2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಪಂದ್ಯಗಳು ಅ. 5ರಿಂದ ಆರಂಭಗೊಂಡು ನ. 19ರವರೆಗೂ ನಡೆಯಲಿದೆ. ಭಾರತದಲ್ಲಿ ಆಯೋಜನೆಗೊಳ್ಳುತ್ತಿರುವ ಮೂರನೇ ಏಕದಿನ ವಿಶ್ವಕಪ್ ಇದಾಗಿದೆ.
ಈ ಮೊದಲು 1987, 1996(ಶ್ರೀಲಂಕಾ ಮತ್ತು ಬಾಂಗ್ಲಾದೇಶ ಭಾಗಿ) ಹಾಗೂ 2011ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ಆಯೋಜಿಸಲಾಗಿತ್ತು. ಮೂರರಲ್ಲಿ 2011ರ ಪ್ರಶಸ್ತಿಯನ್ನು ಮಹೇಂದ್ರ ಸಿಂಗ್ ಸಾರಥ್ಯದ ತಂಡ ಮುಡಿಗೇರಿಸಿಕೊಂಡಿತ್ತು.
ಅ. 5ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ – ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ. ಚೆನ್ನೈನಲ್ಲಿ ಅ. 8ರಂದು ಭಾರತದ ಮೊದಲ ಪಂದ್ಯ ಆಸ್ಟ್ರೇಲಿಯ ವಿರುದ್ಧದೊಂದಿಗೆ ಆರಂಭವಾಗಲಿದೆ. ಅ. 15ರಂದು ಹೈವೋಲ್ಜೇಜ್ ಪಂದ್ಯವಾದ ಭಾರತ – ಪಾಕಿಸ್ತಾನ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? 1983ರ ಭಾರತದ ವಿಶ್ವಕಪ್ ವಿಜಯೋತ್ಸವಕ್ಕೆ 40ರ ಸಂಭ್ರಮ; ಅಭಿಮಾನಿಗಳಿಂದ ರೋಚಕ ಪಂದ್ಯದ ನೆನಪು
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ವಿಶ್ವಕಪ್ ಪಂದ್ಯಗಳು ನಡೆದರೂ ಭಾರತದ ಪಂದ್ಯ ನಡೆಯುವುದು ಕೇವಲ ಒಂದು ಮಾತ್ರ. ಉಳಿದ ನಾಲ್ಕು ಪಂದ್ಯಗಳಲ್ಲಿ ಬೇರೆ ಬೇರೆ ತಂಡಗಳು ಸೆಣಸಲಿವೆ. ನ. 11ರಂದು ನಡೆಯಲಿರುವ ಪಂದ್ಯದಲ್ಲಿ ಭಾರತದ ಪಂದ್ಯ ನಡೆಯಲಿದ್ದು ಆ ಪಂದ್ಯದಲ್ಲಿ ಟೂರ್ನಿಯ ಮೊದಲ ಕ್ವಾಲಿಫೈಯರ್ ಸ್ಥಾನಮಾನ ಪಡೆದ ತಂಡ ಮುಖಾಮುಖಿಯಾಗಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿಯ ಒಟ್ಟು ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳು ಹಗಲು-ರಾತ್ರಿ ಪಂದ್ಯಗಳಾಗಿದ್ದು, ಒಂದು ಪಂದ್ಯ ಮಾತ್ರ ಹಗಲಲ್ಲಿ ನಡೆಯುವ ಪಂದ್ಯವಾಗಲಿದೆ. ಇನ್ನುಳಿದಂತೆ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳು 48 ಪಂದ್ಯಗಳಲ್ಲಿ ಸೆಣಸಲಿವೆ.
ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಈಗಾಗಲೇ ಅರ್ಹತೆ ಗಿಟ್ಟಿಸಿಕೊಂಡಿದ್ದು, ನೇರವಾಗಿ ಟೂರ್ನಿಯಲ್ಲಿ ಆಡಲಿವೆ. ಉಳಿದೆರಡು ಸ್ಥಾನಕ್ಕಾಗಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ತಂಡಗಳು ಪೈಪೋಟಿ ನಡೆಸುತ್ತಿವೆ.
ಬೆಂಗಳೂರು, ಹೈದರಾಬಾದ್, ಪುಣೆ, ಲಖನೌ, ಅಹಮದಾಬಾದ್, ದೆಹಲಿ, ಧರ್ಮಶಾಲಾ, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.
ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳು
- ಅ. 20: ಆಸ್ಟ್ರೇಲಿಯಾ – ಪಾಕಿಸ್ತಾನ
- ಅ. 26: ಇಂಗ್ಲೆಂಡ್ – ಕ್ವಾಲಿಫೈಯರ್ 2
- ನ. 4 : ನ್ಯೂಜಿಲೆಂಡ್ – ಪಾಕಿಸ್ತಾನ
- ನ. 9 :ನ್ಯೂಜಿಲೆಂಡ್ – ಕ್ವಾಲಿಫೈಯರ್ 2
- ನ. 11 : ಭಾರತ ಮತ್ತು ಕ್ವಾಲಿಫೈಯರ್ 1
ಭಾರತ ತಂಡದ ಪಂದ್ಯಗಳು
- ಅಕ್ಟೋಬರ್ 8 : ಭಾರತ – ಆಸ್ಟ್ರೇಲಿಯಾ, ಚೆನ್ನೈ
- ಅಕ್ಟೋಬರ್ 11 : ಭಾರತ – ಅಫ್ಘಾನಿಸ್ತಾನ, ದೆಹಲಿ
- ಅಕ್ಟೋಬರ್ 15 : ಭಾರತ – ಪಾಕಿಸ್ತಾನ, ಅಹಮದಾಬಾದ್
- ಅಕ್ಟೋಬರ್ 19 : ಭಾರತ – ಬಾಂಗ್ಲಾದೇಶ, ಪುಣೆ
- ಅಕ್ಟೋಬರ್ 22 : ಭಾರತ – ನ್ಯೂಜಿಲೆಂಡ್, ಧರ್ಮಶಾಲಾ
- ಅಕ್ಟೋಬರ್ 29 : ಭಾರತ – ಇಂಗ್ಲೆಂಡ್, ಲಖನೌ
- ನವೆಂಬರ್ 2 : ಭಾರತ – ಕ್ವಾಲಿಪೈಯರ್ 2, ಮುಂಬೈ
- ನವೆಂಬರ್ 5 : ಭಾರತ – ದಕ್ಷಿಣ ಆಫ್ರಿಕಾ, ಕೋಲ್ಕತ್ತಾ
- ನವೆಂಬರ್ 11 : ಭಾರತ – ಕ್ವಾಲಿಫೈಯರ್ 1, ಬೆಂಗಳೂರು
