ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್‌ನ 43ನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್‌ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಪ್ರದರ್ಶನ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು 10 ರನ್‌ಗಳಿಂದ ಸೋಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 257 ರನ್ ಬಾರಿಸಿತ್ತು. 258 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ 10 ರನ್‌ಗಳ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.
ಕೊನೆವರೆಗೂ ತಿಲಕ್, ಹಾರ್ದಿಕ್ ಹೋರಾಟ ನಡೆಸಿದರಾದರೂ, ಮುಂಬೈ ಇಂಡಿಯನ್ಸ್‌ಗೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಈ ಮೂಲಕ ಮುಂಬೈ ತಂಡದ ಸೋಲಿನ ಬವಣೆ ಮುಂದುವರಿದಿದ್ದು ಹಾಲಿ ಆವೃತ್ತಿಯಲ್ಲಿ 9ನೇ ಪರಾಜಯಕ್ಕೆ ಒಳಗಾಗಿದೆ. ಈ ಸೋಲಿನಿಂದ ಮುಂಬೈ ಪ್ಲೇಆಫ್ ಅರ್ಹತೆ ಅತಂತ್ರವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದನೇ ಗೆಲುವನ್ನು ತನ್ನದಾಗಿಸಿಕೊಂಡು ಒಟ್ಟು 10 ಅಂಕಗಳನ್ನು ಪಡೆದುಕೊಂಡಿದ್ದು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಇದೇ ವೇಳೆ ಮುಂಬಯಿ ಇಂಡಿಯನ್ಸ್ ಬಳಗ ಕೇವಲ 6 ಅಂಕಗಳೊಂದಿಗೆ 9ನೇ ಸ್ಥಾನವನ್ನು ಪಡೆದುಕೊಂಡಿತು.
Make it ✌️ in✌️for @DelhiCapitals
With that, they successfully defend their highest IPL total & move 🆙 in the points table 👏👏
Scorecard ▶️ https://t.co/BnZTzctcaH#TATAIPL | #DCvMI pic.twitter.com/uZtJADdOx5
— IndianPremierLeague (@IPL) April 27, 2024
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ರೋಹಿತ್ ಶರ್ಮಾ 8 ರನ್ಗೆ ಔಟಾದರೆ ಇಶಾನ್ ಕಿಶನ್ 20 ರನ್ಗಳಿಗೆ ವಿಕೆಟ್ ಒಪ್ಪಿಸಿದರು. 45 ರನ್ಗೆ 2 ವಿಕೆಟ್ ನಷ್ಟ ಮಾಡಿಕೊಂಡ ಮುಂಬೈಗೆ ಆತಂಕ ಎದುರಾಯಿತು. ಈ ವೇಳೆ ಆಡಲು ಬಂದ ಸೂರ್ಯಕುಮಾರ್ ಯಾದವ್ 13 ಎಸೆತಕ್ಕೆ 26 ರನ್ ಬಾರಿಸಿ ಮಿಂಚುವ ಸೂಚನೆ ಕೊಟ್ಟರು. ಆದರೆ ಸೂರ್ಯರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಆದರೆ, ಮತ್ತೊಂದು ಬದಿಯಲ್ಲಿ ತಿಲಕ್ ವರ್ಮಾ ಗಟ್ಟಿಯಾಗಿ ನಿಂತು ಡೆಲ್ಲಿ ಬೌಲರ್ಗಳನ್ನು ದಂಡಿಸಿದರು. ಅದೇ ರೀತಿ ಹಾಲಿ ಆವೃತ್ತಿಯಲ್ಲಿ ಮೊದಲ ಬ್ಯಾರಿಗೆ ಬ್ಯಾಟಿಂಗ್ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ 24 ಎಸೆತಕ್ಕೆ 46 ರನ್ ಬಾರಿಸಿದರು.
Phew. 2️⃣ Points. Swaad Aa Gaya 💙❤️ pic.twitter.com/4sG1c95yNg
— Delhi Capitals (@DelhiCapitals) April 27, 2024
ನಂತರ ಬಂದ ನೇಹಲ್ ವದೇರಾ 4 ರನ್ಗೆ ಔಟಾದರು. ಟಿಮ್ ಡೇವಿಡ್ 17 ಎಸೆತಕ್ಕೆ 37 ರನ್ ಬಾರಿಸ ಗೆಲುವಿನ ಸನಿಹಕ್ಕೆ ಬರಲು ನೆರವಾದರು. ಆದರೆ, ಕೊನೆಯಲ್ಲಿ ಮುಂಬೈ ಇಂಡಿಯನ್ಸ್ 10 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಡೆಲ್ಲಿ ಪರ ರಸಿಕ್ ಸಲಾಂ ಹಾಗೂ ಮುಖೇಶ್ ಕುಮಾರ್ ತಲಾ 3 ವಿಕೆಟ್ ಉರುಳಿಸಿ ತಂಡ ಗೆಲುವಿಗೆ ನೆರವಾದರು.
DC hold their nerve in yet another 500+ game this season
👉https://t.co/5oytC7bjxQ | #DCvMI | #IPL2024 pic.twitter.com/sVLmUNWGE1
— ESPNcricinfo (@ESPNcricinfo) April 27, 2024
ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಡೆಲ್ಲಿ, ಜೇಕ್ ಫೇಸರ್ ಮೆಕ್ಗುರ್ಕ್ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಮಿಂಚಿದರು. 27 ಎಸೆತಗಳಲ್ಲಿ 84 ರನ್ ಚಚ್ಚಿದರು. ಅಭಿಷೇಕ್ ಪೊರೆಲ್ (36 ರನ್) ಜತೆಗೂಡಿ 114 ರನ್‌ಗಳ ಜೊತೆಯಾಟ ನಡೆಸಿ, ಮಿಂಚಿದರು. ಶಾಯ್ ಹೋಪ್ 17 ಎಸೆತಕ್ಕೆ 41 ರನ್, ನಾಯಕ ರಿಷಭ್ ಪಂತ್ 29 ರನ್ ಬಾರಿಸಿ ಮಿಂಚಿದರೆ, ಟ್ರಿಸ್ಟಾನ್ 25 ಎಸೆತಕ್ಕೆ 48 ರನ್ ಬಾರಿಸಿದರು.
