ಮಣಿಪುರ | ಬೀದಿ ಬೀದಿಯಲ್ಲಿ ಭಾರತ ಮಾತೆಯನ್ನು ಬೆತ್ತಲಾಗಿಸುವುದು ಸರಿಯೇ… ಪ್ರಧಾನಿಗಳೇ?

Date:

Advertisements
ಮಹಿಳೆಯರ ದೇಹಗಳು ರಾಜಕೀಯದ ಯುದ್ಧ ಭೂಮಿಗಳಲ್ಲ. ಅವಳ ಘನತೆ, ಗೌರವವನ್ನು ಕಾಯುವುದು ಸರ್ಕಾರದ ಕರ್ತವ್ಯವಾಗಿದೆ. ಗುಜರಾತಿನ ದಂಗೆಗಳಲ್ಲಿ ಅತ್ಯಾಚಾರ-ಕೊಲೆ ಮಾಡಿದ ಅಪರಾಧಿಗಳು ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ ಬರುತ್ತಾರೆ. ಕಂಕುಳಲ್ಲಿದ್ದ ಮಕ್ಕಳನ್ನೂ ಬಿಡದೆ 14 ಜನರನ್ನು ಕೊಂದ ಕೊಲೆಗಡುಕರನ್ನು ಹೂಮಾಲೆ ಹಾಕಿ, ಸಿಹಿ ತಿನ್ನಿಸುವ ಸರ್ಕಾರದಿಂದ ಮಣಿಪುರದ ಮಹಿಳೆಯರಿಗೆ ನ್ಯಾಯ ಸಿಗುವುದೇ? 

ಮಣಿಪುರದಲ್ಲಿ ಎರಡೂವರೆ ತಿಂಗಳಿಂದಲೂ ಮಾನವ ಹಕ್ಕುಗಳ ದಮನ ನಡೆಯುತ್ತಿದೆ. ಮಹಿಳೆಯರನ್ನು ನಗ್ನಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಲಾಗುತ್ತಿದೆ. ಅತ್ಯಾಚಾರದಂತಹ ಹೀನ ಅಪರಾಧ ಎಸಗಲಾಗುತ್ತಿದೆ. ಡಬ್ಬಲ್ ಎಂಜಿನ್ ಸರ್ಕಾರ ಇದ್ದರೆ ಅಲ್ಲಿಯ ಜನರಿಗೆ ದಿನವೂ ಹಬ್ಬ, ಅವರು ಸುಖವಾಗಿರ್ತಾರೆ ಎಂಬ ಮೋದಿಯವರ ಹೇಳಿಕೆ ಎಂತಹ ವ್ಯಂಗ್ಯ!

ಮಣಿಪುರ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಮಣಿಪುರ ಎರಡು ತಿಂಗಳಿನಿಂದ ಯಾಕೆ ಹೊತ್ತಿ ಉರಿಯುತ್ತಿದೆ? ಚುನಾವಣೆಗಳನ್ನು ಮುಂದಿಟ್ಟಕೊಂಡು ಯಾವ ರೀತಿ ಬಿಜೆಪಿ ಅಲ್ಲಿನ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂಬುದಕ್ಕೆ ಮಣಿಪುರದ ಘಟನೆಗಳೇ ಸಾಕ್ಷಿಯಾಗಿವೆ. ಎರಡೂವರೆ ತಿಂಗಳಾದರೂ ದೇಶದ ಪ್ರಧಾನಿ ಮೋದಿಯವರಾಗಲಿ, ಮಣಿಪುರದ ಮುಖ್ಯಮಂತ್ರಿ ಬಿರೇನ್‍ಸಿಂಗ್ ಆಗಲಿ ಅಲ್ಲಿ ಶಾಂತಿ ಸ್ಥಾಪಿಸುವ ಕೆಲಸ ಮಾಡಿಲ್ಲ. ಕೇಂದ್ರ ಗೃಹ ಇಲಾಖೆ ನಿದ್ದೆ ಹೋಗಿದೆ. ಅಲ್ಲಿಯ ಆಡಳಿತ ಸಂಪೂರ್ಣ ಕುಸಿದಿದೆ. ಮೇ 3ರಿಂದಲೂ ಮಣಿಪುರದಲ್ಲಿ ದೊಂಬಿಗಳು ಭುಗಿಲೆದ್ದಿವೆ. ಸಶಸ್ತ್ರ ಹೋರಾಟ, ದೊಂಬಿ, ಕೊಲೆಗಳು ಇಡೀ ಮಣಿಪುರ ರಾಜ್ಯವನ್ನು ವ್ಯಾಪಿಸಿವೆ. ಸುಮಾರು 200ಕ್ಕೂ ಹೆಚ್ಚು ಚರ್ಚುಗಳು, 17ಕ್ಕೂ ಹೆಚ್ಚು ದೇವಾಲಯಗಳು, ನೂರಾರು ಮನೆಗಳು ಬೆಂಕಿಗೆ ಬಲಿಯಾಗಿವೆ. ಈಗ 150ಕ್ಕೂ ಹೆಚ್ಚು ಸಾವುಗಳು ಅಲ್ಲಿ ಸಂಭವಿಸಿವೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಅಲ್ಲಿಯ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮಣಿಪುರದಲ್ಲಿ 36 ಬಗೆಯ ವಿಭಿನ್ನ ಸಂಸ್ಕೃತಿಯ ಜನರು ವಾಸವಾಗಿದ್ದಾರೆ. ಕುಕ್ಕಿಗಳು ಮತ್ತು ನಾಗಾಗಳು ಕ್ರೈಸ್ತ ಧರ್ಮೀಯರಾಗಿದ್ದಾರೆ. ಇಲ್ಲಿಯ ಬಹುತೇಕ ಜನರು ಕುಕ್ಕಿಗಳಾಗಿದ್ದಾರೆ. ಹಲವಾರು ಗುಂಪುಗಳ ಮಧ್ಯೆ ಸಶಸ್ತ್ರ ಹೋರಾಟಗಳು ನಡೆಯುತ್ತಲೇ ಇವೆ. ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದ ನಂತರ ಹಲವಾರು ಜನರು ಮಣಿಪುರಕ್ಕೆ ವಲಸೆ ಬಂದಿದ್ದಾರೆ. ಅದರಲ್ಲಿ ಹೆಚ್ಚಿನವರು ಚಿನ್ ಜನಾಂಗದವರಾಗಿದ್ದಾರೆ. ತಮ್ಮವರೇ ಆದ ಚಿನ್ ಸಮುದಾಯವನ್ನು ಕುಕ್ಕಿಗಳು ಸ್ವಾಗತಿಸುತ್ತಾರೆ. ಆದರೆ, ಭಾರತ ಅವರನ್ನು ನಿರಾಶ್ರಿತರು ಎಂದು ಘೋಷಿಸುತ್ತಿಲ್ಲ. ಅವರು ಕಾನೂನು ಬಾಹಿರವಾಗಿ ಭಾರತವನ್ನು ನುಸುಳಿದ ನುಸುಳುಕೋರರೆಂದು ಕೇಂದ್ರ ಸರ್ಕಾರ ಹೇಳಿದೆ. ಮೀಸಲು ಅರಣ್ಯದಲ್ಲಿ ವಾಸವಿದ್ದ ಕುಕ್ಕಿಗಳ ವಿರುದ್ದ ಅವರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಮಣಿಪುರದ ಬಿರೇನ್ ಸರ್ಕಾರ ಮಾಡಿದೆ. ಆರೆಸ್ಸೆಸ್‌ ಮತ್ತು ಬಿಜೆಪಿಯವರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಮಣಿಪುರದಲ್ಲಿ ಮೈತೇಯಿ ಗುಂಪುಗಳು ಕುಕಿಗಳ ವಿರುದ್ದ ಅಪಪ್ರಚಾರವನ್ನು ಮಾಡಿ, ಕುಕಿಗಳು ಹೊರಗಿನಿಂದ ಬಂದವರೆಂದು ಬಿಂಬಿಸುತ್ತಿದೆ.

ಮಣಿಪುರ
ಮಣಿಪುರದಲ್ಲಿ ಹೊತ್ತಿ ಉರಿಯುತ್ತಿರುವ ಮನೆಗಳು

ಬಿಜೆಪಿಯ ಈ ಇಬ್ಬಗೆಯ ನಡೆಯಿಂದ ಮಣಿಪುರದ ಜನತೆ ಬೇಸತ್ತು ಸಂಘರ್ಷಕ್ಕಿಳಿದಿದ್ದಾರೆ. ಅಲ್ಲಿ ಮಣಿಪುರಕ್ಕೆ ಭೇಟಿಯಾಗಲು ಹೋದ ನಾಯಕಿಯರನ್ನು ಬಂಧಿಸಲಾಯಿತು. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು ಮಣಿಪುರಕ್ಕೆ ಹೊರಟಾಗ ಅದನ್ನು ವಿರೋಧಿಸಲಾಗುತ್ತದೆ. ಆದರೆ, ರಾಹುಲ್ ಗಾಂಧಿಯವರು ವಿಮಾನದ ಮೂಲಕ ಹೋಗಿ ಅಲ್ಲಿಯ ಜನರ ಸುಖ ದು:ಖಗಳಿಗೆ ಸ್ಪಂದಿಸಿ ಬಂದಿದ್ದಾರೆ. ಅಲ್ಲಿಗೆ ಭೇಟಿ ನೀಡಿ ಗುಡ್ಡಗಾಡು ಜನರ ಸಂಕಷ್ಟಗಳನ್ನು ಆಲಿಸಿ ವರದಿ ಮಾಡಿರುವ ಎಡ ಪಕ್ಷಗಳ ನಿಯೋಗದ ಪ್ರಕಾರ ಅಲ್ಲಿಯ 60 ಸಾವಿರದಷ್ಟು ಜನರು ಸಂಕಷ್ಟದಲ್ಲಿದ್ದಾರೆ. ಅವರ ಜೀವನೋಪಾಯಗಳನ್ನು ಸರ್ಕಾರವೇ ಕಸಿದಿದೆ. ಮನೆಗಳನ್ನು ಬೆಂಕಿಗಾಹುತಿ ಮಾಡಿ ಮನೆಯ ಮಕ್ಕಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ. ರಾಜ್ಯದ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಜನಾಂಗೀಯ ಹಿಂಸಾಚಾರದ ಬಗ್ಗೆ ಪ್ರಧಾನಿ ಒಂದು ಮಾತನ್ನೂ ಆಡದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬಿಜೆಪಿ ಸರ್ಕಾರ ಮಣಿಪುರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

ನೂರಾರು ಪ್ರಕರಣ !

Advertisements

ಕುಕಿ ಸಮುದಾಯದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಲಾಯಿತು. ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಅವರ ಕಣ್ಣೆದುರೇ ಅವರ ಮಕ್ಕಳನ್ನು ಕೊಲ್ಲಲಾಯಿತು. ಈ ಕುರಿತಂತೆ ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್ ಅವರು, ”ಮಣಿಪುರದಲ್ಲಿ ಇಂತಹ ನೂರಾರು ಪ್ರಕರಣಗಳು ನಡೆದಿವೆ. ಆದುದರಿಂದ ನಮ್ಮ ರಾಜ್ಯದಲ್ಲಿ ಇಂಟರ್ ನೆಟ್‍ಗೆ ನಿಷೇಧ ಹೇರಿದ್ದೇವೆ” ಎಂದು ಹೇಳಿರುವುದು ನಾಚಿಕೆಗೇಡಿ ವಿಷಯವಾಗಿದೆ. ಇಂಡಿಯಾ ಟುಡೆಯ ವಿಶೇಷ ಸಂದರ್ಶನದಲ್ಲಿ ನಿರೂಪಕಿ “ನಿಮ್ಮ ರಾಜ್ಯದಲ್ಲಿ ದುಷ್ಕರ್ಮಿಗಳ ಗುಂಪು ಮಹಿಳೆಯರನ್ನು ಅಮಾನವೀಯವಾಗಿ ಬೆತ್ತಲೆ ಮೆರವಣಿಗೆ ಮಾಡಿದ ಮತ್ತು ಅತ್ಯಾಚಾರಗೈದ ಘಟನೆ ಸರಕಾರದ ಗಮನಕ್ಕೆ ಯಾಕೆ ಬಂದಿಲ್ಲ” ಎಂದು ಬಿರೇನ್ ಸಿಂಗ್ ಅವರನ್ನು ಕೇಳಿದಾಗ ಅವರು ಮೇಲಿನಂತೆ ಉತ್ತರಿಸಿದ್ದಾರೆ. ಇಂತಹ ಸಂವೇದನಾ ರಹಿತ ವ್ಯಕ್ತಿಗಳು ಮುಖ್ಯಮಂತ್ರಿಗಳಾದರೆ, ಮಹಿಳೆಯರಿಗೆ ನ್ಯಾಯ ಹೇಗೆ ಒದಗಿಸುತ್ತಾರೆ?

ವಿಡಿಯೊದಲ್ಲಿರುವ ಘಟನೆ ನಡೆದದ್ದು ಮೇನಲ್ಲಿ. ಆದರೆ ಅವರ ಮೇಲೆ ಎಫ್.ಐ.ಆರ್. ದಾಖಲಾಗಿದ್ದು ಜುಲೈ 18 ರಂದು. ಅಂದರೆ ಬೆತ್ತಲೆ ಮೆರವಣಿಗೆಯ ವಿಡಿಯೋ ವೈರಲ್ ಆದ ನಂತರ. ಭಾರತದ ಮುಖ್ಯ ನ್ಯಾಯಾಧೀಶರಾದ ಡಿ.ವೈ.ಚಂದ್ರಚೂಡರವರು ಮಣಿಪುರ ಸರ್ಕಾರ ಅಪರಾಧಿಗಳ ವಿರುದ್ಧಕ್ರಮ ಕೈಕೊಳ್ಳಬೇಕು, ಇಲ್ಲದಿದ್ದರೆ ನ್ಯಾಯಾಲಯವೇ ಕ್ರಮ ಕೈಕೊಳ್ಳುತ್ತದೆ ಎಂದು ಹೇಳಿದ ನಂತರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಇಷ್ಟು ದಿನ ಸುಮ್ಮನಿದ್ದ ಮಣಿಪುರ ಸರ್ಕಾರ ಈಗ ಅಪರಾಧಿಗಳನ್ನು ಬಂಧಿಸುವ ಕೆಲಸ ಮಾಡುತ್ತಿದೆ. ಮೊದಲೇ ಬಂಧಿಸಲು ಪೊಲೀಸರಿಗೆ ಮಾಹಿತಿಯಿರಲಿಲ್ಲವೆ?

ರಾಹುಲ್ ಗಾಂಧಿ ಬೆಂಗಾವಲು ವಾಹನ
ಮಣಿಪುರದಲ್ಲಿ ರಾಹುಲ್‌ ಗಾಂಧಿ

ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳುತ್ತಿದ್ದಾರೆ “ನಾನು ರಾಜ್ಯದಲ್ಲಿ ಇಂಟರ್‌ನೆಟ್ ಸೇವೆ ಬಂದ್ ಮಾಡಿರುತ್ತೇನೆ” ಎಂದು. ಆದರೆ ಇಂಟರ್‌ನೆಟ್‍ಗೆ ನಿಷೇಧ ಹೇರುವುದರಿಂದ ಈ ಸಮಸ್ಯೆಯನ್ನು ಪರಿಹರಿಸಬಹುದೇ? ಇಂತಹ ಅರ್ಥವಿಲ್ಲದ ನಿರ್ಬಂಧಗಳನ್ನು ಹೇರುವ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುವುದಿಲ್ಲ. ಅದಕ್ಕಾಗಿ ಮಣಿಪುರದಲ್ಲಿ ಶಾಂತಿ ನೆಲೆಸುವ ಕೆಲಸಗಳನ್ನು ಮಾಡಬೇಕಿದೆಯೇ ಹೊರತು ಅವರು ಮಾಡಿದ ಕುಕೃತ್ಯಗಳ ಮೇಲೆ ಪರದೆ ಹಾಕುವುದಲ್ಲ. ಇಂಟರ್‌ನೆಟ್ ಸೇವೆ ಬಂದ್‌ ಮಾಡುವ ಮೂಲಕ ಅಲ್ಲಿ ನಡೆಯುತ್ತಿರುವ ಅಸಂವಿಧಾನಿಕ ನಡೆಗಳು ಲೋಕಕ್ಕೆ ತಿಳಿಯದಂತೆ ತಡೆ ಹಿಡಿಯುವುದೇ ಅವರ ಉದ್ದೇಶವಾಗಿದೆ. ಹೀಗೆ ಮಾಡುವುದರಿಂದ ಹಿಂಸೆ ತಡೆದಂತಾಗುತ್ತದೆಯೇ? ಮಾನವ ಹಕ್ಕುಗಳ ಹನನವಾಗುತ್ತಿರುವುದನ್ನು ನೋಡಿಯೂ ಸುಮ್ಮನಿರಲಾಗುತ್ತದೆಯೇ?

ಬೀದಿ ಬೀದಿಯಲ್ಲಿ ಭಾರತ ಮಾತೆಯನ್ನು ಬೆತ್ತಲಾಗಿಸುವುದು ಸರಿಯೇ ಪ್ರಧಾನಿಗಳೇ? ಮಣಿಪುರದಲ್ಲಿ ಹಿಂಸಾಚಾರ ಶುರುವಾಗಿ 79 ದಿನಗಳ ನಂತರ ಬಾಯಿ ಬಿಡುತ್ತಿದ್ದೀರಲ್ಲಾ! ಇದು ನ್ಯಾಯವೇ? ಮಹಿಳೆಯರ ದೇಹಗಳು ರಾಜಕೀಯದ ಯುದ್ಧ ಭೂಮಿಗಳಲ್ಲ. ಅವಳ ಘನತೆ, ಗೌರವವನ್ನು ಕಾಯುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಸುಪ್ರಿಂ ಕೋರ್ಟ್‌ ಹೇಳಿದ ನಂತರ ಇವರು ಬಾಯಿ ಬಿಡುತ್ತಿದ್ದಾರೆ. ಗುಜರಾತಿನ ದಂಗೆಗಳಲ್ಲಿ ಸಾವು ಅತ್ಯಾಚಾರ ಮಾಡಿದಂತಹ ಜನರು ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ ಬರುತ್ತಾರೆ. ಕಂಕುಳಲ್ಲಿದ್ದ ಮಕ್ಕಳನ್ನೂ ಬಿಡದೆ 14 ಜನರನ್ನು ಕೊಂದ ಕೊಲೆಗಡುಕರನ್ನು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದಂತವರಿಗೆ ಹೂಮಾಲೆ ಹಾಕಿ ಸಿಹಿ ತಿನ್ನಿಸುವ ಸರ್ಕಾರದಿಂದ ನ್ಯಾಯವನ್ನು ನಿರೀಕ್ಷಿಸಬಹುದೇ? ಮಣಿಪುರದಲ್ಲಿ ನಡೆದ ಘಟನೆಗಳು ನಮ್ಮ ತಲೆ ತಗ್ಗಿಸುವಂತೆ ಮಾಡಿವೆ. ಅಲ್ಲಿ ನಡೆದ ಕ್ರೂರ ನಡೆಗಳಿಗೆ, ಅತ್ಯಾಚಾರ, ದೌರ್ಜನ್ಯ ಕೊಲೆಗಳಿಗೆ ನಾವು ನ್ಯಾಯವನ್ನು ನಿರೀಕ್ಷಿಸಬಹುದೇ?

k shareefa
ಡಾ ಕೆ ಷರೀಫಾ
+ posts

ಬಂಡಾಯ ಸಾಹಿತಿ, ಕವಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಕೆ ಷರೀಫಾ
ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X