ಸತತ ಏಳು ಗೆಲುವಿನೊಂದಿಗೆ ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಏರಿರುವ ಭಾರತ ತಂಡ ಇಂದು ಪ್ರಬಲ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ನೆದರ್ಲೆಂಡ್ಸ್ ವಿರುದ್ಧ ಬಿಟ್ಟರೆ ಹರಿಣಗಳ ತಂಡ ಎಲ್ಲ 6 ಪಂದ್ಯಗಳನ್ನು ಗೆದ್ದು ಬೀಗಿದೆ. ಅಲ್ಲದೆ ಇಂದು ಟೀಂ ಇಂಡಿಯಾ ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ವಿಶೇಷ ದಿನ.
ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನೆಡೆಯುತ್ತಿರುವ ಏಕದಿನ ವಿಶ್ವಕಪ್‌ನ 37ನೇ ಪಂದ್ಯದಲ್ಲಿ ಉಭಯ ತಂಡಗಳು ನಾಲ್ಕರ ಘಟ್ಟ ಪ್ರವೇಶಿಸಿವೆ. ನಿನ್ನೆಯ (ನ.4) ಪಂದ್ಯದಲ್ಲಿ ನ್ಯೂಜಿಲೆಂಡ್ ಪಾಕ್ ವಿರುದ್ಧ ಸೋತ ಕಾರಣ ದಕ್ಷಿಣ ಆಫ್ರಿಕಾ ಕೂಡ ಸೆಮಿಫೈನಲ್ ಅರ್ಹತೆ ಪಡೆದಿದೆ. ಇಂದಿನ ಪಂದ್ಯದ ಗೆಲುವು ಅಗ್ರಸ್ಥಾನಕ್ಕಾಗಿ ಮಾತ್ರ ಪೈಪೋಟಿ ನಡೆಯಲಿದೆ.
ಬ್ಯಾಟ್ಸ್ಮನ್ಗಳ ಉಪಯುಕ್ತವಾದ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಎರಡು ಪ್ರಬಲ ತಂಡಗಳು ಪೈಪೋಟಿ ನಡೆಸಲಿದ್ದು,ಯಾರಿಗೆ ಗೆಲುವಿನ ಸಿಹಿ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯ ಪರಿಸ್ಥಿತಿಯನ್ನು ಗಮನಿಸಿದರೆ ಭಾರತ-ದಕ್ಷಿಣ ಆಫ್ರಿಕಾ, ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಾಗಿವೆ.
514 intl. matches & counting 🙌
26,209 intl. runs & counting 👑2⃣0⃣1⃣1⃣ ICC World Cup & 2⃣0⃣1⃣3⃣ ICC Champions Trophy winner 🏆
Here's wishing Virat Kohli – Former #TeamIndia Captain & one of the greatest modern-day batters – a very Happy Birthday!👏🎂 pic.twitter.com/eUABQJYKT5
— BCCI (@BCCI) November 5, 2023
ಉತ್ತಮ ಲಯದಲ್ಲಿರುವ ಎರಡೂ ತಂಡಗಳು
ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಮೊಹಮ್ಮದ್ ಶಮಿ, ಸಿರಾಜ್, ಬುಮ್ರಾ ಬೌಲಿಂಗ್‌ನಲ್ಲಿ ಆಡಲು ಎದುರಾಳಿ ತಂಡ ತಿಣುಕಾಡುತ್ತಿದೆ. ಅಲ್ಲದೆ ಕುಲದೀಪ್-ಜಡೇಜಾ ಸ್ಪಿನ್ ಮೋಡಿ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಿದೆ.
ಇನ್ನೂ ದಕ್ಷಿಣ ಆಫ್ರಿಕಾ ಪರ ಈಗಾಗಲೇ ಟೂರ್ನಿಯಲ್ಲಿ 4 ಶತಕ ಸಿಡಿಸಿರುವ ಕ್ವಿಂಟನ್ ಡಿ ಕಾಕ್, 2 ಶತಕ ಬಾರಿಸಿದ ವಾನ್ ಡರ್ ಡುಸ್ಸೆನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದರೆ ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಮ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಬೌಲಿಂಗ್‌ನಲ್ಲಿ ಮಾರ್ಕೊ ಜಾನ್ಸೆನ್, ಗೆರಾಲ್ಡ್ ಕೊಯೆಟ್ಜಿ, ಕಗಿಸೊ ರಬಾಡ, ಸ್ಪಿನ್ನರ್ ಕೇಶವ್ ಮಹಾರಾಜ್, ತಬ್ರೈಜ್ ಶಂಸಿ ಎದುರಾಳಿ ತಂಡಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ ಕ್ರಿಕೆಟ್ | ದಾಖಲೆಗಳ ಸರದಾರ ಮೊಹಮ್ಮದ್ ಶಮಿಗೊಂದು ಸಲಾಮ್
ಗೆಲುವು – ಸೋಲು ಲೆಕ್ಕಾಚಾರ
ಉಭಯ ತಂಡಗಳು ಏಕದಿನ ಮಾದರಿಯಲ್ಲಿ ಯಲ್ಲಿಯವರೆಗೂ 90 ಬಾರಿ ಸೆಣಸಿದ್ದು ಭಾರತ 37 ಬಾರಿ ಜಯಗಳಿಸಿದರೆ, ದಕ್ಷಿಣ ಆಫ್ರಿಕಾ ತಂಡ 50 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 5 ಬಾರಿ ಕಾದಾಟ ನಡೆಸಿದ್ದು ಟೀಂ ಇಂಡಿಯಾ 2, ಹರಿಣಗಳು 3 ಬಾರಿ ವಿಜಯಿಯಾಗಿದ್ದಾರೆ.
Top of the standings clash at #CWC23 👊
More on #INDvSA ➡️https://t.co/ghjJeoHynl pic.twitter.com/EXno3VxjM8
— ICC Cricket World Cup (@cricketworldcup) November 5, 2023
ವಿರಾಟ್ ಕೊಹ್ಲಿ 35 ನೇ ಜನ್ಮದಿನ
ದಕ್ಷಿಣ ಆಫ್ರಿಕಾ ವಿರುದ್ಧದ ಇಂದಿನ ಪಂದ್ಯವು ವಿರಾಟ್ ಕೊಹ್ಲಿ ಪಾಲಿಗೆ ವಿಶೇಷವಾಗಿದೆ. ಕ್ರಿಕೆಟ್ ಅಭಿಮಾನಿಗಳ ಪಾಲಿನ ನಾಯಕ ಕೊಹ್ಲಿ ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣಕಕ್ಕೂ ಕೊಹ್ಲಿಗೂ ವಿಶೇಷ ನಂಟಿದ್ದು ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ಶತಕ ಗಳಿಸಿದ್ದು ಇಲ್ಲಿಯೇ. 14 ವರ್ಷಗಳ ಹಿಂದೆ ಡಿಸೆಂಬರ್ 24,2009ರಂದು ಶ್ರೀಲಂಕಾ ವಿರುದ್ಧ 107 ರನ್ ಗಳಿಸಿದ್ದರು.
ವಿರಾಟ್ ಇದುವರೆಗೆ 48 ಏಕದಿನ ಶತಕಗಳನ್ನು ಗಳಿಸಿದ್ದಾರೆ.ವಿಶ್ವದಾಖಲೆಯ 49ನೇ ಶತಕದ ನಿರೀಕ್ಷೆಯಲ್ಲಿದ್ದಾರೆ. ಭಾರತ ತಂಡ ಕೂಡ ಈ ಪಂದ್ಯವನ್ನು ಗೆದ್ದು ಕೊಹ್ಲಿಗೆ ಜನುಮದಿನದ ಉಡುಗೊರೆ ನೀಡಲು ಸಜ್ಜಾಗಿದೆ.ಆದರೆ ಹುಟ್ಟುಹಬ್ಬದ ಆಚರಣೆಯನ್ನು ವಿರಾಟ್ ಕೊಹ್ಲಿ ನವೆಂಬರ್ 19ರ ಫೈನಲ್ ಮುಗಿದ ನಂತರವೇ ಸಂಭ್ರಮಿಸಲು ನಿರ್ಧರಿಸಿದ್ದಾರೆ.
Three teams are locked in on eight points as Pakistan kept their #CWC23 campaign alive 👊
Semi-final scenarios ➡️ https://t.co/FPLZumw5LU pic.twitter.com/prlKr26SyM
— ICC Cricket World Cup (@cricketworldcup) November 5, 2023
ಉಭಯ ತಂಡಗಳ 11ರ ಸಂಭಾವ್ಯ ಬಳಗ
ಭಾರತ:
ಶುಭಮನ್ ಗಿಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್/ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್‌ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ದಕ್ಷಿಣ ಆಫ್ರಿಕಾ
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ತಬ್ರೈಜ್ ಶಮ್ಸಿ.
ಪಿಚ್ ವರದಿ
ಈಡನ್ ಗಾರ್ಡನ್ಸ್ ಬ್ಯಾಟ್ಸ್ಮನ್ಗಳ ನೆಚ್ಚಿನ ತಾಣ. ಅಲ್ಲದೆ ವೇಗಿಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆಯಿದೆ. ಎರಡೂ ತಂಡಗಳಲ್ಲೂ ಉತ್ತಮ ಬ್ಯಾಟ್ಸ್ಮನ್ಗಳ ದಂಡೇ ಇದ್ದು, ರನ್ ಮಳೆಯನ್ನು ನಿರೀಕ್ಷಿಸಲಾಗಿದೆ. ರನ್ ಬೆನ್ನಟ್ಟುವ ತಂಡ ಹೆಚ್ಚು ಗೆಲ್ಲುವ ಸಾಧ್ಯತೆ ಇದೆ. ಸಂಜೆ ಇಬ್ಬನಿ ಇರಲಿದ್ದು ಆದರೆ ಯಾವುದೇ ರೀತಿ ಮಳೆ ಬರುವ ಸಾಧ್ಯತೆಯಿಲ್ಲ.
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್