ಪ್ರಸ್ತುತ ನಡೆಯತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ದಾಖಲೆಯ ಭರ್ಜರಿ ಶತಕದ ನೆರವಿನೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 327 ರನ್‌ಗಳ ಸವಾಲಿನ ಗುರಿ ನೀಡಿದೆ.
ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 326 ರನ್ ದಾಖಲಿಸಿತು.
Innings break!
An excellent batting display from #TeamIndia as we set a 🎯 of 3⃣2⃣7⃣
Over to our bowlers 💪
Scorecard ▶️ https://t.co/iastFYWeDi#TeamIndia | #CWC23 | #MenInBlue | #INDvSA pic.twitter.com/Fje5l3x3sj
— BCCI (@BCCI) November 5, 2023
ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿ ಜೀವನದ 49ನೇ ಶತಕ ಸಿಡಿಸಿದ್ದಾರೆ. ಈ ಮೂಲಕ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದರು. ವಿರಾಟ್ ಕೊಹ್ಲಿ, ಒಟ್ಟು 121 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದೊಂದಿಗೆ 101 ರನ್ ಗಳಿಸುವ ಮೂಲಕ ಔಟಾಗದೆ ಉಳಿದರು. ಈ ಮೂಲಕ ತಮ್ಮ ‘ಬರ್ತ್ ಡೇ’ ದಿನದಂದೇ ಅಭಿಮಾನಿಗಳಿಗೆ ಶತಕದ ‘ಗಿಫ್ಟ್’ ನೀಡಿದ್ದಾರೆ.
ಟಾಸ್ ಗೆದ್ದ ಬಳಿಕ ಬ್ಯಾಟಿಂಗ್ ನಡೆಸುವ ತೀರ್ಮಾನ ತೆಗೆದುಕೊಂಡ ನಾಯಕ ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಶುಭಮನ್ ಗಿಲ್ ಅವರೊಂದಿಗೆ ಉತ್ತಮ ಆರಂಭ ನೀಡಿದರು. ಸ್ಫೋಟಕ ಬ್ಯಾಟಿಂಗ್ ನಡೆಸುವ ಸೂಚನೆ ನೀಡಿದ ರೋಹಿತ್, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕೇವಲ 24 ಎಸೆತಗಳಲ್ಲಿ 6 ಬೌಂಡರಿ ಹಾಗೂ ಎರಡು ಸಿಕ್ಸ್‌ನ ನೆರವಿನಿಂದ 40 ರನ್ ದಾಖಲಿಸಿದ್ದಾಗ ರಬಾಡ ಎಸೆತದಲ್ಲಿ ಬವುಮಾಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ವೇಳೆ ಕ್ರೀಸ್‌ಗೆ ಆಗಮಿಸಿದ ಕೊಹ್ಲಿ, ಗಿಲ್ ಜೊತೆಯಾಟ ನಡೆಸುತ್ತಿದ್ದಾಗಲೇ ಕೇಶವ್ ಮಹಾರಾಜ್ ಎಸೆದ ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಗಿಲ್ ಕ್ಲೀನ್ ಬೌಲ್ಡ್ ಆದರು.
4⃣9⃣ 𝙊𝘿𝙄 𝘾𝙀𝙉𝙏𝙐𝙍𝙄𝙀𝙎!
Sachin Tendulkar 🤝 Virat Kohli
Congratulations to Virat Kohli as he equals the legendary Sachin Tendulkar’s record for the most ODI 💯s! 👏#TeamIndia | #CWC23 | #MenInBlue | #INDvSA pic.twitter.com/lXu9qJakOz
— BCCI (@BCCI) November 5, 2023
ಆ ಬಳಿಕ ವಿರಾಟ್‌ಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್, ಉತ್ತಮ ಜೊತೆಯಾಟ ನಡೆಸಿದರು. ಮೂರನೇ ವಿಕೆಟ್‌ಗೆ ಈ ಜೋಡಿ 158 ಎಸೆತಗಳಲ್ಲಿ 135 ರನ್ ಕಲೆ ಹಾಕಿತು. ಶ್ರೇಯಸ್ ಅಯ್ಯರ್ 87 ಎಸೆತಗಳಲ್ಲಿ 77 ರನ್ ಗಳಿಸಿ ಔಟಾದರು. ಬಳಿಕ ಬಂದ ಕೆ ಎಲ್ ರಾಹುಲ್ 8 ರನ್, ಸೂರ್ಯಕುಮಾರ್ ಯಾದವ್ 22 ಗಳಿಸಿದ್ದ ವೇಳೆ ಔಟಾದರು.
ಕೊನೆಯಲ್ಲಿ ಕೊಹ್ಲಿ121 ಎಸೆತಗಳಲ್ಲಿ 101 ರನ್ ಗಳಿಸಿ ಅಜೇಯರಾಗಿ ಉಳಿದರೆ, ರವೀಂದ್ರ ಜಡೇಜಾ 15 ಎಸೆತಗಳಲ್ಲಿ 29 ರನ್ ಗಳಿಸಿ ಔಟಾಗದೆ ಉಳಿದರು.
Pure class in the city of Joy ✨
Incredible knock from Virat Kohli 👏👏#TeamIndia | #CWC23 | #MenInBlue | #INDvSA pic.twitter.com/pRZWHLGm0W
— BCCI (@BCCI) November 5, 2023
ದಕ್ಷಿಣ ಆಫ್ರಿಕಾ ಪರವಾಗಿ ಎನ್‌ಗಿಡಿ, ಜಾನ್‌ಸೆನ್, ರಬಾಡ, ಕೇಶವ್ ಮಹಾರಾಜ್, ತಬ್ರೇಝ್ ಶಂಶಿ ತಲಾ ಒಂದೊಂದು ವಿಕೆಟ್ ಗಳಿಸಿದರು.
ಸ್ಮರಣೀಯ ಹುಟ್ಟುಹಬ್ಬವನ್ನಾಗಿಸಿಕೊಂಡ ವಿರಾಟ್ ಕೊಹ್ಲಿ
ಇಂದು 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಂಡರು.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸುವ ಮೂಲಕ ದಶಕಗಳ ಕಾಲ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ಗರಿಷ್ಠ ಏಕದಿನ ಶತಕದ ಸಾಧನೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾದರು.
Greatness meets greatness 🤝
No. 49 for King Kohli 👑#CWC23 #INDvSA pic.twitter.com/rA65nkMGXx
— ICC (@ICC) November 5, 2023
ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಸಿಡಿಸಲು 452 ಇನಿಂಗ್ಸ್‌ಗಳನ್ನು ತೆಗೆದುಕೊಂಡರೆ, ವಿರಾಟ್ ಕೊಹ್ಲಿ ಕೇವಲ 277 ಇನಿಂಗ್ಸ್‌ಗಳಲ್ಲಿ 49 ಏಕದಿನ ಶತಕದ ಸಾಧನೆ ಮಾಡಿದರು. ಇನ್ನೊಂದು ಶತಕ ಬಂದರೆ, ಸಚಿನ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.