ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧ ಆಡುವ ಭಾರತದ ಪಂದ್ಯದ ಮೊದಲೇ ತಂಡಕ್ಕೆ ಶಾಕಿಂಗ್ ಸುದ್ದಿ ಲಭ್ಯವಾಗಿದೆ. ಸ್ಟಾರ್ ಆಟಗಾರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡಿರುವ ಕಾರಣ ಅಕ್ಟೋಬರ್ 20 ರಂದು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಸಿಸಿಐ “ಹಾರ್ದಿಕ್ ಪಾಂಡ್ಯ ಅವರು ಅಕ್ಟೋಬರ್ 20 ರಂದು ತಂಡದೊಂದಿಗೆ ಧರ್ಮಶಾಲಾಗೆ ಆಗಮಿಸುವುದಿಲ್ಲ. ಭಾರತವು ಇಂಗ್ಲೆಂಡ್ ವಿರುದ್ಧ ಅಕ್ಟೋಬರ್ 29 ರಂದು ಲಖನೌದಲ್ಲಿ ನೇರವಾಗಿ ತಂಡವನ್ನು ಸೇರಿಕೊಳ್ಳುತ್ತಾರೆ” ಎಂದು ತಿಳಿಸಿದೆ.
ನಿನ್ನೆ (ಅಕ್ಟೋಬರ್ 19) ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಮಾಡುವ ಸಂದರ್ಭದಲ್ಲಿ ಕಾಲು ಉಳುಕಿ ಗಾಯಗೊಂಡು ವೈದ್ಯಕೀಯ ವಿಶ್ರಾಂತಿಗೆ ಮರಳಿದ್ದರು. ಹಾರ್ದಿಕ್‌ನ ಉಳಿದ ಮೂರು ಚೆಂಡುಗಳನ್ನು ವಿರಾಟ್ ಕೊಹ್ಲಿ ಎಸೆದಿದ್ದರು.
ಹಾರ್ದಿಕ್ ಅವರಿಗೆ ವಿಶ್ರಾಂತಿಯನ್ನು ಸೂಚಿಸಲಾಗಿದ್ದು, ಬಿಸಿಸಿಐ ವೈದ್ಯಕೀಯ ತಂಡ ನಿರಂತರ ಮೇಲ್ವಿಚಾರಣೆ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಭಾರತ ಗೆಲ್ಲಲು ಬೇಕಿದ್ದು 26, ಕೊಹ್ಲಿ ಶತಕಕ್ಕೂ ಬೇಕಿತ್ತು 26: ಸತ್ಯ ಬಿಚ್ಚಿಟ್ಟ ಕೆ ಎಲ್ ರಾಹುಲ್
ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಹೊರತುಪಡಿಸಿ, ಪಾಂಡ್ಯ ಅವರು ಆಲ್‌ರೌಂಡರ್ ಪಾತ್ರವನ್ನು ನಿರ್ವಹಿಸುವ ಕಾರಣದಿಂದ ಭಾರತ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. ಬ್ಯಾಟಿಂಗ್‌ನಲ್ಲೂ ಸ್ಪೋಟಕವಾಗಿ ಬ್ಯಾಟ್ ಬೀಸುತ್ತಾರೆ.
🚨 NEWS 🚨
Medical Update: Hardik Pandya 🔽 #CWC23 | #TeamIndiahttps://t.co/yiCbi3ng8u
— BCCI (@BCCI) October 20, 2023
ಭಾರತ ತಂಡದ ಬೌಲಿಂಗ್ ವಿಭಾಗಕ್ಕೆ ಆರನೇ ಬೌಲರ್‌ನ ಅವಶ್ಯಕತೆಯಿದೆ. ಭಾರತದ ಮೊದಲ ಮೂರು ವಿಶ್ವಕಪ್ ಪಂದ್ಯಗಳಲ್ಲಿ ಪಾಂಡ್ಯ 16 ಓವರ್ ಬೌಲ್ ಮಾಡಿ ಐದು ವಿಕೆಟ್ ಪಡೆದಿದ್ದಾರೆ.
ಯಾವುದೇ ರೀತಿಯ ಬದಲಿ ಆಟಗಾರರು ಲಭ್ಯವಿಲ್ಲದ ಕಾರಣ, ಭಾರತವು ನ್ಯೂಜಿಲೆಂಡ್ ವಿರುದ್ಧ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಮತ್ತು ಮೊಹಮ್ಮದ್ ಶಮಿಯನ್ನು ಕರೆತರುವುದು ಪ್ರಮುಖ ಆಯ್ಕೆಯಾಗಿದೆ.
ಭಾರತ ಇದುವರೆಗೆ ವಿಶ್ವಕಪ್‌ನಲ್ಲಿ ಆಡಿದ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.