ಪಶ್ಚಿಮ ಬಂಗಾಳ | ದುರ್ಗಾ ಪೂಜೆ ಪಂಡಾಲ್‌ನಲ್ಲಿ ಮಮತಾ ಮೇಲೆ ದಾಳಿ; ಟಿಎಂಸಿ ಮುಖಂಡರೇ ಗುರಿಯೆ?

Date:

ಈಗಾಗಲೇ ಸರಣಿ ದಾಳಿಯು ಟಿಎಂಸಿ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಸಿದೆ. ಹೀಗಿರುವಾಗ ನಿನ್ನೆಯಷ್ಟೇ ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ‘ಮಿಲನ್ ಸಂಘ’ ದುರ್ಗಾ ಪೂಜೆ ಪಂಡಾಲ್ ಉದ್ಘಾಟನೆಗೆ ತೆರಳಿದ್ದ ಟಿಎಂಸಿ ಅಧಿನಾಯಕಿ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆಯೇ ದಾಳಿಗೆ ಯತ್ನ ನಡೆದಿರುವುದು ಸದ್ಯ ರಾಜಕೀಯ ಸಂಚಲನ ಮೂಡಿಸಿದೆ. ಈ ಘಟನೆಯು ಮಾಜಿ ಸಿಎಂ ಅವರ ಭದ್ರತೆಯಲ್ಲಿ  ದೊಡ್ಡ ಲೋಪವನ್ನು ಎತ್ತಿ ತೋರಿಸಿದೆ.

ಪಶ್ಚಿಮ ಬಂಗಾಳದಲ್ಲಿ ಇತ್ತೀಚಿಚೆ ಆಡಳಿತ ಬದಲಾವಣೆಯಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಹಿಂದೆಯೇ ರಾಜಕೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ರಾಜಕೀಯ ವೈರತ್ವ ಮತ್ತು ಹಿಂಸಾಚಾರ ತೀವ್ರಗೊಂಡಿದೆ. ಅದರಲ್ಲೂ ಮುಖ್ಯವಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡರು, ಕಾರ್ಯಕರ್ತರೇ ಗುರಿಯಾಗುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಸರಣಿ ದಾಳಿಗಳು ಹುಟ್ಟಿಹಾಕಿವೆ.

- Advertisement -

ಈಗಾಗಲೇ ಸರಣಿ ದಾಳಿಯು ಟಿಎಂಸಿ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಸಿದೆ. ಹೀಗಿರುವಾಗ ನಿನ್ನೆಯಷ್ಟೇ ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ‘ಮಿಲನ್ ಸಂಘ’ ದುರ್ಗಾ ಪೂಜೆ ಪಂಡಾಲ್ ಉದ್ಘಾಟನೆಗೆ ತೆರಳಿದ್ದ ಟಿಎಂಸಿ ಅಧಿನಾಯಕಿ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆಯೇ ದಾಳಿಗೆ ಯತ್ನ ನಡೆದಿರುವುದು ಸದ್ಯ ರಾಜಕೀಯ ಸಂಚಲನ ಮೂಡಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದಲ್ಲಿ ಇಂಪೀಚ್‌ಮೆಂಟ್‌ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು...

ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರಿಗೆ 2023ರ ಕಾಯ್ದೆಯ ಮೂಲಕ ಸರ್ಕಾರ ಕಾನೂನು ರಕ್ಷಣೆ ಕೊಟ್ಟಿರಬಹುದು, ಆದರೆ ಅವರಿಗೆ ಯಾವುದೇ ರೀತಿಯ ಸಾಂವಿಧಾನಿಕ ರಕ್ಷಣೆ ಇಲ್ಲ. ಹಾಗಾಗಿ ಅವರು ತಾವಾಗಿಯೇ ರಾಜೀನಾಮೆ...

ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ...

ಸೆಪ್ಟೆಂಬರ್ 23ರ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ವರದಿಯ ನಂತರ ಆಯೋಗ ಹಲವು ಸ್ಪಷ್ಟನೆಗಳನ್ನು ನೀಡಿದ್ದರೂ, ಒಂದು ಮುಖ್ಯ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ: ಕಾನೂನುಬದ್ಧವಾಗಿ ಮತದಾರರ ಪಟ್ಟಿಯಲ್ಲಿದ್ದ 16 ಲಕ್ಷಕ್ಕೂ ಹೆಚ್ಚು ಜನರ...

ಸ್ಟಿಂಗ್ ಆಪರೇಷನ್ | ಭ್ರಷ್ಟಾಚಾರ ಬಯಲಿಗೆಳೆಯುವ ಸಾಧನವಾಗಬೇಕೇ ವಿನಾ...

ಆಡಳಿತ ಪಕ್ಷವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಕರ್ತವ್ಯ. ಆದರೆ, ವಿರೋಧ ಪಕ್ಷಗಳಿಗೂ ತಮ್ಮ ಆರೋಪಗಳನ್ನು ಸಮರ್ಥಿಸುವ ಹೊಣೆಗಾರಿಕೆ ಇದೆ. ರಾಜಕೀಯ ಲಾಭಕ್ಕಾಗಿ ಗಂಭೀರ ಆರೋಪಗಳನ್ನು ಮುಂದಿಡುವುದು ಮತ್ತು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು...

ಮಮತಾ ಬ್ಯಾನರ್ಜಿ ಅವರು ರಾಜ್ಯಸಭಾ ಸಂಸದೆ ಡೋಲಾ ಸೇನ್ ಅವರೊಂದಿಗೆ ಕಾಳಿಘಾಟ್ ಪ್ರದೇಶದ ದುರ್ಗಾ ಪೂಜಾ ಪಂಡಾಲ್ ಉದ್ಘಾಟಿಸಲು ತೆರಳಿದ್ದರು. ಸಂಜೆ ಸುಮಾರು 6 ಗಂಟೆಯ ವೇಳೆಗೆ ಅವರು ಪಂಡಾಲ್‌ನತ್ತ ಸಾಗುತ್ತಿದ್ದಾಗ, ‘ತನಿಷ್ಠಾ ಸಾಹಾ’ ಎಂದು ಗುರುತಿಸಲಾದ ಯುವತಿಯೊಬ್ಬಳು ‘ಝೆಡ್ ಪ್ಲಸ್’ (Z+) ಭದ್ರತಾ ವಲಯವನ್ನು ಭೇದಿಸಿ ಮಮತಾ ಬ್ಯಾನರ್ಜಿ ಅವರತ್ತ ನುಗ್ಗಿದ್ದಾಳೆ. ಅಷ್ಟಕ್ಕೂ ಈ ಭದ್ರತೆಯನ್ನು ಭೇದಿಸಿ ಬಂದದ್ದು ಹೇಗೆ ಎಂಬ ಪ್ರಶ್ನೆಯೂ ಸದ್ಯ ಚರ್ಚೆಗೆ ಗ್ರಾಸವಾಗುತ್ತಿದೆ.

ಇದನ್ನೂ ಓದಿ: ಬಂಗಾಳದಲ್ಲಿ ‘ಮಹಾರಾಷ್ಟ್ರ ಮಾಡೆಲ್’? ಟಿಎಂಸಿ ಇಬ್ಭಾಗಕ್ಕೆ ಬಿಜೆಪಿ ಕುತಂತ್ರ; ಬೀದಿಗಿಳಿದ ಮಮತಾ

ಆ ಯುವತಿಯು ಮಮತಾ ಬ್ಯಾನರ್ಜಿ ಅವರ ಸೀರೆಯನ್ನು ಎಳೆದು, ಅವರ ಮೇಲೆ ಕೈಮಾಡಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲದೆ, ಆಕೆಯ ಬಳಿ ಚಾಕು ಸಹ ಇತ್ತು ಎಂದು ಟಿಎಂಸಿ ಮುಖಂಡರು ಆರೋಪಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಪಕ್ಷದ ಬೆಂಬಲಿಗರು ಮತ್ತು ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಕಾಳಿಘಾಟ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಘಟನೆಯು ಮಾಜಿ ಸಿಎಂ ಅವರ ಭದ್ರತೆಯಲ್ಲಿ ಸಂಭವಿಸಿದ ದೊಡ್ಡ ಲೋಪವನ್ನು ಎತ್ತಿ ತೋರಿಸಿದ್ದು, ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿ ಸರ್ಕಾರ ಬಂದ ಮೇಲೆ ಟಿಎಂಸಿ ನಾಯಕರ ಮೇಲಿನ ದಾಳಿಗಳು ಇದು ಮೊದಲೇನಲ್ಲ. ಕಳೆದ ಕೆಲವು ತಿಂಗಳುಗಳಿಂದ ಸರಣಿ ರೂಪದಲ್ಲಿ ಪ್ರಮುಖ ಟಿಎಂಸಿ ಮುಖಂಡರ ಮೇಲೆ ಹಲ್ಲೆ ಮತ್ತು ಪ್ರತಿಭಟನೆಗಳ ಹೆಸರಿನಲ್ಲಿ ಬೆದರಿಕೆ ಘಟನೆಗಳು ವರದಿಯಾಗುತ್ತಿವೆ.

ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್‌ಪುರ ಪ್ರದೇಶದಲ್ಲಿ ಟಿಎಂಸಿ ಸಂಸದ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ರ‍್ಯಾಲಿ ವೇಳೆ ಕಲ್ಲು, ಮೊಟ್ಟೆ ಹಾಗೂ ಶೂಗಳನ್ನು ತೂರಲಾಗಿತ್ತು. ಅವರ ಕಾರಿನ ಮೇಲೆ ಹಲ್ಲೆ ನಡೆಸಿ, ಅವರ ಕನ್ನಡಕವನ್ನು ಒಡೆದು ಹಾಕಲಾಗಿತ್ತು.

ಇದನ್ನೂ ಓದಿ: ಕೋಲ್ಕತ್ತಾ ಟಿಎಂಸಿ ಕಚೇರಿ ಧ್ವಂಸ; ‘ಬಿಜೆಪಿ ಗೂಂಡಾಗಳಿಂದ ದಾಳಿ’ – ಅಭಿಷೇಕ್ ಬ್ಯಾನರ್ಜಿ ಆರೋಪ

ಪ್ರಮುಖ ಟಿಎಂಸಿ ವಕ್ತಾರ ಕುಣಾಲ್ ಘೋಷ್ ಅವರು ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ನಿವಾಸದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಮೊಟ್ಟೆ ತೂರಿ ದಾಳಿ ನಡೆಸಿದ್ದ. ಇದಕ್ಕೂ ಮೊದಲು ಹೂಗ್ಲಿಯ ಉತ್ತರಪಾಡಾದಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಅವರ ಕಾರನ್ನು ಮುತ್ತಿಗೆ ಹಾಕಿ ಕಲ್ಲು ತೂರಲಾಗಿತ್ತು. ಚಂಡೀತಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ನಿಯೋಗದ ಮೇಲೆ ಕಪ್ಪು ಬಾವುಟ ಪ್ರದರ್ಶಿಸಿ, ದೈಹಿಕ ಹಲ್ಲೆ ನಡೆಸಲಾಗಿತ್ತು.

ಈ ಸರಣಿ ದಾಳಿಗಳ ಹಿಂದೆ ಆಡಳಿತಾರೂಢ ಬಿಜೆಪಿ ನೇತೃತ್ವದ ಸಂಚು ಇದೆ ಎಂಬುದು ಟಿಎಂಸಿ ಗಂಭೀರ ಆರೋಪವಾಗಿದೆ. “ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಭಯಪಡಿಸಲು ಮತ್ತು ಹತ್ತಿಕ್ಕಲು ಇಂತಹ ದುಷ್ಕೃತ್ಯಗಳನ್ನು ಯೋಜಿತವಾಗಿ ನಡೆಸಲಾಗುತ್ತಿದೆ” ಎಂದು ಟಿಎಂಸಿ ನಾಯಕರು ಖಂಡಿಸಿದ್ದಾರೆ. ಆದರೆ, ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಬಿಜೆಪಿ ನಾಯಕರು, “ಈ ಘಟನೆಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ರಾಜ್ಯದಲ್ಲಿ ಹಿಂದಿನ ಟಿಎಂಸಿ ಆಡಳಿತದಲ್ಲಿ ನಡೆದ ದೌರ್ಜನ್ಯ ಮತ್ತು ಭ್ರಷ್ಟಾಚಾರದಿಂದ ರೋಸಿಹೋಗಿರುವ ಸಾರ್ವಜನಿಕರ ಆಕ್ರೋಶವೇ ಹೀಗೆ ವ್ಯಕ್ತವಾಗುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ದುರ್ಗಾ ಪೂಜೆಯಂತಹ ಸಾಂಸ್ಕೃತಿಕ ಮಹೋತ್ಸವದ ಸಮಯದಲ್ಲಿ ಮಾಜಿ ಮುಖ್ಯಮಂತ್ರಿಯವರ ಮೇಲೆ ನಡೆದ ದಾಳಿಯು ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ. ಹಾಗೆಯೇ ಪಶ್ಚಿಮ ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವನ್ನಾಗಿ ಮಾಡಿದೆ. ಚುನಾವಣೋತ್ತರ ರಾಜಕೀಯ ವೈರತ್ವವು ಹಿಂಸಾಚಾರದ ರೂಪ ಪಡೆದುಕೊಂಡಿದ್ದು, ರಾಜ್ಯದಲ್ಲಿ ಶಾಂತಿ ನೆಲೆಸಲು ಆಡಳಿತ ವ್ಯವಸ್ಥೆ ಮತ್ತು ರಾಜಕೀಯ ಪಕ್ಷಗಳು ತುರ್ತು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಮನಾಬಾದ್‌ | ಪಶು ಇಲಾಖೆ ವಾಹನ ನಿರ್ವಹಣೆ ವೆಚ್ಚದಲ್ಲಿ ಅಕ್ರಮ ಆರೋಪ: ತನಿಖೆಗೆ ಭೀಮರೆಡ್ಡಿ ಆಗ್ರಹ

ಹುಮನಾಬಾದ್ ತಾಲ್ಲೂಕಿನ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಸರ್ಕಾರದಿಂದ ಒದಗಿಸಿರುವ...

ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಕೆಲವೇ ಗಂಟೆಗಳಲ್ಲಿ ದರೋಡೆ; ರಮೇಶ್‌ ಯಾದವ್‌ ಕೈಕಾಲು ಕಟ್ಟಿ ₹50 ಲಕ್ಷ ಲೂಟಿ

ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಸಂಭ್ರಮದಲ್ಲಿದ್ದ ರಮೇಶ್...

2029ರ ಲೋಕಸಭಾ ಚುನಾವಣೆ: ಸೋಲಲು ಸಿದ್ಧವಿರುವಂತೆ ರಾಹುಲ್‌ಗೆ ಅಮಿತ್ ಶಾ ಸವಾಲು

ವಿಪಕ್ಷಗಳ ಇಂಡಿಯಾ ಒಕ್ಕೂಟ ನಡೆಸಿದ ಬೃಹತ್ ರ‍್ಯಾಲಿಯ ಮಾರನೇ ದಿನವೇ, ಕೇಂದ್ರ...

ಬೀದರ್‌ | ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿ, ಕಾಂಗ್ರೆಸ್ : ಆಪ್ ಶಾಸಕ ಅನಿಲ್ ಝಾ

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ....