ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲು ಕಂಡು ಸರಣಿ ಕಳೆದುಕೊಂಡಿರುವ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ, ಮುಂಬೈನಲ್ಲಿ ಇಂದಿನಿಂದ ಆರಂಭಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲೂ ಮತ್ತೆ ವೈಫಲ್ಯ ಕಂಡಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭಗೊಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಸ್ಪಿನ್ ದಾಳಿಗೆ ಸಿಲುಕಿದ್ದ ನ್ಯೂಝಿಲ್ಯಾಂಡ್ ತಂಡ 65.4 ಓವರ್‌ಗಳಲ್ಲಿ 235 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾದ ಬ್ಯಾಟಿಂಗ್ ಕೈಕೊಟ್ಟಿದ್ದು, ಮೊದಲ ದಿನದಾಟಕ್ಕೆ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 86 ರನ್ ಗಳಿಸಿದೆ.
ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಲು ಬ್ಯಾಟಿಂಗ್ ವಿಫಲರಾದರು. 18 ಎಸೆತಗಳಲ್ಲಿ 3 ಬೌಂಡರಿಯ ನೆರವಿನೊಂದಿಗೆ 18 ರನ್ ಗಳಿಸಿದ್ದಾಗ, ಮ್ಯಾಟ್ ಹೆನ್ರಿ ಎಸೆತೆದಲ್ಲಿ ಲಾಥಮ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
Stumps on the opening day of the Third Test in Mumbai.#TeamIndia move to 86/4 in the 1st innings, trail by 149 runs.
— BCCI (@BCCI) November 1, 2024
See you tomorrow for Day 2 action
Scorecard – https://t.co/KNIvTEyxU7#INDvNZ | @IDFCFIRSTBank pic.twitter.com/ppQj8ZBGzz
ಬಳಿಕ ಕ್ರೀಸ್‌ನಲ್ಲಿ ನಿಂತು ಉತ್ತಮ ಬ್ಯಾಟಿಂಗ್ ನಡೆಸುವ ಸೂಚನೆ ನೀಡಿದ್ದ ಇನ್ನೋರ್ವ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ನ್ಯೂಝಿಲ್ಯಾಂಡ್‌ನ ಅಜಾಝ್ ಪಟೇಲ್ ಎಸೆತದಲ್ಲಿ ಸ್ವೀಪ್ ಮಾಡಲು ಹೋಗಿ, ಕ್ಲೀನ್ ಬೌಲ್ಢ್ ಆದರು. 52 ಎಸೆತಗಳನ್ನು ಎದುರಿಸಿದ್ದ ಜೈಸ್ವಾಲ್, 4 ಬೌಂಡರಿಯ ನೆರವಿನಿಂದ 30 ರನ್ ಗಳಿಸಿ, ಪೆವಿಲಿಯನ್ ಕಡೆಗೆ ಸಾಗಿದರು.
ಆ ಬಳಿಕ ‘ನೈಟ್ ವಾಚ್‌ಮನ್’ ಆಗಿ ಕ್ರೀಸ್‌ಗೆ ಬಂದ ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಸಿರಾಜ್, ತಾನೆದುರಿಸಿದ ಅಜಾಝ್ ಪಟೇಲ್ ಅವರ ಮೊದಲ ಎಸೆತದಲ್ಲೇ ಎಲ್‌ಬಿಡ್ಲ್ಯೂ ಬಲೆಗೆ ಬಿದ್ದು, ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಕಡೆಗೆ ಸಾಗಿದರು. ಈ ವೇಳೆ ಟೀಮ್ ಇಂಡಿಯಾವು 3 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿತ್ತು.
Matt Henry's direct hit catches Virat Kohli short 😯#INDvNZ #IDFCFirstBankTestTrophy #JioCinemaSports pic.twitter.com/cL4RvUdMST
— JioCinema (@JioCinema) November 1, 2024
ಈ ವೇಳೆ ಕ್ರೀಸ್‌ನಲ್ಲಿದ್ದ ಶುಭಮನ್ ಗಿಲ್‌ಗೆ ಜೊತೆಯಾದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ತನ್ನದೇ ತಪ್ಪಿನಿಂದಾಗಿ ರನೌಟ್‌ಗೆ ಬಲಿಯಾದರು. ನಾನ್ ಸ್ಟ್ರೈಕ್‌ನಲ್ಲಿ ಮ್ಯಾಟ್ ಹೆನ್ರಿ ಎಸೆತೆದ ಡೈರೆಕ್ಟ್ ಥ್ರೋ ವಿಕೆಟ್ ಮೇಲೆ ಬಿದ್ದಿದ್ದರಿಂದ ರನೌಟ್ ಆಗಿ, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ರನೌಟ್ ಔಟಾಗುವುದಕ್ಕೂ ಮುನ್ನ 6 ಎಸೆತ ಎದುರಿಸಿದ್ದ ವಿರಾಟ್ ಕೊಹ್ಲಿ, ಕೇವಲ 4 ರನ್ ಗಳಿಸಿದ್ದರು.
ಇದನ್ನು ಓದಿದ್ದೀರಾ? ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಕಠಿಣ: ಅನಿಲ್ ಕುಂಬ್ಳೆ ಬೇಸರ
ಮೊದಲ ದಿನದಾಟದ ಅಂತ್ಯದ ವೇಳೆಗೆ 19 ಓವರ್ ಆಡಿರುವ ಟೀಮ್ ಇಂಡಿಯಾ, 4 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದ್ದು, ಸಂಕಷ್ಟಕ್ಕೆ ಸಿಲುಕಿದೆ. ಸದ್ಯ 31 ರನ್ ಗಳಿಸಿರುವ ಶುಭಮನ್ ಗಿಲ್ ಹಾಗೂ 1 ರನ್ ಗಳಿಸಿರುವ ರಿಷಭ್ ಪಂತ್ ಎರಡನೆ ದಿನದಾಟಕ್ಕಾಗಿ ಕ್ರೀಸ್ ಕಾಯ್ದಿರಿಸಿಕೊಂಡಿದ್ದಾರೆ. ಕಿವೀಸ್ ತಂಡ 235 ರನ್‌ಗಳಿಗೆ ಆಲೌಟ್ ಆಗಿತ್ತು. ಇದನ್ನು ಟೀಮ್ ಇಂಡಿಯಾ ದಾಟಬೇಕಾದರೆ, 149 ರನ್ ಗಳಿಸಬೇಕಿದೆ. ಅದಕ್ಕೆ ಉತ್ತಮ ಜೊತೆಯಾಟದ ಅವಶ್ಯಕತೆ ಇದೆ.
ಸಂಕ್ಷಿಪ್ತ ಸ್ಕೋರ್ ವಿವರ: ಮೊದಲ ದಿನ
ನ್ಯೂಝಿಲ್ಯಾಂಡ್: ಮೊದಲ ಇನ್ನಿಂಗ್ಸ್; 235 ರನ್‌ಗಳಿಗೆ ಆಲೌಟ್
ಟೀಮ್ ಇಂಡಿಯಾ: ಮೊದಲ ಇನ್ನಿಂಗ್ಸ್; 86ಕ್ಕೆ ರನ್‌ಗಳಿಗೆ 4 ವಿಕೆಟ್
