ಅಪರಾಧಿಯೊಬ್ಬನಿಗೆ ನೀವು ಕರುಣೆ ತೋರಿದರೆ, ನೀವು ಕೂಡ ಅವನ ಪಾಪ ಕೃತ್ಯಗಳಲ್ಲಿ ಭಾಗಿಯಾದಂತೆ- ಸಾವಿತ್ರಿಬಾಯಿ ಫುಲೆ

Date:

Advertisements

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡಿಗಲ್ಲಾಗಿರುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರು ನಾನಾ ಸಂದರ್ಭಗಳಲ್ಲಿ ಮಾಡಿದ ಭಾಷಣಗಳನ್ನು ಸಂಗ್ರಹಿಸಿ ಮರಾಠಿಯ ವತ್ಸ ಪ್ರಕಾಶನವು 1892ರಲ್ಲಿ ‘ಮಾತೃಶ್ರೀ ಸಾವಿತ್ರಿಭಾಯಂಚಿ ಭಾಷಣೆ’ ಎಂಬ ಕೃತಿಯನ್ನು ಹೊರತಂದಿತ್ತು. ‘ದಾನ’ ಶೀರ್ಷಿಕೆಯಡಿ ಪ್ರಕಟವಾಗಿರುವ ಭಾಷಣದ (ಪು.ಸಂ.128-129) ಕನ್ನಡ ಅನುವಾದ ಇಲ್ಲಿದೆ

ಅನೇಕ ಜನರು ದಯಾದಾನ ಮತ್ತು ಉಪಕಾರಿ ಇತ್ಯಾದಿ ಗುಣಗಳನ್ನು ಹೊಂದಿದ್ದಾರಾದರೂ, ಅವರು ಅವುಗಳನ್ನು ವಿವೇಕ ಹಾಗೂ ದೂರದೃಷ್ಟಿಯೊಂದಿಗೆ ಬಳಸದಿರುವ ಕಾರಣ, ಅದರ ಪರಿಣಾಮ ಉತ್ತಮವಾಗಿಲ್ಲ. ಅಪರಾಧಿಯೊಬ್ಬನಿಗೆ ನೀವು ಕರುಣೆ ತೋರಿದರೆ, ನೀವು ಕೂಡ ಅವನ ಪಾಪ ಕೃತ್ಯಗಳಲ್ಲಿ ಭಾಗಿಯಾದಂತೆ. ದಾನ ನೀಡುವುದು ಒಳ್ಳೆಯದೆ. ಆದರೆ, ನಾನು ಮಹಾನ್ ಮಾನವತಾವಾದಿ ಎಂದು ಪ್ರದರ್ಶಿಸಲಿಕ್ಕೆ ಹಾಗೆ ಮಾಡಿದರೆ ಅದು ವ್ಯರ್ಥವಾಗುತ್ತದೆ. ಮತ್ತದನ್ನು ಸ್ವೀಕರಿಸುವವರನ್ನು ಪರಾವಲಂಬಿಯನ್ನಾಗಿಸುತ್ತದೆ.

ದ್ರವ್ಯದಾನ, ಅನ್ನದಾನಗಳಿಂದ ಹೆಚ್ಚುವ ದುರ್ಗುಣಗಳು ಸಮಾಜದ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ. ಕರುಣೆ, ದಾನ ಇತ್ಯಾದಿಗಳಲ್ಲಿ ತೊಡಗಿರುವವರು ಇತರರ ದುಃಖದಲ್ಲಿ ಪಾಲುದಾರರಾಗಲು ಹಾಗೂ ಇತರರ ಸಂಕಷ್ಟ ಅಥವಾ ವಿಪತ್ತಿನಲ್ಲಿರುವಾಗ ಅವರಿಗೆ ಸಹಾಯ ಮಾಡಲು ಬಯಸುತ್ತಾರೆ. ಪರೋಪಕಾರಿ ಜನರು ಸದಾ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ದುಃಖಗಳು, ತೊಂದರೆಗಳು, ವಿಪತ್ತುಗಳು ಬಂದೊದಗುವುದಾದರೂ ಯಾರಿಗೆ? ಅದು ಸೋಮಾರಿಗಳಿಗೆ, ವ್ಯಸನಿಗಳಿಗೆ ಮತ್ತು ಮೂರ್ಖರಿಗೇ ಬಂದೊದಗುತ್ತದೆ.

Advertisements

ಬಹುಮಟ್ಟಿಗೆ, ಅವರಿಗೆ ಬಂದೊದಗಿರುವ ತೊಂದರೆಗಳಿಗೆ ಅವರು ಮಾಡಿದ ತಪ್ಪುಗಳೇ ಕಾರಣ ಮತ್ತು ಇದು ಅವರಿಗೆ ಅವರು ತಮ್ಮ ದುರ್ಗುಣಗಳನ್ನು ಮೀರಿ ಬೆಳೆಯಲು ಸಹಕಾರಿಯಾಗುವ ಶಿಕ್ಷೆ ಎಂದು ಭಾವಿಸಿದ್ದೇನೆ. ಸರ್ಕಾರವು ಅಪರಾಧಿಗಳನ್ನು ಶಿಕ್ಷಿಸುತ್ತದೆ ಎಂಬ ಭಯದಿಂದಾಗಿ, ಅಪರಾಧಿಗಳು ಕಳ್ಳತನ ಮತ್ತು ಬಲಾತ್ಕಾರ ಮತ್ತು ಇತರೆ ಅಪರಾಧಗಳನ್ನು ಎಸಗಬಾರದೆಂದು ತಿಳಿದು ಅವುಗಳಿಂದ ದೂರವೇ ಉಳಿಯುತ್ತಾರೆ. ಹಾಗೆಯೇ, ಬಡತನ, ದುರ್ಗತಿ, ದೌರ್ಭಾಗ್ಯಕ್ಕೆ ಒಳಗಾಗುತ್ತೇನೆ ಎಂಬ ಭಯದಿಂದಾಗಿ ಅವರು ಪರಿವರ್ತನೆಗೊಂದು ಸೋಮಾರಿತನ, ವಿಚಾರಹೀನತೆ, ದುಂದುವೆಚ್ಚ ಮುಂತಾದ ದುಶ್ಚಟ ಮುಕ್ತರಾಗಿ ದುಡಿಮೆಯಲ್ಲಿ ತೊಡಗುತ್ತಾರೆ. ಅವರು ಬೇರೆಯವರನ್ನು ಅವಲಂಬಿಸುವುದಿಲ್ಲ. ಆದಕಾರಣ, ದಾನಿಗಳು ತಾವು ದಾನವು ಜನರ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎಂಬುದರ ಬಗ್ಗೆ ಯೋಚಿಸಿ ಕಾರ್ಯೋನ್ಮುಖರಾಗಬೇಕು. ಸತ್ಕಾರ್ಯಗಳು ಕೂಡ (ದಾನ ಮಾಡುವ ಸ್ವಭಾವ) ಸಮಾಜದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ವ್ಯಕ್ತಿಯೊಬ್ಬರು ಪರಿವರ್ತನೆಗೊಂಡಿದ್ದರೆ, ಅವರು ಮತ್ತೊಬ್ಬರಿಂದ ಸಹಾಯ ಬೇಡಲು ಹಿಂಜರಿಯುತ್ತಾರೆ. ಇತರರನ್ನು ಆಶ್ರಯಿಸಲೇಬೇಕಾದ ಸಂದರ್ಭ ಒದಗಿ ಬಂದರೂ ಸಹ ತನ್ನ ಸ್ವಂತ ಶ್ರಮ ಮತ್ತು ಕೆಲಸಗಳಿಂದಲೇ ತನಗೆ ಒದಗಿರುವ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬಹುದು ಮತ್ತು ಇನ್ನೊಮ್ಮೆ ಹೀಗಾಗದಿರುವ ಹಾಗೆ ಹೇಗೆ ಎಚ್ಚರ ವಹಿಸಬಹುದು ಎಂದು ಚಿಂತಿಸಬೇಕು. ದಾನ – ದತ್ತಿ, ದಯೆ, ಉಪಕಾರ ಇತ್ಯಾದಿ ಮೌಲ್ಯಗಳು ಸಮಾಜದ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ಬೀರದೆ, ಸಮಾಜದ ಕಲ್ಯಾಣಕ್ಕೆ ಕಾರಣವಾಗಬೇಕೆಂದರೆ ದಾನಿಗಳು ನೀಡುವ ಕ್ರಿಯೆಯನ್ನು ಆನಂದಿಸಿದರೂ ಅದನ್ನು ಸ್ವೀಕರಿಸುವವರು ಆನಂದಿಸಬಾರದು ಎಂದು ನಂಬಲಾಗಿದೆ.

savitribai1

ಆಲಸ್ಯ, ಪರಾವಲಂಬನೆ ಮುಂತಾದ ದುರ್ಗುಣಗಳನ್ನು ಹೋಗಲಾಡಿಸುವಂತಹ ಮತ್ತು ಮನುಷ್ಯರು ಸದ್ಗುಣಗಳನ್ನು ವೃದ್ಧಿಸುವ ಧರ್ಮವೊಂದಿದ್ದರೆ, ಅದು ‘ವಿದ್ಯಾದಾನ’. ವಿದ್ಯಾದಾನದಿಂದಾಗಿ ಜ್ಞಾನವನ್ನು ನೀಡುವವರು ಮತ್ತು ಪಡೆಯುವವರಿಬ್ಬರೂ ನೈಜ ಮನುಷ್ಯರಾಗುತ್ತಾರೆ. ವಿದ್ಯಾದಾನದ ಈ ಶಕ್ತಿಯಿಂದಾಗಿ ಮನುಷ್ಯನಲ್ಲಿನ ಪಶುತ್ವವು ಇಲ್ಲವಾಗುತ್ತದೆ. ವಿದ್ಯೆಯನ್ನು ನೀಡುವವರು ಧೈರ್ಯಶಾಲಿ ಮತ್ತು ನಿರ್ಭೀತರಾಗುತ್ತಾರೆ; ಕಲಿಯುವವರು ಸಮರ್ಥರಾಗುತ್ತಾರೆ ಮತ್ತು ಬುದ್ಧಿವಂತರಾಗುತ್ತಾರೆ. ಬ್ರಿಟಿಷ್‌ ಬ್ರಾಹ್ಮಣರು (ಭಟ್ಟರು) ಜನರಿಗೆ ವಿದ್ಯೆಯನ್ನು ನೀಡಿ ಅವರನ್ನು ಬುದ್ಧಿವಂತರನ್ನಾಗಿಸಿದ್ದಾರೆ. ಆದ್ದರಿಂದ, ಇವರೇ ನಿಜವಾದ ಬ್ರಾಹ್ಮಣರು. ಆದರೆ, ನಮ್ಮ ಬ್ರಾಹ್ಮಣರು ಜನರನ್ನು ಅವಿದ್ಯಾವಂತರನ್ನಾಗಿ ಇರಿಸುವುದರಲ್ಲಿ ಪರಿಣಿತರು. ಆದ್ದರಿಂದ, ನಮ್ಮ ಬ್ರಾಹ್ಮಣರು ನಿಜವಾಗಿಯೂ ಮೂರ್ಖರು.

ಇರಾನಿಯನ್ನರು ಭಾರತವನ್ನು ಪ್ರವೇಶಿಸಿ, ಇದನ್ನು ಅವರಪ್ಪನ ಆಸ್ತಿಯೆಂದು ಭಾವಿಸಿದರು. ಇದೇ ಇರಾನಿಯನ್ನರು ಹುನ್ನರು ಬಂದಾಗ “ಈ ದೇಶ ನಿಮ್ಮದಲ್ಲ” ಎಂದರು. ಆದರೂ ಹುನ್ನರು (ಭಾರತವನ್ನು) ಪ್ರವೇಶಿಸಿ ಇದು ಅವರಪ್ಪನದೇ ಆಸ್ತಿ ಎಂಬಂತೆ ಭಾವಿಸಿದರು. ಹಿಂದೂಸ್ತಾನವು ಮೊಘಲರ ತಂದೆಯದೂ ಆಗಿತ್ತಂತೆ. ಯಾರಿಗೆ ಗೊತ್ತು! ಆದರೆ, ಹಿಂದುಸ್ಥಾನವು ಭಾರತೀಯ ಜನರದ್ದು ಮತ್ತು ಇವರುಗಳು ಕಾಲಿಟ್ಟಲ್ಲೆಲ್ಲಾ ಪರಕೀಯರೇ ಆಳಿದರು ಎಂಬುದು ನಿಜ ಇತಿಹಾಸ. ‘ಅಜ್ಞಾನ’ವೇ ಅದಕ್ಕೆ ಕಾರಣ.

ಅಜ್ಞಾನದಿಂದಾಗಿ ಭಾರತೀಯರು ಎರಡು ಸಾವಿರ ವರ್ಷಗಳಿಂದ ಪ್ರಾಣಿಗಳಂತೆ ಬದುಕಿದರೆಂದರೆ ಇದು ಯಾವುದೋ ಮಹಾ ಶಾಪವಲ್ಲ. ಬದಲಿಗೆ, ಇದು ಭಟ್ಟರ (ಬ್ರಾಹ್ಮಣರ) ಸಂಚಾಗಿದೆ. ಇಂಗ್ಲಿಷ್ ಶಿಕ್ಷಣದಿಂದಾಗಿ ಈ ಸಂಚು ಬಯಲಾಗಿದೆ. ವಿದ್ಯಾದಾನದ ವಿಚಾರದಲ್ಲಿ ಜನರು ಒಬ್ಬರನ್ನೊಬ್ಬರು ಎಂದು ಬೆಂಬಲಿಸುತ್ತಾರೊ, ಎಂದು ಜನರು ವಿದ್ಯೆಯನ್ನು ಪಡೆಯಲು ಹಪಹಪಿಸುತ್ತಾರೋ, ಅಂದು ನಾವು ಪ್ರಗತಿ/ಪರಿವರ್ತನೆಯ ಹಾದಿಯನ್ನು ತುಳಿಯುತ್ತೇವೆ. ಇದರಿಂದ ಸಮಾಜಕ್ಕೆ ಅನುಕೂಲವಾಗುವುದಲ್ಲದೆ ಎಲ್ಲರ ನೆಮ್ಮದಿಯೂ ಹೆಚ್ಚುತ್ತದೆ.

ಜನರಿಗೆ ಶಿಕ್ಷಣವನ್ನು ಒದಗಿಸಲು ಬ್ರಿಟಿಷ್‌ ಸರ್ಕಾರ ಶಾಲೆಗಳನ್ನು ತೆರೆದಿದೆ. ಆದರೆ, ಶಾಲೆಗಳ ಸಂಖ್ಯೆಯು ಕಡಿಮೆಯಿದ್ದು, ಇದನ್ನು ಹೆಚ್ಚಿಸದಿದ್ದರೆ, ಇಡೀ ಭಾರತಕ್ಕೆ ಶಿಕ್ಷಣ ಒದಗಿಸಲು ಇನ್ನೂ ನೂರೈವತ್ತು ವರ್ಷಗಳು ಬೇಕಾಗುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ. ಆದರೂ, ಸರ್ಕಾರವು ಶಿಕ್ಷಣ ಪ್ರಸಾರದ ವೇಗವನ್ನು ಹೆಚ್ಚಿಸಿ ಎಲ್ಲಾ ಜನರಿಗೆ ಶಿಕ್ಷಣ ನೀಡದ ಹೊರತು, ಇಲ್ಲಿಂದ ಹೋಗಬಾರದು ಎನ್ನುತ್ತೇನೆ.

ಇದನ್ನು ಓದಿ ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ:ಸಿಎಂ

ಮಹಾರರು, ಮಾಂಗ್‌ ಆದಿಯಾಗಿ ಇತರರು, ಶೂದ್ರರು, ಅತಿಶೂದ್ರರು, ಹನ್ನೆರಡು ಬಲುತ್ತೆದಾರರು ಮತ್ತು ಅಲುತ್ತೆದಾರರು ಮತ್ತು ಧಂಗರುಗಳು, ಮಾಳಿಗಳು, ಕುಂಬಿಗಳು ಮುಂತಾದವರು ಪ್ರತಿ ಹಳ್ಳಿ-ಹಳ್ಳಿಯಲ್ಲೂ ವಾಸಿಸುತ್ತಿದ್ದಾರೆ. ಆ ಜನರಲ್ಲಿ ಅವರ ಜ್ಞಾನ, ಕಲೆ, ದೃಢತೆ ಇತ್ಯಾದಿ ಗುಣಗಳಿದ್ದರೂ ಸರ್ಕಾರ ಅದನ್ನು ಇಂದಿಗೂ ಬಳಸಿಕೊಂಡಿಲ್ಲ. ರಾಜರುಗಳು ಕೂಡ ಈ ಗುಣಗಳನ್ನು ನಿರ್ಲಕ್ಷಿಸಿ, ಅಪಮೌಲ್ಯಗೊಳಿಸಿಯೇ ತಮ್ಮ ಆಡಳಿತವನ್ನು ನಡೆಸುತ್ತಿದ್ದರು. ಶೂದ್ರ-ಅತಿಶೂದ್ರರಲ್ಲಿ ನಿಸ್ಸಂದೇಹವಾಗಿ ಅನೇಕ ಗುಣಗಳಿವೆ ಮತ್ತು ಅಜ್ಞಾನದಿಂದಾಗಿ ಅವರಿಗೆ ತಮ್ಮ ಬುದ್ಧಿವಂತಿಕೆ ಮತ್ತು ಕೌಶಲಗಳನ್ನು ಹೇಗೆ ಮತ್ತು ಎಲ್ಲಿ ಬಳಸಿಕೊಳ್ಳಬೇಕೆಂಬುದು ತಿಳಿದಿಲ್ಲ. ಏನನ್ನು ಉತ್ಪಾದಿಸಿದರೆ ಜನರು ಉಪಯೋಗಿಸುತ್ತಾರೆ, ಏನನ್ನು ಉತ್ಪಾದಿಸಿದರೆ ದೇಶಕ್ಕೂ ಉಪಯೋಗವಾಗಿ, ತಮಗೂ ಆದಾಯವಾಗುತ್ತದೆ ಎಂಬುದು ನಮ್ಮ ದೇಶದ ಜನರಿಗೆ ತಿಳಿದಿಲ್ಲ. ಸರ್ಕಾರವೂ ಕೂಡ ಅದನ್ನು ಅವರಿಗೆ ತಿಳಿಸುತ್ತಿಲ್ಲ. ಆದ್ದರಿಂದ, ಯಾರಾದರೂ ಅವರಿಗೆ ದಾರಿ ತೋರಿಸದ ಹೊರತು, ಶೂದ್ರಾತಿ ಶೂದ್ರರು ತಮ್ಮ ಸ್ವಂತ ಬುದ್ಧಿ ಅಥವಾ ಧೈರ್ಯದಿಂದ ಯಾವುದೇ ವ್ಯವಹಾರವನ್ನು ಮಾಡುವುದಿಲ್ಲ. ಇದು ಶೂದ್ರಾತಿ ಶೂದ್ರರಲ್ಲಿನ ಮೂರ್ಖ ಸ್ವಭಾವ. ಅವರಲ್ಲಿ ಒಬ್ಬರಿಗೊಬ್ಬರು ಸಹಕರಿಸುವ ಸ್ವಭಾವವೂ ಇಲ್ಲ. ಆದ್ದರಿಂದ, ತಮ್ಮನ್ನು ತಾವು ಹೇಗೆ ಸುಧಾರಿಸಿಕೊಳ್ಳಬೇಕೆಂಬುದು ಅವರಿಗೆ ತಿಳಿದಿಲ್ಲ ಮತ್ತು ಅಂತಹ ಅಜ್ಞಾನದಿಂದಾಗಿ ಅವರು ಕೆಲವೊಮ್ಮೆ ಅರ್ಧಹೊಟ್ಟೆಯಲ್ಲಿ ಮಲಗಿದರೆ, ಇನ್ನೂ ಹಲವು ಬಾರಿ ಪೂರ್ತಿ ಹಸಿವಿನಲ್ಲಿಯೇ ಮಲಗುವಂತಾಗಿದೆ.

ಈ ಜನರಿಗೆ ದಯಾಳು ಸರ್ಕಾರವು ಜೀವನೋಪಾಯದ ಮಾರ್ಗವನ್ನು ತೋರಬೇಕು ಅಥವಾ ಹಳ್ಳಿಯ ಧನಿಕರು ಉದ್ಯಮಗಳನ್ನು ಸೃಷ್ಟಿಸಬೇಕು ಮತ್ತು ಶ್ರಮಿಕರು ತಮ್ಮ ಕೌಶಲಗಳನ್ನು ಬಳಸಿ ಧನಿಕನಿಗೆ ಸಹಕಾರಿಯಾಗುವಂತೆ ನಡೆದುಕೊಳ್ಳಬೇಕು. ಇಂದು ನೀವು ನಿಮ್ಮ ಸ್ವಭಾವಗಳನ್ನು ಬದಲಿಸಿಕೊಳ್ಳದಿದ್ದರೆ, ಪರಿಸ್ಥಿತಿ ನಿಮ್ಮನ್ನೇ ದೂಷಿಸುತ್ತದೆ ಎಂಬುದನ್ನು ನಾನು ಮತ್ತೊಮ್ಮೆ ಹೊಸದಾಗಿ ಹೇಳಬೇಕಿಲ್ಲ.

ಕನ್ನಡ ಅನುವಾದ: ಶಶಾಂಕ್‌ ಎಸ್‌ ಆರ್
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X