ಬಾಂಗ್ಲಾದೇಶ ಎ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಿನ ಪಂದ್ಯದ ವೇಳೆ ವಿಕೆಟ್ ಕೀಪರ್ ಮಾಡಿದ ತಪ್ಪು ಈಗ ಎಲ್ಲಡೆ ವೈರಲ್ ಆಗುತ್ತಿದೆ.
ಬಾಂಗ್ಲಾದೇಶದ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಎ ತಂಡವು 50 ಓವರ್‌ಗಳಲ್ಲಿ ಆಲೌಟ್ ಆಗಿ 226 ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಎ ತಂಡವು 4 ಓವರ್‌ಗಳಲ್ಲಿ 35 ರನ್ ಪೇರಿಸಿತ್ತು. 5ನೇ ಓವರ್‌ನಲ್ಲಿ ಇಬಾದತ್ ಹೊಸೈನ್ ಬೌಲಿಂಗ್ ದಾಳಿಗೆ ಇಳಿದಿದ್ದರು. ಈ ವೇಳೆ ಬಾಂಗ್ಲಾದೇಶ ಎ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ನೂರುಲ್ ಹಸನ್ ವಿಕೆಟ್ ಹಿಂದೆ ನಿಲ್ಲುವುದು ಬಿಟ್ಟು ಮೊದಲ ಸ್ಲಿಪ್‌ನಲ್ಲಿ ನಿಂತಿದ್ದರು. ಆದರೆ ಅದಕ್ಕೂ ಮುನ್ನ ಅವರು ವಿಕೆಟ್ ಹಿಂದೆ ತಮ್ಮ ಹೆಲ್ಮೆಟ್ ಇರಿಸಿದ್ದರು.
ಇದನ್ನು ಓದಿದ್ದೀರಾ? ಒಂದೇ ಓವರ್‌ನಲ್ಲಿ 6 ಸಿಕ್ಸ್; ಇಂಗ್ಲೆಂಡ್‌ನಲ್ಲಿ ಭಾರತೀಯ ಮೂಲದ ಆಟಗಾರನ ಸಾಧನೆ
ಇಬಾದತ್ ಹೊಸೈನ್ ಎಸೆದ ಚೆಂಡನ್ನು ಡೇಲ್ ಫಿಲಿಪ್ಸ್ ಬಿಟ್ಟಿದ್ದಾರೆ. ಚೆಂಡು ವಿಕೆಟ್ ಹಿಂದೆ ಕೀಪರ್ ಇಲ್ಲದಿದ್ದರಿಂದ ನೇರವಾಗಿ ಹೋಗಿ ಹೆಲ್ಮೆಟ್‌ಗೆ ಬಡಿದಿದೆ. ಐಸಿಸಿ ನಿಯಮದ ಪ್ರಕಾರ, ಮೈದಾನದಲ್ಲಿರುವ ಹೆಲ್ಮೆಟ್‌ಗೆ ಚೆಂಡು ತಗುಲಿದರೆ ಬ್ಯಾಟಿಂಗ್ ನಡೆಸುವ ತಂಡಕ್ಕೆ 5 ದಂಡದ ರನ್‌ಗಳನ್ನು ನೀಡಬೇಕು. ಅದರಂತೆ ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚುವರಿಯಾಗಿ 5 ರನ್ಗಳು ಲಭಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ಬಾಂಗ್ಲಾದೇಶದ ಎ ತಂಡದ ನಾಯಕ ನೂರಲ್ ಹಸನ್ ಟ್ರೋಲ್ ಆಗುತ್ತಿದ್ದಾರೆ.
ಈ ಪಂದ್ಯದಲ್ಲಿ 226 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಎ ತಂಡ 48.2 ಓವರ್‌ಗಳಲ್ಲಿ 231 ರನ್ ಬಾರಿಸಿ 4 ವಿಕೆಟ್ಗಳ ಅಂತರಲ್ಲಿ ಜಯ ಸಾಧಿಸಿತು.
What pic.twitter.com/viGdQ9ViBY
— Cameron Ponsonby (@cameronponsonby) May 11, 2025