ಕ್ರಿಕೆಟ್‌ನ ಶಿಸ್ತು, ಸಂಯಮದ ಪ್ರತಿರೂಪ ಅಂಶುಮಾನ್ ಗಾಯಕವಾಡ್

Date:

Advertisements

”ಆಟಗಾರರು ಮೈದಾನಕ್ಕೆ ತಡವಾಗಿ ಬಂದರೆ ಅಂಶುಮಾನ್ ಸಹಿಸುತ್ತಿರಲಿಲ್ಲ. ಕ್ರಿಕೆಟ್ ಬಗ್ಗೆ ಅದ್ಭುತ ಮುನ್ನೋಟ ಹೊಂದಿದ್ದ ಇವರು ಸ್ವತಃ ವಿದ್ಯಾರ್ಥಿಯ ರೀತಿಯಲ್ಲಿ ಎಲ್ಲರನ್ನು ಪ್ರೋತ್ಸಾಹಿಸುತ್ತಿದ್ದರು. ಮೈದಾನಕ್ಕೆ ಯಾರು ಬಂದಿಲ್ಲವೆಂದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಕ್ರಿಕೆಟ್‌ನಿಂದ ಹಿಂದೆ ಸರಿದ ನಂತರವೂ ಆಡಳಿತ ಮಟ್ಟದಲ್ಲೂ ತಂಡ ಉತ್ತಮ ಸುಧಾರಣೆಯಾಗುವಲ್ಲಿ ಕಾಣಿಕೆ ನೀಡಿದ್ದರು. ಇವರೊಬ್ಬ ಅದ್ಭುತ ವ್ಯಕ್ತಿ. ಕ್ರಿಕೆಟ್‌ನ ನನ್ನ ಶುರುವಿನ ದಿನಗಳಲ್ಲಿ ನನಗೆ ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಬರೋಡಾದ ಅಂದಿನ ದಿನಗಳಲ್ಲಿ ಸಿಂಹದ ರೀತಿಯಲ್ಲಿರುತ್ತಿದ್ದರು” ಭಾರತೀಯ ಕ್ರಿಕೆಟ್‌ನ ಅದ್ಭುತ ಸಾಧಕ ಅಂಶುಮಾನ್ ಗಾಯಕವಾಡ್ ಬಗ್ಗೆ ಈ ಮಾತುಗಳನ್ನು ಹೇಳಿದ್ದು ಮಾಜಿ ಕ್ರಿಕೆಟಿಗ ಹಾಗೂ ವಿಕೆಟ್ ಕೀಪರ್ ಆಗಿದ್ದ ಕಿರಣ್ ಮೋರೆ.

ಭಾರತದ ವಾಣಿಜ್ಯ ರಾಜಧಾನಿ ಬಾಂಬೆಯಲ್ಲಿ ಸೆಪ್ಟೆಂಬರ್ 23, 1952ರಂದು ಜನಿಸಿದ್ದ ಅಂಶುಮಾನ್ ಗಾಯಕವಾಡ್, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಕೌಟಂಬಿಕ ತೊಂದರೆಯಿರಲಿಲ್ಲ. ಮನೆಯಲ್ಲಿಯೇ ಕ್ರಿಕೆಟ್ ಬೇರುಗಳಿದ್ದವು. ತಂದೆ ‘ದತ್ತಾಜಿರಾವ್ ಗಾಯಕವಾಡ್‘ ಅವರು 50 ಹಾಗೂ 60ರ ದಶಕದಲ್ಲಿ ಟೀಂ ಇಂಡಿಯಾ ಹಾಗೂ ಬರೋಡಾ ತಂಡವನ್ನು ಪ್ರತಿನಿಧಿಸಿದ್ದ ಅಸಾಧಾರಣ ಪ್ರತಿಭೆ. ಆಗಲೇ ದತ್ತಾಜಿರಾವ್ ಗಾಯಕವಾಡ್ ಅವರು 10 ವರ್ಷದ ಅವಧಿಯಲ್ಲಿ 110 ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಂದು ದ್ವಿಶಕದೊಂದಿಗೆ 5,788 ರನ್‌ಗಳು ಹಾಗೂ ಭಾರತ ತಂಡದ ಪರವಾಗಿ 11 ಟೆಸ್ಟ್ ಪಂದ್ಯಗಳಲ್ಲಿ ಒಂದು ಅರ್ಧ ಶತಕದೊಂದಿಗೆ 350 ರನ್ ಬಾರಿಸಿದ್ದರು.

ಮನೆಯಲ್ಲಿಯೇ ಅಪ್ಪಟ ಕ್ರಿಕೆಟ್ ವಾತಾವರಣವಿದ್ದ ಕಾರಣ ಕ್ರಿಕೆಟ್ ಕ್ಷೇತ್ರದಲ್ಲಿ ಜೀವನ ಕಂಡುಕೊಳ್ಳಲು ಕಷ್ಟವಾಗಲಿಲ್ಲ. ತಂದೆ ದತ್ತಾಜಿರಾವ್ ಅವರಿಂದಲೇ ಅಂಶುಮನ್ ಕ್ರಿಕೆಟ್‌ನ ಪಟ್ಟುಗಳನ್ನು ಕಲಿತುಕೊಂಡರು. ಆರಂಭದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬಾಂಬೆ ತಂಡವನ್ನು ಪ್ರತಿನಿಧಿಸಿದ್ದ ಅಂಶುಮಾನ್ ಟೀಂ ಇಂಡಿಯಾ ಪರ ಮೊದಲ ಟೆಸ್ಟ್ ಕ್ರಿಕೆಟ್ ಆಡಿದ್ದು 1974 ಡಿಸೆಂಬರ್‌ನಲ್ಲಿ. ಅನಂತರ 1987ರ ಡಿಸೆಂಬರ್‌ವರೆಗಿನ 14 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಹಲವು ದಾಖಲೆಗಳೊಂದಿಗೆ ಭಾರತ ತಂಡಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ನಿವೃತ್ತಿ ನಂತರವೂ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ, ಟೀಂ ಇಂಡಿಯಾ ಕೋಚ್ ಮತ್ತು ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷರಾಗಿ ಭಾರತದ ಕ್ರಿಕೆಟ್‌ ಏಳಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

Advertisements

ಅಂಶುಮಾನ್ ಅವರ ಅದ್ಭುತ ಇನಿಂಗ್ಸ್‌ಗಳು

ಕ್ರಿಕೆಟ್‌ ಉದಯವಾದ ಹಲವು ದಶಕಗಳ ಕಾಲ ಟೆಸ್ಟ್‌ ಪಂದ್ಯಗಳೆ ಮುಂಚೂಣಿಯಲ್ಲಿದ್ದವು. ಟೆಸ್ಟ್‌ ತಂಡಕ್ಕೆ ಆಯ್ಕೆಯಾದ ನಂತರ ಅಂಶುಮಾನ್ ಗಾಯಕವಾಡ್ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಸುನಿಲ್ ಗಾವಸ್ಕರ್ ಜೊತೆಗೆ ಇನಿಂಗ್ಸ್ ಆರಂಭಿಸುತ್ತಿದ್ದರು. ಕೆಲವು ಪಂದ್ಯಗಳಲ್ಲಿ ಚೇತನ್ ಚೌಹಾಣ್ ಇನಿಂಗ್ಸ್ ಆರಂಭಿಸಿದರೆ ಮೊದಲ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದರು. 1982-83ರ ಸಂದರ್ಭದಲ್ಲಿ ಪಾಕ್‌ ವಿರುದ್ಧ ಭಾರತದಲ್ಲಿ ಟೆಸ್ಟ್‌ ಸರಣಿ ನಡೆಯುತ್ತಿತ್ತು. ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಇಮ್ರಾನ್ ಖಾನ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು.

ಈ ಪಂದ್ಯದಲ್ಲಿ ಅಂಶುಮಾನ್ ಗಾಯಕವಾಡ್ ದ್ವಿಶಕ ಬಾರಿಸಿದ್ದನ್ನು ಇಂದಿಗೂ ಹಲವು ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. 671 ನಿಮಿಷಗಳನ್ನು ಆಡಿದ ಅಂಶುಮಾನ್ 436 ಚೆಂಡುಗಳಲ್ಲಿ 201 ರನ್‌ ಪೇರಿಸಿದ್ದರು. ಅಂದಿನ ಸಮಯದಲ್ಲಿ ಈ ದ್ವಿಶತಕವು ಅತಿ ನಿಧಾನಗತಿಯ ದ್ವಿಶತಕವೆಂದು ದಾಖಲಾಗಿತ್ತು. ಅಂದರೆ ಅವರು 11 ಗಂಟೆಗಳಿಗೂ ಹೆಚ್ಚು ಕಾಲ ಬ್ಯಾಟಿಂಗ್ ಮಾಡಿದ್ದರು. ಅವರ ಇನಿಂಗ್ಸ್‌ನ ಆಟದಿಂದಲೇ, ಮೊದಲ ಇನಿಂಗ್ಸ್‌ನಲ್ಲಿ 337 ರನ್ ಗಳಿಸಿದ ಪಾಕಿಸ್ತಾನ 2ನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ ಸಮಯದ ಅಭಾವದಿಂದ ಕೇವಲ 16 ರನ್‌ ಗಳಿಸಿ ಡ್ರಾ ಮಾಡಿಕೊಳ್ಳುವ ಅನಿವಾರ್ಯತೆಗೆ ಸಿಲುಕಿತ್ತು. ಅಂಶುಮಾನ್ ಅವರ ದ್ವಿಶತಕ 80ರ ದಶಕದಲ್ಲಿಯೇ ಟೆಸ್ಟ್ ಕ್ರಿಕೆಟ್‌ನಲ್ಲಿಯೇ ಅತ್ಯಂತ ನಿಧಾನಗತಿಯ ದ್ವಿಶತಕವಾಗಿ ಟೀಕೆಗೂ ಒಳಗಾಗಿತ್ತು.

ಈ ಸುದ್ದಿ ಓದಿದ್ದೀರಾ? ಭಾರತದ 124 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಬರೆದ ಮನು ಭಾಕರ್

1979ರಲ್ಲಿ ಭಾರತದಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಅಂಶುಮಾನ್ ಗಾಯಕವಾಡ್ ಅವರು 102 ರನ್‌ ಗಳಿಸಿದ್ದು ಮತ್ತೊಂದು ಅಮೋಘ ಇನಿಂಗ್ಸ್‌ ಆಗಿದೆ.

anshuman gaekwad 2

ಹಾಗೆಯೇ 1976ರಲ್ಲಿ ಜಮೈಕಾದ ಸಬಿನಾ ಪಾರ್ಕ್‌ನಲ್ಲಿ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ತಂಡದ 404 ರನ್‌ಗಳ ಸವಾಲನ್ನು ಬೆನ್ನಟ್ಟುವತ್ತ ಮುನ್ನುಗ್ಗುತ್ತಿತ್ತು. ಅಂಶುಮಾನ್ 83 ರನ್‌ಗಳೊಂದಿಗೆ ಸುನೀಲ್ ಗವಾಸ್ಕರ್ ಅವರೊಂದಿಗೆ ಬ್ಯಾಟಿಂಗ್‌ ಮಾಡುತ್ತಿದ್ದರು. ಆಗ ವಿಂಡೀಸಿನ ದೈತ್ಯ ಬೌಲರ್ ಮೈಕೆಲ್ ಹೋಲ್ಡಿಂಗ್ ಅವರ ಬೌನ್ಸರ್ ಗಾಯಕವಾಡ್ ಅವರ ಕಿವಿಗೆ ಬಡಿದು ಗಾಯವಾಗಿತ್ತು. ಅವರ ಕಿವಿಯಿಂದ ರಕ್ತ ಸೋರಲಾರಂಭಿಸಿತ್ತು. ತೀವ್ರ ಗಾಯಗೊಂಡು ಪಂದ್ಯದ ಅರ್ಧದಲ್ಲಿಯೇ ಆಸ್ಪತ್ರೆಗೆ ತೆರಳಿದರು. ಹೋಲ್ಡಿಂಗ್‌ ಮಾಡಿದ ಅಚಾತುರ್ಯ ಪ್ರೇಕ್ಷಕರನ್ನು ಕೆರಳಿಸಿತ್ತು. ಕ್ರೀಡಾಂಗಣದಲ್ಲಿಯೇ ವಿಂಡೀಸ್‌ ಆಟಗಾರನ ವಿರುದ್ಧ ‘ಕಿಲ್ ಹಿಮ್, ಕಿಲ್ ಹಿಮ್ ಮೈಕಿ’ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕ್ರಿಕೆಟ್ ಹಾಗೂ ಕ್ರಿಕೆಟ್ ನಂತರದ ಸಾಧನೆ

ಅಂಶುಮಾನ್ ಗಾಯಕ್ವಾಡ್ ತಮ್ಮ 14 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 30.07ರ ಸರಾಸರಿಯಲ್ಲಿ 1985 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 2 ಶತಕ ಮತ್ತು 10 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ 15 ಏಕದಿನ ಪಂದ್ಯಗಳನ್ನು ಆಡಿರುವ ಅಂಶುಮನ್ 20.69ರ ಸರಾಸರಿಯಲ್ಲಿ ಒಂದು ಅರ್ಧ ಶತಕದೊಂದಿಗೆ 289 ರನ್ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತರ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ, ಟೀಂ ಇಂಡಿಯಾ ಕೋಚ್ ಮತ್ತು ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. 1997 ರಿಂದ 1999 ರವರೆಗೆ ಮತ್ತು 2000 ರಿಂದ 2001 ರವರೆಗೆ ಎರಡು ಅವಧಿಗೆ ಟೀಂ ಇಂಡಿಯಾ ಹೆಡ್ ಕೋಚ್‌ ಆಗಿದ್ದರು. ಅಂಶುಮಾನ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ 2000ರಲ್ಲಿ ಚಾಂಪಿಯನ್ಸ್ ಟ್ರೋಫಿ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. 1990ರ ದಶಕದಲ್ಲಿ, ಗಾಯಕ್ವಾಡ್ ಅವರು ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷ ಮತ್ತು ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಹುದ್ದೆಯನ್ನು ನಿಭಾಯಿಸಿದ್ದರು. ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಮತ್ತು ಮಾಜಿ ಮಹಿಳಾ ಕ್ರಿಕೆಟಿಗ ಶಾಂತಾ ರಂಗಸ್ವಾಮಿ ಅವರೊಂದಿಗೆ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಅಂಶುಮಾನ್ ಅವಧಿಯಲ್ಲಿ ಕುಂಬ್ಳೆ 10 ವಿಕೆಟ್ ಸಾಧನೆ

ಅಂಶುಮಾನ್ ಗಾಯಕ್‌ವಾಡ್‌ ಟೀಂ ಇಂಡಿಯಾದ ಕೋಚ್‌ ಆಗಿದ್ದ ಅವಧಿಯಲ್ಲಿ ಭಾರತದ ಖ್ಯಾತ ಸ್ಪಿನ್ನರ್ ಅನಿಲ್‌ ಕುಂಬ್ಳೆ ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. 1999 ಫೆ.7 ರಂದು ನವದೆಹಲಿಯ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಪಾಕ್‌ ವಿರುದ್ಧದ ಎರಡನೇ ಇನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ ಇನಿಂಗ್ಸ್‌ನ 10 ವಿಕೆಟ್‌ಗಳನ್ನು ಕಬಳಿಸಿ ಹೊಸ ದಾಖಲೆ ನಿರ್ಮಿಸಿದ್ದರು. 2018 ರಲ್ಲಿ, ಬಿಸಿಸಿಐ 2018ರಲ್ಲಿ ಅಂಶುಮನ್ ಅವರ ಸಾಧನೆ ಗುರುತಿಸಿ ‘ಕರ್ನಲ್ ಸಿ ಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತ್ತು.

ಕ್ಯಾನ್ಸರ್‌ ಚಿಕಿತ್ಸೆಗೆ ಬಿಸಿಸಿಐ ವಿರುದ್ಧ ಹಿರಿಯ ಆಟಗಾರರ ಆಕ್ರೋಶ

ಕೆಲವು ವರ್ಷಗಳಿಂದ ಅಂಶುಮಾನ್ ಗಾಯಕವಾಡ್ ಅವರು ರಕ್ತದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದು, ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾರತದ ಕ್ರಿಕೆಟ್‌ ಉನ್ನತ ಸ್ತರಕ್ಕೇರಲು ಪ್ರಮುಖ ಕೊಡುಗೆ ನೀಡಿದ್ದ ಅಂಶುಮನ್‌ ಅವರ ಚಿಕಿತ್ಸೆಗಾಗಿ ಬಿಸಿಸಿಐ ಯಾವುದೇ ರೀತಿಯ ನೆರವು ನೀಡಿರಲಿಲ್ಲ. ಈ ಸಂದರ್ಭದಲ್ಲಿ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ದಿಲೀಪ್ ವೆಂಗ್ಸರ್ಕರ್, ಸಂದೀಪ್ ಪಾಟೀಲ್ ಸೇರಿದಂತೆ ಹಲವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಂತರ ಬಿಸಿಸಿಐ ಕಾರ್ಯದರ್ಶಿ ಜಯ ಶಾ 1 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಜುಲೈ 31 ರಂದು ತಮ್ಮ 71ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಹಿರಿಯ ಕ್ರಿಕೆಟಿಗನ ನಿಧನಕ್ಕೆ ಕ್ರಿಕೆಟ್ ತಾರೆಯರು, ಗಣ್ಯರು ಸೇರಿದಂತೆ ಕೊಟ್ಯಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅಂಶುಮಾನ್ ತಂದೆ ‘ದತ್ತಾಜಿರಾವ್ ಗಾಯಕವಾಡ್‘ ಕೂಡ ಇದೇ ವರ್ಷ ಫೆಬ್ರವರಿ 13 ರಂದು ಮೃತಪಟ್ಟಿದ್ದರು. ಭಾರತೀಯ ಕ್ರಿಕೆಟ್ ಲೋಕ 6 ತಿಂಗಳ ಅವಧಿಯಲ್ಲಿಯೇ ಇಬ್ಬರು ಮಹಾನ್‌ ದಿಗ್ಗಜರನ್ನು ಕಳೆದುಕೊಂಡಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X