್ ಕಣಿವೆ: ವಿವಾದದ ಬೇರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಶಕ್ಸ್‌ಗಾಮ್ ಕಣಿವೆಯು ಪಾಕ್ ಆಕ್ರಮಿತ ಕಾಶ್ಮೀರದ (PoK) ಭಾಗವಾಗಿದ್ದರೂ, 1963ರಲ್ಲಿ ಪಾಕಿಸ್ತಾನವು ‘ಗಡಿ ಒಪಪಂದ’ದ ಹೆಸರಿನಲ್ಲಿ ಅಕ್ರಮವಾಗಿ ಚೀನಾಕ್ಕೆ ಬಿಟ್ಟುಕೊಟ್ಟ ಪ್ರದೇಶವಾಗಿದೆ. ಸುಮಾರು 5,180 ಚದರ ಕಿಲೋಮೀಟರ್ ವಿಸ್ತೀರ್ಣದ ಈ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಪ್ರತಿಪಾದಿಸುತ್ತಲೇ ಬಂದಿದೆ. ಈಗ ಚೀನಾ ಅಲ್ಲಿ ರಸ್ತೆ ನಿರ್ಮಿಸುತ್ತಿರುವುದು ಸಿಯಾಚಿನ್‌ ಹಿಮನದಿಯಲ್ಲಿರುವ ಭಾರತೀಯ ಸೇನೆಗೆ ನೇರ ಬೆದರಿಕೆಯೊಡ್ಡುವ ತಂತ್ರವಾಗಿದೆ.

“ನನ್ನ ದೇಶದ ಒಂದಿಂಚೂ ಭೂಮಿಯನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ” ಎಂಬುದು ಪ್ರಧಾನಿ ಮೋದಿಯವರ ಘೋಷವಾಕ್ಯ. ಆದರೆ, ಶಕ್ಸ್‌ಗಾಮ್ ವಿಷಯದಲ್ಲಿ ಚೀನಾದ ನಡೆಯನ್ನು ಖಂಡಿಸಿರುವುದನ್ನು ಬಿಟ್ಟರೆ, ಭಾರತದ ಕಡೆಯಿಂದ ಕಠಿಣ ಸೇನಾ ಕ್ರಮಗಳಾಗಲಿ ಅಥವಾ ನಿಯಂತ್ರಣ ರೇಖೆಯಲ್ಲಿನ ಯಥಾಸ್ಥಿತಿ ಬದಲಾವಣೆಯಾಗಲಿ ಕಂಡುಬಂದಿಲ್ಲ. ಲಡಾಖ್ ಬಿಕ್ಕಟ್ಟಿನ ನಂತರ ಪ್ರಧಾನಿಯವರು “ನಮ್ಮ ಗಡಿಯೊಳಗೆ ಯಾರೂ ಬಂದಿಲ್ಲ” ಎಂದು ಹೇಳಿಕೆ ನೀಡಿದ್ದು ವಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಈಗ ಶಕ್ಸ್‌ಗಾಮ್ ನಲ್ಲಿ ಚೀನಾ ಮೂಲಸೌಕರ್ಯ ಹೆಚ್ಚಿಸುತ್ತಿದ್ದರೂ, ಮೋದಿ ಸರ್ಕಾರ ರಾಜತಾಂತ್ರಿಕ ಪ್ರತಿಭಟನೆಯನ್ನಷ್ಟೇ ದಾಖಲಿಸುತ್ತಿದೆ.

Shaksgam Valle CHina

ಮೋದಿ ಅವಧಿಯಲ್ಲಿ ಚೀನಾ ಆಕ್ರಮಿಸಿದ ಭೂಭಾಗವೆಷ್ಟು?

ಗಸ್ತು ಪಾಯಿಂಟ್‌ಗಳ ನಷ್ಟ (ಲಡಾಖ್): 2020ರ ಗಲ್ವಾನ್ ಸಂಘರ್ಷದ ನಂತರ, ಪೂರ್ವ ಲಡಾಖ್‌ನಲ್ಲಿ ಭಾರತವು ತಾನು ಈ ಹಿಂದೆ ಗಸ್ತು ತಿರುಗುತ್ತಿದ್ದ 65 ಗಸ್ತು ಪಾಯಿಂಟ್‌ಗಳ ಪೈಕಿ(Patrolling Points -PP) ಸುಮಾರು 26 ಪಾಯಿಂಟ್‌ಗಳ ಮೇಲೆ ನಿಯಂತ್ರಣ ಕಳೆದುಕೊಂಡಿದೆ ಎಂದು ಲಡಾಖ್‌ನ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಸಲ್ಲಿಸಿದ  ವರದಿಯೇ ಹೇಳಿದೆ.

ಬಫರ್ ಜೋನ್ ನೆಪ: ಸಂಘರ್ಷ ನಿವಾರಣೆಯ ಹೆಸರಿನಲ್ಲಿ ‘ಬಫರ್‌ ಜೋನ್‌’ಗಳನ್ನು ಸೃಷ್ಟಿಸಲಾಗಿದೆ. ಇವು ಭಾರತದ ಭೂಪ್ರದೇಶದಲ್ಲೇ ನಿರ್ಮಾಣವಾಗಿದ್ದು, ಅಲ್ಲಿಗೆ ಭಾರತೀಯ ಸೇನೆ ಹೋಗುವಂತಿಲ್ಲ. ರಕ್ಷಣಾ ತಜ್ಞರ ಪ್ರಕಾರ, ಇದರಿಂದಾಗಿ ಭಾರತವು ಸುಮಾರು 1,000ದಿಂದ 2,000 ಚದರ ಕಿ.ಮೀ ನಷ್ಟು ಪ್ರದೇಶದ ಮೇಲಿನ ಹಿಡಿತವನ್ನು(Access) ಕಳೆದುಕೊಂಡಿದೆ. ಡೆಪ್ಸಾಂಗ್‌ ಬಯಲು ಮತ್ತು ಡೆಮ್ಚೋಕ್‌ ಪ್ರದೇಶಗಳಲ್ಲಿ ಚೀನಾ ಸೇನೆ ಭಾರತೀಯ ಗಸ್ತು ಪಡೆಗಳನ್ನು ತಡೆಯುತ್ತಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಯ್ದೆ-ಕಾನೂನುಗಳು ಬಡವರ ವಿರುದ್ಧವೇ ಅಥವಾ ಪ್ರಭಾವಿಗಳ ಪರವೇ?

ಅರುಣಾಚಲ ಪ್ರದೇಶದ ಗ್ರಾಮಗಳು: ಅಮೆರಿಕದ ರಕ್ಷಣಾ ಇಲಾಖೆಯ ವರದಿಗಳ ಪ್ರಕಾರ, ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ (ಅಪ್ಪರ್‌ ಸುಬನ್ಸಿರಿ ಜಿಲ್ಲೆ) ಚೀನಾ ಸುಮಾರು 100 ಮನೆಗಳಿರುವ ಮಾದರಿ ಗ್ರಾಮವನ್ನು ನಿರ್ಮಿಸಿದೆ. ಇದನ್ನು ಭಾರತ ‘ಅಕ್ರಮ’ ಎಂದು ಕರೆದಿದೆಯಾದರೂ, ಗ್ರಾಮವಂತೂ ಅಲ್ಲಿ ತಲೆ ಎತ್ತಿ ನಿಂತಿದೆ.

ಕೇಂದ್ರ ಸರ್ಕಾರ ಅಧಿಕೃತವಾಗಿ ಚೀನಾ ಯಾವುದೇ ಭೂಭಾಗವನ್ನು ಆಕ್ರಮಿಸಿಲ್ಲ ಎಂದು ಹೇಳುತ್ತದೆಯಾದರೂ, ರಕ್ಷಣಾ ಇಲಾಖೆಯ ವರದಿಗಳು, ಉಪಗ್ರಹ ಚಿತ್ರಗಳು ಮತ್ತು ಲಡಾಖ್‌ನ ಸ್ಥಳೀಯ ಜನಪ್ರತಿನಿಧಿಗಳ ಹೇಳಿಕೆಗಳು ಬೇರೆಯದೇ ಕಥೆಯನ್ನು ಹೇಳುತ್ತವೆ.

ಮುಂದೇನು?

ಚೀನಾ ತನ್ನ ‘ಸಲಾಮಿ ಸ್ಲೈಸಿಂಗ್’ (ಸ್ವಲ್ಪ ಸ್ವಲ್ಪವೇ ಭೂಮಿ ಕಬಳಿಸುವ) ತಂತ್ರವನ್ನು ಮುಂದುವರಿಸಿದೆ. ಶಕ್ಸ್‌ಗಾಮ್ ನಲ್ಲಿನ ರಸ್ತೆ ನಿರ್ಮಾಣವು ಪಾಕಿಸ್ತಾನ ಮತ್ತು ಚೀನಾ ನಡುವಿನ ಸಂಪರ್ಕವನ್ನು (CPEC) ಬಲಪಡಿಸುವ ಮತ್ತು ಭಾರತದ ಸಿಯಾಚಿನ್ ರಕ್ಷಣೆಯನ್ನು ದುರ್ಬಲಗೊಳಿಸುವ ದೀರ್ಘಕಾಲೀನ ಯೋಜನೆಯಾಗಿದೆ.

​ಮೋದಿ ಸರ್ಕಾರವು ಚೀನಾದ ಆರ್ಥಿಕ ಹಿತಾಸಕ್ತಿಗಳಿಗೆ ಪೆಟ್ಟು ನೀಡುವ (ಆ್ಯಪ್ ನಿಷೇಧದಂತಹ) ಕ್ರಮಗಳನ್ನು ಕೈಗೊಂಡಿದ್ದರೂ, ಗಡಿಯಲ್ಲಿ ಚೀನಾದ ಬಲಪ್ರದರ್ಶನವನ್ನು ತಡೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ ಎಂಬುದು ಕಟು ಸತ್ಯ. ಕೇವಲ ರಾಜತಾಂತ್ರಿಕ ಖಂಡನೆಗಳಿಂದ ಚೀನಾವನ್ನು ತಡೆಯಲು ಸಾಧ್ಯವಿಲ್ಲ. ಗಡಿಯಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಮತ್ತು ಕಳೆದುಕೊಂಡ ಗಸ್ತು ಪ್ರದೇಶಗಳನ್ನು ಮರುಪಡೆಯಲು ದಿಟ್ಟ ಕ್ರಮ ಕೈಗೊಳ್ಳಬೇಕು ಎಂಬುದು ರಕ್ಷಣಾ ತಜ್ಞರ ಮತ್ತು ವಿಪಕ್ಷಗಳ ಒತ್ತಾಯವಾಗಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ ಹೊಸ ತಂತ್ರಜ್ಞಾನ?

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು...