ಜಸ್ಟಿಸ್ ದಾಸ್ ವರದಿ | ಬಲಗೈ ಸಹೋದರರಿಗೆ ಅಸಲಿಯಾಗಿ ಸಿಕ್ಕಿದ್ದು 6.5% ಮೀಸಲಾತಿ!

Date:

Advertisements
ನಾಗಮೋಹನ ದಾಸ್ ಅವರು 'ಸಂವಿಧಾನ ಓದು' ಎಂಬ ಅಭಿಯಾನವನ್ನು ನಡೆಸಿ ಮನೆಮನೆಗೆ ಬಾಬಾಸಾಹೇಬರ ಆಶಯಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ. ಬಲಗೈ ಜಾತಿಗಳಿಗೆ ಒಟ್ಟಾರೆಯಾಗಿ 6.5ರಷ್ಟು ಮೀಸಲಾತಿಯನ್ನು ಒದಗಿಸಿದ್ದಾರೆ.

“ನಮಗೆ ಒಳಮೀಸಲಾತಿ ಹಂಚಿಕೆಯಲ್ಲಿ ಮೋಸವಾಗಿದೆ, ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಆಯೋಗವು ವಂಚಿಸಿದೆ” ಎಂದು ಹೊಲೆಯ (ಬಲಗೈ) ಸಮುದಾಯ ಹೋರಾಟಕ್ಕೆ ಇಳಿದಿದೆ. ಆದರೆ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂಬ ಸಂಗತಿ ನ್ಯಾಯಮೂರ್ತಿ ದಾಸ್ ಅವರ ಆಯೋಗದ ವರದಿಯ ಅಂಕಿ-ಅಂಶಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಹೊಲೆಯ ಮತ್ತು ಅದಕ್ಕೆ ಸಂಬಂಧಿಸಿದ ಜಾತಿಗಳಿಗೆ ವಾಸ್ತವದಲ್ಲಿ ದಕ್ಕಿರುವುದು ಶೇ.5ರಷ್ಟು ಮೀಸಲಾತಿಯಲ್ಲ, ಬದಲಾಗಿ ಶೇ. 6.5 ಎಂಬುದನ್ನು ಗಮನಿಸಬೇಕಾಗುತ್ತದೆ. ಹೊಲೆಯ ಸಮುದಾಯದ ವಾದವನ್ನೇ ಮುಂದಿಟ್ಟುಕೊಂಡು ಕೂಲಂಕಷವಾಗಿ ನೋಡಿದರೆ ಮೀಸಲಾತಿಯ ಪ್ರಮಾಣ ಅರ್ಥವಾಗುತ್ತದೆ.

ಒಮ್ಮೆ ಅಂಕಿ- ಅಂಶಗಳನ್ನು ನೋಡೋಣ. ಜಸ್ಟಿಸ್ ದಾಸ್ ಆಯೋಗದ ವರದಿ ಪ್ರಕಾರ ಮಾದಿಗರ ಜನ ಸಂಖ್ಯೆ 27,73,780. ಹೊಲೆಯರ ಸಂಖ್ಯೆ 24,72,103. ವ್ಯತ್ಯಾಸವೆಷ್ಟು?- 3,01,677. ನಿಮಗೆಲ್ಲ ಗೊತ್ತಿರುವಂತೆ 5 ವರ್ಗಗಳಾಗಿ ಜಸ್ಟಿಸ್ ದಾಸ್ ಅವರು ಪರಿಶಿಷ್ಟರ ಮೀಸಲಾತಿಯನ್ನು ಹಂಚಿಕೆ ಮಾಡಿದ್ದಾರೆ. ಪ್ರವರ್ಗ Bನಲ್ಲಿ, ಅಂದರೆ ಮಾದಿಗರು ಹೆಚ್ಚಿರುವ ಗುಂಪಿನಲ್ಲಿ 36,69,246 ಜನ ಇದ್ದಾರೆ. ಪ್ರವರ್ಗ– Cನಲ್ಲಿ, ಅಂದರೆ ಹೊಲೆಯರು ಹೆಚ್ಚಿರುವ ಗುಂಪಿನಲ್ಲಿ 30,08,633 ಜನ ಇದ್ದಾರೆ. ವ್ಯತ್ಯಾಸ ಎಷ್ಟು?- 6,60,613. ಪ್ರವರ್ಗ– Bನಲ್ಲಿ 34.91% ಜನ ಇದ್ದಾರೆ, ಅವರಿಗೆ ಶೇ. 6ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಪ್ರವರ್ಗ – Cನಲ್ಲಿ 28.63% ಜನ ಇದ್ದಾರೆ, 5 ಪರ್ಸೆಂಟ್ ಮೀಸಲಾತಿ ಕೊಟ್ಟಿದ್ದಾರೆ. ತಮ್ಮ ಪಾಲು ಕಡಿಮೆಯಾಗಿದೆ ಎಂಬ ಕೂಗು ಹೊಲೆಯ ಸಮುದಾಯದಿಂದ ಎದ್ದಿದೆ.

ಇದನ್ನೂ ಓದಿರಿ: ಜಸ್ಟಿಸ್ ದಾಸ್ ವರದಿ ಸುಟ್ಟು ಹಾಕಿದ್ದು ದುರದೃಷ್ಟಕರ: ಕೋಟಿಗಾನಹಳ್ಳಿ ರಾಮಯ್ಯ

Advertisements

ಬಲಗೈ ಜಾತಿಗಳ ಒಕ್ಕೂಟದ ಪ್ರತಿಪಾದನೆ ಹೇಗೆ ತಪ್ಪಾಗಿದೆ ಎಂದು ಚರ್ಚಿಸುವ ಅಗತ್ಯವಿದೆ. “A ಗುಂಪಿನ 59 ಜಾತಿಗಳಲ್ಲಿ 16 ಜಾತಿಗಳನ್ನು ಅಂದರೆ 1,38,653 ಜನರನ್ನು; B ಗುಂಪಿನ 18 ಜಾತಿಗಳಲ್ಲಿ 4 ಜಾತಿಗಳನ್ನು ಅಂದರೆ 2,58,915 ಜನರನ್ನು; C ಗುಂಪಿನಲ್ಲಿರುವ 17 ಜಾತಿಗಳನ್ನು ಅಂದರೆ 30,08,633 ಜನರನ್ನು; E ಗುಂಪಿನ 3 ಜಾತಿಗಳನ್ನು ಅಂದರೆ 4,74,954 ಜನರನ್ನು ಒಟ್ಟು ಸೇರಿಸಿದರೆ ನಾವು 40 ಜಾತಿಗಳಾಗುತ್ತೇವೆ. ನಮ್ಮ ಸಂಖ್ಯೆ 38,81,155 ಆಗುತ್ತದೆ” ಎಂಬುದು ಇವರ ವಾದ. ಆದರೆ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಜನಸಂಖ್ಯೆ ಆಧಾರದಲ್ಲಿ ವಿಂಗಡಣೆ ಮಾಡಲು ಬರುವುದಿಲ್ಲ. ಅದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ. ಹಾಗೇನಾದರೂ ಸೇರಿಸಿದರೆ ಮಂಡಲ್ ಆಯೋಗ ತಿಳಿಯಪಡಿಸಿರುವ, “ಸಮಾನರಲ್ಲಿ ಮಾತ್ರ ಸಮಾನತೆ ಇರುತ್ತದೆ. ಅಸಮಾನರನ್ನು ಸಮಾನರ ಜೊತೆ ಸರಿಸಮ ಎಂದು ಸೇರಿಸಿದರೆ ಅಲ್ಲಿ ಅಸಮಾನತೆ ಮುಂದುವರಿಯುತ್ತದೆ” ಎಂಬ ತತ್ವಕ್ಕೆ ವಿರುದ್ಧವಾಗುತ್ತದೆ. ಅಂದರೆ ಎಲ್ಲ ಜಾತಿಗಳು ಒಂದೇ ಸಮನಾದ ಅವಕಾಶಗಳನ್ನು ಪಡೆದಿರುವುದಿಲ್ಲ. ಹೀಗಾಗಿ ಎಲ್ಲರನ್ನೂ ಒಂದೇ ಗುಂಪಿಗೆ ಹಾಕಲು ಸಾಧ್ಯವಿಲ್ಲ. ಪ್ರವರ್ಗ-A ಯಲ್ಲಿರುವ 16 ಜಾತಿಗಳು ಮತ್ತು ಪ್ರವರ್ಗ-E ಯಲ್ಲಿರುವ 3 ಜಾತಿಗಳನ್ನು ಬಲಗೈ ಜಾತಿಗಳಿಗೆ ಸೇರಿಸಬೇಕು ಎಂಬ ಬೇಡಿಕೆ ತಪ್ಪಾಗುತ್ತದೆ.

ವಾಸ್ತವದಲ್ಲಿ ನಮ್ಮ ಹೊಲೆಯ ಸಹೋದರರಿಗೆ ಶೇ. 6.5ರಷ್ಟು ಮೀಸಲಾತಿ ಸಿಗುತ್ತದೆ ಎಂಬುದು ಸತ್ಯ. ಪ್ರವರ್ಗ-A ಯಲ್ಲಿರುವ 16 ಜಾತಿಗಳಿಗೆ ಅದೇ ವರ್ಗದಲ್ಲಿ 0.5 ಮೀಸಲಾತಿಯಾದರೂ ದಕ್ಕುತ್ತದೆ. ಪ್ರವರ್ಗ-Eಯಲ್ಲಿರುವ 3 ಜಾತಿಗಳಿಗೆ ಮೀಸಲಾತಿಯ ಪ್ರಮಾಣ 1 ರಷ್ಟು ಸಿಗುತ್ತದೆ. ಪ್ರವರ್ಗ-A 0.5, ಪ್ರವರ್ಗ ಸಿ- 5.0, ಪ್ರವರ್ಗ E – 1 ಪರ್ಸೆಂಟ್ ಒಟ್ಟಾಗಿ ಸೇರಿಸಿದರೆ 6.5 ಪರ್ಸೆಂಟ್ ಮೀಸಲಾತಿ ಆಗುತ್ತದೆ. ಹೊಲೆಯ ಗುಂಪಿಗೆ ಎಲ್ಲಿ ಅನ್ಯಾಯವಾಗಿದೆ? ಜಸ್ಟಿಸ್ ದಾಸ್ ಅವರು ದ್ರೋಹ ಮಾಡಿದ್ದಾರೆ ಎನ್ನುತ್ತಿರುವವರು ಇದನ್ನು ಗಮನಿಸಬೇಕು. ದಾಸ್ ಅವರು ‘ಸಂವಿಧಾನ ಓದು’ ಎಂಬ ಅಭಿಯಾನವನ್ನು ನಡೆಸಿ ಮನೆಮನೆಗೆ ಬಾಬಾಸಾಹೇಬರ ಆಶಯಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ. ಬಲಗೈ ಜಾತಿಗೆ ಒಟ್ಟು 6.5ರಷ್ಟು ಒಳಮೀಸಲಾತಿಯನ್ನು ಜಸ್ಟಿಸ್ ದಾಸ್ ಅವರು ಒದಗಿಸಿರುವುದನ್ನು ಗಮನಿಸಬೇಕು.

ಇದನ್ನೂ ಓದಿರಿ: ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಮೊದಲೇ ಹೇಳಿದಂತೆ ಮಂಡಲ್ ಆಯೋಗ ತಿಳಿಯಪಡಿಸಿರುವುದು “ಸಮಾನರಲ್ಲಿ ಮಾತ್ರ ಸಮಾನತೆ ಇರುತ್ತದೆ. ಅಸಮಾನರನ್ನು ಸಮಾನರ ಜೊತೆ ಸರಿಸಮ ಎಂದು ಸೇರಿಸಿದರೆ ಅಲ್ಲಿ ಅಸಮಾನತೆ ಮುಂದುವರೆಯುತ್ತದೆ”. ಹೀಗಾಗಿ ಪರಯರನ್ನು ಹೊಲೆಯರೊಂದಿಗೆ ಸೇರಿಸಬೇಕೆಂಬ ಆಗ್ರಹ ಒಪ್ಪಲಾಗುವುದಿಲ್ಲ. ಹೊಲೆಯ ಜನಸಂಖ್ಯೆ 24,72,103, ಅದರಲ್ಲಿ ಸರ್ಕಾರಿ ಉದ್ಯೋಗ ಪಡೆದವರು- 34,206, ಅಂದರೆ ಒಂದು ಲಕ್ಷ ಹೊಲೆಯರಲ್ಲಿ 1,400 ಜನ ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಮಾದಿಗರು 27,73,780 ಜನರಿದ್ದಾರೆ. ಸರ್ಕಾರಿ ಉದ್ಯೋಗಪಡೆದವರು 21,682, ಅಂದರೆ ಒಂದು ಲಕ್ಷ ಮಾದಿಗರಲ್ಲಿ 560 ಜನರಷ್ಟೇ ಉದ್ಯೋಗ ಪಡೆದಿದ್ದಾರೆ. ಈಗ ಪರಿಯನ್, ಪರಯ ಜಾತಿಗೆ ಬರೋಣ. ಅವರ ಸಂಖ್ಯೆ 1,61,164. ಈವರೆಗೆ ಸರ್ಕಾರಿ ಉದ್ಯೋಗ ಪಡೆದವರು 498 ಜನ. ಅಂದರೆ ಲಕ್ಷಕ್ಕೆ 322 ಜನ. ಒಂದು ಲಕ್ಷ ಜನರ ಪೈಕಿ 1,400 ಸರ್ಕಾರಿ ಉದ್ಯೋಗ ಪಡೆದ ಹೊಲೆಯರೊಂದಿಗೆ, ಒಂದು ಲಕ್ಷ ಜನರಲ್ಲಿ 322 ಉದ್ಯೋಗ ಪಡೆದ ಪರಯರು ಸ್ಪರ್ಧಿಸಲು ಸಾಧ್ಯವೇ? ಹೀಗಾಗಿ 560 ಉದ್ಯೋಗ ಪಡೆದ ಮಾದಿಗರೊಂದಿಗೆ ಅವರು ಸ್ಪರ್ಧಿಸುವುದೇ ನ್ಯಾಯೋಚಿತವಾಗುತ್ತದೆ. ಪರಯರನ್ನು ಮಾದಿಗರೊಂದಿಗೆ ಸೇರಿಸಿರುವುದು ಎಲ್ಲ ವಿಧದಲ್ಲೂ ಸರಿ ಇದೆ. ಒಂದು ವೇಳೆ ಪರಯರನ್ನು ಹೊಲೆಯರು ಹೆಚ್ಚಿರುವ ಗುಂಪಿಗೆ ಹಾಕಿದರೆ ಅವರೊಂದಿಗೆ ಸ್ಪರ್ಧೆ ಕಷ್ಟವಾಗುತ್ತದೆ.

ಜಸ್ಟಿಸ್ ದಾಸ್ ಅವರ ವರದಿಯನ್ನು ಸುಡುವುದಾಗಲೀ, ಹರಿದುಹಾಕುವುದಾಗಲೀ ಸರಿಯಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಇದು ಸಾಮಾಜಿಕ, ಆರ್ಥಿಕ ಸ್ಥಿತಿಯ ಆಧಾರದಲ್ಲಿ ಮಾಡಿರುವ ವಿಂಗಡಣೆ. ನಾಳೆ (ಶುಕ್ರವಾರ) ಮಾದಿಗ ಸಮುದಾಯದ ಬಂಧುಗಳು ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಘೇರಾವ್ ಹಾಕುವ ಹೋರಾಟ ಹಮ್ಮಿಕೊಂಡಿದ್ದಾರೆ. ನೀವೆಲ್ಲರೂ ಸೇರಿಕೊಂಡು ಈ ಒಳಮೀಸಲಾತಿಗಾಗಿ ಒತ್ತಾಯಿಸಬೇಕಾಗಿದೆ. ವಿವಿಧ ಪ್ರವರ್ಗಗಳಲ್ಲಿ ಸಿಗುತ್ತಿರುವ ಶೇ. 6.5ರಷ್ಟು ಮೀಸಲಾತಿಯನ್ನು ಪಡೆಯಲು ಹೋರಾಡಬೇಕಾಗಿದೆ. ನಾಳೆಯ ಪ್ರತಿಭಟನೆಯಲ್ಲಿ ಭಾಗಿಯಾಗುವುದು ನಿಮ್ಮ ಹೊಣೆಗಾರಿಕೆಯೂ ಆಗುತ್ತದೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ, ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ನಿಷೇಧಾಜ್ಞೆ ಜಾರಿ

ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ...

Download Eedina App Android / iOS

X