ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳಿಗೆ ಸ್ಥಾನ

Date:

ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಸ್ಥಾನ ಪಡೆದಿವೆ. ಸ್ವಿಸ್ ಗ್ರೂಪ್ ಎಕ್ಯೂಏರ್‌ ಅಂಕಿಅಂಶಗಳ ಪ್ರಕಾರ ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದ ರಾಜಧಾನಿ ದೆಹಲಿಯು ಮೊದಲ ಸ್ಥಾನದಲ್ಲಿದೆ.

ಹಾಗೆಯೇ ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಮೊದಲ 10ರಲ್ಲಿ ಸ್ಥಾನ ಪಡೆದಿವೆ. ಉಳಿದ ಎರಡು ನಗರಗಳು ಕೋಲ್ಕತ್ತಾ ಮತ್ತು ಮುಂಬೈ.

483 ಎಕ್ಯೂಐನೊಂದಿಗೆ(ವಾಯು ಗುಣಮಟ್ಟ ಸೂಚ್ಯಂಕ) ಪಟ್ಟಿಯಲ್ಲಿ ನವದೆಹಲಿ ಮತ್ತೆ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನದ ಲಾಹೋರ್ 371 ಎಕ್ಯೂಐ ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಕೋಲ್ಕತ್ತಾ ಮತ್ತು ಮುಂಬೈ ಕೂಡ ವಾಯುಮಾಲಿನ್ಯದಿಂದ ಹೆಚ್ಚು ಹಾನಿಗೊಳಗಾದ 5 ನಗರಗಳಲ್ಲಿ ಕ್ರಮವಾಗಿ 206 ಮತ್ತು 162 ಎಕ್ಯೂಐನೊಂದಿಗೆ ಮೂರು ಮತ್ತು ಆರನೇ ಸ್ಥಾನದಲ್ಲಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇನ್ನುಳಿದ ಮೊದಲ 10ರ ಪಟ್ಟಿಯಲ್ಲಿ ಚೀನಾದ ಮೂರು, ಪಾಕಿಸ್ತಾನದ ಎರಡು, ಬಾಂಗ್ಲಾದೇಶದ ಒಂದು ಹಾಗೂ ಕುವೈತ್‌ನ ಒಂದು ನಗರಗಳು ಪಟ್ಟಿಯಲ್ಲಿವೆ.

ಈ ಸುದ್ದಿ ಓದಿದ್ದೀರಾ? ದೆಹಲಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ: ನ.10ರವರೆಗೆ ಪ್ರಾಥಮಿಕ ಶಾಲೆ ಮುಚ್ಚಲು ಸರ್ಕಾರ ಆದೇಶ

ತಜ್ಞರು ಮತ್ತು ವೈದ್ಯರ ಪ್ರಕಾರ, ಯಾವುದೇ ಆರೋಗ್ಯವಂತ ವ್ಯಕ್ತಿಗೆ ಶಿಫಾರಸು ಮಾಡಲಾದ ಎಕ್ಯೂಐ ಮಟ್ಟ 50 ಕ್ಕಿಂತ ಕಡಿಮೆ ಇರಬೇಕು.

ಕಡಿಮೆ ತಾಪಮಾನದ ಸಂಯೋಜನೆ, ಗಾಳಿಯ ಕೊರತೆ ಮತ್ತು ನೆರೆಯ ಪ್ರದೇಶಗಳಲ್ಲಿ ಕೃಷಿ ತ್ಯಾಜ್ಯ ಸುಡುವುದು ವಾಯು ಮಾಲಿನ್ಯದ ಹೆಚ್ಚಳಕ್ಕೆ ಕಾರಣವಾಗಿದೆ.

ಕೆಲವು ಕಡೆಗಳಲ್ಲಿ ಎಕ್ಯೂಐ 550 ಕ್ಕಿಂತ ಹೆಚ್ಚಾದ ಕಾರಣ ನವದೆಹಲಿಯ 2 ಕೋಟಿ ನಿವಾಸಿಗಳಲ್ಲಿ ಅನೇಕರು ಕಣ್ಣುಗಳಲ್ಲಿ ಕಿರಿಕಿರಿ ಮತ್ತು ಗಂಟಲಿನ ತುರಿಕೆ ಅನುಭವಿಸುತ್ತಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದುರಹಂಕಾರಿಗಳಿಗೆ ಭಗವಾನ್ ರಾಮ 241ಕ್ಕೆ ನಿಲ್ಲಿಸಿದ್ದಾನೆ: ಬಿಜೆಪಿ ವಿರುದ್ಧ ಆರ್‌ಎಸ್‌ಎಸ್‌ ನಾಯಕ ವಾಗ್ದಾಳಿ

ಬಿಜೆಪಿಯ ವಿರುದ್ಧ ಆರ್‌ಎಸ್‌ಎಸ್‌ ನಾಯಕರೊಬ್ಬರು ವಾಗ್ದಾಳಿ ನಡೆಸಿದ್ದು, ಆಡಳಿತ ಪಕ್ಷ ಲೋಕಸಭೆ...

ಕುವೈತ್ ಅಗ್ನಿ ದುರಂತದಲ್ಲಿ ಸಾವಿಗೀಡಾದ 45 ಮಂದಿಯ ಮೃತದೇಹಗಳು ಇಂದು ಭಾರತಕ್ಕೆ

ಎರಡು ದಿನಗಳ ಹಿಂದೆ ಕುವೈತ್ ಬೆಂಕಿ ದುರಂತದಲ್ಲಿ ಸಾವಿಗೀಡಾದ 45 ಮಂದಿಯ...

ಶಾಸಕ ಸ್ಥಾನಕ್ಕೆ ಸಿಕ್ಕಿಂ ಸಿಎಂ ಪತ್ನಿ ರಾಜೀನಾಮೆ: ಒಂದು ದಿನದ ಹಿಂದಷ್ಟೆ ಪ್ರೇಮ್ ಸಿಂಗ್‌ ಪ್ರಮಾಣವಚನ

ಒಂದು ದಿನದ ಹಿಂದಷ್ಟೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಿಕ್ಕಿಂ ಮುಖ್ಯಮಂತ್ರಿ...

ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮುಂದುವರಿಕೆ

ಅಜಿತ್ ದೋವಲ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ಕೇಂದ್ರ ಸರ್ಕಾರ ಪುನರ್‌ನೇಮಕ...