ಆಸ್ಟ್ರೇಲಿಯನ್ ಓಪನ್ ನಡೆಯುವಾಗಲೇ ಖ್ಯಾತ ಟೆನಿಸ್ ಆಟಗಾರ ನೋವಾಕ್ ಜೋಕೊವಿಚ್ ಹಠಾತನೆ ಮೈದಾನದಿಂದ ಹಿಂದೆ ಸರಿದು ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ತರಿಸಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿದ್ದ ಜೊಕೊವಿಚ್ ಸೆಮಿಫೈನಲ್ ಪ್ರವೇಶಿಸಿದರು. ಎಂಟರ ಘಟ್ಟದ ಪಂದ್ಯದ ನಂತರ ಜೋಕೊ ಗಾಯದಿಂದ ಬಳಲುತ್ತಿದ್ದರು. ಮತ್ತು ಸೆಮಿಫೈನಲ್‌ನ ಮಧ್ಯದಲ್ಲಿ, ಅವರು ಆಸ್ಟ್ರೇಲಿಯನ್ ಓಪನ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದರು.
ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆಯುವ ಅಭ್ಯಾಸದ ವೇಳೆಯೂ ಜೋಕೊವಿಚ್ ಅಂಗಳದಲ್ಲಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಊಹಾಪೋಹಗಳು ಹೆಚ್ಚಾಗಿದ್ದವು. ಈಗ ಈ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಸೆಮಿಫೈನಲ್ ಪಂದ್ಯದಲ್ಲಿ ಸರ್ಬಿಯಾದ ಸ್ಟಾರ್ ಆಟಗಾರ ನೋವಾಕ್ 6-7 ರಿಂದ ಹಿನ್ನಡೆ ಅನುಭವಿಸಿದರು.
ಜೊಕೊ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಸೆಣಸುವಾಗ ಗಾಯ ಕಾಣಿಸಿಕೊಂಡಿದ್ದು, ಮೊದಲ ಸೆಟ್ ಬಳಿಕ ಮೈದಾನದಿಂದ ಹಿಂದೆ ಸರಿಯಬೇಕಾಯಿತು. ಈ ಮೂಲಕ ಅಲೆಕ್ಸಾಂಡರ್ ಜ್ವೆರೆವ್ ಇದೇ ಮೊದಲ ಬಾರಿಗೆ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಶೇಷಚೇತನ ಚಾಂಪಿಯನ್ಸ್ ಟ್ರೋಫಿ | ಟೀಮ್ ಇಂಡಿಯಾಗೆ ಭರ್ಜರಿ ಗೆಲುವು
ಜೊಕೊವಿಚ್ ತಮ್ಮ 25 ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಕನಸಿನೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಆರಂಭಿಸಿದ್ದರು. ಅವರು 2008, 2011, 2012, 2013, 2015, 2016, 2019, 2020, 2021 ಮತ್ತು 2023 ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದಿದ್ದರು. ಈಗಾಗಲೇ ಜೋಕೊ 7 ಬಾರಿ ವಿಂಬಲ್ಡನ್, 4 ಬಾರಿ ಫ್ರೆಂಚ್, 4 ಬಾರಿ ಅಮೆರಿಕ ಓಪನ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.
ಜೊಕೊವಿಚ್ 12ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಜೊಕೊವಿಚ್ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ನೋವಾಕ್ ಎಂಟರ ಘಟ್ಟದ ಪಂದ್ಯವನ್ನು ಆಡುವಾಗಲೇ ಅವರಿಗೆ ಗಾಯ ಕಾಣಿಸಿಕೊಂಡಿತ್ತು. ಅವರ ವೈದ್ಯ ತಂಡ ಮೈದಾನಕ್ಕೆ ಬಂದು ಅವರಿಗೆ ಚಿಕಿತ್ಸೆ ನೀಡಿತ್ತು. ಆ ಬಳಿಕವೇ ನೋವಾಕ್, ಕಾರ್ಲೋಸ್ ಅಲ್ಕರಾಜ್ ವಿರುದ್ಧದ ಪಂದ್ಯವನ್ನು ಆಡಲು ಸಜ್ಜಾಗಿದ್ದರು.