ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್, ನೆದರ್‌ಲ್ಯಾಂಡ್ಸ್ ವಿರುದ್ಧ ದೆಹಲಿಯಲ್ಲಿ ಇಂದು ನಡೆದ ವಿಶ್ವಕಪ್ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ವೇಗದ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದರು.
46.2ನೇ ಓವರ್ ಇದ್ದಾಗ ಅರ್ಧ ಶತಕ ಸಿಡಿಸಿದ್ದ ಮ್ಯಾಕ್ಸ್‌ವೆಲ್, 48.4 ಓವರ್ ವೇಳೆಗೆ ಭರ್ಜರಿ ಸಿಕ್ಸ್, ಫೋರ್‌ಗಳ ನೆರವಿನೊಂದಿಗೆ ಮುಂದಿನ 14 ಎಸೆತಗಳಲ್ಲಿ ಶತಕ ಪೂರೈಸಿದರು.
Completed fifty at 46.2 overs.
Completed century at 48.4 overs.
– Fifty to hundred in just 2.2 overs – this is proper madness from Glenn Maxwell 🛐🥳🥳🥳#AUSvsNED
— VINEETH𓃵🦖 (@sololoveee) October 25, 2023
ವಿಶ್ವದಾಖಲೆಯ ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸ್‌ನ ನೆರವಿನೊಂದಿಗೆ 106 ರನ್ ಗಳಿಸಿ 50ನೇ ಓವರ್‌ನಲ್ಲಿ ಔಟಾದರು.
And Here Comes Fastest Ever World Cup Hundred by Glenn Maxwell 💯#AUSvNED #ODIWorldCup2023 #ICCWorldCup2023 #AUSvsNED pic.twitter.com/7IoLsvxJNy
— RVCJ Media (@RVCJ_FB) October 25, 2023
ತನ್ನ ಈ ಐತಿಹಾಸಿಕ ಸಾಧನೆಯನ್ನು ಇತ್ತೀಚೆಗೆ ಜನಿಸಿದ ತನ್ನ ಮಗ ಲೋಗನ್ ಮೇವರಿಕ್ ಮ್ಯಾಕ್ಸ್‌ವೆಲ್‌ಗೆ ಅರ್ಪಿಸುವುದಾಗಿ ತಿಳಿಸಿದರು.
🚨 History in Delhi 🚨
Glenn Maxwell has obliterated the record for the fastest-ever Cricket World Cup century 😲 💥
Read more about his stunning 💯 ⬇️#AUSvNED #CWC23https://t.co/YNMpKsuXhT
— ICC (@ICC) October 25, 2023
ನೆದರ್‌ಲ್ಯಾಂಡ್ಸ್ ಗೆಲುವಿಗೆ ಕಠಿಣ ಗುರಿ
ಬುಧವಾರ(ಅ25) ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ 24ನೇ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ತಂಡದ ವಿರುದ್ಧ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 399 ರನ್‌ಗಳನ್ನು ಗಳಿಸಿದ್ದು, ನೆದರ್‌ಲ್ಯಾಂಡ್ಸ್ ತಂಡಕ್ಕೆ 400 ರನ್‌ಗಳ ಗುರಿ ನೀಡಿದೆ.
The iconic David Warner jump.
Pushpa celebration.– David Warner is a complete package!pic.twitter.com/mIA4JCMnaK
— Mufaddal Vohra (@mufaddal_vohra) October 25, 2023
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಆಸ್ಟ್ರೇಲಿಯಾ ತಂಡದ ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಲಾಗಲಿಲ್ಲ. ಮಾರ್ಷ್ ಕೇವಲ 9 ರನ್ ಗಳಿಸಿ ಔಟಾದರು. ನಂತರ ಜೊತೆಯಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ 2ನೇ ವಿಕೆಟ್‌ಗೆ 132 ರನ್‌ಗಳ ಜೊತೆಯಾಟ ನಿರ್ಮಿಸಿದರು.
Batters have a big job ahead of them. pic.twitter.com/Hb4fBtZDRJ
— Cricket🏏Netherlands (@KNCBcricket) October 25, 2023
ಸ್ಟೀವನ್ ಸ್ಮಿತ್ 68 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 71 ರನ್ ಗಳಿಸಿ ಔಟಾದರು. ಬಳಿಕ ಕ್ರೀಸ್‌ಗೆ ಆಗಮಿಸಿದ ಮಾರ್ನಸ್ ಲ್ಯಾಬುಶೈನ್ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 62 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಬ್ಯಾಟಿಂಗ್‌ಗೆ ಬಂದ ಜೋಶ್ ಇಂಗ್ಲಿಸ್ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 14 ರನ್ ಗಳಿಸಿ ಔಟಾದರು. ಡೇವಿಡ್ ವಾರ್ನರ್ ಸತತ ಎರಡನೇ ಶತಕ ಬಾರಿಸಿದರು. 93 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 104 ರನ್ ಬಾರಿಸಿದರು. ವಿಶ್ವದಾಖಲೆಯ ಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 8 ಭರ್ಜರಿ ಶತಕದ ನೆರವಿನೊಂದಿಗೆ 106 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು. ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ 8 ರನ್ ಗಳಿಸಿದರು.
Normal batters – slow down in the 80s to reach their century.
Glenn Maxwell – takes just 4 balls to reach 100 from 80. pic.twitter.com/DMxdg7DcwL
— Mufaddal Vohra (@mufaddal_vohra) October 25, 2023
ಬೌಲಿಂಗ್‌ನಲ್ಲಿ ನೆದರ್‌ಲ್ಯಾಂಡ್ಸ್ ಪರ ಲೋಗನ್ ವ್ಯಾನ್ ಬೀಕ್ 10 ಓವರ್‌ಗಳಲ್ಲಿ 74 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಬಾಸ್ ಡಿ ಲೀಡ್ 10 ಓವರ್‌ಗಳಲ್ಲಿ 115 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಆರ್ಯನ್ ದತ್ 1 ವಿಕೆಟ್ ಪಡೆದರು.