ʼಧರ್ಮ ರಾಜಕಾರಣʼಕ್ಕೊಂದು ಶವ ಬೇಕಾಗಿತ್ತು; ಫಯಾಜ್‌ ಕೊಟ್ಟುಬಿಟ್ಟ

Date:

ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಭಂಗ ತರುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡುವುದನ್ನೇ ವೃತ್ತಿ ಮಾಡಿಕೊಂಡ ಚಕ್ರವರ್ತಿ ಸೂಲಿಬೆಲೆ, ಶಾಸಕ ಬಸನಗೌಡ ಯತ್ನಾಳ್‌ ಮುಂತಾದವರು ನೇಹಾ ಮನೆಗೆ ಧಾವಿಸಿ ರಾಜಕೀಯ ಬಣ್ಣ ಕೊಡಲು ಯತ್ನಿಸಿದ್ದಾರೆ.

 

ನಮ್ಮ ಪುರುಷ ಪ್ರಧಾನ ಸಮಾಜ ಒಬ್ಬ ಹೆಣ್ಣಿನ ತಿರಸ್ಕಾರವನ್ನು ಎಂದಿಗೂ ಸಹಿಸಲಾರದು. ತನ್ನ ಮೇಲರಿಮೆಯಿಂದ ಕೊಳೆತ ಮನಸ್ಥಿತಿಯ ಪುರುಷ ತನ್ನ ತಿರಸ್ಕಾರವನ್ನು ಎಂದಿಗೂ ಸೈರಿಸಲಾರ. ಪುರುಷ ತನ್ನ ಅಹಂಕಾರ, ಕ್ರೌರ್ಯದ ನಡೆ, ದರ್ಪದ ಮನೋಭೂಮಿಕೆಯನ್ನು ತ್ಯಜಿಸುವುದು ಯಾವಾಗ? ಕ್ರೌರ್ಯ, ಹಿಂಸೆ, ಅಸಹನೆ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ಒಬ್ಬ ಅಮಾಯಕ ಹೆಣ್ಣುಮಕ್ಕಳ ಸಾವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ನೀಚತನಕ್ಕೆ ಧಿಕ್ಕಾರವಿರಲಿ.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ಹಾಡು ಹಗಲೇ ಫಯಾಜ್ ಎಂಬ ಹುಚ್ಚು ಪ್ರೇಮಿಯಿಂದ ನಡೆದೇ ಹೋಗಿತ್ತು 23 ವರ್ಷದ ನೇಹಾ ಹಿರೇಮಠಳ ಕೊಲೆ. ಈ ಘಟನೆಯಿಂದ ರಾಜ್ಯದ ಜನರು ಬೆಚ್ಚಿ ಬಿದ್ದಿದ್ದಾರೆ. ಫಯಾಜನ ಪ್ರೀತಿಯನ್ನು ನಿರಾಕರಿಸಿದ್ದೇ ಅವಳ ಸಾವಿಗೆ ಕಾರಣವಾಗಬೇಕೇ?  ಅವನ ತಂದೆ, ತಾಯಿ ಅಷ್ಟೇ ಅಲ್ಲ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳಿಂದ ಘೋರ ಅಪರಾಧ ಎಸಗಿರುವ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಲು ಅಗ್ರಹಿಸುತ್ತಿವೆ. ಆ ಅಮಾಯಕ ಜೀವ ನೇಹಾಳಿಗೆ ನ್ಯಾಯ ಸಿಗಬೇಕು.

ಈ ಘಟನೆಗೆ ವ್ಯಾಪಕವಾದ ಚರ್ಚೆ, ಮಾಧ್ಯಮಗಳ ಪ್ರಚಾರ ನಡೆದಿದೆ. ಇದು ಆಗಲೂಬೇಕಾದ ಕೆಲಸವೆ. ಆದರೆ ಕೇವಲ 15 ದಿನಗಳ ಹಿಂದೆ ಈ ಕೊಲೆಗಿಂತಲೂ ಭೀಕರವಾಗಿ ಕೊಲೆಯಾಗಿರುವ ರುಕ್ಸಾನಾರನ್ನು ಮದುವೆಯಾಗಿ ಒಂದು ಮಗು ಮಾಡಿದ ಪ್ರದೀಪ ಎನ್ನುವಾತ ರುಕ್ಸಾನಾಳನ್ನು ಕೊಲೆ ಮಾಡಿ ಸುಟ್ಟು ಹಾಕಿದಾಗ, ಮಗುವನ್ನು ಅನಾಥವಾಗಿ ತಳ್ಳು ಬಂಡಿಯ ಮೇಲಿಟ್ಟು ಓಡಿ ಹೋದ ಪ್ರದೀಪನ ಬಗ್ಗೆ ಯಾವುದೇ ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ʼಆದ್ಯತೆʼಯ ಸುದ್ದಿಯಾಗಲಿಲ್ಲ. ಹಿಂದೂ ಮುಖಂಡರು ಈ ಘಟನೆಯನ್ನು ಖಂಡಿಸಲಿಲ್ಲ, ಪ್ರತಿಭಟಿಸಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೆಲವು ತಿಂಗಳ ಹಿಂದೆ ಏರ್‌ ಇಂಡಿಯಾ ನೌಕರ ಪ್ರವೀಣ ಚೌಗುಲೆ, ತಾನು ಮದುವೆಯಾಗಿ ಮಕ್ಕಳಿದ್ದರೂ ಮುಸ್ಲಿಂ ಹುಡುಗಿ ಅಯನಾಳ ಬೆನ್ನು ಬಿದ್ದಿದ್ದ. ಅವನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಅವಳ ಮನೆಗೆ ನುಗ್ಗಿ ಆಕೆಯ ಜೊತೆ ತಾಯಿ, ಸೊದರಿ ಹಾಗೂ ಸೋದರನನ್ನು ಬರ್ಬರವಾಗಿ ಕೊಂದು ಹಾಕಿದಾಗ ಈ ಸಂಘಪರಿವಾರದವರು ಪ್ರತಿಭಟಿಸಲಿಲ್ಲ. ಉಡುಪಿಯ ಶಾಸಕರು, ಸಂಸದೆ ಸಾಂತ್ವನ ಹೇಳಲಿಲ್ಲ. ಸೂಲಿಬೆಲೆ ಮುತಾಲಿಕ್‌, ಯತ್ನಾಳ್‌ ಯಾರೂ ಬಾಯಿ ಬಿಡಲಿಲ್ಲ. ಮಾಧ್ಯಮದವರು ಸುದ್ದಿ ಅಷ್ಟೇ ಮಾಡಿ ಸುಮ್ಮನಾದರು. ಈಗಿನಂತೆ ಅದಕ್ಕೆ ಧರ್ಮ, ರಾಜಕೀಯ ಬಣ್ಣ ಕಟ್ಟಲಿಲ್ಲ. ಯಾವುದೇ ಅಮಾನವೀಯ ಘಟನೆ ನಡೆದಾಗ ಅವರ ಜಾತಿ, ಧರ್ಮ, ಪಕ್ಷ, ಪ್ರದೇಶಗಳನ್ನು ನೋಡದೇ ನಾವು ಕೇವಲ ಮನುಷ್ಯರಾಗಿ ಇಂತಹ ಘಟನೆಗಳನ್ನು ನೋಡಬೇಕಾಗಿದೆ. ಅಮಾನುಷ ಕೊಲೆಗಳನ್ನು ವಿರೋಧಿಸಲೇಬೇಕಾಗಿದೆ.

ಫಯಾಜನ ತಾಯಿ ಮುಮ್ತಾಜ್ ಮಾಧ್ಯಮದ ಮುಂದೆ ಮಾತನಾಡಿ “ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆ ಯಾಚಿಸುತ್ತೇನೆ. ಇಬ್ಬರ ನಡುವೆ ಅಫೇರ್‌ ಇತ್ತು. ಮಗ ನನ್ನ ಬಳಿ ಆ ಬಗ್ಗೆ ಹೇಳಿದಾಗ, ಈ ಪ್ರೀತಿ- ಪ್ರೇಮ ಬೇಡ ಎಂದು ಅವನಿಗೆ ಬುದ್ಧಿ ಹೇಳಿದ್ದೆ. ಮಾಡಿದ ತಪ್ಪಿಗೆ ಅವನಿಗೆ ತಕ್ಕ ಶಿಕ್ಷೆ ಆಗಬೇಕು” ಎಂದಿದ್ದಾರೆ.

ಫಯಾಜ್ ತಂದೆ ಬಾಬಾಸಾಹೇಬ್ ಕೂಡ ಮಾಧ್ಯಮದವರ ಮುಂದೆ “ನನ್ನ ಮಗನಿಗೆ ಯಾವುದೇ ದೊಡ್ಡ ಶಿಕ್ಷೆ ನೀಡಿದರೂ ಸ್ವಾಗತ. ಹೆಣ್ಣುಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದು. ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ. ಈ ಘಟನೆಯಿಂದ ನಮ್ಮ ಊರಿಗೆ(ಮುನವಳ್ಳಿ) ಕಪ್ಪು ಚುಕ್ಕೆ ಬಂದಿದೆ. ರಾಜ್ಯದ ಜನತೆ ಹಾಗೂ ಮುನವಳ್ಳಿಯ ಯುವಕರು ಶಾಂತಿ ಕಾಪಾಡಬೇಕು” ಎಂದು ಮನವಿ ಮಾಡಿದ್ದಾರೆ. ಇದು ಬಹಳ ತೂಕದ ಮಾತಾಗಿದೆ.

ಬೆಳಗಾವಿಯ ಮುನವಳ್ಳಿಯವರಾದ ಬಾಬಾಸಾಹೇಬರು ಮುಂದುವರಿಯುತ್ತಾ ಹೇಳುತ್ತಾರೆ, “ನೇಹಾ ನನ್ನ ಮಗಳಿದ್ದ ಹಾಗೆ. ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು. ಈ ಘಟನೆಯನ್ನು ಖಂಡಿಸಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸೋದು ತಪ್ಪಲ್ಲ. ಯಾವ ಹೆಣ್ಣು ಮಕ್ಕಳ ಮೇಲೆ ಯಾರೂ ಕಣ್ಣು ಹಾಕಬಾರದು” ಎಂದು ತನ್ನ ಮಗನ ಕೃತ್ಯವನ್ನು ನಿಷ್ಠುರ ಶಬ್ದಗಳಲ್ಲಿ ಖಂಡಿಸಿದ್ದಾರೆ. “ನಾನು ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ಕಾನೂನು ಯಾವ ಶಿಕ್ಷೆ ಕೊಟ್ಟರೂ ಅದನ್ನು ನಾನು ಸ್ವಾಗತಿಸುತ್ತೇನೆ. ದಯವಿಟ್ಟು ನೇಹಾ ಕುಟುಂಬದವರು ರಾಜ್ಯದ ಜನ ಹಾಗೂ ಮುನವಳ್ಳಿಯ ಜನತೆ ನನ್ನನ್ನು ಕ್ಷಮಿಸಬೇಕು” ಎಂದು ಕೇಳುತ್ತಾ ಬಾಬಾಸಾಹೇಬ್ ಕಣ್ಣೀರು ಹಾಕುತ್ತಾರೆ.

ನೇಹಾಳ ತಂದೆ ಹುಬ್ಬಳ್ಳಿಯ ಕಾರ್ಪೋರೇಟರ್ ನಿರಂಜನ ಹಿರೇಮಠರು “ನನ್ನ ಮಗಳ ಗೌರವಕ್ಕೆ ಕಳಂಕ ತರಬೇಡಿ” ಎಂದು ವಿನಂತಿಸುತ್ತಿದ್ದಾರೆ. ಇದು ಒಂದು ಕಡೆಯಾದರೆ ನೇಹಾಳ ಶವವಿದ್ದ ಕಿಮ್ಸ್ ಆಸ್ಪತ್ರೆಗೆ ಬಂದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಈ ಘಟನೆಗೆ ಕೋಮು ಬಣ್ಣ ಬಳಿಯುವ ‘ಲವ್ ಜಿಹಾದ್’ ಮಾಡಲು ಹೊರಟಿದ್ದಾರೆ. ಅದಕ್ಕೆ ಪ್ರತಿಭಟಿಸಲು ಎಬಿವಿಪಿಯ ಹುಡುಗರು ಮುಂದಾಗಿದ್ದಾರೆ. ಏನೇ ಆಗಲಿ ನೇಹಾಳ ಹಂತಕ ಸಿಕ್ಕಿದ್ದಾನೆ. ಅವನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಹಿಂದೂ ಮುಸ್ಲಿಂ ಎಲ್ಲ ಸಂಘ, ಸಂಸ್ಥೆಗಳು ಒತ್ತಾಯ ಮಾಡಿವೆ. ಆದರೆ ಕೆಲವು ಕೋಮುವಾದಿ ಪಕ್ಷಗಳು, ಸಂಘ, ಸಂಸ್ಥೆಗಳು ಈ ಸಾವಿಗೆ ಚುನಾವಣೆಗಳನ್ನು ಮುಂದಿಟ್ಟುಕೊಂದು ರಾಜಕೀಯ ಬಣ್ಣ ಬಳಿಯುತ್ತಿರುವುದು ಎಂತಹ ನೋವಿನ ಸಂಗತಿಯಲ್ಲವೇ?

ಹಿಂದೂ ಮುಸ್ಲಿಂ ಸೌಹಾರ್ದತೆಗೆ ಭಂಗ ತರುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡುವುದನ್ನೇ ವೃತ್ತಿ ಮಾಡಿಕೊಂಡ ಚಕ್ರವರ್ತಿ ಸೂಲಿಬೆಲೆ, ಬಸನಗೌಡ ಯತ್ನಾಳ್‌ ಮುಂತಾದವರು ನೇಹಾ ಮನೆಗೆ ಧಾವಿಸಿ ರಾಜಿಕೀಯ ಬಣ್ಣ ಕೊಡಲು ಮುಂದಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ದೆಹಲಿಯಿಂದ ನೇಹಾ ಮನೆಗೆ ಧಾವಿಸಿದ್ದು ನೋಡಿದರೆ ಈ ಪ್ರಕರಣವನ್ನು ಬಿಜೆಪಿಯವರು ತಮ್ಮ ಲಾಭಕ್ಕಾಗಿ ಬಳಕೆ ಮಾಡಲು ಹುನ್ನಾರ ನಡೆಸಿದ್ದಾರೆ ಎಂಬುದು ಸ್ಪಷ್ಟ.

ಇಂದು ನೇಹಾ, ರುಕ್ಸಾನಾ, ಅಯಾನಾ… ಹೀಗೆ ಅಮಾಯಕರ ಜೀವ ನುಂಗಿದ ಹಂತಕರಿಗೆ ಶಿಕ್ಷೆಯಾಗಲಿ. ಯಾರದೇ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರಿಗೆ ಜನರೇ ಸರಿಯಾದ ಶಿಕ್ಷೆ ನೀಡಬೇಕು. ಚುನಾವಣೆಯ ಈ ಹೊತ್ತಿನಲ್ಲಿ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿರುವುದು ತಮ್ಮ ಬೇಳೆ ಬೇಯಿಸಿಕೊಳ್ಳುವ ಉದ್ದೇಶಕ್ಕಾಗಿ ಎಂಬುದನ್ನು ಜನ ಮರೆಯಬಾರದು.

ಡಾ ಕೆ ಷರೀಫಾ
+ posts

ಬಂಡಾಯ ಸಾಹಿತಿ, ಕವಿ

ಪೋಸ್ಟ್ ಹಂಚಿಕೊಳ್ಳಿ:

ಡಾ ಕೆ ಷರೀಫಾ
ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಲೋಕನ | ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’; ದೇಶದ ಆರ್ಥಿಕತೆಯ ನಿಜ ದರ್ಶನ ಮಾಡಿಸುವ ಕೃತಿ

ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣಾಭಿವೃದ್ಧಿ ತಜ್ಞೆ ಲತಾಮಾಲ ಅವರ ‘ಹಿಂದು ರಾಷ್ಟ್ರದೆಡೆಗೆ ಹಿಂಸೆಯ...

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಹೈದರಾಬಾದ್ ಮೆಟ್ರೋ ನಷ್ಟದಲ್ಲಿದೆ ಎಂಬ ಎಲ್&ಟಿ ವಾದ ನಿಜವೇ?

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ 2017ರಲ್ಲಿ ಆರಂಭವಾದ ಮೆಟ್ರೋ ಸೇವೆ ಪ್ರಸ್ತುತ ದೇಶದ...

ರಾಜ್ಯದಲ್ಲಿ ಬಿಜೆಪಿಗೆ ಮೂರನೇ ಬಾರಿ ‘ಆಪರೇಷನ್‌ ಕಮಲ’ ಸಾಧ್ಯವೇ?, ಅಂಕಿ-ಅಂಶ ಏನು ಹೇಳುತ್ತೆ?

ರಾಜ್ಯದ ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಎಷ್ಟರಮಟ್ಟಿಗಿದೆ ಎಂಬುದನ್ನು...

ಸಾಮಾನ್ಯರ ಭಾರತವು ಒಳ್ಳೆಯ ದಿನಗಳನ್ನು ಕಂಡಿದೆಯೇ?

ಪಾಲ್ಕಿಯವರು ಯಾವ ಭಾರತದಲ್ಲಿ ಜೀವಿಸುತ್ತಿದ್ದಾರೆ ಎಂದು ಅವರು ಮಂಡಿಸಿದ ವಿಷಯಗಳಿಂದ ತಿಳಿಯುತ್ತದೆ....