ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ರನ್ನು ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಪ್ರಾಧಿಕಾರ(ನಾಡಾ) ಮಾದಕವಸ್ತು ಪತ್ತೆ ಪರೀಕ್ಷೆಗೆ ಮೂತ್ರ ಮಾದರಿಯನ್ನು ಸೂಕ್ತ ಸಮಯಕ್ಕೆ ನೀಡದ ಕಾರಣ ಅಮಾನತುಗೊಳಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಜರಂಗ್ ಪುನಿಯಾ, ಮಾದಕ ವಸ್ತು ಪರೀಕ್ಷೆ ಪತ್ತೆಗೆ ಕೇಳಿರುವ ಪ್ರಶ್ನೆಯ ಬಗ್ಗೆ ನಾನು ಸ್ಪಷ್ಟಪಡಿಸುತ್ತೇನೆ.ನಾನು ನಾಡಾ ಅಧಿಕಾರಿಗಳಿಗೆ ನನ್ನ ಮಾದರಿಗಳನ್ನು ನೀಡಲು ತಿರಸ್ಕರಿಸಲಿಲ್ಲ. ನನ್ನ ಮಾದರಿಗಳನ್ನು ಹಾಗೂ ಮಾದಕ ದ್ರವ್ಯ ಪತ್ತೆ ಪರೀಕ್ಷೆ ನಡೆಸಲು ಅವಧಿ ಮೀರಿದ ಕಿಟ್‌ಗಳನ್ನು ತಂದು ಅದರ ಬಗ್ಗೆ ಕೈಗೊಂಡ ಕ್ರಮಗಳ ನನ್ನ ಪ್ರಶ್ನೆಗೆ ಉತ್ತರಿಸಲು ಅವರಲ್ಲಿ ಮನವಿ ಮಾಡುತ್ತೇನೆ. ಅಮಾನತು ಪತ್ರಕ್ಕೆ ನನ್ನ ವಕೀಲರು ಉತ್ತರ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ.
ಅಮಾನತುಗೊಂಡ ಕಾರಣ ಜುಲೈ 26ರಿಂದ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳವ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ.
ಬಜರಂಗ್ ಪುನಿಯಾ 2020ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ 65 ಕೆಜಿ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.
मेरे बारे में जो डोप टेस्ट के लिए ख़बर आ रही है उसके लिये मैं स्पष्ट करना चाहता हूँ !!! मैंने कभी भी नाडा अधिकारियों को sample देने से इनकार नहीं किया, मैंने उनसे अनुरोध किया कि वे मुझे जवाब दें कि उन्होंने पहले मेरा sample लेने के लिए जो एक्सपायरी किट लाई थी, उस पर उन्होंने क्या… pic.twitter.com/aU676ADyy3
— Bajrang Punia 🇮🇳 (@BajrangPunia) May 5, 2024
