ಗದಗ | ಸ್ಲಂ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಪ್ರತಿಭಟನೆ

Date:

ಗದಗ-ಬೆಟಗೇರಿ ನಗರದ ಕೊಳಗೇರಿ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸ್ಲಂ ನಿವಾಸಿಗಳಿಂದ ವಿನಾಕಾರಣ ದಾಖಲೆಗಳನ್ನು ಕೇಳುತ್ತಿರುವುದರಿಂದ ಜನರು ಪ್ರತಿನಿತ್ಯ ಹೆಸ್ಕಾಂ ಕಚೇರಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸ್ಲಂ ಪ್ರದೇಶಗಳಿಗೆ ವಿದ್ಯುತ್ ಕಲ್ಪಿಸಬೇಕು” ಎಂದು ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರು ಇಮ್ತಿಯಾಜ.ಆರ್.ಮಾನ್ವಿ ಒತ್ತಾಯಿಸಿದರು.

- Advertisement -

ಗದಗ ಪಟ್ಟಣದ ಕಾರ್ಯ ನಿರ್ವಾಹಕ ಇಂಜನಿಯರ್ ಕಚೇರಿ ಎದುರು ಸ್ಲಂ ಜನಾಂದೋಲನ -ಕರ್ನಾಟಕ ಮತ್ತು ಜಿಲ್ಲಾ ಸ್ಲಂ ಸಮಿತಿ ವತಿಯಿಂದ ಸ್ಲಂ ಪ್ರದೇಶಗಳಿಗೆ ವಿದ್ಯುತ್ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಕೊಪ್ಪಳ | 8 ತಿಂಗಳಿನಿಂದ ಕಿಟ್‌ ವಿತರಣೆಯಿಲ್ಲ, ಮಲಗಲು...

ಕೊಪ್ಪಳ ನಗರದ ಡಾ.ಬಿ ಆರ್‌ ಅಂಬೇಡ್ಕರ್ ಸರಕಾರಿ ಮೆಟ್ರಿಕ್‌ ನಂತರದ ಬಾಲಕರ ವೃತ್ತಿಪರ ವಸತಿ (ಪರಿಶಿಷ್ಟ ಜಾತಿ) ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಸುಮಾರು...

“ಕರ್ನಾಟಕ ಕೊಳಗೇರಿ ಅಭಿವೃಧ್ದಿ ಮಂಡಳಿಯಿಂದ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ನಿರಾಕ್ಷೇಪಣಾ ಪತ್ ಸಲ್ಲಿಸಿದರು ಸಹ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಗದಗ-ಬೆಟಗೇರಿ ನಗರದಲ್ಲಿ ೪೮ ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ ಪ್ರಕಾರ ಅಧಿಕೃತವಾಗಿ ಘೋಷಣೆ ಆಗಿರುತ್ತದೆ. ಘೋಷಣೆ ಆದ ಸ್ಲಂ ಪ್ರದೇಶಗಳಿಗೆ ಇಲ್ಲಿಯವರೆಗೊ ಸ್ಲಂ ಪ್ರದೇಶದ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಕರ್ನಾಟಕ ಕೊಳಗೇರಿ ಅಭಿವೃಧ್ದಿ ಮಂಡಳಿಯಿಂದ ನೀಡಿದ ಎನ್.ಓ.ಸಿ ಅನ್ವಯ ವಿದ್ಯುತ್ ಇಲಾಖೆಯಿಂದ ಮನೆಗೆ ಮೀಟರಗಳನ್ನು ಅಳವಡಿಸಲಾಗಿದೆ. ಘೋಷಣೆ ಆಗಿರುವ ಮತ್ತು ಅಘೋಷಿತ ೭೦ಕ್ಕೊ ಹೆಚ್ಚು ಸ್ಲಂ ಪ್ರದೇಶಗಳಿಗೆ ಯಾವುದೇ ರೀತಿಯಾದ ದಾಖಲೆಗಳು ಇರುವುದಿಲ್ಲ” ಎಂದರು.

ಸ್ಲಂ ಬೋರ್ಡ ಕಚೇರಿಯಿಂದ ನೀಡಲಾಗಿರುವ ನಿರಾಕ್ಷೇಪಣೆ ಪತ್ರದ ಮೂಲಕ ನಗರದ ಸಾವಿರಾರು ಮನೆಗಳಿಗೆ ಹೆಸ್ಕಾಂ ಕಚೇರಿಯಿಂದ ವಿದ್ಯುತ್ ಸಮಪರ್ಕ ಪಡೆಯಲು ಮೀಟರಗಳನ್ನು ಮಂಜೂರು ಮಾಡಿ ಕೊಳಗೇರಿಗಳಲ್ಲಿ ವಾಸವಾಗಿರುವ ನಗರವಂಚಿತ ಸಮುದಾಯಗಳ ಮನೆಗಳಿಗೆ ಬೆಳಕನ್ನು ನೀಡಲಾಗಿದೆ. ಕೊಳಗೇರಿ ಜನರಿಗೆ ವಿದ್ಯುತ್ ಸಂಪರ್ಕ ನೀಡಲು ನಿರಾಕರಿಸುತ್ತಿರುವ ಅಧಿಕಾರಿಗಳು ಸಂವಿಧಾನದ ಆಶೆಯಕ್ಕೆ ತದ್ದವಿರುಧ್ದವಾಗಿ ನಡೆದುಕೊಳ್ಳುತ್ತಿದ್ದಾರೆ” ಎಂದರು.

“ಇದರಿಂದ ಗದಗ-ಬೆಟಗೇರಿ ನಗರದ ಸಾವಿರಾರು ಕುಟುಂಬಗಳಿಗೆ ಹೆಸ್ಕಾಂ ಕಚೇರಿಯ ಅಧಿಕಾರಿಗಳಿಂದ ಅನ್ಯಾಯವಾಗುತ್ತಿದೆ. ಗದಗ-ಬೆಟಗೇರಿ ನಗರದ ಮಧ್ಯಮ ವರ್ಗ ಹಾಗೂ ಬಡವರು ತಮ್ಮ ಮನೆಯ ವಿದ್ಯುತ್ ಬಿಲ್ ಕಟ್ಟಿಲ್ಲವೆಂದು ನಿಬ್ಬಂದಿಗಳು ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಾರೆ. ಆದರೆ  ಗದಗ-ಬೆಟಗೇರಿಯ ನೂರಾರು ಶ್ರೀಮಂತರ, ದೊಡ್ಡ-ದೊಡ್ಡ ಉದ್ಯೋಮಿಗಳಿಂದ ೪೦ ರಿಂದ ೫೦ ಸಾವಿರ ಬಾಕಿ ಬಿಲ್ಲನ್ನು ಕಟ್ಟದೇ ಇದ್ದರು ಸಹ ಅವರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದೇ ಇವರ ಜೊತೆಗೆ ಶಾಮೀಲಾಗಿ ಹೆಸ್ಕಾಂ ಕಚೇರಿಗೆ ಬರಬೇಕಾದ ಕೊಟ್ಯಾಂತರ ಹಣವನ್ನು ದುರಪಯೋಗ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.

“ಕೊಡಲೇ ಹೆಸ್ಕಾಂ ಅಧಿಕಾರಿಗಳು ಬಡಜನರ ಹಾಗೂ ಸ್ಲಂ ಜನರ ವಿರೋಧಿ ನೀತಿಯನ್ನು ಕೈಬಿಟ್ಟು ಜನರ ಪರವಾಗಿ ಕೆಲಸ ಮಾಡಬೇಕು. ನಮ್ಮ ಬೇಡಿಕೆಗಳನ್ನು ಹೆಸ್ಕಾಂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪ್ರಮಾಣಿಕವಾಗಿ ಸ್ಪಂದಿಸಬೇಕು. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಕಡಿಗಣಿಸಿದರೆ ಗದಗ ಜಿಲ್ಲಾ ಸ್ಲಂ ಸಮಿತಿಯ ನೇತೃತ್ವದಲ್ಲಿ ನಗರದ ಸಾವಿರಾರು ಸ್ಲಂ ನಿವಾಸಿಗಳೊಂದಿಗೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಸ್ಲಂ ಸಮಿತಿ ಮುಖಂಡರು ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಮಲ್ಲೇಶ ಕಿರೇಶೂರ, ಮುನ್ನಾ ಅಗಡಿ, ಖಾಜಾಸಾಬ ಇಸ್ಮಾಯಿಲನವರ, ಸಾಕ್ರುಬಾಯಿ ಗೋಸಾವಿ, ಸಲೀಂ ಹರಿಹರ, ಗೌಸಸಾಬ ಅಕ್ಕಿ, ರಿಜ್ವಾನ ಮುಲ್ಲಾ, ರೇಷ್ಮಾ ನಾಗನೂರು, ರವಿ ಗೋಸಾವಿ, ಖಾಜಾಸಾಬ ಬಳ್ಳಾರಿ, ಹುಸೇನ ಮುಲ್ಲಾನವರ, ರಫೀಕ ಬರದೂರು, ಪರುಶರಾಮ ಗೌಳಿ, ಖಾಜಾಸಾಬ ಉಮಚಗಿ, ಮಲೇಶಪ್ಪ ಕಲಾಲ, ಮೆಹಬೂಬ ಮುಲ್ಲಾ ಹಾಗೂ ನಗರದ ವಿವಿಧ ಸ್ಲಂ ಪ್ರದೇಶದ ಜನರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ |ಮುಳುಗಡೆ ಸಂತ್ರಸ್ತರಿಗೆ 151 ಇ-ಖಾತಾ, ಹಕ್ಕುಪತ್ರ ವಿತರಣೆ

ಮುಳುಗಡೆ ಸಂತ್ರಸ್ತರಿಗೆ ಅಗತ್ಯ ದಾಖಲೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ...

ಬಾಗೇಪಲ್ಲಿ | ಗಡಿ ಗ್ರಾಮಗಳಿಗೆ ಹೆಚ್ಚಿನ ಸರ್ಕಾರಿ ಬಸ್‌ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯ

ತಾಲೂಕಿನ ಮಾಡಪ್ಪಲ್ಲಿ ಗಡಿ ಗ್ರಾಮಗಳಿಗೆ ಹೆಚ್ಚಿನ ಸರ್ಕಾರಿ ಬಸ್‌ ಕಲ್ಪಿಸುವಂತೆ ಇಲ್ಲಿನ...

ರಾಯಚೂರು | ಹಳ್ಳಿ ಜನರನ್ನು ಅವಮಾನಿಸಿದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಕ್ಷಮೆಯಾಚನೆಗೆ ಆಗ್ರಹಿಸಿ ಜೆಡಿಎಸ್‌ ಪ್ರತಿಭಟನೆ

ಹಳ್ಳಿಯ ಜನರನ್ನು ಗುಗ್ಗು ಹಾಗೂ 'ವಿಲೇಜ್ ಈಡಿಯಟ್ಸ್' ಎಂದು ಅವಹೇಳನಕಾರಿಯಾಗಿ ಮಾತನಾಡಿದ...

ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ

ಎಡಿಬಿ (ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್) ಜತೆ ರಾಜ್ಯ ಸರ್ಕಾರ ಮಾಡಿಕೊಂಡಿರುವ ಒಪ್ಪಂದ...