ಐಸಿಸಿ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ನಡುವೆ ನಡೆಯುತ್ತಿರುವ 19ನೇ ಪಂದ್ಯದಲ್ಲಿ(ಅಕ್ಟೋಬರ್ 21) ನೆದರ್ಲೆಂಡ್ಸ್ನ ಆಟಗಾರರು ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಮೊಟ್ಟ ಮೊದಲ ಬಾರಿಗೆ ಕಪಿಲ್ ದೇವ್ ಸಾರಥ್ಯದ ಭಾರತ ತಂಡ ಜಯಿಸಿದ್ದ 1983ರ ಪ್ರುಡೆನ್ಶಿಯಲ್ ವಿಶ್ವಕಪ್ನ ಪ್ರಮುಖ ದಾಖಲೆಯನ್ನು ನೆದರ್ಲೆಂಡ್ಸ್ನ ಇಬ್ಬರು ಆಟಗಾರರಾದ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ಲೋಗನ್ ವ್ಯಾನ್ ಬೀಕ್ ಸರಿಗಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧ ಲಖನೌದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಆರು ಮತ್ತು ಏಳನೇ ಕ್ರಮಾಂಕದ ಆಟಗಾರರಾದ ಸೈಬ್ರಾಂಡ್ ಎಂಗಲ್ಬ್ರೆಕ್ಟ್ ಹಾಗೂ ಲೋಗನ್ ವ್ಯಾನ್ ಬೀಕ್ 7 ವಿಕೆಟ್ ಜೊತೆಯಾಟದಲ್ಲಿ 130 ರನ್ಗಳನ್ನು ಪೇರಿಸಿ ದಾಖಲೆ ನಿರ್ಮಿಸಿದರು. ಇದರೊಂದಿಗೆ 1983ರಲ್ಲಿ ನಿರ್ಮಿಸಿದ್ದ 40 ವರ್ಷಗಳ ಕಪಿಲ್ ದೇವ್ ಹಾಗೂ ಕರ್ನಾಟಕದವರಾದ ಸಯ್ಯದ್ ಕಿರ್ಮಾನಿ ದಾಖಲೆಯನ್ನು ಅಳಿಸಿಹಾಕಿದರು.
ಇಂದಿನ ಪಂದ್ಯದಲ್ಲಿ ಸೈಬ್ರಾಂಡ್ ಎಂಗಲ್ಬ್ರೆಕ್ಟ್ 82 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ 70 ರನ್ ಗಳಿಸಿದರೆ, ಲೋಗನ್ ವ್ಯಾನ್ ಬೀಕ್ 75 ಚೆಂಡುಗಳಲ್ಲಿ 1 ಬೌಂಡರಿ 1 ಸಿಕ್ಸರ್ನೊಂದಿಗೆ 59 ರನ್ ಪೇರಿಸಿದರು.
ಇವರಿಬ್ಬರ ಜೊತೆಯಾಟವು ಏಕದಿನ ವಿಶ್ವಕಪ್ನಲ್ಲಿ 7 ಅಥವಾ ಏಳರ ನಂತರದ ವಿಕೆಟ್ಗಳಲ್ಲಿ ಗಳಿಸಿದ ಅತ್ಯಧಿಕ ರನ್ಗಳ ಜೊತೆಯಾಟವಾಗಿದೆ.
After #SriLanka reduced #Netherlands to 91-6, Sybrand Engelbrecht and Logan van Beek put on a stunning 130-run partnership to lift their side to 262!
Can Netherlands cause another upset? #NEDvSL #SLvNED #CWC23 #Cricket #WorldCup #CWC23 #ICCCricketWorldCup2023 #CricketTwitter pic.twitter.com/LcXVWdeGrY
— Cricbuzz (@cricbuzz) October 21, 2023
1983ರ ಜೂನ್ 18ರಂದು ಇಂಗ್ಲೆಂಡ್ನ ಟನ್ಬ್ರಿಡ್ಜ್ ವೆಲ್ಸ್ ನಡೆದ ಮೂರನೇ ಏಕದಿನ ಪ್ರುಡೆನ್ಶಿಯಲ್ ವಿಶ್ವಕಪ್ನಲ್ಲಿ ಕಪಿಲ್ ದೇವ್ ಹಾಗೂ ಸಯ್ಯದ್ ಕಿರ್ಮಾನಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮುರಿಯದ 9ನೇ ವಿಕೆಟ್ ಜೊತೆಯಾಟದಲ್ಲಿ 126 ರನ್ ಬಾರಿಸಿದ್ದರು. ಆಗ ಭಾರತ ತಂಡವು 140 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಂದಿನ ಪಂದ್ಯದಲ್ಲಿ ನಾಯಕ ಕಪಿಲ್ ದೇವ್ 138 ಚೆಂಡುಗಳಲ್ಲಿ 16 ಬೌಂಡರಿ 6 ಸಿಕ್ಸರ್ಗಳೊಂದಿಗೆ 175 ರನ್ ಸಿಡಿಸಿದರೆ, ಸಯ್ಯದ್ ಕಿರ್ಮಾನಿ 56 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 26 ರನ್ ಗಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಭಾರತ ಗೆಲ್ಲಲು ಬೇಕಿದ್ದು 26, ಕೊಹ್ಲಿ ಶತಕಕ್ಕೂ ಬೇಕಿತ್ತು 26: ಸತ್ಯ ಬಿಚ್ಚಿಟ್ಟ ಕೆ ಎಲ್ ರಾಹುಲ್
ಆ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 235 ರನ್ಗಳಿಗೆ ಆಲೌಟ್ ಮಾಡಿ 31 ರನ್ಗಳ ವಿಜಯ ಸಾಧಿಸಿತ್ತು. ಅಲ್ಲದೆ ಭಾರತ ತಂಡವು ಟೂರ್ನಿಯಲ್ಲಿ ಹೊಸ ಐತಿಹಾಸಿಕ ಸಾಧನೆ ಮಾಡಿ ಮೊದಲ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.