ಹೊಸ ಓದು | ರಾಗಿತೆನೆ- ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆ

Date:

'ರಾಗಿತೆನೆ' ಪುಸ್ತಕ ಏಕೆ ಮಹತ್ವದ್ದಾಗುತ್ತದೆ ಎಂದರೆ, ಬಡತನ, ಅಜ್ಞಾನ, ಮೂಢನಂಬಿಕೆ ಅಸಹಾಯಕತೆಗಳು ಹೇಗೆ ಒಂದು ಜನಾಂಗವನ್ನು ಮತ್ತು ಆ ಜನಾಂಗಕ್ಕೆ ಸೇರಿದ ವ್ಯಕ್ತಿಗಳನ್ನು ಹಿಂಡಿ ಹಿಪ್ಪೆ ಮಾಡಿ ಹಾಕಿಬಿಡುತ್ತವೆ ಎನ್ನುವುದನ್ನು ವಿವರಿಸುವುದಕ್ಕೆ...

‘ರಾಗಿತೆನೆ’ ಪುಸ್ತಕ ಕೇವಲ ಒಬ್ಬಳು ತಾಯಿಯ ಹೃದಯಂಗಮ ಜೀವನ ಕಥೆ ಅಷ್ಟೇ ಅಲ್ಲ, ಪ್ರತಿಯೊಬ್ಬ ಹೆಣ್ಣಿನ ನೋವಿನ ಕಥೆಯೂ ಹೌದು. ಯಾವುದೇ ಹೆಣ್ಣು ಆಕೆ ಮೇಲುಜಾತಿಗೆ ಸೇರಿದವಳಾಗಿರಲಿ ಅಥವಾ ಕೆಳ ಜಾತಿಯವಳೇ ಆಗಿರಲಿ, ವಿದ್ಯಾವಂತಳೇ ಆಗಿರಲಿ, ಅವಿದ್ಯಾವಂತಳೇ ಆಗಿರಲಿ, ಆರ್ಥಿಕ ಸ್ವಾತಂತ್ರ್ಯ ಹೊಂದಿರಲಿ, ಅಥವಾ ಹೊಂದದೇ ಇರಲಿ, ಆಕೆಗಿರುವ ಕಟ್ಟುಪಾಡುಗಳು, ಒತ್ತಡಗಳು ಅಗಾಧ ಮತ್ತು ಅಸಹನೀಯ. ಇಂತಹದೇ ಒಂದು ಸಮಾಜದಲ್ಲಿ ಅತ್ಯಂತ ಕೆಳಮಟ್ಟದಲ್ಲಿರುವ ಕಾಡುಗೊಲ್ಲ ಬುಡಕಟ್ಟಿನ ಅವಿದ್ಯಾವಂತ ಬಡ ಹೆಣ್ಣು ಮಗಳೊಬ್ಬಳ, ಅದರಲ್ಲೂ ತಮ್ಮದೇ ತಾಯಿ ಶ್ರೀಮತಿ ತಿಮ್ಮಮ್ಮನವರ ಅಸಹನೀಯ ನೋವನ್ನು ಪ್ರಾಧ್ಯಾಪಕ ಜಿ.ಎನ್. ಧನಂಜಯ ಮೂರ್ತಿಯವರು ಬಹಳ ಚೆನ್ನಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

- Advertisement -

ಈ ಕೃತಿಯಲ್ಲಿ ಪ್ರಧಾನ ಪಾತ್ರವಾಗಿರುವ ತಿಮ್ಮಮ್ಮನವರ ಮಗನೇ ಆಗಿರುವ ಲೇಖಕರು, ಘಟನೆಗಳನ್ನು ತಾವೇ ಪ್ರತ್ಯಕ್ಷ ಕಂಡು ಅನುಭವಿಸಿ ಬರೆದಿರುವುದರಿಂದ ಪುಟಪುಟದಲ್ಲೂ ಅವರ ಮತ್ತು ಅವರ ತಾಯಿಯವರ ನೋವು ತುಂಬಾ ಆಳವಾಗಿ ಹೇಳಲ್ಪಟ್ಟಿದೆ. ಬಾಲ್ಯದಲ್ಲೇ ಬೇಗನೇ ತಮ್ಮ ತಾಯಿಯನ್ನು ಕಳೆದುಕೊಂಡ ತಿಮ್ಮಮ್ಮನವರು ಬಡತನ ಮತ್ತು ಅಸಹಾಯಕತೆಯ ಕಾರಣದಿಂದಾಗಿ ಶಾಲೆಗೆ ಹೋಗಲೇ ಇಲ್ಲ. ಅವರಿಗೆ ತಂದೆಯ ಪ್ರೀತಿಯು ಸಿಗಲಿಲ್ಲ. ಬಡ ಜಾತಿಯವರಲ್ಲಿ ಬಹಳ ಸಾಮಾನ್ಯವಾಗಿ ಕಾಣಿಸಲ್ಪಡುವ ಕಡುಬಡತನವನ್ನೇ ಅನುಭವಿಸಿದ ತಿಮ್ಮಮ್ಮನವರು ತಾವು ಒಲ್ಲದ ಗಂಡನ್ನು ಅನಿವಾರ್ಯವಾಗಿ ಮದುವೆಯಾಗಲೇಬೇಕಾದ ಅಸಹಾಯಕತೆಗೆ ಸಿಕ್ಕಿಕೊಳ್ಳುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೊಪ್ಪಳ | ದಸರಾ ಪುರಾಣ ಪ್ರವಚನಕ್ಕೆ ಮುಸ್ಲಿಂ ಕಲಾವಿದನ...

ಧರ್ಮಗಳು ಬೇರೆ ಬೇರೆಯಾದರೂ ಕಲೆ, ಸಂಸ್ಕೃತಿ ಮತ್ತು ಮಾನವೀಯತೆಯ ಮುಂದೆ ಧರ್ಮದ ಗಡಿಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮ ಸಾಕ್ಷಿ. ಇಲ್ಲಿನ ಕಂಪ್ಲಿ ಪ್ರದೇಶದ ಬನಶಂಕರಿ ದೇವಸ್ಥಾನದಲ್ಲಿ ನಡೆಯುವ ದಸರಾ...

ದೇವಾ: ಸಂಗೀತ ಲೋಕದ ‘ತೇನಿಸೈ ತೆಂಡ್ರಲ್’

ಅಪಾರ ಶ್ರಮ, ನಿರಂತರ ಅಧ್ಯಯನ ಹಾಗೂ ಸತತ ಪ್ರಯತ್ನಗಳಿಂದ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿ, ಭಾರಿ ಜನಪ್ರಿಯತೆ ಗಳಿಸಿದರೂ ಸದಾ ವಿನಯ ಮತ್ತು ಸರಳತೆ ದೇವಾ ಅವರಲ್ಲಿ ಎದ್ದು ಕಾಣುತ್ತಿತ್ತು. ಇಂತಹ...

ಜಿರಳೆ ಪ್ರತಿಕೃತಿ ದಹನದ ನೆಪದಲ್ಲಿ ಯುವ ದನಿಯನ್ನು ಹತ್ತಿಕ್ಕುವ...

ದೆಹಲಿಯ ಪೀತಾಂಪುರದಲ್ಲಿ ಮಂಗಳವಾರ ನಡೆದ ದಸರಾ ಆಚರಣೆಯು ಈ ಬಾರಿ ಧಾರ್ಮಿಕ ಶ್ರದ್ಧೆಗಿಂತ ಹೆಚ್ಚಾಗಿ ಆಡಳಿತಾರೂಢ ಬಿಜೆಪಿ ಸರ್ಕಾರದ ಅಹಂಕಾರ ಮತ್ತು ಯುವಜನ ವಿರೋಧಿ ಮನಸ್ಥಿತಿಯ ನೇರ ಪ್ರದರ್ಶನವಾಗಿ ಮಾರ್ಪಟ್ಟಿತು. ರಾವಣ, ಕುಂಭಕರ್ಣ...

ಮದುವೆಯಾಗಿ ಒಟ್ಟು ಕುಟುಂಬಕ್ಕೆ ಬಂದ ತಿಮ್ಮಮ್ಮನವರು ಇಲ್ಲಿಯೂ ನೋವನ್ನೇ ಅನುಭವಿಸುತ್ತಾರೆ. ಪ್ರತಿಯೊಂದಕ್ಕೂ ಗಂಡನಷ್ಟೇ ಅಲ್ಲದೆ ಗಂಡನ ತಂದೆಯೂ ದಾರುಣವಾಗಿ ಬಡಿಯುವುದು, ಅದನ್ನು ತಾಳಲಾಗದೆ ತವರು ಮನೆಗೆ ಹೋದಾಗ ತಿಮ್ಮಮ್ಮನವರ ತಂದೆಯನ್ನು ಸಾರ್ವಜನಿಕವಾಗಿ ಥಳಿಸುವುದು, “ಮತ್ತೆಂದೂ ತವರು ಮನೆಗೆ ಹೋಗುವುದಿಲ್ಲ” ಎಂದು ತಿಮ್ಮಮ್ಮನವರಿಂದ ಆಣೆ ಮಾಡಿಸುವುದು ಕ್ರೂರತೆಯ ಪರಮಾವಧಿಯೇ ಸರಿ. ಬಹಳ ದಿನಗಳಾದರೂ ಮಕ್ಕಳಾಗದಿದ್ದಾಗ ‘ಬಂಜೆ’ ಎಂದು ಮೂದಲಿಸಲ್ಪಟ್ಟ ತಿಮ್ಮಮ್ಮನವರು ಕೊನೆಗೆ ಊರ ಹೊರಗಿನ ಹೊಲದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯವಿಲ್ಲದೆ ಅತ್ಯಂತ ನೋವಿನಿಂದ ಮಗುವಿಗೆ ಜನ್ಮ ಕೊಡುವುದು ಕಣ್ಣಾಲಿಗಳಲ್ಲಿ ನೀರಾಡಿಸುತ್ತದೆ.

ಇದನ್ನು ಓದಿದ್ದೀರಾ?: ಕಣ್ಣಾಲಿ ಒದ್ದೆ ಮಾಡುವ ʼಗುರುತ್ವಾಕರ್ಷಣೆʼಯ ʼಅವ್ವ ಅವ್ವʼ ಹಾಡು; ಮೆಹಬೂಬ್‌ ಸಾಬ್‌ ಧ್ವನಿಗೆ ಸಲಾಂ ಎಂದ ಸಂಗೀತ ಪ್ರಿಯರು

ಒಟ್ಟು ಕುಟುಂಬದಿಂದ ಹೊರಬಂದು ಗಂಡನೊಂದಿಗೆ ತನ್ನದೇ ಪುಟ್ಟ ಗುಡಿಸಲನ್ನೊಂದು ಕಟ್ಟಿಕೊಂಡ ತಿಮ್ಮಮ್ಮನವರ ಬದುಕು ಸುಧಾರಿಸಲೇ ಇಲ್ಲ. ಕೂಲಿ ಕೆಲಸ ಮಾಡಿದ ಆಕೆ ಮತ್ತು ಆಕೆಯ ಪತಿ, ಬಡತನದಲ್ಲೇ ಜೀವನ ನಡೆಸಿದರು. ಸರ್ಕಾರದ ರೇಷನ್ ಅಕ್ಕಿ ಸಿಕ್ಕಾಗಲಷ್ಟೇ ಅನ್ನ ಉಂಡ ಕುಟುಂಬ, ಉಳಿದಂತೆಲ್ಲ ರಾಗಿ ಮುದ್ದೆಯನ್ನೇ ಅವಲಂಬಿಸಿದ್ದು. ಹಾಗಿದ್ದರೂ ತಿಮ್ಮಮ್ಮನವರಿಗೆ ತಮ್ಮ ಮಗ ಧನಂಜಯ ಮೂರ್ತಿಯ ಮೇಲೆ ಬಹಳ ಭರವಸೆ. ಮುಂದೆ ಆತ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆಂಬ ಆಸೆ. ಮಗಳು ಮದುವೆಯಾದಾಗ ಒಂದಿಷ್ಟು ನೆಮ್ಮದಿ ಕಂಡ ತಿಮ್ಮಮ್ಮನವರು ಮಗ ಧನಂಜಯ ಮೂರ್ತಿ ಸರ್ಕಾರಿ ಪ್ರಾಧ್ಯಾಪಕರಾದಾಗ ಸಂತೋಷ ಪಟ್ಟರು. ಮಗನ ಮದುವೆಯಾಗಿ ಮನೆಗೆ ಸೊಸೆಯಾಗಿ ಬಂದ ಪದ್ಮ ತಮ್ಮನ್ನು ಚೆನ್ನಾಗಿ ನೋಡಿಕೊಂಡಾಗ ಅತ್ಯಂತ ಸಂತೋಷಪಟ್ಟರು.

ಆದರೆ, ಈ ಸಂತೋಷ ಅವರಿಗೆ ಬಹಳ ಕಾಲ ಉಳಿಯಲೇ ಇಲ್ಲ. ಅದಾಗಲೇ ಬಹಳ ವರ್ಷಗಳಿಂದ ಕಡ್ಡಿಪುಡಿ ಎಂದು ಕರೆಯಲ್ಪಡುತ್ತಿದ್ದ ಹೊಗೆ ಸೊಪ್ಪನ್ನು ಜಗಿಯುವ ಅಭ್ಯಾಸ ಮಾಡಿಕೊಂಡಿದ್ದ ತಿಮ್ಮಮ್ಮನವರಿಗೆ ವಸಡಿನ ಕ್ಯಾನ್ಸರ್ ತಗುಲಿತು. ಮೊದಲಿಗೆ ಕೇವಲ ವಸಡಿನ ನೋವು ಎಂದಷ್ಟೇ ಪರಿಗಣಿಸಲ್ಪಟ್ಟು ಅಂದಿನ ರೂಡಿಯಂತೆ ಹತ್ತಿರದ ಊರಿನಲ್ಲಿ ಚಿಕಿತ್ಸೆ ಪಡೆದ ಮೇಲೆ ಮಣಿಪಾಲದಲ್ಲಿ ಚಿಕಿತ್ಸೆ ಪಡೆದಾಗಲೇ ಕ್ಯಾನ್ಸರ್ ಎಂದು ಕುಟುಂಬದವರಿಗೆ ಗೊತ್ತಾಗಿದ್ದು. ನಂತರ ತಿಮ್ಮಮ್ಮನವರು ಪಡುವ ಅಸಹನೀಯ ವೇದನೆಯನ್ನು ಧನಂಜಯ ಮೂರ್ತಿಯವರು ಸ್ವತಃ ಅನುಭವಿಸುತ್ತಾ, ಪುಟಗಳಲ್ಲಿ ವರ್ಣಿಸುವಾಗ ಓದುಗರ ಕಣ್ಣುಗಳೂ ತುಂಬಿ ಅವರೂ ಅಳುವಂತಾಗುತ್ತದೆ. ಎಷ್ಟೇ ಚಿಕಿತ್ಸೆ ಕೊಡಿಸಿದರೂ ರೋಗವು ಉಲ್ಬಣಿಸಿ ‘ಇನ್ನೇನೂ ಮಾಡಲಾಗದೆಂದು’ ವೈದ್ಯರು ಕೈ ಚೆಲ್ಲಿದಾಗ ಲೇಖಕ ಧನಂಜಯ ಮೂರ್ತಿಯವರು ಅನುಭವಿಸುವ ನೋವು ಮತ್ತು ಅಸಹಾಯಕತೆ ಹೇಳಲಾಗದು. ಕೊನೆಗೂ ತಿಮ್ಮಮ್ಮನವರು ಈ ಲೋಕವನ್ನು ಬಿಟ್ಟಾಗ ಲೇಖಕರಲ್ಲಿ ಉಳಿಯುವುದು ಕೇವಲ ನೋವು, ದುಃಖ ಮಾತ್ರ .

‘ರಾಗಿತೆನೆ’ ಪುಸ್ತಕ ಏಕೆ ಮಹತ್ವದ್ದಾಗುತ್ತದೆ ಎಂದರೆ, ಇದರಲ್ಲಿ ಕೇವಲ ಲೇಖಕರ ಮತ್ತು ಅವರ ತಾಯಿಯವರ ನೋವಷ್ಟೇ ಹೇಳಲ್ಪಟ್ಟಿಲ್ಲ. ಬದಲಾಗಿ ಅತ್ಯಂತ ಬಡತನದಲ್ಲಿರುವ ಅಸಹಾಯಕ ಕೆಳಮಟ್ಟದ ಜನಾಂಗದ ದಾರುಣ ಸ್ಥಿತಿಯನ್ನು ಹೃದಯಂಗಮವಾಗಿ ವಿವರಿಸಲಾಗಿದೆ. ಬಡತನ, ಅಜ್ಞಾನ, ಮೂಢನಂಬಿಕೆ ಅಸಹಾಯಕತೆಗಳು ಹೇಗೆ ಒಂದು ಜನಾಂಗವನ್ನು ಮತ್ತು ಆ ಜನಾಂಗಕ್ಕೆ ಸೇರಿದ ವ್ಯಕ್ತಿಗಳನ್ನು ಹಿಂಡಿ ಹಿಪ್ಪೆ ಮಾಡಿ ಹಾಕಿಬಿಡುತ್ತವೆ ಎನ್ನುವುದು ಪುಟ ಪುಟದಲ್ಲೂ ಬಹಳ ಚೆನ್ನಾಗಿ ವಿವರಿಸಲ್ಪಟ್ಟಿದೆ. ಹಾಗಾಗಿ, ಈ ಪುಸ್ತಕವು ಕೇವಲ ಒಂದು ವೈಯಕ್ತಿಕ ಅನುಭವದ ಸಾಹಿತ್ಯದ ಕೃತಿಯಷ್ಟೇ ಆಗಿರದೆ, ಈ ಆಧುನಿಕ ದಿನಗಳಲ್ಲೂ ದೂರದ ಗ್ರಾಮೀಣ ಪ್ರದೇಶದಲ್ಲಿ ಜನರು ಅನುಭವಿಸುತ್ತಿರುವ ದಾರುಣ ಸ್ಥಿತಿಯನ್ನು ಚೆನ್ನಾಗಿ ಕಟ್ಟಿಕೊಟ್ಟಿದೆ. ಹಾಗಾಗಿ, ಇಂದಿನ ಸಾಮಾಜಿಕ ಸ್ಥಿತಿಯನ್ನು ಅಧ್ಯಯನ ಮಾಡಬಯಸುವ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಬಯಸುವ ಸಹೃದಯ ವ್ಯಕ್ತಿಗಳಿಗೆ ಇದೊಂದು ಅಧ್ಯಯನ ಯೋಗ್ಯ ಕೃತಿ.

ರಾಗಿ ತೆನೆ ಎನ್ನುವ ಹೆಸರಂತೂ ಪುಸ್ತಕಕ್ಕೆ ಬಹಳ ಅರ್ಥಪೂರ್ಣವಾಗಿದೆ. ರಾಗಿ ಗ್ರಾಮೀಣ ಪ್ರದೇಶದ ಬಡವರ ಆಹಾರ. ಚಿಕ್ಕ ಚಿಕ್ಕ ರಾಗಿಯ ಕಾಳುಗಳೆಲ್ಲ ಸೇರಿ ರಾಗಿ ತೆನೆ ಆಗುತ್ತದೆ. ಇದು, ನೋವುಗಳೆಲ್ಲ ಸೇರಿ ಬಡವರ ಬದುಕು ಆದಂತೆ ಸಾಂಕೇತಿಕವಾಗಿ ಹೇಳುತ್ತದೆ. ಇದು ಬಹಳ ಕಾಲ ನೆನಪಿನಲ್ಲಿ ಉಳಿಯುವ ಕೃತಿ.

–ಗೌತಮಿ ನಾಡಿಗೇರ್
ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ, ಎನ್.ಇ.ಎಸ್.ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ನವುಲೆ, ಶಿವಮೊಗ್ಗ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಯುವ ದಸರಾದಲ್ಲಿ ನಟ ರವಿಚಂದ್ರನ್‌ರ ಭಕ್ತಿ‌ಪ್ರಧಾನ ಗೀತೆ, ಸಾಧು ಕೋಕಿಲರ ಸಂಗೀತ ಸಂಜೆ ಕಾರ್ಯಕ್ರಮ

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯುವ ದಸರಾದಲ್ಲಿ ಯುವ ದಸರಾ ಕಾರ್ಯಕ್ರಮದ...

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : ಬಿಜೆಪಿ-ಕಾಂಗ್ರೆಸ್‌ ತೀವ್ರ ಪೈಪೋಟಿ, ಗೆಲುವು ಯಾರಿಗೆ?

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ತಡೆ...

SIR ವಿರೋಧಿ ಪ್ರತಿಭಟನಾಕಾರರ ವಿರುದ್ಧ ಕ್ರಮ; ಸರ್ಕಾರದ ಧೋರಣೆ ವಿರುದ್ಧ 20 ದೇಶಗಳಲ್ಲಿ ಪ್ರತಿಭಟನೆ

ಭಾರತದಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಜನರ ಹೆಸರುಗಳನ್ನು ಕೈಬಿಟ್ಟಿರುವುದು ಹಾಗೂ ಮುಖ್ಯ...