ಲಾರಾ ಮೇಲಿನ ಗೌರವದಿಂದ 400ರ ಗಡಿ ಸಮೀಪಿಸಲಿಲ್ಲ; 367 ರನ್‌ ಸಿಡಿಸಿದ ವಿಯಾನ್ ಮುಲ್ಡರ್ ಮಾತು

Date:

Advertisements

ದಕ್ಷಿಣ ಆಫ್ರಿಕಾದ ನಾಯಕ ವಿಯಾನ್ ಮುಲ್ಡರ್ ಅವರು ವೆಸ್ಟ್ ಇಂಡೀಸ್‌ನ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಅವರ ವಿಶ್ವದಾಖಲೆಯ 400 ರನ್ ಗಳನ್ನು ದಾಟಿ ಹೊಸ ಇತಿಹಾಸ ಬರೆಯಲು ವೇದಿಕೆ ಸಜ್ಜಾಗಿತ್ತು. ಜಿಂಬಾಬ್ವೆ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 367 ರನ್ ಗಳಿಸಿದ್ದ ಅವರಿಗೆ ವಿಶ್ವದಾಖಲೆಗೆ ಅಗತ್ಯವಿದ್ದುದು ಕೇವಲ 33 ರನ್ ಗಳಷ್ಟೇ. ಆದರೆ ಅಷ್ಟರಲ್ಲೇ ಅವರು ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮುೂಲಕ ಅಪೂರ್ವ ಅವಕಾಶವೊಂದನ್ನು ತಾವಾಗಿಯೇ ಕೈ ಚೆಲ್ಲಿದರು.

ವಿಯಾನ್ ಮುಲ್ಡರ್ ಅವರ ಈ ನಿರ್ಧಾರವು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಸುದ್ದಿಯಾಯಿತು. ಅನೇಕರು ಅವರ ನಿರ್ಧಾರವನ್ನು ಪ್ರಶ್ನಿಸಿದರು. ಆದರೆ, ಮುಲ್ಡರ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದೀಗ ಸ್ವತಃ ಮುಲ್ಡರ್ ಅವರೇ ಇದಕ್ಕೆ ಏನು ಕಾರಣ ಎಂಬುದನ್ನು ಬಹಿರಂಗಗೊಳಿಸಿದ್ದಾರೆ.

“ನಮ್ಮ ತಂಡಕ್ಕೆ ಸಾಕು ಎಂದು ನಾನು ಅಂದುಕೊಂಡೆ. ನಾವು ಬೌಲಿಂಗ್ ಮಾಡಬೇಕಿತ್ತು. ಎರಡನೆಯದಾಗಿ, ಬ್ರಿಯಾನ್ ಲಾರಾ ಒಬ್ಬ ದಂತಕಥೆ. ಅವರು ಇಂಗ್ಲೆಂಡ್ ವಿರುದ್ಧ 400 ರನ್ ಗಳಿಸಿದ್ದರು. ಅವರಂತಹ ದೊಡ್ಡ ಆಟಗಾರ ಆ ದಾಖಲೆಯನ್ನು ಉಳಿಸಿಕೊಳ್ಳುವುದು ವಿಶೇಷ. ನನಗೇನಾದರೂ ಮತ್ತೆ ಅವಕಾಶ ಸಿಕ್ಕರೆ, ನಾನು ಬಹುಶಃ ಇದೇ ರೀತಿ ಮಾಡುತ್ತೇನೆ.” ಎಂದು ವಿಯಾನ್ ಮುಲ್ಡರ್ ಹೇಳಿದ್ದಾರೆ.

Advertisements

“ನಾನು ಕೋಚ್ ಶುಕ್ರಿ ಕಾರ್ನಾಡ್ ಬಳಿ ಮಾತನಾಡಿ ಈ ನಿರ್ಧಾರ ತೆಗೆದುಕೊಂಡೆ. ದಂತಕಥೆಗಳು ದೊಡ್ಡ ಸ್ಕೋರ್‌ಗಳನ್ನು ಉಳಿಸಿಕೊಳ್ಳಲಿ. ನನ್ನ ಭವಿಷ್ಯವೇನೋ, ಅಥವಾ ನನಗಾಗಿ ಏನು ಕಾದಿದೆಯೋ ನನಗೆ ಗೊತ್ತಿಲ್ಲ. ಆದರೆ ಬ್ರಿಯಾನ್ ಲಾರಾ ಆ ದಾಖಲೆಯನ್ನು ಉಳಿಸಿಕೊಳ್ಳುವುದು ಸರಿಯಾದ ಕ್ರಮ ಎಂದು ನಾನು ಭಾವಿಸುತ್ತೇನೆ” ಎಂದು ಮುಲ್ಡರ್ ಹೇಳಿದರು.

ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಊಟದ ವಿರಾಮದ ಸಮಯದಲ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿದರು. ಆ ಸಮಯದಲ್ಲಿ ಅವರು 367 ರನ್ ಗಳಿಸಿ ಆಡುತ್ತಿದ್ದರು. ಒಬ್ಬ ಆಟಗಾರ 400 ರನ್ ಗಳಿಸುವ ಮೈಲಿಗಲ್ಲನ್ನು ತಲುಪಲು ಕೇವಲ 33 ರನ್ ಬಾಕಿ ಇತ್ತು. ಕ್ರಿಕೆಟ್ ಇತಿಹಾಸದಲ್ಲಿ ಇದು ಎರಡನೇ ಬಾರಿಗೆ ಆಗುತ್ತಿತ್ತು. ಬ್ರಿಯಾನ್ ಲಾರಾ 2004 ರಲ್ಲಿ ಆಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 400 ರನ್ ಗಳಿಸಿದ್ದರು. 1994ರಲ್ಲಿ ಬ್ರಿಯಾನ್ ಲಾರಾ ಅವರು ಇಂಗ್ಲೆಂಡ್ ವಿರುದ್ಧ 375 ರನ್ ಹೊಡೆದು ವಿಶ್ವ ದಾಖಲೆ ನಿರ್ಮಿಸಿದ್ದರು. ಈ ವಿಶ್ವದಾಖಲೆಯನ್ನು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಅವರು 2003ರಲ್ಲಿ ಜಿಂಬಾಬ್ವೆಯ ವಿರುದ್ಧ 380 ರನ್ ಗಳಿಸುವ ಮೂಲಕ ಮುರಿದಿದ್ದರು. ಮುಂದಿನ ವರ್ಷವೇ ಬ್ರಿಯಾನ್ ಲಾರಾ ಅವರು ಇಂಗ್ಲೆಂಡ್ ವಿರುದ್ಧ 400 ರನ್ ಗಳಿಸುವ ಮೂಲಕ ಮತ್ತೆ ವಿಶ್ವದಾಖಲೆಯ ಒಡೆಯರಾಗಿದ್ದರು. ಕಳೆದ ಎರಡು ದಶಕಗಳಿಂದಲೂ ಬ್ರಿಯಾನ್ ಲಾರಾ ಅವರ ವಿಶ್ವದಾಖಲೆ ಅಬಾಧಿತವಾಗಿದೆ. ಮುಲ್ಡರ್ ಅವರಿಗೆ ಈ ವಿಶ್ವದಾಖಲೆಯನ್ನು ಮುರಿಯುವ ಅವಕಾಶಗಳಿದ್ದರೂ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ.

ಇದನ್ನು ಓದಿದ್ದೀರಾ? ENG TEST | ಗಿಲ್‌ ನಿರ್ಮಿಸಿದ 10 ದಾಖಲೆಗಳು; 93 ವರ್ಷಗಳ ಬಳಿಕ ಟೀಂ ಇಂಡಿಯಾ ಸಾಧನೆ

ಟೆಸ್ಟ್‌ನಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ವಿಯಾನ್ ಮುಲ್ಡರ್ ತ್ರಿಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು.ಇದಕ್ಕೂ ಮುನ್ನ ನಾಯಕನಾಗಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಗ್ರಹಾಂ ಡೌಲಿಂಗ್ ಹೆಸರಿನಲ್ಲಿತ್ತು. 1968 ರಲ್ಲಿ ಟೀಮ್ ಇಂಡಿಯಾ ವಿರುದ್ಧ 239 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು.

ಇದೀಗ 367 ರನ್ ಬಾರಿಸಿ ವಿಯಾನ್ ಮುಲ್ಡರ್ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

334 ಎಸೆತಗಳನ್ನು ಎದುರಿಸಿದ ವಿಯಾನ್ ಮುಲ್ಡರ್ ಅಂತಿಮವಾಗಿ 49 ಬೌಂಡರಿ ಹಾಗೂ 4 ಸಿಕ್ಸ್‌ಗಳೊಂದಿಗೆ ಅಜೇಯ 367 ರನ್ ಬಾರಿಸಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಹೊಡೆದ ಬ್ಯಾಟರ್‌ಗಳು
ಬ್ರಿಯಾನ್‌ ಲಾರಾ(ವೆಸ್ಟ್‌ ಇಂಡೀಸ್) – ಅಜೇಯ 400 ರನ್‌ – 582 ಎಸೆತ – ಎದುರಾಳಿ ಇಂಗ್ಲೆಂಡ್‌ 2004

ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ) – 380 ರನ್‌ – 437 ಎಸೆತಗಳು – ಎದುರಾಳಿ ಜಿಂಬಾಬ್ವೆ – 2003

ಬ್ರಿಯಾನ್ ಲಾರಾ (ವೆಸ್ಟ್‌ ಇಂಡೀಸ್) – 375 ರನ್‌- 538 ಎಸೆತಗಳು – ಎದುರಾಳಿ ಇಂಗ್ಲೆಂಡ್ – 1994

ಮಹೇಲಾ ಜಯವರ್ಧನೆ (ಶ್ರೀಲಂಕಾ) – 374 ರನ್‌ – 572 ಎಸೆತಗಳು – ಎದುರಾಳಿ ದಕ್ಷಿಣ ಆಫ್ರಿಕಾ – 2006

ವಿಯಾನ್ ಮುಲ್ಡರ್ (ದಕ್ಷಿಣ ಆಫ್ರಿಕಾ) – ಅಜೇಯ 367 ರನ್‌ – 334 ಎಸೆತಗಳು – ಎದುರಾಳಿ ಜಿಂಬಾಬ್ವೆ – 2025

ಗ್ಯಾರಿ ಸೋಬರ್ಸ್ (ವೆಸ್ಟ್‌ ಇಂಡೀಸ್) – ಅಜೇಯ 365 ರನ್‌ –ಎದುರಾಳಿ ಪಾಕಿಸ್ತಾನ – 1958

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X