ವಿಶ್ವ ನಂ. 1 ಟೆನಿಸ್ ಆಟಗಾರ ಅಲ್ಕಾರಾಜ್ ಕಾರ್ಲೋಸ್ ಅವರು ಸುಮಾರು 4 ಗಂಟೆ 42 ನಿಮಿಷಗಳ ಹೋರಾಟ ನಡೆಸಿ, ಖ್ಯಾತ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದು, ಇತಿಹಾಸ ನಿರ್ಮಿಸಿದ್ದಾರೆ.
ಭಾನುವಾರ ನಡೆದ ವಿಂಬಲ್ಡನ್ 2023 ರ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಕಾರ್ಲೋಸ್ ಅಲ್ಕಾರಾಝ್ 1-6, 7-6(8-6), 6-1, 3-6, 6-4 ಸೆಟ್‌ಗಳಿಂದ ವಿಶ್ವದ ಎರಡನೇ ಶ್ರೇಯಾಂಕಿತ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದರು. 20 ವರ್ಷ ವಯಸ್ಸಿನ ಸ್ಪೇನಿನ ಆಟಗಾರ ತನ್ನ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಮತ್ತು ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು. ಈ ಫೈನಲ್ ಪಂದ್ಯವು ನಾಲ್ಕು ಗಂಟೆ 42 ನಿಮಿಷಗಳ ಕಾಲ ನಡೆಯಿತು.
ಜೊಕೊವಿಕ್, ವಿಂಬಲ್ಡನ್ ನ ಹಿಂದಿನ ನಾಲ್ಕು ಆವೃತ್ತಿಗಳಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು.