ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು: ಪ್ರಧಾನಿ ಮೋದಿಗೆ ಯುದ್ಧ ದಾಹವೇ?

Date:

Advertisements
ಕೇಂದ್ರ ಸರ್ಕಾರವು ವರ್ಷದಿಂದ ವರ್ಷಕ್ಕೆ ತೀವ್ರಗತಿಯಲ್ಲಿ ರಕ್ಷಣಾ ವಲಯದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ಗಮನಿಸಿದರೆ ದೇಶದ ಅಭಿವೃದ್ಧಿಗಿಂತ ಯುದ್ಧದ ಹಪಾಹಪಿಯೆ ಹೆಚ್ಚಾಗಿ ಕಾಣುತ್ತಿದೆ. ಬಜೆಟ್‌ನ ಹಣವನ್ನು ನಿರುದ್ಯೋಗ, ಬಡತನ, ಅಸಮಾನತೆ ಸೇರಿದಂತೆ ನೂರಾರು ಸಮಸ್ಯೆಗಳ ನಿವಾರಣೆಗೆ ವಿನಿಯೋಗಿಸಬೇಕಿದೆ. 

ತಾನು ಶಾಂತಿಪ್ರಿಯ ಎಂದು ಪದೇಪದೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಾರಿಕೊಳ್ಳುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ (2020-24) ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡು ಎರಡನೇ ಸ್ಥಾನದಲ್ಲಿದೆ. ಕಳೆದ 4 ವರ್ಷಗಳಿಂದ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಉಕ್ರೇನ್‌ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡ ಮೊದಲ ದೇಶವಾಗಿದೆ. ಭಾರತ 2015-19 ರಿಂದ ಆಮದಿನ ಪ್ರಮಾಣ 0.8ರಷ್ಟು ಕಡಿಮೆಯಾದರೂ ಅಂತಹ ವ್ಯತ್ಯಾಸವಾಗಿಲ್ಲ ಎಂದು ಸಂಶೋಧನಾ ಸಂಸ್ಥೆ ಸಿಪ್ರಿ (ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌) ವರದಿ ಮಾಡಿದೆ. ಈ ಅಂಶಗಳನ್ನು ಗಮನಿಸಿದರೆ ಬಿಜೆಪಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ದೇಶದ ಅಭಿವೃದ್ಧಿ ಯೋಜನೆಗಳಿಗಿಂತ ಹಲವು ಪಟ್ಟು ಹಣವನ್ನು ಶಸ್ತ್ರಗಳ ಖರೀದಿಗೆ ವೆಚ್ಚ ಮಾಡುತ್ತಿದ್ದು, ಆಂತರಿಕವಾಗಿ ಯುದ್ಧ ದಾಹದಲ್ಲಿದೆ.

ಸಿಪ್ರಿ ಅಂಕಿಅಂಶಗಳ ಪ್ರಕಾರ 2015-19ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೇ. 9.1 ಯುದ್ದೋಪಕರಣಗಳನ್ನು ಖರೀದಿಸಿದರೆ, 2020-24ರಲ್ಲಿ ಶೇ. 8.3 ರಷ್ಟು ಆಮದು ಮಾಡಿಕೊಂಡಿದೆ. ಉಕ್ರೇನ್‌ 2015-19ರಲ್ಲಿ ವಿದೇಶಗಳಿಂದ ಕೇವಲ ಶೇ. 0.1 ಶಸ್ತ್ರಗಳನ್ನು ತರಿಸಿಕೊಂಡಿತ್ತು, ಆದರೆ ರಷ್ಯಾದ ವಿರುದ್ಧ ಯುದ್ಧ ಶುರುವಾದ ಬಳಿಕ 2020-24ರಲ್ಲಿ ಶೇ. 8.8(ನೂರು ಪ್ರತಿಶತ ಹೆಚ್ಚು)ರಷ್ಟು ಆಮದು ಮಾಡಿಕೊಂಡು ವಿಶ್ವದಲ್ಲಿ ಅತಿ ಹೆಚ್ಚು ಯುದ್ದೋಪಕರಣಗಳನ್ನು ಆಮದು ಮಾಡಿಕೊಂಡ ರಾಷ್ಟ್ರವಾಯಿತು. ಶಸ್ತ್ರಗಳನ್ನು ರಫ್ತು ಮಾಡುವ ದೇಶಗಳಲ್ಲಿ ರಷ್ಯಾ ಹಾಗೂ ಫ್ರಾನ್ಸ್‌ ಮೊದಲೆರಡು ಸ್ಥಾನಗಳಲ್ಲಿವೆ. ಆದರೂ ಇತ್ತೀಚಿನ ಕೆಲವು ವರ್ಷಗಳಲ್ಲಿ ರಷ್ಯಾದ ರಫ್ತು ವಹಿವಾಟು ಕುಸಿತಗೊಂಡಿದೆ. ಅಮೆರಿಕ ಮುನ್ನಲೆಗೆ ಬರುತ್ತಿದೆ.

ಭಾರತವು 2020-24ರ ಅವಧಿಯಲ್ಲಿ ರಷ್ಯಾದಿಂದ ಶೇ.36 ರಷ್ಟು ಶಸ್ತ್ರಗಳನ್ನು ಆಮದು ಮಾಡಿಕೊಂಡಿತ್ತು. ಹಾಗೆ ನೋಡಿದರೆ ಕಳೆದ 10 ವರ್ಷಗಳಿಂದ ರಷ್ಯಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ಕಡಿತಗೊಳಿಸಿದೆ. 2015-19 ರಲ್ಲಿ ಶೇ.55 ಹಾಗೂ 2010-14ರಲ್ಲಿ ಶೇ.72 ರಷ್ಟು ಯುದ್ದೋಪಕರಣಗಳನ್ನು ಖರೀದಿಸಿತ್ತು. ರಷ್ಯಾ 2020-24ರ ಅವಧಿಯಲ್ಲಿ ಪ್ರಮುಖ ಶಸ್ತ್ರಗಳನ್ನು 33 ದೇಶಗಳಿಗೆ ರಫ್ತು ಮಾಡಿರುವುದರಲ್ಲಿ ಬಹುಪಾಲು ಭಾರತ (ಶೇ.38), ಚೀನಾ (ಶೇ.17) ಹಾಗೂ ಕಝಾಕಿಸ್ತಾನ್ (ಶೇ.11) ದೇಶಗಳು ಪಡೆದುಕೊಂಡಿವೆ.

Advertisements

ಫ್ರಾನ್ಸ್‌ ಕೂಡ ಇದೇ ಸಂದರ್ಭದಲ್ಲಿ 65 ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿದ್ದು, ಪ್ರಮುಖ ಯುದ್ಧೋಪಕರಣಗಳನ್ನು ಯೂರೋಪ್‌ನ ಇತರ ರಾಷ್ಟ್ರಗಳಿಗೆ ರವಾನಿಸಿದೆ. ಭಾರತ ಕೂಡ ಫ್ರಾನ್ಸ್‌ನಿಂದ ಕಳೆದ 5 ವರ್ಷಗಳಲ್ಲಿ ಶೇ. 28 ರಷ್ಟು ಶಸ್ತ್ರಗಳನ್ನು ಖರೀದಿಸಿದೆ. ಇವುಗಳಲ್ಲಿ 36 ರಾಫಲ್‌ ಫೈಟರ್‌ ಜೆಟ್‌ಗಳು, 6 ಸ್ಕಾರ್ಪೇನ್‌ ವರ್ಗದ ಜಲಂತಾರ್ಗಾಮಿ ನೌಕೆಗಳು ಒಳಗೊಂಡಿವೆ. ಇದರ ಜೊತೆಗೆ ಶೀಘ್ರದಲ್ಲಿ 26 ರಾಫಲ್‌ ಎಂ-ಜೆಟ್‌ಗಳು ಹಾಗೂ 3 ಸಬ್‌ಮರೀನ್‌ಗಳನ್ನು ಕೂಡ ಖರೀದಿಸಲಿದೆ. ಯೂರೋಪ್‌ನ ಇತರ ದೇಶಗಳು ಶೇ.15 ರಷ್ಟು ಯುದ್ಧೋಪಕರಣಗಳನ್ನು ಫ್ರಾನ್ಸ್‌ನಿಂದ ಪಡೆದುಕೊಂಡಿದ್ದರೆ, ಕತಾರ್‌ ಶೇ.9.7 ರಷ್ಟು ಶಸ್ತ್ರಗಳನ್ನು ಆಮದು ಮಾಡಿಕೊಂಡಿದೆ.

ಈ ಸುದ್ದಿ ಓದಿದ್ದೀರಾ? ಟೀಂ ಇಂಡಿಯಾದ ಕಹಿ ನೆನಪುಗಳನ್ನು ಬದಿಗೆ ಸರಿಸಿದ ಚಾಂಪಿಯನ್ಸ್‌ ಟ್ರೋಫಿ ಗೆಲುವು

ಕಳೆದ 5 ವರ್ಷಗಳಲ್ಲಿ ರಷ್ಯಾದೊಂದಿಗೆ ಶಸ್ತ್ರಗಳನ್ನು ಆಮದು ಮಾಡಿಕೊಂಡಿರುವುದನ್ನು ಕಡಿಮೆ ಮಾಡಿರುವ ಭಾರತವು ಅಮೆರಿಕದ ಜೊತೆ ಹೆಚ್ಚು ಸಂಬಂಧ ಬೆಳೆಸಿಕೊಂಡಿದೆ. ಸಿಪ್ರಿ ಅಂಕಿಅಂಶಗಳು ಹೇಳುವ ಪ್ರಕಾರ 2024-24ರಲ್ಲಿ ಅಮೆರಿಕದಿಂದ ಶೇ.43, ಚೀನಾದಿಂದ ಶೇ.5.9 ಹಾಗೂ ಜರ್ಮನಿಯಿಂದ ಶೇ.5.6 ಯುದ್ದೋಪಕರಣಗಳನ್ನು ಆಮದು ಮಾಡಿಕೊಂಡಿದೆ. ಕೇಂದ್ರ ಸರ್ಕಾರವು ವರ್ಷದಿಂದ ವರ್ಷಕ್ಕೆ ತೀವ್ರಗತಿಯಲ್ಲಿ ರಕ್ಷಣಾ ವಲಯದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ಗಮನಿಸಿದರೆ ದೇಶದ ಅಭಿವೃದ್ಧಿಗಿಂತ ಯುದ್ಧದ ಹಪಾಹಪಿಯೆ ಹೆಚ್ಚಾಗಿ ಕಾಣುತ್ತಿದೆ. ದೇಶವನ್ನು ಬಾಹ್ಯ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಯಾಗಿ ಅತ್ಯಾಧುನಿಕ ಸೇನೆ, ಶಸ್ತ್ರಾಸ್ತ್ರಗಳು ಖಂಡಿತಾ ಅಗತ್ಯವಿದೆ. ಆದರೆ ಅದಕ್ಕೂ ಒಂದು ಮಿತಿಯಿದೆ. ಬಜೆಟ್‌ನ ಹಣವನ್ನು ಕೇಂದ್ರ ಸರ್ಕಾರವು ದೇಶದಲ್ಲಿ ಮುಖ್ಯವಾಗಿ ಕಾಡುತ್ತಿರುವ ನಿರುದ್ಯೋಗ, ಬಡತನ, ಅಸಮಾನತೆ ಸೇರಿದಂತೆ ನೂರಾರು ಸಮಸ್ಯೆಗಳ ನಿವಾರಣೆಗೆ ವಿನಿಯೋಗಿಸಬೇಕಿದೆ. ದೇಶ ಮುನ್ನಡೆಸುವ ನಾಯಕರು ಇವುಗಳತ್ತಲೂ ಗಮನಹರಿಸಬೇಕಾದ ಅಗತ್ಯವಿದೆ. ಯಾವಾಗಲೂ ಸಮಾಜವನ್ನು ಒಡೆಯುವ ತಮ್ಮದೆ ಅಜೆಂಡಾಗಳನ್ನು ಅಮಾಯಕರ ಮನಸ್ಸಿನಲ್ಲಿ ಬಿತ್ತುವುದರ ಬದಲು ರಾಷ್ಟ್ರವನ್ನು ಸಾಮರಸ್ಯದತ್ತ ಕೊಂಡೊಯ್ಯಲು ತಮ್ಮ ಅಧಿಕಾರವನ್ನು ಉಪಯೋಗಿಸಬೇಕಿದೆ.      

ಹೆಸರಿಗಷ್ಟೆ ಸ್ವಾವಲಂಬನೆ

ಬಿಜೆಪಿ ಸರ್ಕಾರವು ಕಳೆದ 10 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಾಗಿನಿಂದಲೂ ಎಲ್ಲ ಕ್ಷೇತ್ರಗಳಂತೆ ರಕ್ಷಣಾ ಕ್ಷೇತ್ರದಲ್ಲಿಯೂ ಆತ್ಮನಿರ್ಭರತೆ (ಸ್ವಾವಲಂಬನೆ) ಹೆಚ್ಚಿಸಿಕೊಳ್ಳುವುದಾಗಿ ಪ್ರಚಾರ ಮಾಡುತ್ತಾ ಬಂದಿದೆ. ಆದರೆ ಇವೆಲ್ಲವೂ ಹೆಸರಿಗಷ್ಟೆ ಇದ್ದು, ಸ್ವದೇಶದಲ್ಲಿ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಅಧಿಕೃತವಾಗಿ ಚಾಲನೆಯೆ ದೊರಕಿಲ್ಲ. ಬಹುತೇಕ ವಿದೇಶಿ ಉತ್ಪನ್ನಗಳನ್ನೇ ಆಮದು ಮಾಡಿಕೊಳ್ಳಲಾಗುತ್ತಿದೆ. 2015 ರಿಂದ 2024ರ ವರೆಗೆ ವಿದೇಶದಿಂದ ಶಸ್ತ್ರಾಸ್ತ್ರ ಆಮದು ಕೇವಲ ಶೇ. 9.3 ರಷ್ಟು ಮಾತ್ರ ಕಡಿಮೆಯಾಗಿರುವುದನ್ನು ಬಿಟ್ಟರೆ ಉಳಿದಂತೆ ಯಾವುದೇ ಬದಲಾವಣೆಯಾಗಿಲ್ಲ.    

ಪಾಕ್‌ಗೆ ಚೀನಾದಿಂದ ಶಸ್ತ್ರಾಸ್ತ್ರಗಳ ರಫ್ತು

ಪಾಕಿಸ್ತಾನವು 2015-19 ಹಾಗೂ 2020-24ರ ಅವಧಿಯಲ್ಲಿ ಶೇ. 61ರಷ್ಟು ಯುದ್ಧೋಪಕರಣಗಳನ್ನು ಹೆಚ್ಚಿಸಿಕೊಂಡಿದೆ.  ಚೀನಾವು ಪಾಕ್‌ಗೆ ಸರಬರಾಜು ಮಾಡುವ ಪ್ರಮುಖ ಪೂರೈಕೆದಾರ ರಾಷ್ಟ್ರ. 2020-24ರ ಅವಧಿಯಲ್ಲಿ ಪಾಕ್‌ ಶೇ. 81ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿತ್ತು. 2015-19ರ ವೇಳೆ ಈ ಶೇಕಡವಾರು ಪಾಲು 74ರಷ್ಟಿತ್ತು ಎಂದು ಸಿಪ್ರಿ ವರದಿಯಲ್ಲಿ ಉಲ್ಲೇಖಿಸಿದೆ. 5 ವರ್ಷಗಳ ಅವಧಿಯಲ್ಲಿ ಜಾಗತಿಕ ಶಸ್ತ್ರಗಳ ರಫ್ತಿನಲ್ಲಿ ಅಮೆರಿಕ ಶೇ.43 ರಷ್ಟು ಪಾಲನ್ನು ಹೆಚ್ಚಿಸಿಕೊಂಡರೆ, ರಷ್ಯಾ ಇದೇ ಸಮಯದಲ್ಲಿ ಶೇ.64 ರಷ್ಟು ಕುಸಿತ ಕಂಡಿದೆ. ವಿಶ್ವದ ಎರಡನೇ ಪ್ರಮುಖ ಪೂರೈಕೆದಾರ ರಾಷ್ಟ್ರವಾದ ಫ್ರಾನ್ಸ್‌ ಕೂಡ ಶೇ.9.6 ರಷ್ಟನ್ನು ಇಳಿಕೆ ಕಂಡಿದೆ. ಶಸ್ತ್ರ ರಫ್ತು ಮಾಡಿಕೊಳ್ಳುವ ಮೊದಲ ಹತ್ತು ದೇಶಗಳಲ್ಲಿ ಭಾರತ, ಪಾಕಿಸ್ತಾನ, ಜಪಾನ್‌ ಹಾಗೂ ಆಸ್ಟ್ರೇಲಿಯಾ ಸ್ಥಾನ ಪಡೆದುಕೊಂಡಿದೆ. ರಷ್ಯಾ 2020-24ರವರೆಗೆ ಭಾರತ, ಚೀನಾ ಹಾಗೂ ಕಝಾಕಿಸ್ತಾನ್ ಪ್ರಮುಖ ರಾಷ್ಟ್ರಗಳಾಗಿವೆ. ಇಟಲಿ ರಫ್ತು ಮಾಡುವುದರಲ್ಲಿ ಶೇ. 4.8 ರಷ್ಟು ಪಾಲಿದ್ದು, ಪ್ರಮುಖ ಪೂರೈಕೆ ದೇಶಗಳಲ್ಲಿ 10 ರಿಂದ 6ನೇ ಸ್ಥಾನಕ್ಕೆ ಜಿಗಿದಿದೆ.

ರಷ್ಯಾದೊಂದಿಗೆ ಯುದ್ಧ ಆರಂಭವಾದ ನಂತರ ಉಕ್ರೇನ್‌ಗೆ ಕಳೆದ 4 ವರ್ಷಗಳಲ್ಲಿ 35 ದೇಶಗಳು ಶಸ್ತ್ರಾಸ್ತ್ರಗಳನ್ನು ಪೂರೈಸಿವೆ. ಇದರಲ್ಲಿ ಅಮೆರಿಕ ಶೇ. 45, ಜರ್ಮನಿ ಶೇ.12 ಹಾಗೂ ಪೋಲೆಂಡ್‌ ಶೇ. 11 ರಷ್ಟು ಪಾಲು ಹೊಂದಿದೆ. 2020-24 ರಿಂದ ಆಮದು ಮಾಡಿಕೊಳ್ಳುವ ಮೊದಲ 10 ದೇಶಗಳಲ್ಲಿ ಯುರೋಪ್‌ ರಾಷ್ಟ್ರಗಳಲ್ಲಿ ಯುದ್ದೋಪಕರಣಗಳನ್ನು ರಫ್ತು ಮಾಡಿಕೊಂಡ ಏಕೈಕ ರಾಷ್ಟ್ರ ಉಕ್ರೇನ್. ಕುತೂಹಲಕರ ವಿಷಯವೆಂದರೆ ರಷ್ಯಾ ಕೂಡ ಉಕ್ರೇನ್‌ ನಡುವಿನ ಯುದ್ಧದ ಸಂದರ್ಭದಲ್ಲಿ ಉತ್ತರ ಕೊರಿಯಾದಿಂದ ಫಿರಂಗಿ ಮತ್ತು ಕ್ಷಿಪಣಿಗಳನ್ನು ರಫ್ತು ಮಾಡಿಕೊಂಡು ವಿಶ್ವಸಂಸ್ಥೆಯ ನಿರ್ಬಂಧಗಳನ್ನು ಉಲ್ಲಂಘಿಸಿದೆ.

ಮಧ್ಯಪ್ರಾಚ್ಯದಲ್ಲಿ ಕಡಿಮೆ, ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚು

ಜಾಗತಿಕವಾಗಿ ಯುದ್ದೋಪಕರಣಗಳನ್ನು ಆಮದು ಮಾಡಿಕೊಳ್ಳುವ ಮೊದಲ ಹತ್ತು ರಾಷ್ಟ್ರಗಳಲ್ಲಿ ಮಧ್ಯಪ್ರಾಚ್ಯದ ಕತಾರ್‌, ಸೌದಿ ಅರೇಬಿಯಾ, ಈಜಿಫ್ಟ್‌ ಮತ್ತು ಕುವೈತ್‌ ದೇಶಗಳಿದ್ದರೂ ಶೇಕಡಾವಾರು ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. 2015–19 ಮತ್ತು 2020–24ರ ನಡುವೆ ಮಧ್ಯಪ್ರಾಚ್ಯದ ದೇಶಗಳ ಶಸ್ತ್ರಾಸ್ತ್ರ ಆಮದು ಶೇ. 20 ರಷ್ಟು ಇಳಿಕೆಯಾಗಿದೆ. ಇದೇ ಸಂದರ್ಭದಲ್ಲಿ ಅಭದ್ರತೆಯ ಕಾರಣದಿಂದ ಕಳೆದ 15 ವರ್ಷಗಳಿಂದ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಶಸ್ತ್ರಾಸ್ತ್ರ ಆಮದುಗಳಲ್ಲಿ ಭಾರಿ ಹೆಚ್ಚಳಗೊಂಡಿದೆ. 2010–14 ಮತ್ತು 2020–24ರ ಅವಧಿಯಲ್ಲಿ ಪಶ್ಚಿಮ ಆಫ್ರಿಕಾದ ರಾಷ್ಟ್ರಗಳ ಒಟ್ಟು ಶಸ್ತ್ರಾಸ್ತ್ರ ಆಮದು ಬಹುತೇಕ ದ್ವಿಗುಣಗೊಂಡಿದೆ. ಬುರ್ಕಿನಾ ಫಾಸೊ, ಮಾಲಿ ಮತ್ತು ಸೆನೆಗಲ್‌ನಂತಹ ದೇಶಗಳು ತಮ್ಮ ಆಮದುಗಳನ್ನು ವೇಗವಾಗಿ ಹೆಚ್ಚಿಸಿಕೊಳ್ಳುತ್ತಿವೆ. ಅಮೆರಿಕ, ಚೀನಾ, ಫ್ರಾನ್ಸ್, ರಷ್ಯಾ ಪಶ್ಚಿಮ ಆಫ್ರಿಕಾ ದೇಶಗಳ ರಫ್ತು ರಾಷ್ಟ್ರಗಳಾಗಿವೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X