ಆಸ್ಟ್ರೇಲಿಯಾದ ಕ್ರಿಕೆಟಿಗ, ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ತಡರಾತ್ರಿಯ ಪಾರ್ಟಿಯಲ್ಲಿ ಪಾಲ್ಗೊಂಡ ನಂತರ ಅನಾರೋಗ್ಯದಿಂದಾಗಿ ಅಡಿಲೇಡ್‌ನ ಆಸ್ಪತ್ರೆಗೆ ದಾಖಲಾಗಿದ್ದರು.
2023ರ ಏಕದಿನ ವಿಶ್ವಕಪ್ ಸ್ಟಾರ್ ಮ್ಯಾಕ್ಸ್‌ವೆಲ್ ಫೆ.9 ರಿಂದ ವೆಸ್ಟ್‌ಇಂಡೀಸ್ ವಿರುದ್ಧದ ಟಿ20 ಸರಣಿಯ ತರಬೇತಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾತ್ರಿಯೇ ಚಿಕಿತ್ಸೆ ಪಡೆದು ಮನೆಗೆ ತೆರಳಿದರು.
ಸಂಗೀತ ಕಚೇರಿಯ ಕೂಟದಲ್ಲಿ ಪಾಲ್ಗೊಂಡಿದ್ದ ಮ್ಯಾಕ್ಸ್‌ವೆಲ್ ಅತಿಯಾಗಿ ಮದ್ಯಪಾನ ಮಾಡಿ ಅನಾರೋಗ್ಯ ಉಂಟಾದ ಕಾರಣ ಆಂಬ್ಯುಲೆನ್ಸ್‌ನಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅನಾರೋಗ್ಯದ ನಿಖರ ಕಾರಣ ಕುರಿತು ಪತ್ತೆ ಹಚ್ಚಲಾಗಲಿಲ್ಲ.ಅಡಿಲೇಡ್ ಓವಲ್‌ನಲ್ಲಿ ಕಳೆದ ವಾರ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯ ನಡೆದು ಆಸೀಸ್ ಗೆಲುವು ಸಾಧಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುವಜನರ ವಿಶ್ವಾಸ ಉಳಿಸಿಕೊಳ್ಳುವುದೇ ಕೆಪಿಎಸ್‌ಸಿ?
ಫೆ.2ರಿಂದ ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಏಕದಿನ ಸರಣಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಫೆ.9 ರಂದು ನಡೆಯುವ ಟಿ20 ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯಿದೆ.
2023ರ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಮುನ್ನ ಮ್ಯಾಕ್ಸ್‌ವೆಲ್ ಮಂಡಿ, ಬೆನ್ನು ಸೇರಿದಂತೆ ಹಲವು ಗಾಯದ ಸಮಸ್ಯೆಗಳನ್ನು ಎದುರಿಸಿದ್ದರು. ವಿಶ್ವಕಪ್ ಆರಂಭವಾಗುವ ವೇಳೆ ಗಾಯದಿಂದ ಚೇತರಿಸಿಕೊಂಡಿದ್ದರು. ವಿಶ್ವಕಪ್ ಟೂರ್ನಿಯ ಆರಂಭದಲ್ಲಿ ಆಸೀಸ್ ಹಿನ್ನಡೆ ಅನುಭವಿಸಿತ್ತು. ಟೂರ್ನಿಯಲ್ಲಿ ಗ್ಲೆನ್ ಆಫ್ಘಾನಿಸ್ತಾನದ ವಿರುದ್ಧ ಸಿಡಿಸಿದ ಅಜೇಯ ಸ್ಫೋಟಕ 201 ರನ್‌ಗಳಿಂದ ಆಸೀಸ್ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು.