ಅಸ್ಸಾಂ ಬ್ಯಾಂಕ್ ಸಂಬಂಧಿತ‌ ಹಗರಣದಲ್ಲಿ ಸಿಎಂ ಹೆಸರು: ವರದಿ ಮಾಡಿದ್ದ ಪತ್ರಕರ್ತನ ಬಂಧನ

Date:

Advertisements
ಅಸ್ಸಾಂ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಭಾಗಿಯಾಗಿದ್ದರೆಂದು ಪತ್ರಕರ್ತ ದಿಲ್ವಾರ್ ಹುಸೇನ್ ವರದಿ ಮಾಡಿದ್ದರು. ಈಗ ಹುಸೇನ್ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿ ಬಂಧಿಸಲಾಗಿದೆ...

ಅಸ್ಸಾಂ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿನ ಆರ್ಥಿಕ ಅಕ್ರಮಗಳ ವಿರುದ್ಧ ವರದಿ ಮಾಡಿದ್ದ ‘ದಿ ಕ್ರಾಸ್ ಕರೆಂಟ್’ ಎಂಬ ಡಿಜಿಟಲ್ ಸುದ್ದಿ ಸಂಸ್ಥೆಯ ಮುಖ್ಯ ವರದಿಗಾರ ದಿಲ್ವಾರ್ ಹುಸೇನ್ ಮಜುಂದಾರ್ ಎಂಬುವವರನ್ನು ವರದಿ ಮಾಡಲು ತೆರಳಿದ್ದಾಗ ಸುಳ್ಳು ಆರೋಪಗಳನ್ನು ಹೊರೆಸಿ ಅಸ್ಸಾಂ ಪೊಲೀಸರು ಬಿಜೆಪಿ ಸರ್ಕಾರದ ನಿರ್ದೇಶನದ ಮೇರೆಗೆ ಬಂಧಿಸಿದ್ದರು. ಮಜುಂದಾರ್ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ವಿವಿಧ ಆರೋಪಗಳನ್ನೂ ಹೊರಿಸಲಾಗಿದೆ. ಹಗರಣದಲ್ಲಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಭಾಗಿಯಾಗಿದ್ದಾರೆ ಎಂದು ದಿಲ್ವಾರ್ ಹುಸೇನ್ ಮಜುಂದಾರ್ ಅವರು ತಮ್ಮ ವರದಿಗಳಲ್ಲಿ ಪ್ರಕಟಿಸುತ್ತಿದ್ದರು. ತಮ್ಮ ಮೇಲಿನ ಆರೋಪಗಳನ್ನು ಸಹಿಸದ ಕೇಸರಿ ಪಕ್ಷದ ಮುಖ್ಯಮಂತ್ರಿ ಕೇಂದ್ರ ಸರ್ಕಾರ ಹಾಗೂ ಇತರ ಬಿಜೆಪಿ ರಾಜ್ಯ ಸರ್ಕಾರಗಳ ರೀತಿ ಅನ್ಯಾಯವನ್ನು ಜನರಿಗೆ ತಿಳಿಸಲು ಉಳಿದುಕೊಂಡಿರುವ ಕೆಲವೇ ಕೆಲವು ಮಾಧ್ಯಮಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ.

ದಿಲ್ವಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಅಸ್ಸಾಂನ ಪತ್ರಕರ್ತರ ವಿವಿಧ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿವೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕೂಡ ಖಂಡಿಸಿದೆ. ಪತ್ರಕರ್ತರನ್ನು ತನ್ನ ಅಧಿಕೃತ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯುವುದು ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಪತ್ರಿಕಾ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆಯಾಗಿದೆ ಎಂದು ಎಡಿಟರ್ಸ್ ಗಿಲ್ಡ್‌ ಆಕ್ರೋಶ ವ್ಯಕ್ತಪಡಿಸಿದೆ. ದೌರ್ಜನ್ಯ ತಡೆ ಕಾಯ್ದೆಯ ಪ್ರಕರಣದಲ್ಲಿ ಪೊಲೀಸರು ದೂರುದಾರರ ಹೆಸರನ್ನು ಬಹಿರಂಗಪಡಿಸಿಲ್ಲ ಮತ್ತು ಆಪಾದಿತ ನಡೆಸಿರುವ ತಪ್ಪಿನ ಕುರಿತು ವಿವರಗಳನ್ನು ನೀಡಿಲ್ಲ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಪ್ರತಿಭಟಿಸಿದೆ.

ಅಸ್ಸಾಂ ಮಹಿಳಾ ಪತ್ರಕರ್ತರ ವೇದಿಕೆ ಮಜುಂದಾರ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದು, ”ಅಕ್ರಮ ಬಂಧನವು ಪತ್ರಕರ್ತರಲ್ಲಿ ಮತ್ತಷ್ಟು ಕಳವಳವನ್ನು ಉಂಟುಮಾಡಿದೆ. ತನಿಖಾ ವರದಿಯ ಬಗ್ಗೆ ಉತ್ತರಗಳನ್ನು ಹುಡುಕುತ್ತಾ ತನ್ನ ಕೆಲಸವನ್ನು ಮಾಡಿದ್ದಕ್ಕಾಗಿ ಪತ್ರಕರ್ತನನ್ನು ಬಂಧಿಸುವುದು ಪ್ರಜಾಪ್ರಭುತ್ವದ ತತ್ವಗಳು ಮತ್ತು ಪತ್ರಿಕಾ ಮಾಧ್ಯಮವನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ಹೇಳಿದೆ.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯತ್ನಾಳ್, ಬಾಳೆ ಎಲೆ ಮತ್ತು ವಸಿಷ್ಠ-ವಾಲ್ಮೀಕಿಯರು

ನ್ಯಾಯಯುತವಾಗಿ ಮತ್ತು ಜವಾಬ್ದಾರಿಯುತವಾಗಿ ವರದಿ ಮಾಡುವುದು ಮಾಧ್ಯಮಗಳ ಕರ್ತವ್ಯವಾಗಿದೆ. ಆದರೆ ಪತ್ರಕರ್ತರು ಬೆದರಿಕೆ ಅಥವಾ ಅಡಚಣೆಯಿಲ್ಲದೆ ತಮ್ಮ ಕೆಲಸವನ್ನು ನಿರ್ವಹಿಸಬಹುದೆಂದು ಖಚಿತಪಡಿಸುವುದು ಅಸ್ಸಾಂ ಸೇರಿದಂತೆ ಎಲ್ಲ ಸರ್ಕಾರಗಳ ಹೊಣೆಯಾಗಿದೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸತ್ಯವನ್ನು ಹೇಳುವ ಪತ್ರಕರ್ತರು, ಅಲ್ಪಸಂಖ್ಯಾತರು ಹಾಗೂ ಅವ್ಯವಸ್ಥೆಯನ್ನು ಟೀಕಿಸುವವರನ್ನು ದಮನಿಸುವ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರಾಜ್ಯವನ್ನು ಜಂಗಲ್‌ ರಾಜ್‌ ಆಗಿ ಮಾರ್ಪಡಿಸುತ್ತಿದ್ದಾರೆ ಎಂದು ಹಲವು ನಾಗರಿಕ ವೇದಿಕೆಗಳು ಆತಂಕ ವ್ಯಕ್ತಪಡಿಸಿವೆ.

ದಿಲ್ವಾರ್ ಹುಸೇನ್ ಅಸ್ಸಾಂ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ನಡೆಯುತ್ತಿರುವ ಹಗರಣದ ಬಗ್ಗೆ ಹಲವು ದಿನಗಳಿಂದ ವರದಿ ಮಾಡುತ್ತಿದ್ದರು. ಈ ಬ್ಯಾಂಕಿನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಿರ್ದೇಶಕ ಸ್ಥಾನ ಹೊಂದಿದ್ದರೆ, ಬಿಜೆಪಿ ಶಾಸಕರೊಬ್ಬರು ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ಬ್ಯಾಂಕ್‌ನ ವ್ಯವಹಾರ ನಿರ್ವಹಿಸುತ್ತಿರುವ ಕೆಲವು ಸಂಸ್ಥೆಗಳು ಅಧಿಕೃತ ವ್ಯವಹಾರವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಇದು ಗಂಭೀರ ವಿಷಯವಾಗಿದ್ದು, ಬ್ಯಾಂಕ್‌ನಲ್ಲಿ ಹಣ ತೊಡಗಿಸಿರುವ ನೂರಾರು ಖಾತೆದಾರರ ಆರ್ಥಿಕ ಭದ್ರತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ ಎಂದು ಹಲವು ಅಂಶಗಳನ್ನು ಬಯಲಿಗೆಳೆದಿದ್ದರು.

ಇದರ ಜೊತೆಗೆ, ಬ್ಯಾಂಕಿಂಗ್ ಮೂಲಸೌಕರ್ಯ ಒಪ್ಪಂದಗಳ ವೆಚ್ಚದಲ್ಲಿ ಗಮನಾರ್ಹ ಮತ್ತು ಅನಗತ್ಯ ಹೆಚ್ಚಳ ಕಂಡುಬಂದಿದ್ದು, 2018ರಲ್ಲಿ 28 ಕೋಟಿ ರೂ.ಗಳಿಂದ 2025ರಲ್ಲಿ ಸುಮಾರು 50 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇವೆಲ್ಲ ಅಕ್ರಮಗಳನ್ನು ದಿಲ್ವಾರ್ ಹುಸೇನ್ ಸರಣಿ ರೀತಿಯಲ್ಲಿ ವರದಿ ಮಾಡಿದ್ದರು. ಹಗರಣದ ಬಗ್ಗೆ ರಾಷ್ಟ್ರೀಯ ಯುವ ಶಕ್ತಿ ವೇದಿಕೆ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯನ್ನು ವರದಿ ಮಾಡಲು ದಿಲ್ವಾರ್ ಅವರು ತೆರಳಿದ್ದಾಗ ಯಾವುದೇ ಸ್ಪಷ್ಟ ಕಾರಣ ನೀಡದೆ ಬಂಧಿಸಲಾಗಿತ್ತು.

ಅಸ್ಸಾಂ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ಹಲವು ಅಕ್ರಮಗಳು ನಡೆಯುತ್ತಿರುವ ಕಾರಣ ಬ್ಯಾಂಕ್‌ನಲ್ಲಿ ಹಣ ತೊಡಗಿಸಿರುವ ಖಾತೆದಾರರ ಆರ್ಥಿಕ ಭವಿಷ್ಯ ಅಪಾಯದಲ್ಲಿದೆ. ಆದರೂ ಸರ್ಕಾರ ಮೌನವಾಗಿದ್ದು, ಸತ್ಯ ಹೇಳುವವರನ್ನೆ ಬೆದರಿಸುವ ಮೂಲಕ ಸದ್ದಡಗಿಸಲಾಗುತ್ತಿದೆ. ದಿಲ್ವಾರ್ ಹುಸೇನ್ ಕೂಡ ಸಾರ್ವಜನಿಕ ನಂಬಿಕೆಗೆ ದ್ರೋಹ ಬಗೆದವರಿಗೆ ನಿಷ್ಪಕ್ಷಪಾತ ತನಿಖೆ ಮತ್ತು ಕಠಿಣ ಶಿಕ್ಷೆ ವಿಧಿಸಬೇಕೆಂದು ವರದಿಯಲ್ಲಿ ಒತ್ತಾಯಿಸುತ್ತಾ ಬಂದಿದ್ದರು. ಇವರಿಗೆ ಬೆಂಬಲವಾಗಿ ರಾಷ್ಟ್ರೀಯ ಯುವ ಶಕ್ತಿ ವೇದಿಕೆ ಸೇರಿದಂತೆ ಹಲವು ನಾಗರಿಕ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದವು.

ನಿಜವನ್ನು ಸಹಿಸದ ಭಾರತೀಯ ಜನತಾ ಪಕ್ಷದ ಸರ್ಕಾರ ದಿಲ್ವಾರ್ ಹುಸೇನ್ ಅವರನ್ನು ಸೆರೆಮನೆಯಲ್ಲಿಡಲು ಪ್ರಯತ್ನಿಸುತ್ತಿದೆ. ಬಂಧನದ ಬಗ್ಗೆ ಸ್ವತಃ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದು, ದಿಲ್ವಾರ್‌ ಪತ್ರಕರ್ತನೆ ಅಲ್ಲ, ಆತ ಬೇರೆ ಉದ್ಯೋಗ ಮಾಡಿಕೊಂಡಿದ್ದಾನೆ ಎಂದು ಸತ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಹಿಮಂತ ನೇತೃತ್ವದ ಬಿಜೆಪಿ ಸರ್ಕಾರ ಅಸ್ಸಾಂನಲ್ಲಿ ಅಧಿಕಾರ ಪಡೆದ ದಿನದಿಂದಲೂ ಧರ್ಮಾಧಾರಿತ ರಾಜಕಾರಣ ಮಾಡ ಹೊರಟಿದೆ. ಅಲ್ಪಸಂಖ್ಯಾತರ ವಿರುದ್ಧದ ಹಲವು ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದ್ದು, ಅವರನ್ನು ಅಭದ್ರತೆಯ ಸ್ಥಿತಿಯಲ್ಲಿ ತಳ್ಳಲಾಗುತ್ತಿದೆ. ಇವೆಲ್ಲ ಅನ್ಯಾಯಗಳಿಗೆ ಮುಂದಿನ ದಿನಗಳಲ್ಲಿ ಅಸ್ಸಾಂ ಜನರೆ ಧರ್ಮಭೇದ ಮರೆತು ಹಿಮಂತ ಅವರಿಗೆ ಬುದ್ಧಿ ಕಲಿಸುವ ದಿನ ದೂರವಿಲ್ಲ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X