ಆಸ್ಟ್ರೇಲಿಯಾ ವಿರುದ್ಧ ಇಂದು ನಡೆದ ಕೊನೆಯ ಹಾಗೂ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 6 ರನ್ಗಳ ರೋಚಕ ಜಯ ದಾಖಲಿಸಿದೆ.
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 161 ರನ್ ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, 20 ಓವರ್ಗಳಲ್ಲಿ 154/8 ರನ್ ಗಳಿಸಿತು. ಆಸ್ಟ್ರೇಲಿಯಾಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 10 ರನ್ಗಳ ಅವಶ್ಯಕತೆ ಇತ್ತು.
ಟೀಮ್ ಇಂಡಿಯಾ ಪರವಾಗಿ ಕೊನೆಯ ಓವರ್ ಎಸೆದ ಯುವ ಬೌಲರ್ ಹರ್ಷ್ದೀಪ್ ಸಿಂಗ್, ಕೇವಲ 3 ರನ್ಗಳನ್ನಷ್ಟೇ ಬಿಟ್ಟು ಕೊಡುವ ಮೂಲಕ ಟೀಮ್ ಇಂಡಿಯಾ 6 ರನ್ಗಳ ರೋಚಕ ಜಯ ದಾಖಲಿಸುವಂತಾಗಲು ನೆರವಾದರು.
WHAT. A. MATCH! 🙌
Arshdeep Singh defends 10 in the final over as #TeamIndia win the final T20I and clinch the series 4⃣-1⃣ 👏👏
Scorecard ▶️ https://t.co/CZtLulpqqM#INDvAUS | @IDFCFIRSTBank pic.twitter.com/c132ytok8M
— BCCI (@BCCI) December 3, 2023
ಆಸ್ಟ್ರೇಲಿಯಾ ಪರ ಮೆಕ್ ಡರ್ಮೊಟ್ (54) ಅರ್ಧಶತಕ ಸಿಡಿಸಿದರೆ, ಹೆಡ್ (28), ನಾಯಕ ವೇಡ್ 22 ರನ್ ಹೊಡೆದರು. ಮುಕೇಶ್ ಕುಮಾರ್ 3, ಅರ್ಶ್ದೀಪ್, ಬಿಷ್ಟೋಯ್ ತಲಾ 2, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು. ಈ ಪಂದ್ಯವನ್ನು 6 ರನ್ಗಳಿಂದ ಗೆಲ್ಲುವ ಮೂಲಕ ಭಾರತ, ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತು. ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ರೋಚಕವಾಗಿ ಗೆದ್ದಿತ್ತು.
161 ರನ್ಗಳ ಸವಾಲಿನ ಗುರಿ ನೀಡಿದ್ದ ಟೀಮ್ ಇಂಡಿಯಾ
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಸೂರ್ಯಕುಮಾರ್ ನೇತೃತ್ವದ ಯುವ ಭಾರತ ತಂಡ, ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ಗಳನ್ನು ಕಲೆಹಾಕಿತ್ತು.
A thrilling finish to an action-packed T20I series 👏👏#TeamIndia | #INDvAUS | @IDFCFIRSTBank pic.twitter.com/Cu9BjqojQK
— BCCI (@BCCI) December 3, 2023
ಶ್ರೇಯಸ್ ಅಯ್ಯರ್ 37 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ಗಳ ಮೂಲಕ 53 ರನ್ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟುವಂತೆ ನೋಡಿಕೊಂಡರು.
ಬೌಲಿಂಗ್ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಬೆನ್ ದ್ವಾರ್ಶುಯಿಸ್ ಮತ್ತು ಜೇಸನ್ ಬೆಹ್ರೆಂಡಾರ್ಫ್ ತಲಾ ಎರಡು ವಿಕೆಟ್ ಕಬಲಿಸಿದರೆ, ಆರನ್ ಹಾರ್ಡಿ, ತನ್ವೀರ್ ಸಂಘ ಮತ್ತು ನಾಥನ್ ಎಲ್ಲಿಸ್ ತಲಾ ಒಂದೊಂದು ವಿಕೆಟ್ ಪಡೆದರು.