ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ದುಬೈನಲ್ಲಿ ಪಂದ್ಯ ನಡೆಯುತ್ತಿದೆ. ಮೊದಲ ಬ್ಯಾಟಿಂಗ್ ಮಾಡಿದ ಪಾಕ್ ತಂಡ 49.4 ಓವರ್‌ಗಳಲ್ಲಿ 241 ರನ್ ಗಳಿಸಿ ಆಲೌಟ್ ಆಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕ್ ತಂಡ, ಮೊದಲ 25 ಓವರ್‌ಗಳಲ್ಲಿ ನೀರಸ ಪ್ರದರ್ಶನ ನೀಡಿತು. ಆದಾಗ್ಯೂ, 26ನೇ ಓವರ್‌ನಿಂದ ಫಾಮ್‌ನಲ್ಲಿ ಆಡಿದ ತಂಡವು ಎಲ್ಲ ಟಿಕೆಟ್‌ಗಳನ್ನು ಕಳೆದುಕೊಂಡರೂ 241 ರನ್‌ಗಳಿಸುವಲ್ಲಿ ಸಫಲವಾಗಿದೆ. ಭಾರತದ ತಂಡ ಗೆಲ್ಲಲು 242 ರನ್‌ಗಳ ಗುರಿ ನೀಡಿದೆ.
ಪಂದ್ಯದ ಆರಂಭದಲ್ಲಿ 47 ರನ್‌ಗಳಿಗೆ 2 ಟಿಕೆಟ್ ಕಳೆದುಕೊಂಡ ಪಾಕ್ ತಂಡಕ್ಕೆ ನಂತರದ ಬಂದ ಸೌದ್ ಶಕೀಲ್ ಮತ್ತು ಮೊಹಮ್ಮದ್ ರಿಜ್ವಾನ್ ನೆರವಾದರು. ಇಬ್ಬರೂ ನಿರ್ಣಾಯಕ 104 ರನ್‌ಗಳ ಜೊತೆಯಾಟ ನೀಡಿದರು. ಶಕೀಲ್ 62 ರನ್ ಗಳಿಸಿದರೆ, ರಿಜ್ವಾನ್ 46 ರನ್ ಗಳಿಸಿ ಔಟ್ ಆದರು.
ಕುಲದೀಪ್ ಯಾದವ್ 40 ರನ್‌ಗೆ 3 ವಿಕೆಟ್ ಪಡೆದು ಭಾರತದ ಪರ ಅತ್ಯುತ್ತಮ ಬೌಲರ್ ಆಗಿ ಮಿಂಚಿದ್ದಾರೆ. ಹಾರ್ದಿಕ್ ಪಾಂಡ್ಯ 31 ರನ್‌ಗೆ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮತ್ತು ಹರ್ಷಿತ್ ರಾಣಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.