ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಲಂಕಾಗೆ ಆರಂಭಿಕ ಆಘಾತ ನೀಡಿರುವ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್, ಒಂದೇ ಓವರ್ನಲ್ಲಿ ನಾಲ್ಕು ವಿಕೆಟ್ ಕಿತ್ತು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ತನ್ನ ಪಾಲಿನ ಎರಡನೇ ಓವರ್ ಎಸೆದ ಹೈದರಾಬಾದ್ ಮೂಲದ ಆಟಗಾರ, 1ನೇ ಎಸೆತದಲ್ಲಿ ನಿಸ್ಸಾಂಕ, ಮೂರನೇ ಎಸೆತದಲ್ಲಿ ಸಮರ ವಿಕ್ರಮ, ನಾಲ್ಕನೇ ಎಸೆತದಲ್ಲಿ ಅಸಲಂಕಾ ಹಾಗೂ ಕೊನೆಯ ಎಸೆತದಲ್ಲಿ ಧನಂಜಯ ಅವರ ವಿಕೆಟ್ ಕಬಳಿಸಿದರು.
W . W W 4 W! 🥵
— Star Sports (@StarSportsIndia) September 17, 2023
Is there any stopping @mdsirajofficial?! 🤯
The #TeamIndia bowlers are breathing 🔥
4️⃣ wickets in the over! A comeback on the cards for #SriLanka?
Tune-in to #AsiaCupOnStar, LIVE NOW on Star Sports Network#INDvSL #Cricket pic.twitter.com/Lr7jWYzUnR
ಸದ್ಯ ಮೂರನೇ ಓವರ್ನ 4ನೇ ಎಸೆತದಲ್ಲಿ ಶ್ರೀಲಂಕಾ ನಾಯಕ ಶಾನಕ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ 5 ವಿಕೆಟ್ ಪಡೆದ್ದಾರೆ. ಒಟ್ಟು ಮೂರು ಓವರ್ ಎಸೆದಿರುವ ಮೊಹಮ್ಮದ್ ಸಿರಾಜ್, ಕೇವಲ 5 ರನ್ ನೀಡಿ 5 ವಿಕೆಟ್ ಗಳಿಸಿದ್ದಾರೆ. ಸಿರಾಜ್ 5 ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಭಾರತದ 4ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
FIVE WICKET HAUL BY MOHAMMAD SIRAJ IN JUST 16 BALLS….!!!
— Mufaddal Vohra (@mufaddal_vohra) September 17, 2023
A spell of 5/4 in 2.4 overs – this is a historical spell! pic.twitter.com/PMmjYDkzKy
ಫೈನಲ್ ಪಂದ್ಯದ ಮೊದಲ ಓವರ್ ಎಸೆತ ವೇಗಿ ಜಸ್ಪ್ರೀತ್ ಬುಮ್ರಾ, ಮೂರನೇ ಎಸೆತದಲ್ಲಿ ಕುಸಾಲ್ ಪಿರೇರಾ ಅವರನ್ನು ಔಟ್ ಮಾಡುವ ಮೂಲಕ ಲಂಕಾದ ಮೊದಲ ವಿಕೆಟ್ ಕಬಳಿಸಿದ್ದರು.
ಸದ್ಯ 8 ಓವರ್ ಮುಕ್ತಾಯ ಕಂಡಿದ್ದು, 18 ರನ್ಗೆ ಪ್ರಮುಖ 6 ವಿಕೆಟ್ ಕಳೆದುಕೊಂಡಿದೆ. ದುನೀತ್ ವೆಲ್ಲಾಲಾಂಗೆ ಹಾಗೂ ಕುಸಾಲ್ ಮೆಂಡಿಸ್ ಕ್ರೀಸ್ನಲ್ಲಿದ್ದಾರೆ.
Mohammad Siraj becomes the 4th fastest Indian to complete 50 ODI wickets.
— Mufaddal Vohra (@mufaddal_vohra) September 17, 2023
What a performer! pic.twitter.com/Wpac1hSQZa