ಎಸ್.ಐ.ಆರ್: ಅಲೆಮಾರಿಗಳ ಅಸ್ತಿತ್ವದ ಪ್ರಶ್ನೆ

Date:

ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಕೇಳಲಾಗುವ ದಾಖಲೆಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ, ಆದಿವಾಸಿಗಳ ಬಳಿ ಒಂದೇ ಒಂದು ದಾಖಲೆಯೂ ಇರಲು ಸಾಧ್ಯವಿಲ್ಲ. ಇವರ ಬಳಿ ಯಾವುದೇ ಮೂಲ ದಾಖಲಾತಿಗಳು ಇರದ ಕಾರಣಕ್ಕೇ ಈ ಸಮುದಾಯಗಳು ಆಡಳಿತದ ಮುಖ್ಯವಾಹಿನಿಯಿಂದ ದೂರ ಉಳಿದಿರುತ್ತಾರೆ. ಈ ನತದೃಷ್ಟ ಸಮುದಾಯಗಳ ಬಗ್ಗೆ ಎಸ್.ಐ.ಆರ್. ಮಾಡುವವರೂ ಚಿಂತಿಸುತ್ತಿಲ್ಲ, ಎಸ್.ಐ.ಆರ್. ಸಂದರ್ಭದಲ್ಲಿ ಎಚ್ಚರ ವಹಿಸಬೇಕೆಂದು ಜಾಗೃತಿ ಮೂಡಿಸುವವರೂ ಚಿಂತಿಸಿದಂತೆ ಕಾಣುತ್ತಿಲ್ಲ!

- Advertisement -

ಎಸ್.ಐ.ಆರ್ ಅಥವಾ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ಕರ್ನಾಟಕದಲ್ಲೂ ಇನ್ನೇನು ಆರಂಭವಾಗಲಿದೆ. ಬಿಜೆಪಿಯನ್ನು ಹೊರತುಪಡಿಸಿ ಕಾಂಗ್ರೆಸ್ ಸೇರಿದಂತೆ ಮಿಕ್ಕೆಲ್ಲ ಪಕ್ಷಗಳೂ ಆತಂಕಕ್ಕೆ ಒಳಗಾಗಿವೆ. ಇದಕ್ಕೆ ಕಾರಣ ಈಚೆಗೆ ನಡೆದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಇದೇ ಎಸ್.ಐ.ಆರ್ ಕಾರಣಕ್ಕೆ ಟಿ.ಎಂ.ಸಿ. ಮತ್ತು ಡಿ.ಎಂ.ಕೆಗಳು ಇನ್ನಿಲ್ಲದಂತೆ ನೆಲ ಕಚ್ಚಿವೆ. ಈ ಸ್ಥಿತಿ ಕರ್ನಾಟಕದಲ್ಲಿನ ಕಾಂಗ್ರೆಸ್ಸಿಗೂ ಬರಬಹುದೆಂಬ ಆತಂಕದಿಂದ ಕಾಂಗ್ರೆಸ್ ಮತ್ತಿತರ ಬಿಜೆಪಿಯೇತರ ಪಕ್ಷಗಳು ಎಸ್.ಐ.ಆರ್‌ನಿಂದ ತಮ್ಮ ಪಕ್ಷದ ಮತದಾರರನ್ನು ಉಳಿಸುವ ಜವಾಬ್ದಾರಿ ಹೊತ್ತು ಕಾರ್ಯಾಚರಣೆಗೆ ಇಳಿದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

“ಎಸ್.ಐ.ಆರ್. ಎಂಬುದು ಈ ದೇಶಕ್ಕೆ ಅತಿಕ್ರಮವಾಗಿ ಆಗಮಿಸಿರುವ ನುಸುಳುಕೋರರನ್ನು ಹೊರಹಾಕಿ, ಈ ದೇಶದ ನಾಗರಿಕರನ್ನು ರಕ್ಷಿಸುವ ಪ್ರಕ್ರಿಯೆ” ಎಂದು ಬಿಜೆಪಿ ಹೇಳಿದರೆ, ವಿರೋಧ ಪಕ್ಷಗಳು “ಇದು ಸಂವಿಧಾನದ ಅಡಿಪಾಯವನ್ನೇ ಕೆಡವಿ ಹಾಕುವ, ಇಡೀ ಪ್ರಜಾತಂತ್ರವನ್ನೇ ಬುಡಮೇಲು ಮಾಡುವ, ದೇಶದ 12 ಕೋಟಿಗೂ ಹೆಚ್ಚು ಜನರನ್ನು ಅನಾಮಧೇಯರಾಗಿಸುವ, ಅದರಲ್ಲೂ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರೈಸ್ತರೊಂದಿಗೆ ದಲಿತ, ಆದಿವಾಸಿಗಳ ಹಕ್ಕುಗಳನ್ನೂ ಕಸಿಯುವ ಪ್ರಕ್ರಿಯೆ” ಎನ್ನುತ್ತಿವೆ.
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಹದಿಮೂರು ದಾಖಲೆಗಳನ್ನು ಕೇಳುತ್ತಾರೆ ಓಟರ್ ಕಾರ್ಡ್, ರೇಶನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಜಾತಿ ಪ್ರಮಾಣ ಪತ್ರ, ಆಸ್ತಿಯ ದಾಖಲೆ ಮುಂತಾಗಿ. ಅದರಲ್ಲೂ ‘ಶಾಶ್ವತವಾಗಿ ವಾಸಿಸುತ್ತಿರುವ ದಾಖಲೆ’ ಮತ್ತು ‘ಜಾತಿ ಸರ್ಟಿಫಿಕೇಟ್’ ಕಡ್ಡಾಯ. ಈ ಎಲ್ಲವನ್ನೂ ಸ್ಥಿರ ಅಥವಾ ನೆಲೆನಿಂತ ಸಮುದಾಯಗಳು ನೀಡಬಹುದು. ಈ ಸಮುದಾಯಗಳಲ್ಲಿ ಆಸ್ತಿ, ಉದ್ಯೋಗ, ವಸತಿ, ವಿದ್ಯುತ್ ಸಂಪರ್ಕ, ನೀರಿನ ಬಿಲ್, ರೇಶನ್ ಕಾರ್ಡ್, ಮತದಾರರ ಚೀಟಿ, ಆಧಾರ್ ಕಾರ್ಡ್ ಮುಂತಾದ ದಾಖಲೆಗಳು ಇರುತ್ತವೆ. ಇಲ್ಲಿ ಗಂಭೀರವಾಗಿ ಯೋಚಿಸಬೇಕಾದುದು ಈ ದಾಖಲೆಗಳಲ್ಲಿ ಒಂದೂ ದಾಖಲೆ ಇರದ ಅಲೆಮಾರಿ, ಅರೆಅಲೆಮಾರಿ, ಆದಿವಾಸಿ, ವಲಸೆ ಕಾರ್ಮಿಕರ ಕುರಿತು. ಅದರಲ್ಲೂ ಒಂದು ನೆಲೆ ಎಂಬುದೇ ಇಲ್ಲದ ಸದಾ ಊರಿಂದ ಊರಿಗೆ ಸುತ್ತುತ್ತಾ ರೈಲ್ವೆ ಹಳಿಗಳ ಪಕ್ಕ, ಪಾಳು ಮಂಟಪಗಳಲ್ಲಿ, ಸ್ಮಶಾನದ ಸೆರಗಿನಲ್ಲಿ, ಕುರುಚಲು ಬಯಲುಗಳಲ್ಲಿ ಟೆಂಟು, ಗುಡಾರಗಳನ್ನು ಹಾಕಿಕೊಂಡು ಅಲೆಮಾರಿ ಜೀವನ ನಡೆಸುತ್ತಿರುವ ಸಮುದಾಯಗಳ ಕುರಿತು. ಈ ನತದೃಷ್ಟ ಸಮುದಾಯಗಳ ಬಗ್ಗೆ ಎಸ್.ಐ.ಆರ್. ಮಾಡುವವರೂ ಚಿಂತಿಸುತ್ತಿಲ್ಲ, ಎಸ್.ಐ.ಆರ್. ಸಂದರ್ಭದಲ್ಲಿ ಎಚ್ಚರ ವಹಿಸಬೇಕೆಂದು ಜಾಗೃತಿ ಮೂಡಿಸುವವರೂ ಚಿಂತಿಸಿದಂತೆ ಕಾಣುತ್ತಿಲ್ಲ!

882122 clkrxxbwbn 1531754280

ಇದನ್ನು ಓದಿದ್ದೀರಾ?: ನೀಟ್‌ ಹಗರಣ | ಪದೇ-ಪದೇ ಎಡವುತ್ತಿರುವ ಎನ್‌ಟಿಎ ಇನ್ನಾದರೂ ಎಚ್ಚೆತ್ತುಕೊಳ್ಳುವುದೇ?

2011ರ ಸೆನ್ಸಸ್ ಪ್ರಕಾರ ಕರ್ನಾಟಕದಲ್ಲಿ 6.96 % ಅಂದರೆ ಸುಮಾರು 45ರಿಂದ 50 ಲಕ್ಷ ಅಲೆಮಾರಿ ಮತ್ತು ಅರೆ ಅಲೆಮಾರಿ, ಆದಿವಾಸಿ, ವಲಸೆ ಕಾರ್ಮಿಕರೇ ಮುಂತಾದ ಸಮುದಾಯಗಳವರಿದ್ದಾರೆ. ಈ ಸಮುದಾಯಗಳು ಆದಿಯಿಂದಲೂ ಕರ್ನಾಟಕದಲ್ಲಿಯೇ ಬದುಕಿರುವ ಮೂಲನಿವಾಸಿ ಜನಾಂಗದವರಾಗಿದ್ದಾರೆ. ಈ ಅಲೆಮಾರಿ ಮತ್ತು ಅರೆಅಲೆಮಾರಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 51, ಪರಿಶಿಷ್ಟ ಪಂಗಡಕ್ಕೆ ಸೇರಿದ 23 ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ 46 ಅಲೆಮಾರಿ/ಅರೆ ಅಲೆಮಾರಿಗಳು ಕರ್ನಾಟಕ ರಾಜ್ಯದಲ್ಲಿ ಶತ-ಶತಮಾನಗಳಿಂದಲೂ ಕೃಷಿಕೂಲಿಗಳಾಗಿ, ಪ್ರದರ್ಶಕ ಕಲೆಗಳ ಕಲಾವಿದರಾಗಿ, ನಾಟಿ ಔಷದಿಗಳನ್ನು ನೀಡುವ ವೈದ್ಯರಾಗಿ, ಹಾಡುತ್ತಾ, ಬೀದಿನಾಟಕ ಮಾಡುತ್ತಾ, ಭಿಕ್ಷೆ ಎತ್ತುತ್ತಾ ವಸತಿರಹಿತರಾಗಿ, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಬದುಕುತಿದ್ದಾರೆ. ಮರದಡಿಯ ಮನುಷ್ಯರಾದ ಇವರು ನಿರ್ವಸತಿಗರಾಗಿ ಮತ್ತು ನಿರ್ವಾಸಿಗರಾಗಿ ಊರಿಂದ ಊರಿಗೆ ವಲಸೆ ಹೋಗುವರು. ಇವರ ಸಾಮಾಜಿಕ ಬದುಕಿನ ಸ್ಥಿತಿಗತಿಯ ಮೇಲೆ ಇವರ ವಲಸೆ ಮಾರ್ಗಗಳನ್ನು ಅವಲಂಬಿತವಾಗಿರುತ್ತವೆ.

ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಕೇಳಲಾಗುವ ದಾಖಲೆಗಳಲ್ಲಿ ಇವರ ಬಳಿ ಒಂದೇ ಒಂದು ದಾಖಲೆಯೂ ಇರಲು ಸಾಧ್ಯವಿಲ್ಲ. ಇವರ ಬಳಿ ಯಾವುದೇ ಮೂಲ ದಾಖಲಾತಿಗಳು ಇರದ ಕಾರಣಕ್ಕೇ ಈ ಸಮುದಾಯಗಳು ಆಡಳಿತದ ಮುಖ್ಯವಾಹಿನಿಯಿಂದ ದೂರ ಉಳಿದಿರುತ್ತಾರೆ. ಭೂಮಿಯೇ ಇಲ್ಲದವರ ಬಳಿ ಭೂದಾಖಲೆಗಳು ಹೇಗಿರಲು ಸಾದ್ಯ? ಮನೆಮಠವಿಲ್ಲದೆ ಟೆಂಟು, ಗುಡಾರ, ಶೆಡ್ಡುಗಳಲ್ಲಿ ವಾಸಿಸುವವರಿಗೆ ಮನೆಯ ದಾಖಲೆ ಎಲ್ಲಿಂದ ಬರಬೇಕು? ಬದುಕಿಗಾಗಿ ವಲಸೆ ಹೋಗುವವರು, ಅಲೆಮಾರಿ ಜೀವನ ಸಾಗಿಸುವವರು ಯಾವುದೇ ದಾಖಲಾತಿಗಳು ಇಲ್ಲದ ಕಾರಣಕ್ಕೇ ಇವರಿಗೆ ಸರ್ಕಾರಿ ಭಾಗ್ಯಗಳೂ ಕೂಡ ಸಿಗದೆ ಈ ಕುಟುಂಬಗಳು ಅದರಿಂದಲೂ ವಂಚಿತವಾಗಿರುತ್ತವೆ.
ಹಾಗಾದರೆ ಇಂತಹ ಅಲೆಮಾರಿಗಳಿಗೆ ಯಾವುದೇ ದಾಖಲೆಗಳು ಇಲ್ಲದಿರುವುದಕ್ಕೆ ಕಾರಣ ಸರ್ಕಾರ ಎಂಬುದು ನಗ್ನಸತ್ಯ. ಸ್ವತಂತ್ರ ಬಂದಾಗಿನಿಂದಲೂ ಈ ಸಮುದಾಯಗಳು ತುಂಡು ಭೂಮಿಗಾಗಿ ಅಂಗಲಾಚುತ್ತಿವೆ. ತಲೆ ಮೇಲೊಂದು ಸೂರಿಗಾಗಿ ಇನ್ನಿಲ್ಲದಷ್ಟು ನೆಲಕ್ಕೆ ತಲೆಬಾಗಿ ಬೇಡುತ್ತಿವೆ. ಸರ್ಕಾರ ಈ ಎಪ್ಪತ್ತು ವರ್ಷಗಳಲ್ಲಿ ಇವರಿಗೆ ಭೂಮಿಯನ್ನೋ ಮನೆಯನ್ನೋ ಕೊಟ್ಟಿದ್ದರೆ ಇಂದು ಇವರ ಬಳಿ ಚುನಾವಣಾ ಆಯೋಗ ಕೇಳುವ ಕನಿಷ್ಠ ದಾಖಲೆಗಳು ಇರುತ್ತಿದ್ದವು.

ಎಸ್.ಐ.ಆರ್.ಪ್ರಕ್ರಿಯೆ ನಡೆಸುವವರು “ಕನಿಷ್ಠ ನಿಮ್ಮ ಜಾತಿ ಸರ್ಟಿಫಿಕೇಟ್ ಕೊಡಿ” ಎನ್ನುತಿದ್ದಾರೆ. ಇಲ್ಲಿ ಜಾತಿ ಪ್ರಮಾಣ ಪತ್ರ ನೀಡಲೂ ಕೂಡ ನೂರೆಂಟು ಗೊಂದಲಗಳಿವೆ. ಈ ಅಲೆಮಾರಿ ಸಮುದಾಯಗಳಿಗೆ ಜಾತಿಯ ಅಸ್ಮಿತೆ ಇಲ್ಲದ ಕಾರಣಕ್ಕೆ ಇವರಿಗೆ ಜಾತಿ ಸರ್ಟಿಫಿಕೇಟ್ ಅನ್ನು ಸಮರ್ಪಕವಾಗಿ ಕೊಡಲಾಗುತ್ತಿಲ್ಲ ಎಂದು ತಹಸೀಲ್ದಾರರು ವಾದಿಸುತ್ತಾರೆ. ಒಂದೇ ಜಾತಿಯನ್ನು ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಲ್ಲಿ ಕರೆಯುತ್ತಾರೆ, ಆದ್ದರಿಂದ ಜಾತಿ ಸರ್ಟಿಫಿಕೇಟ್ ನೀಡಲು ಸಾದ್ಯವಾಗುತ್ತಿಲ್ಲ ಎಂದು ಸಂಭಂದಪಟ್ಟ ಅಧಿಕಾರಿಗಳು ಹೇಳುತ್ತಾರೆ. ಇದರೊಂದಿಗೆ ಒಂದೇ ಜಾತಿ ವಿವಿಧ ಹೆಸರುಗಳೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪಟ್ಟಿಗಳಲ್ಲಿ ಹಂಚಿಹೋಗಿರುವುದರಿಂದ ಜಾತಿ ಸರ್ಟಿಫಿಕೇಟ್ ನೀಡಲು ಕಷ್ಟವಾಗುತ್ತಿದೆ ಎಂಬುದು ಅಧಿಕಾರಿಗಳ ಸಮರ್ಥನೆ. ಈ ಗೊಂದಲಗಳನ್ನು ಪರಿಹರಿಸಲು ಹಿಂದುಳಿದ ವರ್ಗಗಳ ಆಯೋಗ ಎಂದೋ ನೀಡಿರುವ ಸಲಹೆಗಳನ್ನು ಸರ್ಕಾರ ಇಂದಿಗೂ ತೆರೆದು ಕೂಡ ನೋಡಿಲ್ಲ! ಅಲೆಮಾರಿಗಳಲ್ಲಿ ಜಾತಿ ಸರ್ಟಿಫಿಕೇಟ್ ಗೊಂದಲ ಪರಿಹರಿಸಲು ಆಯೋಗವೊಂದನ್ನು ರಚಿಸಿ ಈ ಸಮಸ್ಯೆಗೆ ಪರಿಹಾರ ತನ್ನಿ ಎಂದು ಅಲೆಮಾರಿಗಳು ಅನೇಕ ದಿನಗಳಿಂದ ಮುಖ್ಯಮಂತ್ರಿಗಳನ್ನು ಬೇಡುತ್ತಲೇ ಇದ್ದಾರೆ. ಮುಖ್ಯಮಂತ್ರಿಗಳಿಗೆ ಇದು ಗಂಭೀರವಾದ ವಿಚಾರ ಅನಿಸದಿರುವುದು ದುರಂತ. ಈ ಅಲೆಮಾರಿಗಳಿಗೆ ಕನಿಷ್ಠ ಜಾತಿ ಸರ್ಟಿಫಿಕೇಟ್ ಸಿಕ್ಕಿದ್ದರೆ ಇಂದು ಇವರು ಮತದಾರರ ಪರಿಷ್ಕರಣೆಯಲ್ಲಿ ಕಾಣಿಸಿಕೊಳ್ಳುತಿದ್ದರು.

882122 gczxvxaqdt 1531754710 1

ಈ ಹಿಂದೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಅನೇಕ ಅಲೆಮಾರಿ ಮತ್ತು ಆದಿವಾಸಿಗಳನ್ನು ಕೈಬಿಟ್ಟಿರುವ ಉದಾಹರಣೆ ನಮ್ಮ ಕಣ್ಣಮುಂದಿದೆ. ಪಶ್ಚಿಮಬಂಗಾಳದಲ್ಲಿ 27 ಲಕ್ಷ ಆದಿವಾಸಿಗಳನ್ನು ‘ಫೇಕ್ ಟ್ರೈಬಲ್ಸ್’ ಎಂದು ಕೈಬಿಟ್ಟಿದ್ದಾರೆ ಮತ್ತು ತಮಿಳುನಾಡಿನಲ್ಲಿ ಸುಮಾರು 15% ಅಲೆಮಾರಿ, ಆದಿವಾಸಿಗಳನ್ನು ಕೈಬಿಟ್ಟಿರುವ ಕುರಿತು ಕೆಲ ಮಾದ್ಯಮಗಳು ದಾಖಲಿಸಿವೆ. ಆಶ್ಚರ್ಯವೆಂದರೆ ಪಶ್ಚಿಮಬಂಗಾಳದ ಬಿರ್ಹೋರ್, ಟೋಟೋ ಮತ್ತು ಸಬರ್ ಎಂಬ ಮೂರು ಆದಿವಾಸಿ ಜಾತಿಗಳನ್ನು ‘ಪ್ರಾಚೀನ ಬುಡಕಟ್ಟು'(primitive tribe) ಅಥವ ಮೂಲನಿವಾಸಿ(aborigin) ಎಂಬ ಕಾರಣಕ್ಕೆ ಜಿಲ್ಲಾಡಳಿತವೇ ಅವಶ್ಯ ದಾಖಲೆಗಳನ್ನು ನೀಡಿ ಪಟ್ಟಿಯಲ್ಲಿ ಸೇರಿಸಲ್ಪಟ್ಟಿದೆ! ಕರ್ನಾಟಕದಲ್ಲೂ ಕೊರಗ ಮತ್ತು ಜೇನುಕುರುಬರನ್ನು ‘ಪ್ರಾಚೀನ ಬುಡಕಟ್ಟು’ ಎಂದು ಗುರುತಿಸಿರುವುದರಿಂದ ಈ ಸಮುದಾಯಗಳಿಗಾದರೂ ದಾಖಲಾತಿಗಳಿಲ್ಲದೆ ಮತದಾರರ ಪಟ್ಟಿಯಲ್ಲಿ ಸೇರಿಸುವ ಅವಕಾಶ ದೊರಕುತ್ತದೇನೋ ಎಂದು ಆಶಿಸಬಹುದು.

ಇದನ್ನು ಓದಿದ್ದೀರಾ?: ಎಸ್‌ಐಆರ್ ವಿರುದ್ಧ ರಾಜ್ಯಾದ್ಯಂತ ಮೊಳಗಿದ ಘೋಷ; ಚುನಾವಣಾ ಆಯೋಗದ ಕ್ರಮಕ್ಕೆ ಜನಾಕ್ರೋಶ

ಈ ಹಿನ್ನೆಲೆಯಲ್ಲಿ ‘ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭ’ ಸರ್ಕಾರಕ್ಕೆ, ಚುನಾವಣಾ ಆಯುಕ್ತರಿಗೆ ಪತ್ರವೊಂದನ್ನು ನೀಡಿ ಕರ್ನಾಟಕ ರಾಜ್ಯಾದ್ಯಂತ ವಸತಿಹೀನರಾಗಿರುವ, ಅಲೆಮಾರಿತನ ಮತ್ತು ವಲಸೆಯ ಮಾರ್ಗಗಳಲ್ಲಿ ಬದುಕುತ್ತಿರುವ ಅಲೆಮಾರಿ ಮತ್ತು ಆದಿವಾಸಿ ಕುಟುಂಬಗಳನ್ನು ಖುದ್ದು ಭೇಟಿಯಾಗಿ ಮತದಾರರ ಪಟ್ಟಿಗೆ ವೋಟ್ ಮ್ಯಾಪಿಂಗ್ ವೇಳೆ ಕಡ್ಡಾಯವಾಗಿ ಸೇರ್ಪಡೆ ಮಾಡಿಕೊಳ್ಳಲು ಜಿಲ್ಲಾವಾರು ಮತ್ತು ತಾಲೂಕುವಾರು ಇರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಕ್ರಮ ವಹಿಸಲು “ವಿಶೇಷ ನೋಡಲ್ ಅಧಿಕಾರಿ”ಗಳನ್ನು ನಿಯೋಜಿಸುವಂತೆ ಸರ್ಕಾರ ಆದೇಶಿಸಬೇಕೆಂದು ಮನವಿ ಮಾಡಿದೆ. ಕಡೆಗೆ ಈ ರೀತಿಯ ಯಾವುದೇ ಸಾಧ್ಯತೆಗಳ ಮೂಲಕ ಈ ಸಮುದಾಯಗಳನ್ನು ಮತದಾರರ ಪಟ್ಟಿಗೆ ಸೇರಿಸಬೇಕು ಇಲ್ಲದಿದ್ದಲ್ಲಿ ಈ ಸಮುದಾಯಗಳ ಇರುವಿಕೆಯೇ ಇಲ್ಲದಂತಾಗಿ ಇವರು ಇನ್ನಷ್ಟು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿ ಸಂಪೂರ್ಣವಾಗಿ ನಶಿಸಿಹೋಗುವ ಎಲ್ಲಾ ಸಾಧ್ಯತೆಗಳೂ ಇವೆ.

(ಲೇಖಕರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು)

Dr. C.S.Dwarakanath 1
ಡಾ ಸಿ ಎಸ್‌ ದ್ವಾರಕಾನಾಥ್‌
+ posts

ಹಿರಿಯ ವಕೀಲರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ಪೋಸ್ಟ್ ಹಂಚಿಕೊಳ್ಳಿ:

ಡಾ ಸಿ ಎಸ್‌ ದ್ವಾರಕಾನಾಥ್‌
ಡಾ ಸಿ ಎಸ್‌ ದ್ವಾರಕಾನಾಥ್‌
ಹಿರಿಯ ವಕೀಲರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ ಬದುಕು!

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು...

ಲಡಾಖ್ ನಾಯಕರ ಜೊತೆ ಕೇಂದ್ರದ ಮಾತುಕತೆ ಅಪೂರ್ಣ: ಅಕ್ಟೋಬರ್ 22ಕ್ಕೆ ಮುಂದಿನ ಸಭೆ

ಕೇಂದ್ರ ಗೃಹ ಸಚಿವಾಲಯ ಹಾಗೂ ಲಡಾಖ್‌ನ ಪ್ರಾತಿನಿಧಿಕ ಸಂಸ್ಥೆಗಳ ನಡುವೆ ಲೇಹ್‌ನಲ್ಲಿ...