ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಮ್ಮೆ ಇತಿಹಾಸ ಸೃಷ್ಟಿಯಾಗಿದೆ. ಒಂದೇ ಓವರ್‌ನಲ್ಲಿ ಮತ್ತೊಬ್ಬ ಆಟಗಾರ 6 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದಾನೆ. ಭಾರತೀಯ ಮೂಲದ 26 ವರ್ಷದ ರಿಷಿ ಪಟೇಲ್ ಇಂಗ್ಲೆಂಡ್‌ನ ಕೌಂಟಿ ಪಂದ್ಯದಲ್ಲಿ 6 ಚೆಂಡುಗಳಲ್ಲಿ 6 ಸಿಕ್ಸರ್ ಸಿಡಿಸಿರುವುದು ದಾಖಲೆಯಾಗಿದೆ.
ಮೇ 8 ರಂದು ನಡೆದ ಇಂಗ್ಲೆಂಡ್‌ನಲ್ಲಿ ಮೈನರ್ ಕೌಂಟಿ ಸ್ಟಾಫರ್ಡ್‌ಶೈರ್ ಹಾಗೂ ಲೀಸೆಸ್ಟರ್‌ಶೈರ್ ಫಾಕ್ಸಸ್ ತಂಡಗಳ ನಡುವೆ ಕೌಂಟಿ ಚಾಂಪಿಯನ್‌ಷಿಪ್‌ನ ಸೌಹಾರ್ದ ಟಿ20 ಪಂದ್ಯ ಜರುಗಿತು. ಈ ಸಂದರ್ಭದಲ್ಲಿ ಲೀಸೆಸ್ಟರ್‌ಶೈರ್ ಫಾಕ್ಸಸ್ ತಂಡದ ಪರವಾಗಿ ಆಡಿದ ರಿಷಿ ಪಟೇಲ್ ಸ್ಟಾಫರ್ಡ್‌ಶೈರ್‌ನ ಮೈನರ್ ಕೌಂಟಿ ತಮಡದ ಸ್ಪಿನ್ನರ್ ಜ್ಯಾಕ್ ರೆಡ್‌ಮನ್ ಎಸೆದ ಓವರ್‌ನಲ್ಲಿ ಆರು ಚೆಂಡುಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದರು.
ಈ ಸ್ಪೋಟಕ ಬ್ಯಾಟಿಂಗ್ನೊಂದಿಗೆ ರಿಷಿ ಪಟೇಲ್ 40 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 96 ರನ್ ಚಚ್ಚಿದರು. ಆದರೆ 4 ರನ್‌ಗಳಿಂದ ಶತಕ ವಂಚಿತರಾದರು. ಈ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ಫಾಕ್ಸಸ್ ತಂಡವು 20 ಓವರ್ಗಳಲ್ಲಿ 300 ರನ್ ಕಲೆಹಾಕಿತು. ಈ ರನ್ ಬೆನ್ನಟ್ಟಿದ ಮೈನರ್ ಕೌಂಟಿ ಸ್ಟಾಫರ್ಡ್‌ಶೈರ್ ತಂಡ ಕೇವಲ 50 ರನ್‌ಗಳಿಗೆ ಆಲೌಟ್ ಆಗಿ 250 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು.
ಇದನ್ನು ಓದಿದ್ದೀರಾ? ಐಪಿಎಲ್ 2025: ಬಿಸಿಸಿಐನಿಂದ ತುರ್ತು ಸಭೆ; ಉಳಿದ ಪಂದ್ಯಗಳು ತಾತ್ಕಾಲಿಕ ಸ್ಥಗಿತ?
ಕೆಲವು ದಿನಗಳ ಹಿಂದೆ ಐಪಿಎಲ್ 2025 ರಲ್ಲಿ, ರಿಯಾನ್ ಪರಾಗ್ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈಗ ಕೆಲವೇ ದಿನಗಳ ಅಂತರದಲ್ಲಿ ರಿಷಿ ಆ ಸಾಧನೆ ಮಾಡಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿರುವುದು ಕೇವಲ ಕೆಲವೇ ಬ್ಯಾಟರ್ಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ವೆಸ್ಟ್ ಇಂಡೀಸ್ನ ಗ್ಯಾರಿ ಸೋಬರ್ಸ್.
ಗ್ಯಾರಿ ಸೋಬರ್ಸ್ ನಂತರ ರವಿ ಶಾಸ್ತ್ರಿ, ಹರ್ಷೆಲ್ ಗಿಬ್ಸ್, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಜಸ್ಕರಣ್ ಮಲ್ಹೋತ್ರಾ, ದಿಪೇಂದ್ರ ಸಿಂಗ್ ಐರೀ, ತಿಸಾರಾ ಪೆರೇರಾ, ರಾಸ್ ವೈಟ್ಲೆ, ವಂಶಿ ಕೃಷ್ಣ, ಲೀಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಏಲೆಕ್ಸ್ ಹೆಲ್‌ಸ್ ಈ ಸಾಧನೆ ಮಾಡಿದ್ದಾರೆ.
Rishi Patel just hit six 6s in an over for Leicestershire in a T20 against Staffordshire.
— Cameron Ponsonby (@cameronponsonby) May 9, 2025
I don't know why this match is being played but it is and Leicestershire are 235-3 off 14. pic.twitter.com/jbcNkbuNkv