ಮುಂಬರುವ 2025-26ನೇ ಸಾಲಿನ ಅಂತಾರಾಷ್ಟ್ರೀಯ ಋತುವಿನಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಭಾರತವು ಟೆಸ್ಟ್ ಸರಣಿಯ ಅತಿಥ್ಯ ವಹಿಸಲಿದೆ. ಈ ಸರಣಿ ವೇಳೆ ಅಸ್ಸಾಂನ ಗುವಾಹಟಿ ಟೆಸ್ಟ್ ಪಂದ್ಯಕ್ಕೆ ಅತಿಥ್ಯ ವಹಿಸಲಿರುವ ದೇಶದ 30ನೇ ಕ್ರೀಡಾಂಗಣವಾಗಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವೇಳಾಪಟ್ಟಿಯ ಭಾಗವಾಗಿ ಭಾರತವು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಯೋಜಿಸಲಿದೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಸೋಲಿಗೆ ರಿಷಬ್‌ರನ್ನು ಮತ್ತೆ ತರಾಟೆಗೆ ತೆಗೆದುಕೊಂಡ ಲಖನೌ ಮಾಲೀಕ ಸಂಜೀವ್ ಗೋಯೆಂಕಾ
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಅಹ್ಮದಾಬಾದ್ (ಅ.2ರಿಂದ 6) ಮತ್ತು ಕೋಲ್ಕತಾ (ಅ.10ರಿಂದ 14) ದಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನವದೆಹಲಿಯಲ್ಲಿ (ನ. 14-18) ಮತ್ತು ದ್ವಿತೀಯ ಟೆಸ್ಟ್ ಗುವಾಹಟಿ (ನ. 22-16) ಯಲ್ಲಿ ನಡೆಯಲಿದೆ.
ಟೆಸ್ಟ್ ಸರಣಿ ಬಳಿಕ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರು ಏಕದಿನ ಪಂದ್ಯಗಳು ಅನುಕ್ರಮವಾಗಿ ರಾಂಚಿ (ನ. 30), ರಾಯಪುರ (ಡಿ. 3) ಮತ್ತು ವಿಶಾಖಪಟ್ಟಣ (ಡಿ.6) ರಂದು ನಡೆಯಲಿವೆ. ಅನಂತರ ಈ ತಂಡಗಳ ನಡುವೆ ಟಿ20 ಸರಣಿಯ ಐದು ಪಂದ್ಯಗಳು ಅನುಕ್ರಮವಾಗಿ ಕಟಕ್ (ಡಿ. 9), ಮುಲ್ಲನಪುರ (ಡಿ. 11), ಧರ್ಮಶಾಲಾ (ಡಿ.14), ಲಖನೌ(ಡಿ. 17) ಮತ್ತು ಅಹಮದಾಬಾದ್ (ಡಿ, 19) ನಲ್ಲಿ ಆಯೋಜನೆಗೊಳ್ಳಲಿದೆ.
