ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಗುಜರಾತ್ ಟೈಟನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಧ್ಯೆ ನಿಗದಿಪಡಿಸಲಾಗಿದ್ದ 63ನೇ ಐಪಿಎಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಗುಜರಾತ್‌ನ ಹಲವು ಕಡೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಅಹ್ಮದಾಬಾದ್‌ನಲ್ಲೂ ಉತ್ತಮ ಮಳೆಯಾಗುತ್ತಿದ್ದು, 10.45ರ ಸುಮಾರಿಗೂ ಮಳೆ ನಿಲ್ಲದ ಕಾರಣ ಇಂದಿನ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ಐಪಿಎಲ್ ನಿಯಮದಂತೆ ಎರಡೂ ತಂಡಗಳಿಗೂ ತಲಾ ಎರಡು ಅಂಕಗಳನ್ನು ನೀಡಲಾಯಿತು.
MATCH HAS BEEN FINALLY CALLED OFF. pic.twitter.com/idMGbXIhhs
— Mufaddal Vohra (@mufaddal_vohra) May 13, 2024
ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪ್ಲೇಆಫ್‌ಗೆ ಪ್ರಯಾಣಿಸುವಾಗ ತಮ್ಮ ಅಗ್ರ ಎರಡು ಸ್ಥಾನಗಳನ್ನು ಖಚಿತಪಡಿಸಿಕೊಂಡಿದೆ. ಕೆಕೆಆರ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೇ 19ರಂದು ಲೀಗ್‌ನ ಕೊನೆಯ ಹಾಗೂ 74ನೇ ಪಂದ್ಯವನ್ನಾಡಲಿದೆ.
Our final home game has sadly been called off due to rain 💔#AavaDe | #GTKarshe | #TATAIPL2024 | #GTvKKR pic.twitter.com/ypG63XzJDD
— Gujarat Titans (@gujarat_titans) May 13, 2024
ಇಂದಿನ ಪಂದ್ಯ ರದ್ದುಗೊಂಡ ಪರಿಣಾಮ ಪ್ಲೇ-ಆಫ್ ರೇಸ್‌ನಿಂದ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ಅಧಿಕೃತವಾಗಿ ಹೊರಬಿದ್ದಿದೆ. ಗುಜರಾತ್ ಟೈಟನ್ಸ್ ತಂಡವು 2022ರಲ್ಲಿ ಐಪಿಎಲ್ ಚಾಂಪಿಯನ್ ಆಗಿದ್ದರೆ, 2023ರಲ್ಲಿ ಚೆನ್ನೈ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು. 2024ರ ಸಾಲಿನಲ್ಲಿ ಈವರೆಗೆ 13 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಐದು ಗೆಲುವು ಹಾಗೂ 7 ಸೋಲು, ಒಂದು ರದ್ದುನೊಂದಿಗೆ 11 ಅಂಕ ಗಳಿಸಿದ್ದು, ಲೀಗ್ ಹಂತದಲ್ಲೇ ಹೊರಬಿದ್ದಿದೆ.
🚨 Update from Ahmedabad 🚨
Match 6️⃣3️⃣ of #TATAIPL 2024 between @gujarat_titans & @KKRiders has been abandoned due to rain 🌧️
Both teams share a point each 🤝#GTvKKR pic.twitter.com/Jh2wuNZR5M
— IndianPremierLeague (@IPL) May 13, 2024
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮೇ 16ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯವನ್ನು ಆಡಲಿದೆ. ಹೈದರಾಬಾದ್ ವಿರುದ್ಧ ಗೆದ್ದರೆ ಪ್ಲೇ ಆಫ್ ರೇಸ್‌ನಲ್ಲಿ ಇನ್ನೂ ಉಳಿದುಕೊಂಡಿರುವ ಆರ್‌ಸಿಬಿಗೆ ಲಾಭವಾಗುವ ಸಾಧ್ಯತೆ ಇದೆ. ಮೇ 18ರಂದು ಆರ್‌ಸಿಬಿ ಹಾಗೂ ಚೆನ್ನೈ ನಡುವೆ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯವು ರೋಚಕವಾಗಿರಲಿದೆ.
