ವಿದರ್ಭ ತಂಡದ ಬ್ಯಾಟರ್ ಕರುಣ್ ನಾಯರ್ ಅವರು ಇತ್ತೀಚೆಗೆ ಆಡಿದ 7 ಇನ್ನಿಂಗ್ಸ್‌ಗಳಲ್ಲಿ 5 ಶತಕಗಳೊಂದಿಗೆ 752 ರನ್ ಗಳಿಸಿದ್ದಾರೆ. ಮಾತ್ರವಲ್ಲದೆ, ಆರು ಇನ್ನಿಂಗ್ಸ್‌ಗಳಲ್ಲಿ ಔಟ್ ಆಗದೇ ಉಳಿದಿದ್ದಾರೆ. ಆ ಮೂಲಕ ಹೊಸ ದಾಖಲೆ ಬರೆಯುವತ್ತ ಹೆಜ್ಜೆ ಇಟ್ಟಿದ್ದಾರೆ.’
ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡವನ್ನು ಮುನ್ನಡೆಸುತ್ತಿರುವ ನಾಯರ್, ಆ ಟೂರ್ನಿಯ 7 ಪಂದ್ಯಗಳಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಟೂರ್ನಿಯ ಪಂದ್ಯವೊಂದರಲ್ಲಿ ಅಜೇಯ 163 ರನ್ ಕಲೆ ಹಾಕಿ ಗರಿಷ್ಠ ಮೊತ್ತ ದಾಖಲಿಸಿದ್ದಾರೆ.
ಗುರುವಾರ, ಮಹಾರಾಷ್ಟ್ರದ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ನಾಯರ್ 44 ಎಸೆತಗಳಲ್ಲಿ 9 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳೊಂದಿಗೆ 88* ರನ್ ಗಳಿಸಿದರು. ವಿದರ್ಭ ತಂಡವು 380 ರನ್‌ಗಳನ್ನು ಪೇರಿಸಿ, ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿತು.
ಶನಿವಾರ, ವಿದರ್ಭ ಮತ್ತು ಕರ್ನಾಟಕದ ನಡುವೆ ಗುಜರಾತ್‌ನ ವಡೋದರಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯದಲ್ಲಿ ಎಲ್ಲರ ಚಿತ್ತವೂ ನಾಯರ್ ಅವರು ಅಬ್ಬರದ ಬ್ಯಾಟಿಂಗ್ ಮೇಲೆಯೇ ಕೇಂದ್ರೀಕರಿಸಲಿದೆ.
ಈ ಪಂದ್ಯದಲ್ಲಿ ನಾಯರ್ ಉತ್ತಮ ಪ್ರದರ್ಶನ ನೀಡಿದರೆ, ಹಜಾರೆ ಟ್ರೋಫಿಯಲ್ಲಿ ಸಾರ್ವಕಾಲಿಕ ದಾಖಲೆ ಮುರಿದು, ಹೊಸ ದಾಖಲೆ ನಿರ್ಮಿಸಲಾಗಿದ್ದಾರೆ. ಅವರು ಫೈನಲ್ ಪಂದ್ಯದಲ್ಲಿ 79 ರನ್ ಗಳಿಸಿದರೂ, ಟ್ರೋಫಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ನ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಈ ಹಿಂದೆ, 2022/23ರಲ್ಲಿ ನಡೆದಿದ್ದ, ಹಜಾರೆ ಟ್ರೋಫಿಯಲ್ಲಿ ತಮಿಳುನಾಡಿನ ಬ್ಯಾಟರ್ ನಾರಾಯಣ್ ಜಗದೀಶನ್ ಅವರು ಒಟ್ಟು 8 ಪಂದ್ಯಗಳಿಂದ 830 ರನ್ ಗಳಿಸಿದ್ದರು. ಇಗ, ನಾಯರ್ 79 ರನ್‌ಗಳಿಸಿದರೆ, ನಾರಾಯಣ್ ಅವರ ದಾಖಲೆಯನ್ನು ಮುರಿಯಬಹುದು.
ನಾಯರ್ ಅವರ ಪ್ರದರ್ಶನದ ಬಗ್ಗೆ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, “7 ಇನ್ನಿಂಗ್ಸ್‌ಗಳಲ್ಲಿ 5 ಶತಕಗಳೊಂದಿಗೆ 752 ರನ್ ಗಳಿಸುವುದು ಅಸಾಧಾರಣ. ಈ ರೀತಿಯ ಪ್ರದರ್ಶನಗಳು ಕೇವಲ ಸಂಭವಿಸುವುದಿಲ್ಲ. ಕಠಿಣ ಪರಿಶ್ರಮದಿಂದ ಬರುತ್ತವೆ. ಬಲಿಷ್ಠವಾಗಿ ಮುಂದುವರಿಯಿರಿ ಮತ್ತು ಪ್ರತಿಯೊಂದು ಅವಕಾಶವನ್ನೂ ಗಣನೆಗೆ ತೆಗೆದುಕೊಳ್ಳಿ” ಎಂದಿದ್ದಾರೆ.