ಧಮ್ಮಚಕ್ರ ಪರಿವರ್ತನೆ; ಧರ್ಮದ ಬದಲಾವಣೆಯಲ್ಲ, ನಾಗರೀಕತೆಯ ಪುನರ್ಜನ್ಮ

Date:

14 ಅಕ್ಟೋಬರ್ 1956ರಲ್ಲಿ ನಾಗ್ಪುರದ ದೀಕ್ಷಾಭೂಮಿಯಲ್ಲಿ 5 ಲಕ್ಷ ಜನರು ಮುಕ್ತಿಯೆಡೆಗೆ ನಡೆದ ದಿನ. ಭಾರತದ ಇತಿಹಾಸದಲ್ಲಿ ಅಕ್ಟೋಬರ್ 14 ಎಂದರೆ, ಕೇವಲ ಕ್ಯಾಲೆಂಡರಿನ ದಿನಾಂಕ ಮಾತ್ರವಲ್ಲ, ಕೋಟ್ಯಂತರ ಜನರ ಹಣೆಯಲ್ಲಿ ಬರೆದಿದ್ದ ಗುಲಾಮಗಿರಿಯ ಶಾಸನವನ್ನು ಅಳಿಸಿ, ಹೊಸದಾಗಿ ಮನುಷ್ಯ ಎಂದು ಬರೆದುಕೊಂಡ ದಿನ.

- Advertisement -

ಅಂದು ಬೆಳಗ್ಗೆ 9 ಗಂಟೆ. ನಾಗ್ಪುರದ 14 ಎಕರೆ ವಿಶಾಲ ಮೈದಾನ. ಬಿಳಿ ಸಾಗರ. ತಲೆಗಳ ಮೇಲೆ ಬಿಳಿ ಟೋಪಿ, ಕಣ್ಣುಗಳಲ್ಲಿ 2000 ವರ್ಷಗಳ ಕಣ್ಣೀರು. ವೇದಿಕೆಯ ಮೇಲೆ ಒಬ್ಬ ವ್ಯಕ್ತಿ. ಹಳದಿ ಕೋಟು, ಕನ್ನಡಕ, ಕೈಯಲ್ಲಿ ಬುದ್ಧ ಮತ್ತು ಅವರ ಧಮ್ಮ ಪ್ರತಿ ಹಿಡಿದಿದ್ದವರೇ ಡಾ. ಬಿ.ಆರ್ ಬಾಬಾಸಾಹೇಬ್ ಅಂಬೇಡ್ಕರ್. ಅವರ ಹಿಂದೆ ಇಂದು ನಾವು ನೋಡುವ ಭವ್ಯ ದೀಕ್ಷಾಭೂಮಿ ಸ್ತೂಪದ ಕನಸು ಇನ್ನೂ ಕಲ್ಲಾಗಿರಲಿಲ್ಲ, ಆದರೆ ಅವರ ಎದೆಯಲ್ಲಿ ಅದು ಪೂರ್ಣವಾಗಿ ಅರಳಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಆ ದಿನ ಅವರು ಮಾಡಿದ್ದು ಮತಾಂತರವಲ್ಲ. ಅದು ಧಮ್ಮಚಕ್ರ ಪರಿವರ್ತನೆ. ಚಕ್ರವನ್ನು ತಿರುಗಿಸಿದರು. ದಿಕ್ಕನ್ನೇ ಬದಲಿಸಿದರು.

ಬುದ್ಧನೇ ಏಕೆ? ಏಕೆ ಬೇರೆ ಧರ್ಮವಿಲ್ಲ? ಹಾಗಾಗಿಯೇ ಅವರು ಬುದ್ಧ ಮತ್ತು ಅವನ ಧಮ್ಮ ಕೃತಿಯಲ್ಲಿ ದೇವರೆಂದರೆ ಪ್ರೀತಿಸುವ ರೀತಿ ಎಂದು ಉಲ್ಲೇಖಿಸಿದ್ದಾರೆ.

ಇದು ಪ್ರಶ್ನೆ ಬಹು ಮುಖ್ಯ. ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಆಯ್ಕೆ ಮಾಡುವ ಮೊದಲು ವಿಶ್ವದ ಎಲ್ಲ ಧರ್ಮಗಳನ್ನು ತಕ್ಕಡಿಯಲ್ಲಿ ತೂಗಿದ್ದರು. ಇಸ್ಲಾಂ, ಕ್ರೈಸ್ತ, ಸಿಖ್ ಧರ್ಮಗಳಿಂದ ಆಹ್ವಾನಗಳಿದ್ದವು. ಆದರೆ ಈ ಅವರಿಗೆ ಬೇಕಿದ್ದದ್ದು ಕೇವಲ ದೇವರಲ್ಲ, ಸಮಾನತೆಯನ್ನು ತನ್ನ ಮೂಲ ತತ್ವದಲ್ಲೇ ಹೊಂದಿರುವ ವೈಜ್ಞಾನಿಕ ದರ್ಶನ.

ಅವರು `ಬುದ್ಧ ಮತ್ತು ಅವರ ಧಮ್ಮ’ ಗ್ರಂಥದಲ್ಲಿ ಸ್ಪಷ್ಟವಾಗಿ ಬರೆಯುತ್ತಾರೆ; “ಧರ್ಮವೆಂದರೆ ದೇವರು, ಆತ್ಮ, ಸ್ವರ್ಗ, ನರಕವಲ್ಲ. ಧರ್ಮವೆಂದರೆ ಧಮ್ಮ. ಅಂದರೆ ನೀತಿ, ಸದಾಚಾರ, ಮನುಷ್ಯ ಮನುಷ್ಯನನ್ನು ಪ್ರೀತಿಸುವ ರೀತಿ.”ಬುದ್ಧನ ಧಮ್ಮದಲ್ಲಿ ಮೂರು ಅಮೃತಗಳಿವೆ ಎಂದು ಅವರು ನಂಬಿದ್ದರು:

ಪ್ರಜ್ಞೆ: ಕುರುಡು ನಂಬಿಕೆಯ ವಿರುದ್ಧ ವಿವೇಚನೆ.
ಕರುಣೆ: ಎಲ್ಲ ಜೀವಿಗಳ ಬಗೆ ಪ್ರೀತಿ.
ಸಮತೆ: ಮನುಷ್ಯರೆಲ್ಲರೂ ಒಂದೇ ಎಂದು ಸಾರುವ ಸಮಾನತೆ.

ಹಿಂದೂ ಧರ್ಮದ ಚಾತುರ್ವರ್ಣ ವ್ಯವಸ್ಥೆ ಹುಟ್ಟಿನಿಂದಲೇ ಮನುಷ್ಯನನ್ನು ಶ್ರೇಷ್ಠ ಕನಿಷ್ಠ ಎಂದು ವಿಂಗಡಿಸಿದರೆ, ಬುದ್ಧನ ಧಮ್ಮ ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ಕರ್ಮದಿಂದ ಮಾತ್ರ ಎಂದಿತು. ಅಂಬೇಡ್ಕರ್ ಅವರಿಗೆ ಬೇಕಿದ್ದದ್ದು ಇದೇ.

 ಪ್ರತಿಜ್ಞೆಗಳು – ಗುಲಾಮ ಗಿರಿಯ ಸಂಕೋಲೆ ಕಡಿದ ಕತ್ತಿ

ದೀಕ್ಷೆಗೂ ಮುನ್ನ ಅಂಬೇಡ್ಕರ್ ಅವರು ನೀಡಿದ ಇಪ್ಪತ್ತೆರಡು ಪ್ರತಿಜ್ಞೆಗಳು ಇಂದಿಗೂ ರೋಮಾಂಚನಗೊಳಿಸುತ್ತವೆ. ಅವು ದೇವರ ವಿರುದ್ಧದ ಘೋಷಣೆಯಲ್ಲ, ಅದು ಮಾನಸಿಕ ಗುಲಾಮಗಿರಿಯ ವಿರುದ್ಧದ ಬಂಡಾಯವಾಗಿತ್ತು: “ನಾನು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ದೇವರೆಂದು ಪೂಜಿಸುವುದಿಲ್ಲ. ನಾನು ರಾಮ, ಕೃಷ್ಣನನ್ನು ದೇವರೆಂದು ನಂಬುವುದಿಲ್ಲ. ನಾನು ಗೌರಿ ಗಣಪತಿಯನ್ನು ಪೂಜಿಸುವುದಿಲ್ಲ. ಬ್ರಾಹ್ಮಣರಿಂದ ಯಾವುದೇ ಕರ್ಮಕಾಂಡ ಮಾಡಿಸುವುದಿಲ್ಲ. ನಾನು ಜಾತಿ ಭೇದವನ್ನು ಮಾನುವುದಿಲ್ಲ. ಎಲ್ಲ ಮನುಷ್ಯರು ಸಮಾನರು ಎಂದು ನಂಬುತ್ತೇನೆ. ನಾನು ಬುದ್ಧನ ಅಷ್ಟಾಂಗ ಮಾರ್ಗವನ್ನು ಅನುಸರಿಸುತ್ತೇನೆ.”

ಈ ಒಂದು ಮಾತು… ಶತಮಾನಗಳಿಂದ ದೇವಸ್ಥಾನದ ಬಾಗಿಲು, ನೀರಿನ ಬಾವಿ, ಶಾಲೆಯ ಅಂಗಳದಿಂದ ಹೊರಗಿಟ್ಟಿದ್ದ ಜನರಿಗೆ “ನೀವು ಇನ್ನು ಮುಂದೆ ಅಸ್ಪೃಶ್ಯರಲ್ಲ, ನೀವು ಬುದ್ಧನ ಮಕ್ಕಳು” ಎಂದು ಹೇಳಿದಂತಿತ್ತು.

ದೀಕ್ಷಾಭೂಮಿಯಿಂದ ಇಂದಿನ ಕರ್ನಾಟಕಕ್ಕೆ

ಇಂದು ನಾಗ್ಪುರದ ದೀಕ್ಷಾಭೂಮಿಯಲ್ಲಿ ಅರ್ಧಚಂದ್ರಾಕೃತಿಯ ಭವ್ಯ ಸ್ತೂಪವಿದೆ. ಸಾರನಾಥದ ಧಮ್ಮಚಕ್ರದಂತೆ, ಪ್ರತಿ ಕಲ್ಲೂ ಸಮಾನತೆಯನ್ನು ಸಾರುತ್ತದೆ. ಪ್ರತಿ ವರ್ಷ ವಿಜಯದಶಮಿ ಧಮ್ಮಚಕ್ರ ಪರಿವರ್ತನಾ ದಿನದಂದು 20 ಲಕ್ಷಕ್ಕೂ ಹೆಚ್ಚು ಜನರು ಅಲ್ಲಿ ಸೇರುತ್ತಾರೆ. ಅದು ಯಾತ್ರೆಯಲ್ಲ, ಅದು ಪ್ರತಿಜ್ಞೆಯ ನವೀಕರಣ.

ಈ ಲೇಖನ ಓದಿದ್ದೀರಾ?: ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ ಬದಲಾದದ್ದು ಹೇಗೆ?

ಇಂದು ಕರ್ನಾಟಕದಲ್ಲಿ ನಾವೂ ಸಹ ನೆಲ, ಜಲ, ಭಾಷೆಯ ಬಗ್ಗೆ ಮಾತನಾಡುವಾಗ, ಅಂಬೇಡ್ಕರ್ ಅವರ ಈ ಪರಿವರ್ತನೆಯನ್ನು ಮರೆಯುವಂತಿಲ್ಲ. ಏಕೆಂದರೆ ನೆಲ, ಜಲ, ಭಾಷೆ ಉಳಿಯುವುದು ಮನುಷ್ಯನ ಘನತೆ ಉಳಿದಾಗ ಮಾತ್ರ. ಕಲ್ಯಾಣ ಕರ್ನಾಟಕ, ಹಳೆಯ ಮೈಸೂರು ಭಾಗದಲ್ಲಿ ಸಾವಿರಾರು ಕುಟುಂಬಗಳು ಇಂದು ಬೌದ್ಧ ಧಮ್ಮವನ್ನು ಸ್ವೀಕರಿಸುತ್ತಿರುವುದು ಕೇವಲ ಧಾರ್ಮಿಕ ಕಾರಣಕ್ಕೆ ಅಲ್ಲ, ಅದು ಘನತೆಯ ಬದುಕಿಗಾಗಿ.

ಮಹಾನ್ ಬುದ್ಧ ಹೇಳಿದ್ದು ‘ಅತ್ತ ದೀಪೋ ಭವ’ ನೀವೇ ನಿಮ್ಮ ಬೆಳಕಾಗಿರಿ. ಅಂಬೇಡ್ಕರ್ ಅವರು ಆ ಬೆಳಕನ್ನು ತಂದು ನಮ್ಮ ಕೈಗೆ ಕೊಟ್ಟರು. ಆ ಬೆಳಕಿನಲ್ಲಿ ನಾವು ನಮ್ಮೊಳಗಿನ ಜಾತಿಯ ಕತ್ತಲೆಯನ್ನು, ದ್ವೇಷದ ಕತ್ತಲೆಯನ್ನು ಓಡಿಸಬೇಕಿದೆ.

ಶ್ರೀರಂಗಪಟ್ಟಣದ ಸಮರ್ಪಣ ಟ್ರಸ್ಟ್ ಧಮ್ಮಚಕ್ರ ಪರಿವರ್ತನ ದಿನವನ್ನು ಆಚರಿಸಿ ಹೇಳಿದೆ,ಧಮ್ಮಚಕ್ರ ಪರಿವರ್ತನ ಎಂದರೆ ಬೌದ್ಧರ ಹಬ್ಬವಲ್ಲ, ಅದು ಭಾರತದ ಪ್ರಜಾಪ್ರಭುತ್ವದ ಎರಡನೇ ಸ್ವಾತಂತ್ರ್ಯ ದಿನ. ಮೊದಲ ಸ್ವಾತಂತ್ರ್ಯ ಬ್ರಿಟಿಷರಿಂದ ಸಿಕ್ಕಿತು, ಎರಡನೇ ಸ್ವಾತಂತ್ರ್ಯ ಮನುಷ್ಯನು ಮನುಷ್ಯನ ಮೇಲೆ ಹೇರಿದ್ದ ಗುಲಾಮಗಿರಿಯಿಂದ ಸಿಕ್ಕಿದ್ದು ಆ ದಿನವೇ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ

ವಿಶ್ವಬಸವಧರ್ಮ ಅನುಭವಮಂಟಪ, ಬಸವಕಲ್ಯಾಣ ವತಿಯಿಂದ ನವೆಂಬರ್ 28 ಮತ್ತು 29ರಂದು 47ನೇ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಔರಾದ್‌ | ನೀರು, ಆರೋಗ್ಯ ಸೇವೆ ಪರಿಶೀಲನೆ; ಕಾರ್ಮಿಕರ ಸಮಸ್ಯೆ ಆಲಿಸಿದ ಸಿಇಒ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಅಭಿವೃದ್ಧಿ...