ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಪುರುಷರ ಕಬಡ್ಡಿ ಫೈನಲ್ ಪಂದ್ಯದಲ್ಲಿ ಒಂದು ಅಂಕಕ್ಕಾಗಿ ಇರಾನ್-ಭಾರತ ಆಟಗಾರರ ನಡುವೆ ವಾಕ್ಸಮರ ನಡೆದ ಪರಿಣಾಮ, ಪಂದ್ಯವನ್ನು ಅನಿರ್ದಿಷ್ಟ ಸಮಯದವರೆಗೆ ಸ್ಥಗಿತಗೊಳಿಸಲಾಗಿದೆ.
From here whichever team gets the gold that feeling of win and excitement losses after the mess and drama going on #Kabaddi #AsianGames23#Kabaddi pic.twitter.com/8ZE2SXweJv
— HARMAN BISHNOI (@Harman029) October 7, 2023
ಪವನ್ ಶೆರಾವತ್ ರೈಡ್ ಮಾಡಲು ಹೋದಾಗ ಲಾಬಿಯಲ್ಲಿ ಜಾರಿ ಬಿದ್ದರು. ಆದರೆ ಅವರು ಯಾವುದೇ ಆಟಗಾರರನ್ನು ಮುಟ್ಟಿರಲಿಲ್ಲ. ಈ ವೇಳೆ ಇರಾನ್‌ನ ಡಿಫೆಂಡಿಂಗ್ ಆಟಗಾರರು ಪವನ್ ಅವರನ್ನು ಡ್ಯಾಶಿಂಗ್ ಮೂಲಕ ಹೊರ ಹಾಕಿದ್ದಾರೆ. ಪವನ್‌ನ ನಂತರ ನಾಲ್ವರು ಡಿಫೆಂಡರ್‌ಗಳು ಹೊರಗೆ ಹೋದಂತೆ ಇರಾನ್‌ಗೆ ಡಿಫೆನ್ಸ್‌ನಲ್ಲಿ ಪಾಯಿಂಟ್ ಸಿಗಬೇಕೇ ಅಥವಾ ಭಾರತಕ್ಕೆ ನಾಲ್ಕು ಪಾಯಿಂಟ್‌ಗಳು ಸಿಗಬೇಕೇ? ಎಂದು ಗೊಂದಲ ಉಂಟಾದ ಪರಿಣಾಮ ಪಂದ್ಯವನ್ನು ಅನಿರ್ದಿಷ್ಟ ಸಮಯದವರೆಗೆ ಸ್ಥಗಿತಗೊಳಿಸಲಾಗಿದೆ.
It’s all happening in the #Kabaddi Final at #AsianGames Hangzhou 2022🤯
Did Pawan make the ultimate escape or did Iran’s defense play it brilliantly – who should get the points?🤨
Stay tuned to #SonyLIV to watch the drama unfold!📺👀#HangzhouAsianGames #TeamIndia #Cheer4India pic.twitter.com/xA6Bx3DA2l
— Sony LIV (@SonyLIV) October 7, 2023
ಅಂಕ ನೀಡುವ ವಿಚಾರದಲ್ಲಿ ಕಳೆದ ಅರ್ಧಗಂಟೆಗೂ ಹೆಚ್ಚು ಕಾಲದಿಂದ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಒಂದು ವೇಳೆ ಭಾರತಕ್ಕೆ ಅಂಕ ನೀಡಿದರೆ ಭಾರತ ಚಿನ್ನದ ಪದಕ ಗಳಿಸಲಿದೆ. ದ್ವಿತೀಯಾರ್ಧದ ವೇಳೆ ಭಾರತ ಹಾಗೂ ಇರಾನ್ 28-28 ಸಮಾನಾದ ಅಂಕಗಳನ್ನು ಗಳಿಸಿದೆ.
ಇದೀಗ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಪರಿಶೀಲನೆ ಇನ್ನೂ ನಡೆಯುತ್ತಿದೆ.
😃😃😃Bhai ham nahi hi manege jo he so he ..
4 – 1 Pawan 💫💫😃😃🇮🇳🇮🇳😀😀#AsianGames #Kabaddi #indvsiran pic.twitter.com/tUiBSudU7X— @kashyap_art_🇮🇳 (@Kashyap_art_) October 7, 2023