ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಸೋಲು ಕಂಡಿದ್ದ ವೆಸ್ಟ್ ಇಂಡೀಸ್ ತಂಡ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ 4 ರನ್’ಗಳ ರೋಚಕ ಗೆಲುವು ಸಾಧಿಸಿತು.
ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ವೆಸ್ಟ್ಇಂಡೀಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 149 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 144 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ತಂಡ 1–0 ಮುನ್ನಡೆ ಸಾಧಿಸಿತು.
ವಿಂಡೀಸ್ ಪರ ಜೇಸನ್ ಹೋಲ್ಡರ್ 19/2, ಒಬೆಡ್ ಮೆಕಾಯ್ (28/2) ಶೆಫರ್ಡ್ (33\ 2) ವಿಕೆಟ್ ಪಡೆದು ತಂಡದ ಜಯದ ರೂವಾರಿಗಳಾದರು.
ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಟಗಾರರಾದ ಇಶಾನ್ ಕಿಶಾನ್ (6) ಮತ್ತು ಶುಭಮನ್ ಗಿಲ್ (3) ಉತ್ತಮ ಅಡಿಪಾಯ ಹಾಕುವಲ್ಲಿ ಎಡವಿದರು.
ಸೂರ್ಯಕುಮಾರ್ ಯಾದವ್ (21), ತಿಲಕ್ ವರ್ಮಾ (39) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (19) ಮಧ್ಯಮ ಕ್ರಮಾಂಕದಲ್ಲಿ ಒಂಚೂರು ಯಶಸ್ವಿಯಾದರೂ ಗೆಲುವಿನ ದಡ ಸೇರಿಸಲು ವಿಫಲವಾದರು.
ಇದಕ್ಕೂ ಮೊದಲು ಟಾಸ್ ಗೆದ್ದು ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಐಪಿಎಲ್ ಹೀರೊ ನಿಕೊಲಸ್ ಪೂರನ್ (41) ಮತ್ತು ನಾಯಕ ರೋವ್ಮನ್ ಪೊವೆಲ್ (48) ತಂಡಕ್ಕೆ ಬಲ ತುಂಬಿ 149 ರನ್ ಕಲೆ ಹಾಕಿದರು.
ಸಂಕ್ಷಿಪ್ತ ಸ್ಕೋರು:
ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 149 (ಬ್ರೆಂಡನ್ ಕಿಂಗ್ 28, ನಿಕೊಲಸ್ ಪೂರನ್ 41, ರೋವ್ಮನ್ ಪೊವೆಲ್ 48, ಆರ್ಷದೀಪ್ ಸಿಂಗ್ 31ಕ್ಕೆ2, ಯಜುವೇಂದ್ರ ಚಾಹಲ್ 24ಕ್ಕೆ2)
ಭಾರತ: ಸೂರ್ಯಕುಮಾರ್ ಯಾದವ್ 21, ತಿಲಕ್ ವರ್ಮಾ 39, ಹಾರ್ದಿಕ್ ಪಾಂಡ್ಯ 19, ಜೇಸನ್ ಹೋಲ್ಡರ್ 19/2, ಒಬೆಡ್ ಮೆಕಾಯ್ (28/2) ಶೆಫರ್ಡ್ (33\ 2)