ಭಾರತ ಹಾಗೂ ಇಂಗ್ಲೆಂಡ್ ನಡುವೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಟಿಂ ಇಂಡಿಯಾ ಪಾನೀಯ ವಿರಾಮದ ವೇಳೆಗೆ ಮೇಲುಗೈ ಸಾಧಿಸಿದೆ. ವೇಗಿ ಸಿರಾಜ್ ಸತತ 2 ವಿಕೆಟ್ ಪಡೆದ ಪರಿಣಾಮ ಆಂಗ್ಲರು ಮೊದಲ ಇನಿಂಗ್ಸ್‌ನಲ್ಲಿ 33 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಫಾಲೋಆನ್ ಭೀತಿಯಲ್ಲಿದೆ.
77 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟ ಶುರು ಮಾಡಿದ ಇಂಗ್ಲೆಂಡ್‌ಗೆ ವೇಗಿ ಮೊಹಮ್ಮದ್ ಸಿರಾಜ್ ಆಘಾತ ನೀಡಿದರು. 22 ರನ್ ಗಳಿಸಿದ ಜೋ ರೂಟ್ 22ನೇ ಓವರ್‌ನಲ್ಲಿ ವಿಕೇಟ್ ಕೀಪರ್ ಪಂತ್‌ಗೆ ಕ್ಯಾಚ್ ನೀಡಿ ಔಟಾದರು. ಇದರ ನಂತರ ಎಸೆತದಲ್ಲೇ ಕ್ರೀಸ್‌ಗೆ ಬಂದ ನಾಯಕ್ ಬೆನ್ ಸ್ಟೋಕ್ಸ್ ಅವರನ್ನು ಸಿರಾಜ್ ಶೂನ್ಯಕ್ಕೆ ಪೆವಿಲಿಯನ್‌ಗೆ ಅಟ್ಟಿದರು. ಅರ್ಧ ಶತಕ ಗಳಿಸಿರುವ ಹ್ಯಾರಿ ಬ್ರೂಕ್(56) ಹಾಗೂ ವಿಕೇಟ್ ಕೀಪರ್ ಜೇಮಿ ಸ್ಮಿತ್(27) ಮುರಿಯದ 51 ರನ್‌ಗಳ 6 ವಿಕೆಟ್ ಜೊತೆಯಾಟದಲ್ಲಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತ ಬೃಹತ್ ಮೊತ್ತ
ನಾಯಕ ಶುಭಮನ್ ಗಿಲ್ ದಾಖಲೆಯ ದ್ವಿಶತಕ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 587 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಹಲವು ದಾಖಲೆಗಳನ್ನು ಬರೆದ ಶುಭಮನ್ ಗಿಲ್
ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಇಂಗ್ಲೆಂಡ್ ಬೌಲರ್‌ಗಳನ್ನು ಮನ ಬಂದಂತೆ ಕಾಡಿದರು. ಇವರು ಎಚ್ಚರಿಕೆಯ ಬ್ಯಾಟಿಂಗ್ ಮಾಡಿ 387 ಎಸೆತಗಳಲ್ಲಿ 30 ಬೌಂಡರಿ, 3 ಸಿಕ್ಸರ್ ನೆರವಿನಿಂದ 269 ರನ್ ಬಾರಿಸಿವುದರೊಂದಿಗೆ ಹಲವು ದಾಖಲೆಗಳನ್ನು ಬರೆದರು.
ಇದನ್ನು ಓದಿದ್ದೀರಾ? IND – ENG 2ND Test | ಹಲವು ದಾಖಲೆಗಳೊಂದಿಗೆ ಶುಭಮನ್ ಗಿಲ್ ದ್ವಿಶತಕ: ಇಂಗ್ಲೆಂಡ್‌ಗೆ ಆರಂಭಿಕ ಆಘಾತ
ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ 24ನೇ ಆಟಗಾರ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಅಲ್ಲದೆ ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಟೀಮ್ ಇಂಡಿಯಾದ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿತ್ತು. ಇವರು 1979ರಲ್ಲಿ 221 ರನ್ ಬಾರಿಸಿದ್ದರು.
ಇಂಗ್ಲೆಂಡ್ ನೆಲದಲ್ಲಿ ದ್ವಿಶತಕ ಬಾರಿಸಿದ ಮೊದಲ ಏಷ್ಯಾದ ಬ್ಯಾಟರ್ ಎಂಬ ಹಿರಿಮೆ ಸಹ ಇವರದ್ದಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್‌ನಲ್ಲಿ ಸಚಿನ್ ತೆಂಡೂಲ್ಕರ್ ಬಾರಿಸಿದ 193 ರನ್ ಗರಿಷ್ಠವಾಗಿತ್ತು.
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 250ಕ್ಕೂ ಹೆಚ್ಚು ರನ್ ಬಾರಿಸಿದ ಭಾರತದ ಆರನೇ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ. ಇದಕ್ಕೂ ಮೊದಲು, ವೀರೇಂದ್ರ ಸೆಹ್ವಾಗ್ ಒಟ್ಟು 4 ಬಾರಿ, ಆದರೆ ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಕರುಣ್ ನಾಯರ್ ಮತ್ತು ವಿರಾಟ್ ಕೊಹ್ಲಿ ತಲಾ ಒಮ್ಮೆ ಈ ಸಾಧನೆ ಮಾಡಿದ್ದಾರೆ.