ಹಾಂಗ್ ಕಾಂಗ್‌ನಲ್ಲಿ ನಡೆಯುತ್ತಿರುವ ಹಾಂಗ್ ಕಾಂಗ್ ಸಿಕ್ಸಸ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಪಂದ್ಯ ನಡೆದಿದೆ. ಈ ವೇಳೆ, ಭಾರತ ತಂಡದ ರಾಬಿನ್ ಉತ್ತಪ್ಪ ಬರೋಬ್ಬರಿ 37 ರನ್‌ಗಳನ್ನು ಕೊಟ್ಟಿದ್ದಾರೆ. ಅವರ ಬೌಲಿಂಗ್ ಎದುರಿಸಿದ ಇಂಗ್ಲೆಂಡ್ ತಂಡದ ರವಿ ಬೋಪಾರಾ ಆರು ಬಾಲ್‌ಗಳಿಗೆ 6 ಸಿಕ್ಸ್ ಪೇರಿಸಿದ್ದಾರೆ.
ಉತ್ತಪ್ಪ ಮಾಡಿದ ಬೌಲಿಂಗ್‌ನಲ್ಲಿ ಮೊದಲ 5 ಬಾಲ್‌ಗಳಿಗೆ ಬೋಪಾರಾ 5 ಸಿಕ್ಸ್ ಸಿಡಿಸಿದ್ದಾರೆ. ಬಳಿಕ, ಒಂದು ‘ವೈಡ್’ ಆಗಿದ್ದು, ಆರನೇ ಬಾಲ್‌ಗೆ ಮತ್ತೊಂದು ಸಿಕ್ಸ್ ಸಿಡಿಸಿದ್ದಾರೆ (6, 6, 6, 6, 6, ವೈಡ್, 6). ಈ ಆರು ಸಿಕ್ಸ್‌ಗಳೊಂದಿಗೆ ಕೇವಲ 14 ಎಸೆತಗಳಲ್ಲಿಯೇ ಬೋಪಾರಾ ಅರ್ಧಶತಕ ಸಿಡಿಸಿದ್ದಾರೆ.
ಓವರ್ ಚೇಂಜ್ ಆದ ಬಳಿಕ, ಬೌಲಿಂಗ್ ಎದುರಿಸಿದ ಇಂಗ್ಲೆಂಡ್ ಆಟಗಾರ ಶಹಬಾಜ್ ನದೀಮ್, ಮೊದಲ ಎಸತಕ್ಕೆ ಸಿಕ್ಸ್ ಬಾರಿಸಿದರು. ಇದು, ಇಂಗ್ಲೆಂಡ್ ತಂಡ ಸತತ 7 ಸಿಕ್ಸ್ ಗಳಿಕೆಗೆ ಕಾರಣವಾಯಿತು.
ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಬೋಪಾರಾ ತಮ್ಮ ಇನ್ನಿಂಗ್ಸ್‌ನಲ್ಲಿ ಎಂಟು ಸಿಕ್ಸರ್‌ಗಳ ಸಹಾಯದೊಂದಿಗೆ ಕೇವಲ 14 ಎಸೆತಗಳಲ್ಲಿ 53 ರನ್ ಗಳಿಸಿದರು. ಸಮಿತ್ ಪಟೇಲ್ ಅವರು ಕೇವಲ 18 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಾಯದಿಂದ 51 ರನ್ ಪೇರಿಸಿದರು.
ಪಂದ್ಯದಲ್ಲಿ ಬೋಪಾರಾ ಅವರು ಬ್ಯಾಟಿಂಗ್‌ನ ವಿಡಿಯೋ ಹಂಚಿಕೊಂಡಿರುವ ‘ಹಾಂಗ್ ಕಾಂಗ್ ಸಿಕ್ಸ್’ ಟ್ವಿಟರ್ ಹ್ಯಾಂಡಲ್, “ಇಂಗ್ಲೆಂಡ್ ತಂಡದ ನಾಯಕ ರವಿ ಬೋಪಾರಾ ಹಾಂಕಾಂಗ್‌ನಲ್ಲಿ ಸಿಕ್ಸರ್‌ಗಳ ಮಳೆಗರೆಯುತ್ತಿದ್ದಾರೆ!” ಎಂದು ಪೋಸ್ಟ್ ಮಾಡಿದೆ.
𝗪𝗮𝘁𝗰𝗵 𝗼𝘂𝘁! ⚠️
— Hong Kong Sixes (@HongKongSixes) November 2, 2024
The skipper of England, Ravi Bopara is raining sixes in Hong Kong!🔥#HongKong #AsiasWorldCity #Cricket #ItsRainingSixes pic.twitter.com/mDckwXkeEP
ಬೋಪಾರಾ ಮತ್ತು ಪಟೇಲ್ ಅವರ ಭರ್ಜರಿ ಪ್ರದರ್ಶನದೊಂದಿಗೆ ಇಂಗ್ಲೆಂಡ್ ತಂಡವು 6 ಓವರ್‌ಗಳಲ್ಲಿ ಒಂದು ಟಿಕೆಟ್ ನಷ್ಟದೊಂದಿಗೆ ಒಟ್ಟು 120 ರನ್ ಕಲೆ ಹಾಕಿತು. ಇಂಗ್ಲೆಂಡ್ ನೀಡಿದ ಗುರಿಯ ಬೆನ್ನತ್ತಿದ ಭಾರತದ ತಂಡ 6 ಓವರ್‌ಗಳಲ್ಲಿ 105 ರನ್‌ಗಳನ್ನು ಗಳಿಸಿ, ಸೋಲುಂಡಿತು.
ಹಾಂಗ್ ಕಾಂಗ್ ಸಿಕ್ಸ್ ಪಂದ್ಯಾವಳಿಯಲ್ಲಿ ಭಾರತವು ಇನ್ನೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಈಗಾಗಲೇ ಪಾಕಿಸ್ತಾನ, ಯುಎಇ ಮತ್ತು ಇಂಗ್ಲೆಂಡ್ ವಿರುದ್ಧ ಭಾರತ ಸೋಲುಂಡಿದೆ.