ಕಳೆದ ರವಿವಾರ ಶ್ರೀಲಂಕಾ ವಿರುದ್ಧ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಲು ಪ್ರಮುಖ ಪಾತ್ರ ವಹಿಸಿದ್ದ ವೇಗಿ ಮೊಹಮ್ಮದ್ ಸಿರಾಜ್, ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ನಂ.1 ಬೌಲರ್ ಸ್ಥಾನಕ್ಕೆ ಜಿಗಿದಿದ್ದಾರೆ.
ಏಷ್ಯಾ ಕಪ್ ಫೈನಲ್‌ಗೂ ಮುನ್ನ ಟೀಮ್ ಇಂಡಿಯಾ ವೇಗಿ 9ನೇ ಸ್ಥಾನದಲ್ಲಿದ್ದರು. ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಬೌಲರ್ ಆಗಿದ್ದಾರೆ.
Mohammad Siraj becomes the new No.1 Ranked ODI bowler.
— Mufaddal Vohra (@mufaddal_vohra) September 20, 2023
He was No.9 last week – what a rise for Siraj! pic.twitter.com/TSXKbRAd4s
ಕಳೆದ ಆದಿತ್ಯವಾರ ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಬಗ್ಗುಬಡಿದಿದ್ದ ಟೀಮ್ ಇಂಡಿಯಾ ಎಂಟನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
Magic. Mayhem. Mohammed Siraj 🤩#AsiaCup2023 #SLvIND pic.twitter.com/kte9v5O25s
— ICC (@ICC) September 17, 2023
ಫೈನಲ್‌ನಲ್ಲಿ ಲಂಕನ್ನರಿಗೆ ಆಘಾತ ನೀಡಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್, ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಿತ್ತು ಐತಿಹಾಸಿಕ ಸಾಧನೆ ಮಾಡಿದ್ದಲ್ಲದೇ, ಒಟ್ಟು ಏಳು ಓವರ್ ಎಸೆದು ಕೇವಲ 21 ರನ್ ನೀಡಿ, ಪ್ರಮುಖ 6 ವಿಕೆಟ್ ಗಳಿಸಿದ್ದರು.