ಇಂಗ್ಲೆಂಡ್‌ನ ವೇಗದ ಬೌಲರ್ ಒಲ್ಲಿ ರಾಬಿನ್ಸನ್ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 43 ರನ್‌ಗಳನ್ನು ಚಚ್ಚಿಸಿಕೊಳ್ಳುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಬೌಲಿಂಗ್ ಮಾಡುವ ಅನಗತ್ಯ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆ.
2021ರಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬಲಗೈ ಬೌಲರ್ ರಾಬಿನ್ಸನ್, ಇಂಗ್ಲೆಂಡ್ ಪರ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಇಲ್ಲಿ ಹೋವ್‌ನಲ್ಲಿ ಸಸೆಕ್ಸ್‌ಗಾಗಿ ಆಡುತ್ತಿರುವಾಗ ಲೀಸೆಸ್ಟರ್‌ಶೈರ್ ವಿರುದ್ಧ ಡಿವಿಷನ್ ಎರಡು ಪಂದ್ಯದಲ್ಲಿ ತಮ್ಮ ಓವರ್ ಅನ್ನು ಪೂರ್ಣಗೊಳಿಸಲು ಒಟ್ಟು ಒಂಭತ್ತು ಎಸೆತಗಳನ್ನು ಬೌಲ್ ಮಾಡಿ, 43 ರನ್ ಚಚ್ಚಿಸಿಕೊಂಡಿದ್ದಾರೆ. ಇದು 134 ವರ್ಷಗಳ ಕೌಂಟಿ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಆಗಿದೆ.
Ollie Robinson has conceded 43 runs in an over.
– Most expensive over in 134 years of County Championship history. 🤯pic.twitter.com/SSWUg3smiF
— Mufaddal Vohra (@mufaddal_vohra) June 26, 2024
ಲೀಸೆಸ್ಟರ್‌ಶೈರ್‌ನ ಲೂಯಿಸ್ ಕಿಂಬರ್, ರಾಬಿನ್ಸನ್ ಎಸೆತದಲ್ಲಿ ಐದು ಸಿಕ್ಸರ್ (ಮೂರು ನೋಬಾಲ್), ಮೂರು ಬೌಂಡರಿ ಮತ್ತು ಒಂದು ರನ್ ಬಾರಿಸಿ 43 ರನ್ ಗಳಿಸಿದರು.
ರಾಬಿನ್ಸನ್ ಅವರ 13ನೇ ಓವರ್‌ನಲ್ಲಿ ನೋ ಬಾಲ್‌ನಲ್ಲಿ 6, 6, ನೋ ಬಾಲ್‌ನಲ್ಲಿ 4, 6, 4, 6, ನೋ ಬಾಲ್‌ನಲ್ಲಿ 4, 6 ಮತ್ತು ಒಂದು ರನ್ ಗಳಿಸಿದರು. ಈ ಮೂಲಕ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ನೀಡಿದ ದಾಖಲೆಯನ್ನೂ ರಾಬಿನ್ಸನ್ ಮುರಿದರು. ರಾಬಿನ್ಸನ್ ಮಾಜಿ ಟೆಸ್ಟ್ ವೇಗದ ಬೌಲರ್ ಅಲೆಕ್ಸ್ ಟ್ಯೂಡರ್ ಅವರ 38 ರನ್‌ಗಳನ್ನು ಕೊಟ್ಟಿದ್ದ ದಾಖಲೆಯನ್ನು ಹಿಂದಿಕ್ಕಿದರು.
LOUIS KIMBER HAS TAKEN 43 OFF AN OVER pic.twitter.com/kQ4cLUhKN9
— Vitality County Championship (@CountyChamp) June 26, 2024
ಎರಡನೇ ಅತಿವೇಗದ ದ್ವಿಶತಕ ಬಾರಿಸಿದ ಲೂಯಿಸ್ ಕಿಂಬರ್
ರಾಬಿನ್ಸನ್ ಓವರ್‌ನಲ್ಲಿ 43 ರನ್ ಬಂದಿದ್ದು ಒಂದೆಡೆಯಾದರೆ, ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಡಬಲ್ ಸೆಂಚುರಿ ಬಾರಿಸಿದ ಕೀರ್ತಿಗೆ ಲೂಯಿಸ್ ಕಿಂಬರ್ ಪಾತ್ರರಾಗಿದ್ದಾರೆ.
THE FASTEST DOUBLE-CENTURY IN COUNTY CHAMPIONSHIP HISTORY! 🔥
Louis Kimber hits the second-fastest double hundred in first-class cricket, off just 100 balls 🤯 pic.twitter.com/70WgXJHLbU
— ESPNcricinfo (@ESPNcricinfo) June 26, 2024
ಲೂಯಿಸ್ ಕಿಂಬರ್ ಅವರು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕೇವಲ 100 ಎಸೆತಗಳಲ್ಲಿ ಎರಡನೇ ಅತಿವೇಗದ ದ್ವಿಶತಕ ಬಾರಿಸಿದರು. ಈ ಮೊದಲು 2018ರಲ್ಲಿ ಕಾಬೂಲ್ ರೀಜನ್ Vs ಬೂಸ್ಟ್ ರೀಜನ್‌ನ ಪಂದ್ಯದಲ್ಲಿ ಶಫೀಕುಲ್ಲಾ ಅವರು 89 ಎಸೆತಗಳಲ್ಲಿ ಅತಿವೇಗದ ದ್ವಿಶತಕ ಬಾರಿಸಿದ್ದರು. ಈ ಪಟ್ಟಿಯಲ್ಲಿ ಭಾರತದ ರವಿಶಾಸ್ತ್ರೀ ಹಾಗೂ ತನ್ಮಯ್ ಅಗರ್ವಾಲ್ ಹೆಸರು ಕೂಡ ಇದೆ.
