ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಸೆಮಿಫೈನಲ್ ಕನಸು ಭಗ್ನವಾಗಿದೆ. ಟೂರ್ನಿಯ 8ನೇ ಪಂದ್ಯವಾಡಿದ ಲಂಕಾ ಪಡೆ ಬಾಂಗ್ಲಾದೇಶದ ಎದುರು 3 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿದೆ.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 38ನೇ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 280 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಹೊಸೈನ್ ಶಾಂಟೊ ಹಾಗೂ ನಾಯಕ ಶಕೀಬ್ ಅಲ್ ಹಸನ್ ಅವರ ಸ್ಫೋಟಕ ಆಟದ ನೆರವಿನಿಂದ 41.1 ಓವರ್‌ಗಳಲ್ಲಿ ಜಯವನ್ನು ತನ್ನದಾಗಿಸಿಕೊಂಡಿತು.
ಈಗಾಗಲೇ ಸೆಮಿಫೈನಲ್ ಸುತ್ತಿನಿಂದ ಹೊರಬಿದ್ದಿರುವ ಬಾಂಗ್ಲಾ ಟೂರ್ನಿಯ ತನ್ನ ಎರಡನೇ ಗೆಲುವಿನೊಂದಿಗೆ ಶ್ರೀಲಂಕಾದ ಅಳುದುಳಿದ ಆಸೆಯನ್ನು ನುಚ್ಚುನೂರು ಮಾಡಿತು.
ತಂಜಿದ್ ಹಸನ್(9) ಹಾಗೂ ಲಿಟ್ಟನ್ ದಾಸ್ (23) ಪೆವಿಲಿಯನ್‌ಗೆ ತೆರಳಿದ ನಂತರ ಮೂರನೇ ವಿಕೆಟ್‌ಗೆ 169 ರನ್‌ಗಳ ಜೊತೆಯಾಟವಾಡಿದ ಹೊಸೈನ್ ಶಾಂಟೊ ಹಾಗೂ ನಾಯಕ ಶಕೀಬ್ ಅಲ್ ಹಸನ್ ಗೆಲುವಿನ ರೂವಾರಿಯಾದರು.
The Shanto-Shakib partnership crosses 100 – the first century stand for Bangladesh this World Cup 😯
LIVE: https://t.co/HHkxM9EJVM #BANvSL #CWC23 pic.twitter.com/FoEBTRFP8S
— ESPNcricinfo (@ESPNcricinfo) November 6, 2023
ಈ ಸುದ್ದಿ ಓದಿದ್ದೀರಾ? ಒಂದೇ ಬಾಲ್‌ಗೆ ಎರಡು ವಿಕೆಟ್: ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ‘ಟೈಮ್ಡ್ ಔಟ್’ಗೆ ಮ್ಯಾಥ್ಯೂಸ್ ಔಟ್
10 ರನ್ನುಗಳಿಂದ ಶತಕ ತಪ್ಪಿಸಿಕೊಂಡ ಹೊಸೈನ್ ಶಾಂಟೊ 101 ಎಸೆತಗಳಲ್ಲಿ 12 ಆಕರ್ಷಕ ಬೌಂಡರಿಗಳೊಂದಿಗೆ 90 ರನ್ ಬಾರಿಸಿದರು. ಶಾಂಟೋಗೆ ಉತ್ತಮ ಜೊತೆಯಾಟವಾಡಿದ ಶಕೀಬ್ ಅಲ್ ಹಸನ್ ಕೇವಲ 65 ಚೆಂಡುಗಳಲ್ಲಿ 12 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ನೊಂದಿಗೆ 82 ರನ್ ಚಚ್ಚಿದರು.
ಶ್ರೀಲಂಕಾ ಪರ ಏಂಜೆಲೊ ಮ್ಯಾಥ್ಯೂಸ್ 39/2 ಹಾಗೂ ದಿಲ್ಶನ್ ಮಧುಶಂಕ 69/3 ವಿಕೆಟ್ ಪಡೆದರು. ಉಭಯ ತಂಡಗಳಿಗೆ ಟೂರ್ನಿಯಲ್ಲಿ ತಲಾ ಒಂದೊಂದು ಪಂದ್ಯವಿದೆ.
ಚರಿತ್ ಅಸಲಂಕಾ ಶತಕ ವ್ಯರ್ಥ
ಈ ಮೊದಲು ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಬಾಂಗ್ಲಾದೇಶ ಬೌಲರ್ಗಳು ನೀಡಿದ ಸಂಘಟಿತ ಪ್ರದರ್ಶನದ ಹೊರತಾಗಿಯೂ ಲಂಕಾ 49.3 ಓವರ್‌ಗಳಲ್ಲಿ 280 ರನ್ಗಳನ್ನು ಕಲೆ ಹಾಕಿತು.
5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಎಡಗೈ ಆಟಗಾರ ಚರಿತ್ ಅಸಲಂಕಾ, ಏಕಾಂಗಿ ಹೋರಾಟ ನಡೆಸಿದರು. ಬಾಂಗ್ಲಾ ಬೌಲರ್ಗಳನ್ನು ಕಾಡಿದ ಅಸಲಂಕಾ, ಅಮೋಘ ಶತಕ ಸಿಡಿಸಿ ಮಿಂಚಿದರು. 105 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಿತ 108 ರನ್ ಬಾರಿಸಿ ತಂಡ 280 ಕಲೆ ಹಾಕಲು ನೆರವಾದರು. ಅಸಲಂಕಾ ಹೊರತುಪಡಿಸಿದರೆ ಸದೀರ ಸಮರವಿಕ್ರಮ(41), ಧನಂಜಯ ಡಿ ಸಿಲ್ವ(34) ಹಾಗೂ ಪಾತುಂ ನಿಸ್ಸಾಂಕ (41) ರನ್ ಗಳನ್ನು ಕೊಡುಗೆ ನೀಡಿದರು.
ಬಾಂಗ್ಲಾ ಪರ ತಂಝಿಮ್ ಹಸನ್ ಸಾಕಿಬ್ 80/3, ಶಕೀಬ್ ಅಲ್ ಹಸನ್ 57/2 ಹಾಗೂ ಶೋರಿಫುಲ್ ಇಸ್ಲಾಂ 51/2 ವಿಕೆಟ್ ಪಡೆದರು.
Target set! Sri Lanka puts up 279 on the board. Now, it's time to defend with all our might! #SLvBAN #CWC23 #LankanLions pic.twitter.com/g75u3f9j8c
— Sri Lanka Cricket 🇱🇰 (@OfficialSLC) November 6, 2023
ಟೈಮ್ಡ್ ಔಟಾದ ಏಂಜೆಲೊ ಮ್ಯಾಥ್ಯೂಸ್
146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಲಂಕಾ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಮೊದಲ ಬಾರಿಗೆ ‘ ಟೈಮ್ಡ್ ಔಟ್ ’ ಮೂಲಕ ಔಟಾದರು. 24.2 ಓವರ್‌ನಲ್ಲಿ ತಂಡದ ಮೊತ್ತ 135/4 ಇದ್ದಾಗ ಸದೀರ ಸಮರವಿಕ್ರಮ ಔಟಾದ ನಂತರ ಆಗಮಿಸಿದ ಏಂಜೆಲೊ ಮ್ಯಾಥ್ಯೂಸ್ ಹೆಲ್ಮೆಟ್ ಸಮಸ್ಯೆಯಿಂದಾಗಿ ಡಗೌಟ್‌ನಲ್ಲಿ ಕುಳಿತಿದ್ದ ಸಹ ಆಟಗಾರರಿಗೆ ಸಿಗ್ನಲ್ ಮಾಡಿದರು. ಅಂದ ಹಾಗೆ ಮ್ಯಾಥ್ಯೂಸ್ ಅವರ ಹೆಲ್ಮೆಟ್‌ನಲ್ಲಿ ಸ್ಟ್ರಾಪ್ ಇರಲಿಲ್ಲ ಎಂಬುದು ವಿಡಿಯೋದಲ್ಲಿ ಕಾಣಿಸುತ್ತಿತ್ತು. ಹಾಗಾಗಿ ಹೆಲ್ಮೆಟ್ ಬದಲಿಸಲು ಅವರು ಬಯಸಿದ್ದರು.
ಎಂಜೆಲೋ ಮ್ಯಾಥ್ಯೂಸ್ ಕ್ರೀಸಿಗೆ ಬರಲು ಮೂರು ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರು. ಇದೇ ಸಮಯದಲ್ಲಿ ಶಕೀಬ್ ಅಲ್ ಹಸನ್ ಅಂಪೈರ್‌ಗೆ ಟೈಮ್ಡ್ ಔಟ್ ಮಾದರಿಯ ಮನವಿಯನ್ನು ಸಲ್ಲಿಸಿದರು. ಮೂರು ನಿಮಿಷ ಸಮಯ ಮೀರದ ಕಾರಣ ಎಂಜೆಲೋ ಮ್ಯಾಥ್ಯೂಸ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಔಟ್ ಮೊದಲ ಬಾರಿಯಾಗಿದೆ. ಅಲ್ಲದೆ ಒಂದೇ ಎಸೆತಕ್ಕೆ ಎರಡು ವಿಕೆಟ್ ಪತನವಾದಂತಾಯಿತು.
Dramatic scenes in Delhi with Angelo Mathews becoming the first batter to be timed out in international cricket 👀
Details 👉 https://t.co/F3ouVSKFAf#BANvSL #CWC23 pic.twitter.com/M4KRimgtDZ
— ICC Cricket World Cup (@cricketworldcup) November 6, 2023