ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಕ್ರಿಕೆಟ್ ಅಂತಿಮ ಹಂತಕ್ಕೆ ಬರುತ್ತಿದ್ದು, ಆಂಗ್ಲ ಪಡೆಗೆ ಟೀಂ ಇಂಡಿಯಾ ಗೆಲ್ಲಲು 399 ರನ್ ಗುರಿ ನೀಡಿದೆ. ಎರಡನೇ ಇನಿಂಗ್ಸ್ ಆರಂಭಿಸಿರುವ ಬೆನ್ ಸ್ಟೋಕ್ಸ್ ಪಡೆ 67 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೊಳಗಾಗಿದೆ.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಇಂದು ಟೀಂ ಇಂಡಿಯಾ ಶುಭ್‌ಮನ್ ಗಿಲ್ ಅವರ ಆಕರ್ಷಕ ಶತಕದ ನೆರವಿನಿಂದ ತನ್ನ ಎರಡನೇ ಇನಿಂಗ್ಸ್‌ನಲ್ಲಿ 78.3 ಓವರ್‌ಗಳಿಗೆ 255 ರನ್‌ಗಳಿಗೆ ಆಲೌಟ್ ಆಗಿ 398 ರನ್ ಮುನ್ನಡೆ ಪಡೆಯಿತು.
147 ಚೆಂಡುಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ 104 ರನ್ ಬಾರಿಸಿದ ಶುಭಮನ್ ಗಿಲ್ ಟೆಸ್ಟ್ ವೃತ್ತಿ ಜೀವನದ ಮೂರನೇ ಶತಕ ಪೂರೈಸಿದರು. ಅಕ್ಸರ್ ಪಟೇಲ್ (45), ಶ್ರೇಯಸ್ ಅಯ್ಯರ್ (29), ಆರ್ ಅಶ್ವಿನ್ (29) ಹೊರತುಪಡಿಸಿದರೆ ಉಳಿದ ಆಟಗಾರರು 20ರ ಗಡಿ ದಾಟಲಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪೇ?
ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ 77/4, ರೆಹಾನ್ ಅಹಮದ್ 88/3, ಜೇಮ್ಸ್ ಆಂಡರ್‌ಸನ್ 29/2, ಬಶೀರ್ 58/1 ವಿಕೆಟ್ ಗಳಿಸಿ ಭಾರತದ ಪತನಕ್ಕೆ ಕಾರಣರಾದರು.
ಟೀಂ ಇಂಡಿಯಾದ 399 ಗುರಿಯನ್ನು ಬೆನ್ನಟ್ಟಿರುವ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿದೆ. 28 ರನ್ ಗಳಿಸಿದ್ದ ಬೆನ್ ಡಕೆಟ್ 11 ಓವರ್‌ನಲ್ಲಿ ಸ್ಪಿನ್ನರ್ ಆರ್ ಅಶ್ವಿನ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಶ್ರೀಕರ್ ಭರತ್‌ಗೆ ಕ್ಯಾಚಿತ್ತು ಔಟಾದರು.
ದಿನದಾಂತ್ಯಕ್ಕೆ ಆಂಗ್ಲ ಪಡೆ ಆರಂಭಿಕ ಆಟಗಾರ ಜಾಕ್ ಕ್ರಾಲಿ(29), ರೆಹಾನ್ ಅಹಮದ್ (9) ಅವರ ಬ್ಯಾಟಿಂಗ್‌ನೊಂದಿಗೆ 14 ಓವರ್‌ಗಳಲ್ಲಿ 67/1 ರನ್ ಗಳಿಸಿದೆ ಆಡವಾಡುತ್ತಿದೆ.
A positive start from England in pursuit of 399 👌#INDvENG | #WTC25: https://t.co/i3GiP6k0Qw pic.twitter.com/idsEowc32K
— ICC (@ICC) February 4, 2024