ವಿದ್ಯಾರ್ಥಿಗಳೇನೋ ಬೀದಿಯಲ್ಲಿದ್ದಾರೆ; ವಿಶ್ವದ ನಂ.1 ವಿದ್ಯಾರ್ಥಿ ಸಂಘಟನೆ ABVP ಎಲ್ಲಿದೆ?

Date:

ದೆಹಲಿ ಬೀದಿಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ವ್ಯವಸ್ಥೆಯ ವೈಫಲ್ಯ, ಪರೀಕ್ಷಾ ಅಕ್ರಮ ಮತ್ತು ತಮ್ಮ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ನ್ಯಾಯಯುತ ಹಕ್ಕಿಗಾಗಿ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್ ನಡೆದಿದೆ. ಹೋರಾಟಗಾರರ ಬಂಧನಗಳಾಗಿವೆ. ವಿಪಕ್ಷಗಳು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದರೆ, ಆಡಳಿತ ಪಕ್ಷಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಗಳ ಪಾತ್ರದ ಕುರಿತು ಹಲವು ಪ್ರಶ್ನೆಗಳೆದ್ದಿವೆ.

- Advertisement -

ವಿದ್ಯಾರ್ಥಿ ಸಂಘಟನೆಯ ಮೊದಲ ಜವಾಬ್ದಾರಿ ವಿದ್ಯಾರ್ಥಿಗಳ ಜೊತೆಗೆ ನಿಲ್ಲುವುದೇ ಆಗಿದೆ. ಆದರೆ ಇಂದಿನ ಪ್ರತಿಭಟನಾ ಸ್ಥಳದಲ್ಲಿ ದೇಶದ ವಿದ್ಯಾರ್ಥಿಗಳ ಧ್ವನಿ ಎಂದು ಹೇಳಿಕೊಳ್ಳುವ ಎಬಿವಿಪಿಯ ಗೋಚರ ಉಪಸ್ಥಿತಿ ಕಾಣಿಸುತ್ತಿಲ್ಲ. ವಿದ್ಯಾರ್ಥಿಗಳ ಜೊತೆಗೆ ಮೈದಾನಕ್ಕಿಳಿಯುವ ಬದಲು ಪತ್ರಿಕಾ ಹೇಳಿಕೆ ನೀಡಿ ಕೈತೊಳೊದುಕೊಳ್ಳುವ ಪ್ರಯತ್ನ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ದೆಹಲಿಯ ಯುವ ಪ್ರತಿಪ್ರಭಟನೆ ಕುರಿತು ವಿಸ್ತೃತ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಬಿವಿಪಿ, ಸಮಾಜ ವಿರೋಧಿ ಅಂಶಗಳು ಉದ್ದೇಶಪೂರ್ವಕವಾಗಿ ಹಿಂಸಾಚಾರವನ್ನು ಸಂಘಟಿಸಿವೆ ಎಂದು ಆರೋಪಿಸಿದೆ. ಈ ಘಟನೆಯಲ್ಲಿ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಗಾಯಗೊಂಡಿರುವುದು ನೋವುಂಟು ಮಾಡಿದೆ. ನೀಟ್-ಯುಜಿ ಹಾಗೂ ಶಿಕ್ಷಣ ಸುಧಾರಣೆ ಕುರಿತ ಇತ್ತೀಚಿನ ಪ್ರತಿಭಟನೆಗಳ ಸಂದರ್ಭದಲ್ಲಿ ಜಂತರ್‌ ಮಂತರ್‌ನಲ್ಲಿ ನಡೆದ ಗೊಂದಲ, ಸಾರ್ವಜನಿಕ ಶಾಂತಿ ಭಂಗ ಮತ್ತು ಹಿಂಸಾತ್ಮಕ ಘರ್ಷಣೆಗಳನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಮೇ ತಿಂಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಿಂದ ರದ್ದಾದ ನೀಟ್-ಯುಜಿ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಪರವಾಗಿ ತಾವು ನಿಲ್ಲುವುದಾಗಿ ಹೇಳಿಕೊಂಡಿದೆ. ವಿದ್ಯಾರ್ಥಿಗಳ ನ್ಯಾಯಸಮ್ಮತ ಅಹವಾಲುಗಳನ್ನು ಅರ್ಥಪೂರ್ಣ ಸಂವಾದ, ಸಹಾನುಭೂತಿ ಮತ್ತು ಸಂಸ್ಥಾಗತ ಸುಧಾರಣೆಗಳ ಮೂಲಕವೇ ಪರಿಹರಿಸಬೇಕು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿರುವ ಎಬಿವಿಪಿ, ಜುಲೈ 20ರಂದು ಸಿಜೆಪಿ ಸಂಸತ್ ಚಲೋ ಕರೆ ನೀಡಿದ್ದ ಸಂದರ್ಭದಲ್ಲಿ ಜಂತರ್‌ ಮಂತರ್‌ನಲ್ಲಿ ನಡೆದ ಹಿಂಸಾಚಾರದ ಹಿಂದೆ “ದುಷ್ಟ ರಾಜಕೀಯ ಹಿತಾಸಕ್ತಿಗಳು” ಕೆಲಸ ಮಾಡಿವೆ ಎಂದು ಆರೋಪಿಸಿದೆ. ವಿದ್ಯಾರ್ಥಿಗಳ ನೈಜ ಸಮಸ್ಯೆಗಳು ಮತ್ತು ನ್ಯಾಯಸಮ್ಮತ ಬೇಡಿಕೆಗಳನ್ನು ಸೀಮಿತ ರಾಜಕೀಯ ಹಿತಾಸಕ್ತಿಗಳು, ರಾಷ್ಟ್ರವಿರೋಧಿ ಅಜೆಂಡಾಗಳು ಅಥವಾ ದೇಶದಲ್ಲಿ ಅಸ್ಥಿರತೆ, ಸಂಘರ್ಷ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ಉದ್ದೇಶಗಳಿಗೆ ಬಳಸಿಕೊಳ್ಳಬಾರದು ಎಂದು ಹೇಳಿದೆ.

ಎಬಿವಿಪಿಯ ಅಧಿಕೃತ ಹೇಳಿಕೆಯನ್ನು ಗಮನಿಸಿದರೆ, ಅದರಲ್ಲಿ ಎರಡು ವಿಭಿನ್ನ ಸಂದೇಶಗಳು ಕಾಣಿಸುತ್ತವೆ. ಒಂದು ಕಡೆ, ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ, ಶಿಕ್ಷಣ ಸುಧಾರಣೆಗಳ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದು ಹೇಳಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪಾರದರ್ಶಕತೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಆದರೆ ಮತ್ತೊಂದೆಡೆ, ಜಂತರ್‌ ಮಂತರ್‌ನಲ್ಲಿ ನಡೆದ ಘರ್ಷಣೆಗೆ “ಸಮಾಜ ವಿರೋಧಿ ಅಂಶಗಳು”, “ದುಷ್ಟ ರಾಜಕೀಯ ಹಿತಾಸಕ್ತಿಗಳು” ಮತ್ತು “ರಾಷ್ಟ್ರವಿರೋಧಿ ಅಜೆಂಡಾ” ಕಾರಣ ಎಂದು ಹೇಳುವ ಮೂಲಕ ಪ್ರತಿಭಟನೆಗೆ ಮತ್ತದೇ ರಾಜಕೀಯದ ಹೊಲಸು ಮೆತ್ತಲು ಯತ್ನಿಸಿರುವಂತೆ ಕಾಣುತ್ತದೆ.

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಒಪ್ಪಿಕೊಂಡಿರುವ ಸಂಘಟನೆ, ಅದೇ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಅಥವಾ ಬಲಪ್ರಯೋಗದ ಬಗ್ಗೆ ಸ್ಪಷ್ಟವಾಗಿ ಮಾತನಾಡಿಲ್ಲ. ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ವ್ಯವಸ್ಥೆಯ ವೈಫಲ್ಯ ಅಥವಾ ಅದರ ರಾಜಕೀಯ ಹೊಣೆಗಾರಿಕೆಯ ಬಗ್ಗೆ ತೀಕ್ಷ್ಣವಾಗಿ ಪ್ರಶ್ನಿಸಿಲ್ಲ. ಈ ದ್ವಂದ್ವ ನಿಲುವು ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸುವ ಸೋಗಿನಲ್ಲಿ, ಪ್ರತಿಭಟನೆಯ ಕೇಂದ್ರಬಿಂದುವನ್ನು ರಾಜಕೀಯ ಕುತಂತ್ರದ ಕಡೆಗೆ ತಿರುಗಿಸಿರುವಂತೆ ಕಾಣುವುದಿಲ್ಲವೇ?

ಇದನ್ನೂ ಓದಿ: ದಿಲ್ಲಿ ಮಾತು | ನಿಮ್ಮ ಲಾಠಿಯೇಟು ಬಿದ್ದದ್ದು ದೇಹಕ್ಕಲ್ಲ, ಪ್ರಜಾಪ್ರಭುತ್ವದ ಆತ್ಮಕ್ಕೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ರೂಪುಗೊಂಡದ್ದು 1948–49ರ ಅವಧಿಯಲ್ಲಿ. 1958ರಲ್ಲಿ ಸಂಘಟನಾತ್ಮಕವಾಗಿ ಪುನರ್‌ರಚನೆಯಾಯಿತು. RSSನ ಸೈದ್ಧಾಂತಿಕ ಹಿನ್ನೆಲೆಯೊಂದಿಗೆ RSS ಅಂಗಸಂಸ್ಥೆಯಾಗಿಯೇ ಬೆಳೆದ ಈ ಸಂಘಟನೆ, ಕಳೆದ ಏಳು ದಶಕಗಳಲ್ಲಿ ಭಾರತದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಗಳಲ್ಲಿ ಒಂದಾಗಿ ಬೆಳೆಯಿತು. 1974ರ ಜೆಪಿ ಚಳವಳಿಯ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ಮಹತ್ವದ ಪಾತ್ರ ವಹಿಸಿದ್ದರು ಎಂದು ಸಂಘಟನೆಯೇ ಹೇಳಿಕೊಳ್ಳುತ್ತದೆ. ದೇಶದ ನೂರಾರು ವಿಶ್ವವಿದ್ಯಾಲಯಗಳು ಮತ್ತು ಸಾವಿರಾರು ಕಾಲೇಜುಗಳಲ್ಲಿ ತನ್ನ ಜಾಲವನ್ನು ಹೊಂದಿರುವ ಎಬಿವಿಪಿ, ಸದಸ್ಯತ್ವದ ಆಧಾರದ ಮೇಲೆ ತನ್ನನ್ನು ವಿಶ್ವದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ ಎಂದು ಪರಿಚಯಿಸಿಕೊಳ್ಳುತ್ತದೆ.

ಅಂತಹ ಇತಿಹಾಸ ಹೊಂದಿರುವ ಎಬಿವಿಪಿಯಿಂದ, ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿರುವ ಸಂದರ್ಭದಲ್ಲಿ ಸಕ್ರಿಯ ಮತ್ತು ವಿದ್ಯಾರ್ಥಿ ಕೇಂದ್ರಿತ ಪಾತ್ರವನ್ನು ಹಲವರು ನಿರೀಕ್ಷಿಸಿದ್ದರು. ಆದರೆ, ಅದರ ಪಾಲ್ಗೊಳ್ಳುವಿಕೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುವುದಕ್ಕಷ್ಟೇ ಸೀಮಿತವಾಯಿತು. ಇದು ಯುವ ಸಮೂಹದ ಅಸಮಾಧಾನಕ್ಕೆ ಕಾರಣವಾಯಿತು.

ವಿದ್ಯಾರ್ಥಿ ಸಂಘಟನೆಗಳ ಅಸ್ತಿತ್ವವೇ ವಿದ್ಯಾರ್ಥಿಗಳ ಧ್ವನಿಯಾಗುವುದಕ್ಕಾಗಿ. ಅಧಿಕಾರ ಯಾರದ್ದೇ ಆಗಿರಲಿ, ವಿದ್ಯಾರ್ಥಿಗಳ ಭವಿಷ್ಯ ಅಪಾಯದಲ್ಲಿದ್ದಾಗ ಅವರ ಜೊತೆ ನಿಲ್ಲುವುದು, ಅವುಗಳ ಮೊದಲ ಜವಾಬ್ದಾರಿ. ವಿದ್ಯಾರ್ಥಿಗಳ ಹೋರಾಟವನ್ನು ರಾಜಕೀಯ ಕನ್ನಡಕದಿಂದ ನೋಡುವುದು ಸರಿಯಲ್ಲ. ವಿದ್ಯಾರ್ಥಿಗಳ ಮೇಲೆ ಲಾಠಿ ಬೀಳುವಾಗ ಸುಮ್ಮನಿದ್ದು, ಈಗ ಖಂಡಿಸುತ್ತೇವೆ ಎಂದು ಪ್ರತಿಕ್ರಿಯಿಸಿಬಿಟ್ಟರೆ, ಆ ಸಂಘಟನೆಯ ಮೂಲ ಉದ್ದೇಶಕ್ಕೆ ಹೊಂದಿಕೆಯಾಗುತ್ತದೆಯೇ? ಇಂತಹ ಸಂದರ್ಭಗಳಲ್ಲಿ ಸಂಘಟನೆಗಳ ನಿಜವಾದ ಬದ್ಧತೆ ಅಧಿಕಾರದ ಕಡೆಗೋ, ಅಥವಾ ವಿದ್ಯಾರ್ಥಿಗಳ ಕಡೆಗೋ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು. ವಿದ್ಯಾರ್ಥಿಗಳಿಗಾಗಿ ಹುಟ್ಟಿದ ಸಂಘಟನೆಗಳು ವಿದ್ಯಾರ್ಥಿಗಳ ಧ್ವನಿಯಾಗಿಯೇ ಉಳಿಯುತ್ತವೆಯೇ, ಅಥವಾ ರಾಜಕೀಯ ಅಜೆಂಡಾಗಳ ಧ್ವನಿಗಳಾಗಿ ಮಾತ್ರ ಉಳಿಯುತ್ತವೆಯೇ ಎಂಬುದನ್ನು ಇತಿಹಾಸವೂ ಗಮನಿಸುತ್ತಿದೆ, ವಿದ್ಯಾರ್ಥಿ ಸಮುದಾಯವೂ ಗಮನಿಸುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ನಕಲಿ ವೈದ್ಯರಿಗೆ ಔಷಧ ಪೂರೈಕೆ : 7 ಮೆಡಿಕಲ್‌ಗಳ ಪರವಾನಗಿ ಅಮಾನತು

ನಕಲಿ ವೈದ್ಯರಿಗೆ ಔಷಧಗಳನ್ನು ಸರಬರಾಜು ಮಾಡಿದ ಆರೋಪದ ಹಿನ್ನೆಲೆ ಜಿಲ್ಲೆಯ ಏಳು...

ʼತ್ರಿವರ್ಣ ಧ್ವಜ ಹಾರಿಸಲು ಅನುಮತಿ ಬೇಕಿಲ್ಲʼ; ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ

ರಾಷ್ಟ್ರಧ್ವಜ ಹಾರಿಸಲು ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ವಾದಿಸಿರುವ ಎಐಎಸ್‌ಎ (AISA)...

ಬೀದರ್‌ | ಕನಿಷ್ಠ ವೇತನ ಪಾವತಿಗೆ ಅರಣ್ಯ ಇಲಾಖೆ ದಿನಗೂಲಿ ನೌಕರರ ಮನವಿ

ಔರಾದ ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಕ್ಷಕರು ಹಾಗೂ ದಿನಗೂಲಿ...

ಬೀದರ್‌ | ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸೋಣ : ಡಿಸಿ ಶಿಲ್ಪಾ ಶರ್ಮಾ

ಬೀದರ್ ಜಿಲ್ಲೆಯಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ...